990 ರೂ. ಬೆಲೆಯ ಡಿಆರ್‌ಡಿಒದ ಆಂಟಿ-ಕೊವಿಡ್ ಔಷಧವನ್ನು ಯಾರೆಲ್ಲ ಬಳಸಬಹುದು? ಇಲ್ಲದೆ ವಿವರ

|

Updated on: Jun 01, 2021 | 4:56 PM

ಅನಿಯಂತ್ರಿತ ಮಧುಮೇಹ, ತೀವ್ರವಾದ ಹೃದಯ ಸಮಸ್ಯೆಗಳು, ತೀವ್ರ ಶ್ವಾಸಕೋಶ ಸಮಸ್ಯೆ ಮುಂತಾದವುಗಳಿಂದ ಬಳಲುತ್ತಿರುವವರ ಚಿಕಿತ್ಸೆಯಲ್ಲಿ 2 ಡಿಜಿ ಔಷಧದ ಪ್ರಯೋಗವನ್ನು ಈವರೆಗೂ ನಡೆಸಿಲ್ಲ. ಈ ಕಾರಣ ಇಂತಹ ರೋಗಗಳುಳ್ಳ ವ್ಯಕ್ತಿಗಳ ಕೊವಿಡ್ ಚಿಕಿತ್ಸೆಯಲ್ಲಿ ಈ ಔಷಧದ ಬಳಕೆ ಮಾಡುವಂತಿಲ್ಲ.

990 ರೂ. ಬೆಲೆಯ ಡಿಆರ್‌ಡಿಒದ ಆಂಟಿ-ಕೊವಿಡ್ ಔಷಧವನ್ನು ಯಾರೆಲ್ಲ ಬಳಸಬಹುದು? ಇಲ್ಲದೆ ವಿವರ
ಪ್ರಾತಿನಿಧಿಕ ಚಿತ್ರ
Follow us on

ಹೈದರಾಬಾದ್: ಕೊವಿಡ್ ನಿರೋಧಕ ಎಂದು ವ್ಯಾಖ್ಯಾನಿಸಲ್ಪಟ್ಟಿರುವ 2-ಡಿಜಿ ಗ್ಲುಕೋಸ್ ಔಷಧವನ್ನು ಬಳಸುವ ಮಾರ್ಗದರ್ಶಿ ಸೂತ್ರವನ್ನು ಡಿಆರ್​ಡಿಒ ಬಿಡುಗಡೆಮಾಡಿದೆ. ಕೇವಲ ವೈದ್ಯರ ಸಲಹೆ ಮತ್ತು ಪ್ರಿಸ್ಕ್ರಿಪ್ಶನ್​ ಆಧಾರದ ಮೇಲಷ್ಟೇ ಈ ಔಷಧವನ್ನು ಬಳಸಬಹುದು ಎಂದು ಡಿಆರ್​ಡಿಒ ಸೂಚಿಸಿದೆ. ದೇಶವನ್ನು ಕೊವಿಡ್ 2ನೇ ಅಲೆ ಅತ್ಯಂತ ತೀವ್ರವಾಗಿ ಕಾಡುತ್ತಿರುವ ಸಮಯದಲ್ಲಿ ಬಿಡುಗಡೆಗೊಂಡಿರುವ ಡಿಆರ್​ಡಿಒ ಸಂಸ್ಥೆ ಅಭಿವೃದ್ಧಿಪಡಿಸಿರುವ ಕೊವಿಡ್ ನಿರೋಧಕ ಔಷಧ ಬಳಕೆಯಿಂದ ಕೊವಿಡ್ ಸೋಂಕಿತರು ವೇಗವಾಗಿ ಗುಣವಾಗುತ್ತಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಕೊವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡುವಾಗ ಸಹಾಯಕ ಔಷಧವಾಗಿ ಇತರ ಔಷಧಗಳ ಜತೆ ಮಾತ್ರ ಈ ಔಷಧವನ್ನು ಬಳಸಬಹುದು ಎಂದು ಡಿಆರ್​ಡಿಒ ತಿಳಿಸಿದೆ.
ಕೊವಿಡ್ ಸೋಂಕು ದೃಢಪಟ್ಟು 10 ದಿನಗಳವರೆಗೆ ಮಾತ್ರ ಚಿಕಿತ್ಸೆಯಲ್ಲಿ 2-ಡಿಜಿ ಔಷಧ ಬಳಸಬಹುದು. ಅದರಲ್ಲೂ ಪ್ರಮುಖವಾಗಿ ವ್ಯಕ್ತಿಯಲ್ಲಿ ಸೋಂಕು ನಿಯಂತ್ರಿಸಬಹುದಾದ ಹಂತಲ್ಲಿದ್ದರೆ ಈ ಔಷಧ ಬಳಸಬಹುದು. ಅನಿಯಂತ್ರಿತ ಮಧುಮೇಹ, ತೀವ್ರವಾದ ಹೃದಯ ಸಮಸ್ಯೆಗಳು, ತೀವ್ರ ಶ್ವಾಸಕೋಶ ಸಮಸ್ಯೆ ಮುಂತಾದವುಗಳಿಂದ ಬಳಲುತ್ತಿರುವವರ ಚಿಕಿತ್ಸೆಯಲ್ಲಿ 2 ಡಿಜಿ ಔಷಧದ ಪ್ರಯೋಗವನ್ನು ಈವರೆಗೂ ನಡೆಸಿಲ್ಲ. ಈ ಕಾರಣ ಇಂತಹ ರೋಗಗಳುಳ್ಳ ವ್ಯಕ್ತಿಗಳ ಕೊವಿಡ್ ಚಿಕಿತ್ಸೆಯಲ್ಲಿ ಈ ಔಷಧದ ಬಳಕೆ ಮಾಡುವಂತಿಲ್ಲ.

ಯಾರೆಲ್ಲ ಬಳಸಬಹುದು? ಬಳಸಬಾರದು?
ಗರ್ಭಿಣಿಯರಿಗೆ, ಮಕ್ಕಳಿಗೆ ಹಾಲುಣಿಸುವ ತಾಯಂದಿರಿಗೆ, 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಹಿಳೆಯರಲ್ಲಿ ಈ ಔಷಧವನ್ನು ಬಳಸುವಂತಿಲ್ಲ.
2 ಡಿಜಿ ಔಷಧದ ಅಗತ್ಯವುಳ್ಳವರು, ಅಥವಾ ಆಸ್ಪತ್ರೆಗಳು ಈ ಔಷಧ ಬೇಕಾದಲ್ಲಿ ಡಾ.ರೆಡ್ಡಿಸ್ ಲ್ಯಾಬ್​ನ್ನು ನೇರವಾಗಿ ಸಂಪರ್ಕಿಸಬಹುದು. 2dg@drreddys.comಗೆ ಮೇಲ್ ಮಾಡುವ ಮೂಲಕ ಸಹ ಡ್ರಗ್ ಪೂರೈಸಲು ಕೋರಬಹುದು.

ಮೇ 17ರಂದು ಕೇಂದ್ರ ಸಚಿವ ರಾಜನಾಥ್ ಸಿಂಗ್ ಡಿಆರ್​ಡಿಒ ಅಭಿವೃದ್ಧಿಪಡಿಸಿದ ಕೊವಿಡ್ ನಿರೋಧಕ 2 ಡಿಜಿ ಔಷಧವನ್ನು ಬಿಡುಗಡೆಗೊಳಿಸಿದ್ದರು. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) 2 ಡಿಜಿ ಆಂಟಿ-ಕೊವಿಡ್ -19 ಔಷಧಿಯನ್ನು ಡಾ. ರೆಡ್ಡೀಸ್ ಅವರ ಲ್ಯಾಬ್‌ ಪ್ರತಿ ಪುಟ್ಟ ಪ್ಯಾಕೆಟ್​ಗೆ 990 ರೂ ನಂತೆ ಮಾರಾಟ ಮಾಡಲಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಿ ಆಸ್ಪತ್ರೆಗಳಿಗೆ ರಿಯಾಯಿತಿ ದರದಲ್ಲಿ ಔಷಧಿ ನೀಡಲಾಗುವುದು ಎಂದು ಸರ್ಕಾರಿ ಅಧಿಕಾರಿಗಳು ಹೇಳಿರುವುದಾಗಿ ಎಎನ್‌ಐ ಸುದ್ದಿಸಂಸ್ಥೆ ವರದಿಮಾಡಿದೆ.

ಕೊವಿಡ್ ಪ್ರತಿರೋಧ ಔಷಧಿ 2-ಡಿಜಿ (2-ಡಿಯೋಕ್ಸಿ-ಡಿ-ಗ್ಲುಕೋಸ್) ಇನ್ಸ್ಟಿಟ್ಯೂಟ್ ಆಫ್ ನ್ಯೂಕ್ಲಿಯರ್ ಮೆಡಿಸಿನ್ ಮತ್ತು ಅಲೈಡ್ ಸೈನ್ಸಸ್ (INMAS), ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ಡಿಆರ್‌ಡಿಒ (ಲ್ಯಾಬ್) ಮತ್ತು ಹೈದರಾಬಾದ್‌ನ ಡಾ. ರೆಡ್ಡೀಸ್ ಲ್ಯಾಬೊರೇಟರೀಸ್ (ಡಿಆರ್‌ಎಲ್) ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿದೆ. ಕ್ಲಿನಿಕಲ್ ಪ್ರಯೋಗ ಫಲಿತಾಂಶಗಳ ಪ್ರಕಾರ ಇದು ಆಸ್ಪತ್ರೆಗೆ ದಾಖಲಾದ ರೋಗಿಗಳು ವೇಗವಾಗಿ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಪೂರಕ ಆಮ್ಲಜನಕದ ಅವಲಂಬನೆಯನ್ನು ಕಡಿಮೆ ಮಾಡುತ್ತದೆ ಎಂದು ತೋರಿಸಿದೆ.

ಇದನ್ನೂ ಓದಿ: ಕೊವಿಡ್ ತಡೆಗೆ ಮೈಸೂರಿನಲ್ಲಿ ಮತ್ತೊಂದು ಪ್ರಯೋಗ; ರಿವರ್ಸ್ ಐಸೋಲೇಷನ್​ ಮೂಲಕ ಸೋಂಕಿತರ ಕಾಳಜಿ

ಹಕ್ಕಿಜ್ವರದ ಎಚ್ 10 ಎನ್ 3 ತಳಿ ಇದೇ ಮೊದಲ ಬಾರಿಗೆ ಚೀನಾದ ವ್ಯಕ್ತಿಯೊಬ್ಬರಲ್ಲಿ ಪತ್ತೆ

(Here is the details DRDO Anti Covid drug when and who will be use)