Food Poison: ಫುಡ್ ಪಾಯ್ಸನ್ ಎಂದರೇನು? ಲಕ್ಷಣಗಳೇನು? ತಡೆಗಟ್ಟುವುದು ಹೇಗೆ?

| Updated By: ನಯನಾ ರಾಜೀವ್

Updated on: Jun 13, 2022 | 2:29 PM

Food Poison:ಫುಡ್ ಪಾಯ್ಸನ್ ಎಂಬುದು ಸಾಮಾನ್ಯವಾಗಿ ಎಲ್ಲರನ್ನೂ ಕಾಡುವ ಆರೋಗ್ಯ ಸಮಸ್ಯೆಯಾಗಿದೆ. ನೀವು ಆರೋಗ್ಯಕರ ಆಹಾರವನ್ನು ಸೇವಿಸದಿದ್ದಾಗ ಇದು ಸಂಭವಿಸುತ್ತದೆ. ಈ ಫುಡ್ ಪಾಯ್ಸನ್ ಎಂಬುದು ಜೀವಕ್ಕೆ ಕುತ್ತು ತರುವ ಸಮಸ್ಯೆಯಲ್ಲದಿದ್ದರೂ ನಿಶ್ಯಕ್ತಿಯನ್ನುಂಟು ಮಾಡುತ್ತದೆ.

Food Poison: ಫುಡ್ ಪಾಯ್ಸನ್ ಎಂದರೇನು? ಲಕ್ಷಣಗಳೇನು? ತಡೆಗಟ್ಟುವುದು ಹೇಗೆ?
Food Poison
Follow us on

ಫುಡ್ ಪಾಯ್ಸನ್(Food Poison)ಎಂಬುದು ಸಾಮಾನ್ಯವಾಗಿ ಎಲ್ಲರನ್ನೂ ಕಾಡುವ ಆರೋಗ್ಯ ಸಮಸ್ಯೆಯಾಗಿದೆ. ನೀವು ಆರೋಗ್ಯಕರ ಆಹಾರವನ್ನು ಸೇವಿಸದಿದ್ದಾಗ ಇದು ಸಂಭವಿಸುತ್ತದೆ. ಈ ಫುಡ್ ಪಾಯ್ಸನ್ ಎಂಬುದು ಜೀವಕ್ಕೆ ಕುತ್ತು ತರುವ ಸಮಸ್ಯೆಯಲ್ಲದಿದ್ದರೂ ನಿಶ್ಯಕ್ತಿಯನ್ನುಂಟು ಮಾಡುತ್ತದೆ. ಕೆಲವೊಮ್ಮೆ ನಮಗಿಷ್ಟವಾದ ಆಹಾರವನ್ನು ಸೇವಿಸಿದಾಗಲೂ ಫುಡ್ ಪಾಯ್ಸನ್ ಆಗಬಹುದು. ನೈರ್ಮಲ್ಯವಿಲ್ಲದ ಆಹಾರ, ಸಿಹಿ ತಿನಿಸು, ಮಸಾಲೆಯುಕ್ತ ಪದಾರ್ಥಗಳನ್ನು ಸೇವಿಸಿದಾಗ ಉದರಕ್ಕೆ ಸಂಬಂಧಿಸಿದ ಸಮಸ್ಯೆಗಳು ನಿಮ್ಮನ್ನು ಕಾಡಬಹುದು.

ಲಕ್ಷಣಗಳು
ಬೇಸಿಗೆ ಸಂದರ್ಭದಲ್ಲಿ ಹೆಚ್ಚು ಪ್ರಮಾಣದಲ್ಲಿ ನೀರು ಕುಡಿಯದ ಕಾರಣ, ಮಸಾಲೆ, ಖಾರದ ಪದಾರ್ಥಗಳು, ಹಾಗೂ ನೈಮರ್ಲ್ಯವಿಲ್ಲದ ಪದಾರ್ಥಗಳಿಂದ ಫುಡ್ ಪಾಯ್ಸನ್ ಆಗಬಹುದು.

ಮೂರು ದಿನಗಳಿಗಿಂತ ಹೆಚ್ಚು ದಿನಗಳ ಕಾಲ ಡೀಸೆಂಟ್ರಿ ಇರುವುದು, ಜ್ವರ, ಮೂತ್ರ ಮಾಡುವಾಗ ರಕ್ತ ಹೋಗುವುದು ಇವುಗಳು ಫುಡ್ ಪಾಯ್ಸನ್​ನ ಲಕ್ಷಣಗಳಾಗಿವೆ. ಇಂತಹ ಲಕ್ಷಣಗಳು ಕಂಡು ಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.

 

ಫುಡ್ ಪಾಯ್ಸನ್ ತಡೆಗಟ್ಟುವುದು ಹೇಗೆ?
ಔಟ್​ಸೈಡ್ ಫುಡ್: ಮನೆಬಿಟ್ಟು ಬೀದಿಬದಿಯಲ್ಲಿ ಸಿಗುವ ಸ್ವಚ್ಛತೆ ಇಲ್ಲದ ಆಹಾರವನ್ನು ಸೇವಿಸುವುದನ್ನು ಬಿಟ್ಟುಬಿಡಿ. ಪಿಜ್ಜಾ, ಬರ್ಗರ್ ರೀತಿಯ ಆಹಾರಗಳ ಸೇವನೆ ಬೇಡ.

ಮನೆಯ ಆಹಾರ: ಸಾಧ್ಯವಾದಷ್ಟು ಮನೆಯಲ್ಲೇ ಸಿದ್ಧಪಡಿಸಿದ ಆಹಾರವನ್ನು ಸೇವಿಸಿ, ಹಾಗೆಯೇ ಮನೆಗೆ ತಂದ ತರಕಾರಿಗಳನ್ನು ಸ್ವಚ್ಛ ಮಾಡಿ ಬಳಿಕ ಉಪಯೋಗಿಸಬೇಕು.
ಈ ಮೂಲಿಕೆಗಳಿಂದ ಫುಡ್ ಪಾಯ್ಸನ್ ತಡೆಯಬಹುದು
ಮೊಸರು ಹಾಗೂ ಮೆಂತ್ಯೆ ಕಾಳುಗಳು: ಮೊಸರು ಹಾಗೂ ಮೆಂತ್ಯೆಕಾಳುಗಳನ್ನು ಆಹಾರದೊಂದಿಗೆ ಸೇವನೆ ಮಾಡುವುದರಿಂದ ಫುಡ್​ಪಾಯ್ಸನ್​ಗೆ ಕಾರಣವಾಗುವ ಬ್ಯಾಕ್ಟೀರಿಯಾ ನಾಶವಾಗಲಿದ್ದು, ಆರೋಗ್ಯ ಕಾಪಾಡಲು ನೆರವಾಗಲಿದೆ. ಮೆಂತ್ಯೆ ಕಾಳುಗಳಲ್ಲಿ ಹೊಟ್ಟೆ ನೋವನ್ನು ಕಡಿಮೆ ಮಾಡುವ ಶಕ್ತಿ ಇದೆ. ಮೆಂತ್ಯೆಯನ್ನು ನೆನೆಸಿ ಬೆಳಗ್ಗೆ ಆ ನೀರನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಸಾಕಷ್ಟು ಪ್ರಯೋಜನಗಳಿವೆ.

ಶುಂಠಿ: ಶುಂಠಿಯಲ್ಲಿ ಕೂಡ ಜೀರ್ಣಕಾರಿ ಅಂಶಗಳಿದ್ದು, ಹೊಟ್ಟೆಯನ್ನು ಸ್ವಚ್ಛವಾಗಿರಿಸುತ್ತದೆ. ಶುಂಠಿಯನ್ನು ನೀರಿನಲ್ಲಿ ಕುದಿಸಿ ಬಳಿಕ ಆ ನೀರಿಗೆ ಜೇನುತುಪ್ಪವನ್ನು ಬೆರೆಸಿ ಕುಡಿಯುವುದರಿಂದ ಅಜೀರ್ಣ ಸಮಸ್ಯೆ ನಿವಾರಣೆಯಾಗಲಿದೆ.

ಬೆಳ್ಳುಳ್ಳಿ: ಬೆಳ್ಳುಳ್ಳಿಯಲ್ಲೂ ಯಾರಿಗೂ ತಿಳಿಯದ ಔಷಧೀಯ ಗುಣಗಳಿವೆ, ಶುಂಠಿಯಂತೆಯೇ ಬೆಳ್ಳುಳ್ಳಿಯಲ್ಲೂ ಜೀರ್ಣಕಾರಿ ಗುಣವಿದೆ. ಆಂಟಿವೈರಲ್, ಬ್ಯಾಕ್ಟೀರಿಯಾ ವಿರೋಧಿ ಮತ್ತು ಆಂಟಿಫಂಗಲ್ ಪರಿಣಾಮಗಳಿಂದಾಗಿ ಅತಿಸಾರ ಮತ್ತು ಹೊಟ್ಟೆಯ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.

ಇದು ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ,  ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಿದ್ದರೆ ತಕ್ಷಣ ವೈದ್ಯರನ್ನು ಭೇಟಿಮಾಡಿ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published On - 2:24 pm, Mon, 13 June 22