Centella Asiatica: ಒಂದೆಲಗ ಅಥವಾ ಬ್ರಾಹ್ಮಿಯ ವಿಶೇಷ ಗುಣಗಳೇನು? ಯಾವ್ಯಾವ ಆರೋಗ್ಯ ಸಮಸ್ಯೆಗಳನ್ನು ನಿವಾರಿಸುತ್ತೆ?

| Updated By: ನಯನಾ ರಾಜೀವ್

Updated on: Aug 20, 2022 | 11:54 AM

ಒಂದೆಲಗ ಅಥವಾ ಬ್ರಾಹ್ಮಿ ಔಷಧಿಯಾಗಿಯೂ ಆಹಾರವಾಗಿಯೂ ಉಪಯೋಗಕ್ಕೆ ಬರುವಂಥಹ ಸಸ್ಯ. ಹೆಸರೇ ಹೇಳುವಂತೆ ಒಂದೇ ಎಲೆಯಲ್ಲಿಯೇ ಇದು ಕಂಗೊಳಿಸುತ್ತದೆ.

Centella Asiatica: ಒಂದೆಲಗ ಅಥವಾ ಬ್ರಾಹ್ಮಿಯ ವಿಶೇಷ ಗುಣಗಳೇನು? ಯಾವ್ಯಾವ ಆರೋಗ್ಯ ಸಮಸ್ಯೆಗಳನ್ನು ನಿವಾರಿಸುತ್ತೆ?
Gotu Kola
Follow us on

ಒಂದೆಲಗ ಅಥವಾ ಬ್ರಾಹ್ಮಿ ಔಷಧಿಯಾಗಿಯೂ ಆಹಾರವಾಗಿಯೂ ಉಪಯೋಗಕ್ಕೆ ಬರುವಂಥಹ ಸಸ್ಯ. ಹೆಸರೇ ಹೇಳುವಂತೆ ಒಂದೇ ಎಲೆಯಲ್ಲಿಯೇ ಇದು ಕಂಗೊಳಿಸುತ್ತದೆ. ತೋಟ ಮತ್ತು ಗದ್ದೆಗಳಲ್ಲಿ ಹೆಚ್ಚಾಗಿ ಬೆಳೆಯುವ ಸಸ್ಯ ಇದಾಗಿದ್ದು, ಮನೆಯ ಪಾಟ್​ನಲ್ಲಿಯೂ ನೀವು ನೆಡಬಹುದು. ಗಿಡಕ್ಕೆ ಯಾವುದೇ ಕೊಳಚೆ ನೀರನ್ನು ಹಾಕದೆ ಶುದ್ಧ ನೀರನ್ನೇ ಹಾಕಬೇಕು.

ಒಂದೆಲಗದ ಉಪಯೋಗಗಳು
-ಒಂದೆಲಗ ಸೇವನೆ ದೇಹಕ್ಕೆ, ಮನಸ್ಸಿಗೆ ತಂಪು ನೀಡುತ್ತದೆ, ಮಾತ್ರವಲ್ಲ ಸ್ಮರಣ ಶಕ್ತಿಯನ್ನೂ ಹೆಚ್ಚಿಸುವುದು.

-ಕೆಮ್ಮು, ಶೀತ, ಉಸಿರಾಟದ ತೊಂದರೆ ಇರುವವರು ಇದರ ರಸವನ್ನು ಜೇನುತುಪ್ಪದೊಂದಿಗೆ ಬೆರೆಸಿ ಸೇವಿಸಬಹುದು.

-ದಿನಕ್ಕೆ 4-5 ಎಲೆ ಸೇವಿಸುವುದರಿಂದ ಮಾತಿನ ಉಗ್ಗುವಿಕೆ ಇಲ್ಲವಾಗುತ್ತದೆ.

-ಒಂದೆಲಗವನ್ನು ನಿತ್ಯ ಸೇವನೆ ಮಾಡಿದರೆ, ಬುದ್ಧಿ ಚುರುಕಾಗುತ್ತದೆ, ಮಕ್ಕಳಿಗೆ ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಇದರ ಎರಡು ಎಲೆಗಳನ್ನು ತಿನ್ನಲು ಕೊಡುವುದರಿಂದ ಬುದ್ಧಿ ಚುರುಕಾಗುತ್ತದೆ.

-ಒಂದೆಲಗ ನೋವು ನಿವಾರಕವೂ ಕೂಡ ಹೌದು, ಒಂದೆಲಗ ಸೊಪ್ಪನ್ನು ಚೆನ್ನಾಗಿ ಒಣಗಿಸಿ ಪುಡಿ ಮಾಡಿ ಮಧುಮೇಹಿಗಳಿಗೆ ನಿತ್ಯ ನೀಡಿದರೆ ಸಕ್ಕರೆ ಕಾಯಿಲೆಯನ್ನೂ ನಿಯಂತ್ರಿಸಬಹುದು.

ಗೋಟು ಕೋಲಾ (ಸೆಂಟೆಲ್ಲಾ ಏಷ್ಯಾಟಿಕಾ) ಎಂದು ಕರೆಯಲ್ಪಡುವ ಸಸ್ಯವು ಸೆಂಟೆಲ್ಲಾ ಕುಲಕ್ಕೆ ಸೇರಿದೆ. ಇದು ಆಯುರ್ವೇದ ಮತ್ತು ಸಾಂಪ್ರದಾಯಿಕ ಚೀನೀ ಔಷಧದಲ್ಲಿ ಬಳಕೆಯಲ್ಲಿ ಹೆಸರುವಾಸಿಯಾಗಿದೆ.

ಕಂಡುಬರುವ ಕೆಲವು ಸಂಯುಕ್ತಗಳು ರಕ್ತದೊತ್ತಡ ಮತ್ತು ಎಡಿಮಾವನ್ನು ಕಡಿಮೆಗೊಳಿಸುತ್ತವೆ. ಸುಟ್ಟಗಾಯಗಳು ಮತ್ತು ದುರ್ಬಲಗೊಂಡ ರಕ್ತಪರಿಚಲನೆಗೆ ಚಿಕಿತ್ಸೆ ನೀಡಲು ಜನರು ಒಂದೆಲಗವನ್ನು ಬಳಸುತ್ತಾರೆ.

ರಕ್ತಹೀನತೆ ಸಮಸ್ಯೆಗೆ ಉತ್ತಮ ಪರಿಹಾರ
-ಹತ್ತು ಒಂದೆಲಗದ ಎಲೆ ಮತ್ತು 5 ಕಾಳುಮೆಣಸನ್ನು ಅರೆದು ಒಂದು ಬಟ್ಟಲು ಮಜ್ಜಿಗೆಯಲ್ಲಿ ಸೇರಿಸಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. ಇದನ್ನು ಕೆಲ ಸಮಯದವರೆಗೆ ಮಾಡಿದರೆ ಹೃದಯದ ದೌರ್ಬಲ್ಯ ಗುಣವಾಗುತ್ತದೆ.

-ಒಂದೆಲಗ ಸೊಪ್ಪನ್ನು ಅರೆದು ಅದರ ರಸವನ್ನು ಒಂದು ಲೋಟ ಬಿಸಿ ಹಾಲಿಗೆ ಸೇರಿಸಿ ದಿನಕ್ಕೆ ಎರಡು ಬಾರಿ ಸೇವಿಸುತ್ತಿದ್ದರೆ ಅನೇಕ ಸಮಸ್ಯೆಗಳು ಮಾಯವಾಗುತ್ತವೆ.

-ಒಂದೆಲಗ ರಸವನ್ನು ಗಾಯ ಮತ್ತು ಹುಣ್ಣುಗಳಿಗೆ ಹಚ್ಚಿದರೆ ಬೇಗ ವಾಸಿಯಾಗುತ್ತದೆ

-ಎಳ್ಳೆಣ್ಣೆಯನ್ನು ಒಂದೆಲಗದ ರಸದೊಂದಿಗೆ ಬೆರೆಸಿ ಕುದಿಸಿದ ತೈಲವನ್ನು ಆರಿಸಿ, ಶೋದಿಸಿ ತಲೆಗೆ ಹಚ್ಚಿಕೊಳ್ಳುವುದರಿಂದ ದೃಷ್ಟಿ ಉತ್ತಮವಾಗುತ್ತದೆ.

-ತೆಂಗಿನೆಣ್ಣೆ ಒಂದೆಲಗದ ರಸವನ್ನು ಮಿಶ್ರಣ ಮಾಡಿ ತಲೆಗೆ ಹಚ್ಚಿಕೊಂಡರೆ ಕೂದಲಿನ ಆರೋಗ್ಯಕ್ಕೆ ಒಳ್ಳೆಯದು.

-ಮಲಬದ್ಧತೆಯಿಂದ ಬಳಲುತ್ತಿರುವವರು ಒಂದೆಲಗದಿಂದ ತಯಾರಿಸಿ ಚಟ್ನಿ ಅಥವಾ ತಂಬುಳಿ ಸೇವಿಸಿ.

 

ಈ ಮೇಲಿನ ಲೇಖನವು ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಸಾಮಾನ್ಯ ಮಾಹಿತಿಯನ್ನು ಒಳಗೊಂಡಿರುತ್ತದೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ