Beauty Tips: ಮೊಡವೆಯಿಂದ ಮುಜುಗರ ಅನುಭವಿಸುತ್ತಿದ್ದೀರಾ? ಪುದೀನದಲ್ಲಿದೆ ಪರಿಹಾರ..

ಮೊಡವೆಗಳೆಂದರೆ ಮೈ ಕೊಡಕುವವರೆ ಹೆಚ್ಚು. ಯಾಕೆಂದರೆ ಮೊಡವೆ ವ್ಯಕ್ತಿಯನ್ನು ಮಾನಸಿಕವಾಗಿ ಕುಂಠಿತಗೊಳಿಸುತ್ತದೆ. ಕೇವಲ ಮೊಡವೆಗಳು ಎದ್ದು ಹೋದರೆ ಪರವಾಗಿಲ್ಲ. ಬಿಟ್ಟು ಹೋಗುವ ಗುರುತುಗಳು ಸೌಂದರ್ಯವನ್ನೆ ಹಾಳು ಮಾಡುತ್ತದೆ. ಕೆಲವರಿಗೆ ಮೊಡವೆ ಕಲೆಗಳು ಬೇಗ ಹೋಗುತ್ತದೆ.

Beauty Tips: ಮೊಡವೆಯಿಂದ ಮುಜುಗರ ಅನುಭವಿಸುತ್ತಿದ್ದೀರಾ? ಪುದೀನದಲ್ಲಿದೆ ಪರಿಹಾರ..
ಪುದೀನ ಸೊಪ್ಪು
Follow us
sandhya thejappa
| Updated By: Skanda

Updated on: Apr 05, 2021 | 7:19 AM

ನಾನು ನೋಡಲು ಚೆನ್ನಾಗಿ ಕಾಣಬೇಕು. ನನ್ನ ಮುಖ ಎಲ್ಲರಿಗೂ ಆಕರ್ಷಣೆಯಿಂದ ತೋರಬೇಕು ಎಂದು ಯೋಚಿಸುವುದು ಸಹಜ. ಅದೇನು ತಪ್ಪಲ್ಲ. ಎಲ್ಲರಿಗಿಂತ ವಿಭಿನ್ನವಾಗಿ ಅತ್ಯಂತ ಸುಂದರವಾಗಿ ಕಾಣಬೇಕು ಎಂದು ಯೋಚಿಸುವುದನ್ನು ತಪ್ಪೆಂದು ಭಾವಿಸುವುದೇ ತಪ್ಪಾಗಿರುತ್ತದೆ. ಹೌದು ಮಾನವ ಕುಲದಲ್ಲಿ ಹೆಚ್ಚು ಸೌಂದರ್ಯಕ್ಕೆ ಒತ್ತು ಕೊಡುವುದು ಯುವ ಜನತೆ. ಹಾಗೆಂದ ಮಾತ್ರಕ್ಕೆ ಬೇರೆಯವರಿಗೆ ಸೌಂದರ್ಯದ ಬಗ್ಗೆ ಆಸಕ್ತಿಯಿಲ್ಲ ಎಂದಲ್ಲ. ಎಲ್ಲಾ ವಯಸ್ಸಿನ ವರ್ಗಕ್ಕೂ ಆಸಕ್ತಿ ಇರುತ್ತದೆ. ಆದರೆ ಯುವಕ ಯುವತಿಯರಿಗೆ ಹೆಚ್ಚು.

ಅದೇನೆ ಇರಲಿ.. ಮುಖದಲ್ಲಿ ಒಂದು ಮೊಡವೆ ಎದ್ದಿದೆ ಎಂದರೆ ಎಲ್ಲರಿಗೂ ತಲೆ ಕೆಡುತ್ತದೆ. ಮೊಡವೆಯಿಂದ ನನ್ನ ಬ್ಯೂಟಿ ಕಡಿಮೆಯಾಯಿತು ಎಂದೆಲ್ಲಾ ಯೋಚಿಸುತ್ತಾರೆ. ಮೊಡವೆಯನ್ನು ಕಡಿಮೆ ಮಾಡಿಕೊಳ್ಳಲು ಹಲವು ಪ್ರಯೋಗಗಳನ್ನು ಮಾಡುತ್ತಾರೆ. ಮಾಡುವ ಪ್ರಯೋಗಗಳಿಂದ ಕೆಲವರಿಗೆ ಮೊಡವೆ ಕಡಿಮೆಯಾದರೆ ಕೆಲವರಿಗೆ ಇನ್ನಷ್ಟು ಹೆಚ್ಚಾಗುತ್ತದೆ. ಇದರಿಂದ ಬೇಸರವಾಗಿ ಸೌಂದರ್ಯ ಕಡಿಮೆಯಾಯಿತೆಂದು ಕೊರಗುತ್ತಾರೆ. ಆದರೆ ಈ ಕೊರಗನ್ನು ಕಡಿಮೆಗೊಳಿಸಲು ಹಲವು ಆಯುರ್ವೇದ ಮದ್ದುಗಳಿವೆ. ಈ ಸಾಲಿಗೆ ಪುದೀನ ಸೊಪ್ಪು ಕೂಡಾ ಸೇರಿದೆ.

ಮೊಡವೆಗಳೆಂದರೆ ಮೈ ಕೊಡಕುವವರೆ ಹೆಚ್ಚು. ಯಾಕೆಂದರೆ ಮೊಡವೆ ವ್ಯಕ್ತಿಯನ್ನು ಮಾನಸಿಕವಾಗಿ ಕುಂಠಿತಗೊಳಿಸುತ್ತದೆ. ಕೇವಲ ಮೊಡವೆಗಳು ಎದ್ದು ಹೋದರೆ ಪರವಾಗಿಲ್ಲ. ಬಿಟ್ಟು ಹೋಗುವ ಗುರುತುಗಳು ಸೌಂದರ್ಯವನ್ನೆ ಹಾಳು ಮಾಡುತ್ತದೆ. ಕೆಲವರಿಗೆ ಮೊಡವೆ ಕಲೆಗಳು ಬೇಗ ಹೋಗುತ್ತದೆ. ಇನ್ನು ಕೆಲವರಿಗೆ ಹೆಚ್ಚು ಸಮಯವನ್ನು ತೆಗೆದುಕೊಳ್ಳುತ್ತದೆ. ಆದಷ್ಟು ಬೇಗ ಮೊಡವೆ ಗುರುತುಗಳನ್ನು ಕಡಿಮೆಗೊಳಿಸಬೇಕೆಂದರೆ ಪುದೀನ ಮೊರೆ ಹೋಗಬೇಕು. ಸೌಂದರ್ಯ ಮತ್ತು ಚರ್ಮದ ಆರೈಕೆಯಲ್ಲಿ ಪುದೀನ ಪ್ರಮುಖ ಸ್ಥಾನವನ್ನು ಹೊಂದಿದೆ. ಹಾಗಾದರೆ ಈ ಪುದೀನ ಸೊಪ್ಪಿನಿಂದ ಮೊಡವೆ ಗುರುತುಗಳನ್ನು ಕಡಿಮೆಗೊಳಿಸುವುದು ಹೇಗೆ ಎಂದು ನೀವು ಯೋಚಿಸುತ್ತಿದ್ದರೆ… ಇಲ್ಲಿದೆ ಪರಿಹಾರ.

ಮೊಡವೆಗಳು

ಪುದೀನ ಎಲೆಗಳನ್ನು ಚೆನ್ನಾಗಿ ತೊಳೆದು ಅದಕ್ಕೆ ಸ್ವಲ್ಪ ನೀರನ್ನು ಸೇರಿಸಿ ಪೇಸ್ಟ್ ಮಾಡಿಕೊಳ್ಳಬೇಕು. ಮೊಡವೆ ಮೇಲೆ ಸಿದ್ಧವಾಗಿರುವ ಪುದೀನ ಪೇಸ್ಟ್​​ ಹಚ್ಚಿ ಸ್ವಲ್ಪ ಸಮಯದ ಬಳಿಕ ತೊಳೆಯಬೇಕು. ಪುದೀನ ಎಲೆಗಳು ಆಂಟಿಮೈಕ್ರೋಬಿಯಲ್ ಅಂಶ, ಮೊಡವೆ ಉಂಟುಮಾಡುವ ಬ್ಯಾಕ್ಟೀರಿಯಾವನ್ನು ಕಡಿಮೆಗೊಳಿಸುವ ಸಾಮರ್ಥ್ಯ ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುವ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತವೆ. ಇದು ಮೊಡವೆಗಳ ಗುರುತುಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಪುದೀನ ಎಲೆಗಳು ಮತ್ತು ಜೇನುತುಪ್ಪ ಪುದೀನ ಎಲೆಗಳು ಮತ್ತು ಜೇನುತುಪ್ಪವನ್ನು ಸೇರಿಸಿ ಪೇಸ್ಟ್ ಮಾಡಿ ಮೊಡವೆಗೆ ಹಚ್ಚಬೇಕು. ಒಣ ಚರ್ಮ (ಡ್ರೈ ಸ್ಕಿನ್) ಹೊಂದಿರುವವರಿಗೆ ಇದು ಉತ್ತಮವಾಗಿದೆ. ಜೇನುತುಪ್ಪ ಮತ್ತು ಪುದಿನ ಎರಡೂ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು, ಅದು ಮೊಡವೆಗಳ ವಿರುದ್ಧ ಹೋರಾಡುತ್ತವೆ.

ರೋಸ್ ವಾಟರ್ ಮತ್ತು ಪುದೀನ ಪುಡಿ ಮಾಡಿದ ಪುದೀನ ಎಲೆಗಳಲ್ಲಿ ರೋಸ್ ವಾಟರ್​ನ ಬೆರೆಸಿ ಮೊಡವೆಗಳಿಗೆ ಹಚ್ಚಿದರೆ ಚರ್ಮವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದು ಚರ್ಮವನ್ನು ಮೃದುವಾಗಿರಿಸುತ್ತದೆ.

ಪುದೀನ, ಆಲಿವ್ ಮತ್ತು ನಿಂಬೆ ರಸ ಪುಡಿಮಾಡಿದ ಪುದಿನ ಎಲೆಗಳನ್ನು ಆಲಿವ್ ಎಣ್ಣೆ ಮತ್ತು ನಿಂಬೆ ರಸದೊಂದಿಗೆ ಬೆರೆಸಿ. ಮೊಡವೆ ಮೇಲೆ ಲೇಪಿಸಿದ ನಂತರ ಅದನ್ನು ಸರಿಯಾಗಿ ಮಸಾಜ್ ಮಾಡಬೇಕು. ಸುಮಾರು 15 ನಿಮಿಷಗಳ ಕಾಲ ಮಸಾಜ್ ಮಾಡಿ ನಂತರ ಮುಖವನ್ನು ತಣ್ಣೀರಿನಿಂದ ತೊಳೆದುಕೊಳ್ಳಬೇಕು. ಈ ಮಸಾಜ್​ನಿಂದ ಬ್ಯಾಕ್ಟೀರಿಯಾವನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ.

(Mint leaves best solution for pimples)

ಇದನ್ನೂ ಓದಿ

Health Tips: ಈ ಔಷಧೀಯ ಸಸ್ಯಗಳು ನಿಮ್ಮ ಗಾರ್ಡನ್​​ನಲ್ಲಿ ಇರಲಿ; ಅಡುಗೆಗೂ ಆಯಿತು.. ಆರೋಗ್ಯಕ್ಕೂ ಒಳ್ಳೆಯದು

Health: ಗಂಟುಮೂಳೆ ಬದಲಾವಣೆ ಶಸ್ತ್ರಚಿಕಿತ್ಸೆ ಬಳಿಕ ಜೀವನಕ್ರಮ ಹೇಗಿರಬೇಕು? ಜನರ ಸಹಜ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ