ಪುಟ್ಟ-ಪುಟ್ಟ ಹೆಜ್ಜೆ, ಮನೆಯ ತುಂಬಾ ಮಕ್ಕಳ ನಗುವಿನ ಶಬ್ದ ಕಿವಿಗೆ ಬೀಳುತ್ತಿದ್ದರೆ ಮನಸ್ಸಿಗೆನೋ ಒಂದು ರೀತಿಯ ಮುದ. ಮಗು ರಾತ್ರಿಯ ವೇಳೆ ಚೆನ್ನಾಗಿ ನಿದ್ರೆ ಮಾಡಿದರೆ ಮಾತ್ರ ಹಗಲಿನಲ್ಲಿ ನಗುತ್ತಿರಲು ಸಾಧ್ಯ. ರಾತ್ರಿ ಪೂರ್ತಿ ನಿಮ್ಮ ಮಗು ಅಳುತ್ತಿದೆ.. ಮನಸ್ಸಿಗೆ ಕಿರಿಕಿರಿ ಅನಿಸುತ್ತಿದೆ ಎಂದಾದರೆ ನಿಮಗಾಗಿಯೇ ಕೆಲವು ಸಲಹೆಗಳು ಇಲ್ಲಿವೆ.
ಪುಟ್ಟ ಮಗುವಿನ ಭಾವನೆಯನ್ನು ತಾಯಿಯೇ ಅರ್ಥಸಿಕೊಳ್ಳಬೇಕು. ಮಾತಿನ ಮೂಲಕ ಹೇಳಲು ಮಾತಿನ್ನು ಬಂದಿರುವುದಿಲ್ಲ. ಕೈ ಮೂಲಕ ತಿಳಿಸುವ ಪ್ರಜ್ಞೆ ಬೆಳೆಯುವಷ್ಟು ದೊಡ್ಡರಾಗಿರುವುದಿಲ್ಲ. ಇಂತಹ ಸಮಯದಲ್ಲಿ ತನಗೆ ಬೇಕಾದುದನ್ನು ಹೇಳುವ ಒಂದೇ ಒಂದು ಸಂಜ್ಞೆ ಎಂದರೆ ಅಳು. ಮಗುವಿಗೆ ಕಿರಿಕಿರಿಯಾದ ತಕ್ಷಣ ಅಳುವಿನ ಮೂಲಕ ತನ್ನ ಬೇಡಿಕೆಯನ್ನು ಹೇಳುತ್ತದೆ.
* ಮಗುವಿಗೆ ಹಸಿವಾಗಿದ್ದರೆ ಎಂದಿಗೂ ಸರಿಯಾಗಿ ಮಲಗಲು ಸಾಧ್ಯವಿಲ್ಲ. ಹೊಟ್ಟೆ ಹಸಿವಿನಿಂದ ಇದ್ದಾಗ ಮತ್ತೆ ಮತ್ತೆ ನಿದ್ದೆಯಿಂದ ಎಚ್ಚರಗೊಳ್ಳುತ್ತದೆ. ಹಾಗಾಗಿ ಮಗು ಮಲಗುವ ಮುನ್ನ ಹೊಟ್ಟೆ ತುಂಬಿಸಿ ಮಲಗಿಸಿ
* ಮಕ್ಕಳು ಮುಗ್ಧರು ಜತೆಗೆ ಅತ್ಯಂತ ಸೂಕ್ಷ್ಮದವರಾಗಿರುತ್ತಾರೆ. ಹಾಗಿರುವಾಗ ನಿಮ್ಮ ತೊಡೆಯ ಮೇಲೆ ಮಗುವನ್ನು ಮಲಗಿಸಿಕೊಳ್ಳಿ. ಇಲ್ಲವೇ ಕೆಲ ಸಮಯದವರೆಗೆ ನಿಮ್ಮ ಪಕ್ಕದಲ್ಲಿ ಮಲಗಿಸಿಕೊಳ್ಳಿ. ಇದು ಮಗುವಿನ ಸುರಕ್ಷತೆಗೆ ಸಹಾಯವಾಗುತ್ತದೆ. ಹಾಗೂ ಮಗು ಆರಾಮವಾಗಿ ನಿದ್ರಿಸಲು ಸಹಾಯಕವಾಗುತ್ತದೆ.
* ಮಕ್ಕಳಿಗೆ ಮಸಾಜ್ ಮಾಡುವುದರಿಂದ ದೇಹಕ್ಕೆ ವಿಶ್ರಾಂತಿ ಸಿಗುತ್ತದೆ. ಶುದ್ಧವಾದ ಕೊಬ್ಬರಿ ಎಣ್ಣೆ ಬಳಸಿ ಮಕ್ಕಳಿಗೆ ಮಸಾಜ್ ಮಾಡಿ ನಂತರ ಉಗುರು ಬೆಚ್ಚಗಿನ ನೀರಿನಿಂದ ಮಕ್ಕಳಿಗೆ ಸ್ನಾನ ಮಾಡಿಸಿ. ಇದರಿಂದ ಮಗು ಚೆನ್ನಾಗಿ ನಿದ್ರಿಸುತ್ತದೆ.
* ಮಗು ತೊಟ್ಟಿಲಿನಲ್ಲಿ ಮಲಗುತ್ತಿದ್ದರೆ, ತೊಟ್ಟಿಲು ಯಾವಾಗಲೂ ಸ್ವಚ್ಛವಾಗಿರುವಂತೆ ನೋಡಿಕೊಳ್ಳಿ. ದಿನವೂ ಮಗು ಮಲಗುವ ಹಾಸಿಗೆಯೂ ಸ್ವಚ್ಛವಾಗಿರಲಿ
* ಮಗುವಿನ ತಲೆಭಾಗದ ಮೇಲೆ ಹಾಗೂ ಹೊಟ್ಟೆ ಭಾಗದ ಅಕ್ಕ-ಪಕ್ಕದಲ್ಲಿ ಮೃದುವಾದ ವಸ್ತ್ರವನ್ನು ಅಥವಾ ದಿಂಬನ್ನು ಇರಿಸಿ. ಇದರಿಂದ ಮಗು ಆರಾಮವಾಗಿ ನಿದ್ರಿಸಲು ಸಹಾಯವಾಗುತ್ತದೆ.
* ಮಗು ಮಲಗುವ ಸ್ಥಳವು ಶಾಂತವಾಗಿರಲಿ. ಟಿವಿ ಸದ್ದು ಅಥವಾ ಇನ್ನಿತರ ಶಬ್ದ ಕೇಳದಂತೆ ನೋಡಿಕೊಳ್ಳಿ. ನಿಮ್ಮ ಮಗು ಹಾಡು ಕೇಳುವ ಅಭ್ಯಾಸವಿದ್ದರೆ ಸುಮಧುರ ಭಕ್ತಿಗೀತೆಗಳನ್ನು ಅಥವಾ ಭಾವಗೀತೆಗಳನ್ನು ಹಾಡುತ್ತಾ ಮಗುವನ್ನು ಮಲಗಿಸಿ.
ಇದನ್ನೂ ಓದಿ:
Yoga Benefits: ಪಚನ ಕ್ರಿಯೆ ಸರಿಯಾಗಲು ಯಾವ ಸಮಯ ವ್ಯಾಯಾಮಕ್ಕೆ ಉತ್ತಮ?
ವಯಸ್ಸು 76 ಆಗಿದ್ದರೂ ಯುವಕರನ್ನು ನಾಚಿಸುವ ಫಿಟ್ನೆಸ್; ನೀವೂ ಇವರ ಫಿಟ್ನೆಸ್ ನೋಡಿಬಿಡಿ