ಕೊರೊನಾ ಕಾಲಘಟ್ಟದಲ್ಲಿ ಕೊಂಚ ಕಡಿಮೆಯಾಗಿದ್ದ ಕ್ಯಾನ್ಸರ್(Cancer) ಈಗ ಮತ್ತೆ ಜೀವ ತಗೆಯುತ್ತಿದೆ.. ಬದಲಾದ ಜೀವನ ಶೈಲಿ ಹಾಗೂ ಧೂಮಪಾನ (smoking) ಕಿಕ್ ಏರಿಸಿಕೊಳ್ಳುವ ಯುವ ಜನರಿಗೆ ಕ್ಯಾನ್ಸರ್ ಕಾಡುತ್ತಿದೆ.. ಆದ್ರೆ ಕ್ಯಾನ್ಸರ್ ರೋಗಿಗಳಿಗೆ ವೈದ್ಯರು ಒಂದು ಗುಡ್ ನ್ಯೂಸ್ ಹೇಳಿದ್ದಾರೆ ಅದೇನು ಅಂತೀರಾ ಈ ಸ್ಟೋರಿ ಓದಿ..
ಕ್ಯಾನ್ಸರ್ ರೋಗಕ್ಕೆ ಪರಿಹಾರ
ಬದಲಾದ ಜೀವನ ಶೈಲಿ ಒತ್ತಡದ ಲೈಫ್ ನಿಂದ ಪಾರಗಲು ಯುವ ಜನತೆ ಇತ್ತಿಚ್ಚಿನ ದಿನಗಳಲ್ಲಿ ಧೂಮಪಾನದ ಚಟ್ಟಕ್ಕೆ ದಾಸಾನೂದಾಸರಾಗುತ್ತಿದ್ದು ಮೀತಿ ಮಿರಿದ ಧುಮಪಾನದ ವೆಸನದ ಚಟಗಳಿಗೆ ಬಲಿಯಾಗುತ್ತಿದ್ದಾರೆ. ಅದರಲ್ಲಿಯೂ ಧೂಮಪಾನ ಕ್ಯಾನ್ಸರ್ ಗೆ ಕಂಟಕವಾಗುತ್ತಿದ್ದು, ಜನರ ಜೀವ ತಗೆಯುತ್ತಿದೆ. ನಾನಾ ಕಾರಣಗಳಿಂದ ನಾನಾ ಕ್ಯಾನ್ಸರ್ ಗೆ ಬಲಿಯಾಗುತ್ತಿರುವ ರೋಗಿಗಳಿಗೆ ವೈದ್ಯರು ಮಹತ್ವದ ಸಲಹೆಗಳನ್ನು ನೀಡಿದ್ದಾರೆ.
ವ್ಯಾಯಾಮದ ಮೂಲಕ ಕ್ಯಾನ್ಸರ್ ಗೆ ಹೇಳಿ ಗುಡ್ ಬೈ
ಕ್ಯಾನ್ಸರ್ ರೋಗದ ಮೊದಲ ಹಂತದಲ್ಲಿದ್ದೀರಾ.. ಕ್ಯಾನ್ಸರ್ ಮೊದಲ ಹಂತದಲ್ಲಿದ್ರೆ ಜಸ್ಟ್ ಹೈ ಇಟೆನ್ಸಿಟಿ ವ್ಯಾಯಾಮಗಳ ಮೂಲಕವೇ ಶೇ 70% ರಷ್ಟು ಕ್ಯಾನ್ಸರ್ ಖಾಯಿಲೆಯ ತೀವ್ರತೆ ಕಡಿಮೆ ಮಾಡಿಕೊಳ್ಳಬಹುದು ಹಾಗೂ ಕ್ಯಾನ್ಸರ್ ಒಂದು ಅಂಗದಿಂದ ಇನ್ನೊಂದು ಅಂಗಕ್ಕೆ ಹರಡುವುದನ್ನ ಕಡಿಮೆ ಮಾಡಬಹುದು ಅಂತಿದ್ದಾರೆ ವೈದ್ಯರು. ವೈದ್ಯರ ಇತ್ತೀಚ್ಚಿನ ಕ್ಯಾನ್ಸರ್ ಕುರಿತಾದ ಅಧ್ಯಯನದಿಂದ ಈ ಅಂಶ ಬೆಳಕಿಗೆ ಬಂದಿದ್ದು. ತೀವ್ರತರದ ವ್ಯಾಯಮದಿಂದ ಕ್ಯಾನ್ಸರ್ ಗೆ ಗುಡ್ ಬಾಯ್ ಹೇಳಬಹುದು ಅಂತಿದ್ದಾರೆ ವೈದ್ಯರು. ಮೂತ್ರಕೋಶದ ಕ್ಯಾನ್ಸರ್, ಕರಳು ಕ್ಯಾನ್ಸರ್, ಸ್ತನ ಕ್ಯಾನ್ಸರ್ , ಗರ್ಭಕೋಶದ ಕ್ಯಾನ್ಸರ್ ಅಥವಾ ಅಗಾಂಗಗಳ ಕ್ಯಾನ್ಸರ್ ನಿಂದ ಬಳಲುತ್ತಿರುವ ಕ್ಯಾನ್ಸರ್ ಮೊದಲ ಹಂತದಲ್ಲಿರುವ ರೋಗಿಗಳು ವ್ಯಾಯಾಮಗಳ ಮೂಲಕವೇ ನಿಮ್ಮ ಕ್ಯಾನ್ಸರ್ ಗೆ ಗುಡ್ ಬೈ ಹೇಳಿ ಬಿಡಿ ಅಂತಿದ್ದಾರೆ ವೈದ್ಯರು..
ಹೈ ಇಟೆನ್ಸಿಟಿ ವ್ಯಾಯಾಮಗಳಿಂದ (High Intensity Exercise) ದೇಹಕ್ಕೆ ಗ್ಲೊಕೋಸ್ ಬಳಕೆಗೆ ಹೆಚ್ಚಾಗಿ ಕ್ಯಾನ್ಸರ್ ದೇಹದ ಒಂದು ಅಂಗದಿಂದ ಮತ್ತೊಂದು ಅಂಗಕ್ಕೆ ಹರಡುವುದು ಕಡಿಮೆಯಾಗುತ್ತೆ ಅಷ್ಟೇ ಅಲ್ಲದೇ ಕ್ಯಾನ್ಸರ್ ತೀವ್ರತೆಯ ಪ್ರಮಾಣ ಕೂಡಾ ಕಡಿಮೆ ಮಾಡಬಹದಾಗಿದೆ ಎಂದು ವೈದ್ಯರು ಹೇಳಿದ್ದು, ಕೊರೊನಾ ಬಳಿಕ ಜನರು ಸಕ್ರಿಯ ವ್ಯಾಯಾಮದಿಂದ ದೂರವಾಗಿರೋದು ಕೂಡಾ ಕ್ಯಾನ್ಸರ್ ಏರಿಕೆಗೆ ಕಾರಣ ಅಂತಿದ್ದಾರೆ ಕಿದ್ವಾಯಿ ಆಸ್ಪತ್ರೆಯ ಆಂಕಾಲಜಿಸ್ಟ್ ಕಿದ್ವಾಯಿ ಆಸ್ಪತ್ರೆ ವೈದ್ಯೆ ಡಾ ಶೋಭಾ.
ಒಟ್ಟಿನಲ್ಲಿ ಇತ್ತೀಚ್ಚಿನ ದಿನಗಳಲ್ಲಿ ನಾನಾ ಕ್ಯಾನ್ಸರ್ ಗೆ ತುತ್ತಾಗುತ್ತುರುವ ಜನರು ಕೊಂಚ ಆರೋಗ್ಯದ ಕಡೆ ಗಮನ ಹರಿಸಬೇಕಿದೆ.. ವ್ಯಾಯಾಮ ಉತ್ತಮ ಆಹಾರದ ಮೂಲಕ ಕ್ಯಾನ್ಸರ್ ಗೆ ಗುಡ್ ಬಾಯ್ ಹೇಳಬಹುದಾಗಿದೆ.
ಲೇಖನ: ವಿನಯಕುಮಾರ್ ಕಾಶಪ್ಪನವರ್, ಟಿವಿ9, ಬೆಂಗಳೂರು
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ