Beauty Tips: ಬಿಸಿಲ ಬೇಗೆಯಿಂದ ತಣಿಯಲು ಬಳಸಿ ಮನೆಮದ್ದು; ಮುಖದ ಕಾಂತಿ ಹೆಚ್ಚಿಸಲು ಇಲ್ಲಿದೆ ಸಲಹೆ

| Updated By: ಆಯೇಷಾ ಬಾನು

Updated on: Apr 16, 2021 | 7:24 AM

ಮುಖದ ಕಾಂತಿಯನ್ನು ಹೆಚ್ಚಿಸಿಕೊಳ್ಳಲು ಎಷ್ಟೆಲ್ಲಾ ಹರಸಾಹಸ ಪಡೆತ್ತೇವೆ. ನೋಡಲು ಸುಂದರವಾಗಿ ಕಾಣಬೇಕು ಎಂಬುದು ಎಲ್ಲರ ಆಸೆಯೂ ಹೌದು. ಮನೆಮದ್ದು ಬಳಸಿ ಸುಭವಾಗಿ ಮುಖದ ಕಾಂತಿ ಹೆಚ್ಚಿಸಿಕೊಳ್ಳಿ.

Beauty Tips: ಬಿಸಿಲ ಬೇಗೆಯಿಂದ ತಣಿಯಲು ಬಳಸಿ ಮನೆಮದ್ದು; ಮುಖದ ಕಾಂತಿ ಹೆಚ್ಚಿಸಲು ಇಲ್ಲಿದೆ ಸಲಹೆ
ಬ್ಯೂಟಿ ಟಿಪ್ಸ್​
Follow us on

ಬೇಸಿಗೆ ಕಾಲದಲ್ಲಿ ಜನರು ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅದರಲ್ಲೂ ಚರ್ಮದ ಸಮಸ್ಯೆ ಜನರಿಗೆ ಹೆಚ್ಚು ಕಾಡುತ್ತದೆ. ಹಾಗಿದ್ದಾಗ ಹೆಚ್ಚು ಮನೆಮದ್ದುಗಳನ್ನೇ ಬಳಸಿ. ಸಮಸ್ಯೆ ಪರಿಹಾರವಾಗಲು ತಡವಾದರೂ ಸಾರ್ವಕಾಲಿಕವಾಗಿ ಸಮಸ್ಯೆಯಿಂದ ಹೊರ ಬರಬಹುದು. ಮುಖದ ಕಾಂತಿಯನ್ನು ಹೆಚ್ಚಿಸಿಕೊಳ್ಳಲು ಎಷ್ಟೆಲ್ಲಾ ಹರಸಾಹಸ ಪಡುತ್ತೇವೆ. ನೋಡಲು ಸುಂದರವಾಗಿ ಕಾಣಬೇಕು ಎಂಬುದು ಎಲ್ಲರ ಆಸೆಯೂ ಹೌದು. ಕೆಲವರ ಮುಖವನ್ನು ನೋಡಿದಾಕ್ಷಣ ಅವರಂತೆಯೇ ನನ್ನ ಚರ್ಮವೂ ಇದ್ದಿದ್ದರೆ? ಎಂಬ ಆಲೋಚನೆ ಬರುವುದು ಸಹಜ. ಹಾಗಿದ್ದಾಗ ಮನೆಮದ್ದುಗಳನ್ನು ಬಳಸುವುದು ನಿಮ್ಮ ಆಸೆಯನ್ನು ಈಡೇರಿಸಿಕೊಳ್ಳಲು ಉತ್ತಮ ಮಾರ್ಗ. ಮನೆಮದ್ದುಗಳು ಯಾವುದು? ಉಪಯೋಗಿಸುವ ವಿಧಾನ ಹೇಗೆ ಎಂಬೆಲ್ಲಾ ಪ್ರಶ್ನೆಗೆ ಉತ್ತರ ಇಲ್ಲಿದೆ.

ಬಿಸಿಲಿನ ಬೇಗೆ ತೊಡೆದು ಹಾಕಲು ಮೊಸರಿನಿಂದ ಸಾಧ್ಯ
ಮನೆಯಲ್ಲಿ ಹೆಪ್ಪು ಹಾಕಿ ರೆಡಿ ಮಾಡಿದ ಗಟ್ಟಿ ಮೊಸರನ್ನು 4 ಚಮಚದಷ್ಟು ತೆಗೆದುಕೊಳ್ಳಿರಿ. 2-3 ನಿಮಿಷಗಳ ಕಾಲ ಮುಖಕ್ಕೆ ಮೊಸರು ಹಾಕಿ ನುಣುಪಾಗಿ ಕೈ ಬೆರಳುಗಳಿಂದ ಮಸಾಜ್​ ಮಾಡಿಕೊಳ್ಳಿ. ವಾರದಲ್ಲಿ ನಾಲ್ಕು ದಿನವಾದರೂ ಈ ವಿಧಾನವನ್ನು ಅಳವಡಿಸಿಕೊಂಡರೆ ಒಳ್ಳೆಯದು. ಇದರಿಂದ ಮುಖದ ಕಾಂತಿ ಹೆಚ್ಚಿಸಿಕೊಳ್ಳಬಹುದು. ಜೊತೆಗೆ ನಮ್ಮ ಮುಖದಲ್ಲಿ ಸುಸ್ತು ಎದ್ದು ಕಾಣುವುದನ್ನು ಇದು ತೊರೆದು ಹಾಕುತ್ತದೆ.

ಜೇನುತುಪ್ಪ ಉತ್ತಮ ಪರಿಹಾರ
ಯಾವುದೇ ಕಲಬೆರಿಕೆ ಇಲ್ಲದ ಶುದ್ಧ ಜೇನು ತುಪ್ಪವನ್ನು 3-4 ಚಮಚದಷ್ಟು ತೆಗೆದುಕೊಳ್ಳಿ. ಅಂಟಾದ ಜೇನು ತುಪ್ಪವನ್ನು ಮುಖಕ್ಕೆ ನಿಧಾನವಾಗಿ ಲೇಪನ ಮಾಡಿ. 3-4 ನಿಮಿಷಗಳ ಕಾಲ ಗಾಳಿಗೆ ಒಣಗಲು ಬಿಡಿ. ನಂತರ ಶುದ್ಧ ನೀರಿನಿಂದ ಮುಖವನ್ನು ಚೆನ್ನಾಗಿ ತೊಳೆಯಿರಿ. ಸುಲಭವಾದ ವಿಧಾನದ ಮೂಲಕ ಮುಖದ ಕಾಂತಿ ಹೆಚ್ಚಿಸಿಕೊಳ್ಳುವುದರ ಜೊತೆಗೆ ಸುಂದರವಾಗಿ ಕಾಣಬಹುದು.

ಐಸ್​ ಕ್ಯೂಬ್​ ಚರ್ಮದ ಕಾಂತಿ ಹೆಚ್ಚಿಸಲು ಒಳ್ಳೆಯ ಮಾರ್ಗ
ತೆಳುವಾದ ಬಟ್ಟೆಯಲ್ಲಿ ಐಸ್​ಕ್ಯೂಬನ್ನು ಇರಿಸಿ ನಿಧಾನವಾಗಿ ಮುಖಕ್ಕೆ ಮಾಸಾಜ್​ ಮಾಡಿಕೊಳ್ಳಿರಿ. ಸುಮಾರು 4 ನಿಮಿಷಗಳ ಕಾಲ ಮಸಾಜ್​ ಮಾಡಬೇಕು. ಎರಡು ದಿನಕ್ಕೊಮ್ಮೆಯಾದರೂ ಈ ವಿಧಾನವನ್ನು ಅಳವಡಿಸಿಕೊಂಡರೆ ಮುಖದಲ್ಲಿ ಕಾಂತಿ ಪಡೆಯಲು ಸಾಧ್ಯ.

ಸೌತೆಕಾಯಿ ಚರ್ಮಕ್ಕೆ ಒಳ್ಳೆಯದು
ಕತ್ತರಿಸಿದ ಸೌತೆಕಾಯಿಯನ್ನು ಕಣ್ಣಿನ ತಂಪಿಗೆ ಬಳಸುತ್ತೇವೆ. ಅದೇ ರೀತಿ ಸೌತೆಕಾಯಿ ರುಬ್ಬಿದ ಪೇಸ್ಟ್​ಅನ್ನು ಮುಖಕ್ಕೆ ಹಚ್ಚಿಕೊಳ್ಳಿ. 5 ನಿಮಿಷ ಬಿಟ್ಟು ಶುದ್ಧ ನೀರಿನಲ್ಲಿ ಮುಖ ತೊಳೆಯುವುದರಿಂದ ಚರ್ಮದ ಕಾಂತಿಯನ್ನು ಹೆಚ್ಚಿಸಿಕೊಳ್ಳಬಹುದು.

ಅಲೋವೆರಾ ಜೆಲ್​
ನೈಸರ್ಗಿಕವಾಗಿ ಮನೆಯಲ್ಲಿಯೇ ಬೆಳೆದಿರುವ ಅಲೊವೆರಾದ ಮೇಲಿನ ಸಿಪ್ಪೆಯನ್ನು ತೆಗೆದು, ಒಳಗಿರುವ ನುಣಪಾದ ಜೆಲ್​ಅನ್ನು ಮುಖಕ್ಕೆ ಸವರಿಕೊಳ್ಳಿರಿ. ಬಿಸಿಲಿನ ಬೇಗೆಯಿಂದ ಹೊರಬರಲು ಅಲೋವೆರಾ ಜೆಲ್ ಉತ್ತಮ ಮನೆಮದ್ದು.

ಇದನ್ನೂ ಓದಿ: Beauty Tips: ಮೊಡವೆಯಿಂದ ಮುಜುಗರ ಅನುಭವಿಸುತ್ತಿದ್ದೀರಾ? ಪುದೀನದಲ್ಲಿದೆ ಪರಿಹಾರ..

( Home Remedies Beauty Tips for Sunburn During Summer)