AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಳಿಗಾಲದಲ್ಲಿ ನೀರಿನ ದಾಹ ಕಡಿಮೆಯಾದರೂ ಕೂಡ ದೇಹಕ್ಕೆ ಬೇಸಿಗೆಯಷ್ಟೇ ನೀರು ಅಗತ್ಯ

ಚಳಿಯ ವಾತಾವರಣದಿಂದಾಗಿ ಈ ಸೀಸನ್ ನಲ್ಲಿ ನೀರಿನ ದಾಹ ಕಡಿಮೆಯಾದರೂ ದೇಹಕ್ಕೆ ಬೇಸಿಗೆಯಷ್ಟೇ ನೀರು ಬೇಕಾಗುತ್ತದೆ. ಆದ್ದರಿಂದ ಚಳಿಗಾಲದಲ್ಲಿ ಬಾಯಾರಿಕೆ ಆಗದಿದ್ದರೂ ಕೂಡ ದಿನಕ್ಕೆ 8-10 ಗ್ಲಾಸ್ ನೀರು ಕುಡಿಯಲೇ ಬೇಕು ಎಂದು ಆರೋಗ್ಯ ತಜ್ಞರು ಎಚ್ಚರಿಸುತ್ತಾರೆ.

ಚಳಿಗಾಲದಲ್ಲಿ ನೀರಿನ ದಾಹ ಕಡಿಮೆಯಾದರೂ ಕೂಡ  ದೇಹಕ್ಕೆ ಬೇಸಿಗೆಯಷ್ಟೇ ನೀರು ಅಗತ್ಯ
ಸಾಂದರ್ಭಿಕ ಚಿತ್ರImage Credit source: Pinterest
ಅಕ್ಷತಾ ವರ್ಕಾಡಿ
|

Updated on: Nov 24, 2023 | 5:20 PM

Share

ಈಗಾಗಲೇ ಚಳಿಗಾಲ ಶುರುವಾಗಿದೆ. ಈ ಋತುವಿನಿಂದ ಹೆಚ್ಚು ಪರಿಣಾಮ ಬೀರುವ ಒಂದು ವಿಷಯವಿದ್ದರೆ, ಅದು ನಾವು ಕುಡಿಯುವ ನೀರಿನ ಪ್ರಮಾಣ. ಚಳಿಗಾಲದಲ್ಲಿ ನಮ್ಮ ದೇಹಕ್ಕೆ ಕಡಿಮೆ ನೀರು ಬೇಕು ಎಂದು ಜನರು ಯಾವಾಗಲೂ ಭಾವಿಸುತ್ತಾರೆ ಆದರೆ ಅದು ಹಾಗಲ್ಲ. ಚಳಿಯ ವಾತಾವರಣದಿಂದಾಗಿ ಈ ಸೀಸನ್ ನಲ್ಲಿ ನೀರಿನ ದಾಹ ಕಡಿಮೆಯಾದರೂ ದೇಹಕ್ಕೆ ಬೇಸಿಗೆಯಷ್ಟೇ ನೀರು ಬೇಕಾಗುತ್ತದೆ. ನೀರು, ಜ್ಯೂಸ್, ಸೂಪ್, ಹಾಲು, ಚಹಾ, ತೆಂಗಿನ ನೀರು ಮತ್ತು ಹಣ್ಣುಗಳನ್ನು ಸಹ ಸೇವಿಸಬಹುದು. ಆದ್ದರಿಂದ ಚಳಿಗಾಲದಲ್ಲಿ ಬಾಯಾರಿಕೆ ಆಗದಿದ್ದರೂ ಕೂಡ ದಿನಕ್ಕೆ 8-10 ಗ್ಲಾಸ್ ನೀರು ಕುಡಿಯಲೇ ಬೇಕು ಎಂದು ಆರೋಗ್ಯ ತಜ್ಞರು ಎಚ್ಚರಿಸುತ್ತಾರೆ.

ಕೆಲಸದ ವಿಧ:

ಕೆಲಸದ ಪ್ರಕಾರವು ನಿಮ್ಮ ಬಾಯಾರಿಕೆಯ ಮೇಲೆ ಪರಿಣಾಮ ಬೀರುತ್ತದೆ. ನೀವು ಹೆಚ್ಚು ದೈಹಿಕ ಕೆಲಸದಲ್ಲಿ ತೊಡಗಿಸಿಕೊಂಡರೆ ಹೆಚ್ಚು ನೀರು ಕುಡಿಯುವುದು ಅಗತ್ಯವಾಗಿರುತ್ತದೆ. ನಿಮ್ಮ ಕೆಲಸವು ತುಂಬಾ ಶ್ರಮದಾಯಕವಾಗಿಲ್ಲದಿದ್ದರೆ ಮತ್ತು ಸೂರ್ಯನ ಕಿರಣಗಳಿಗೆ ಒಡ್ಡಿಕೊಳ್ಳದಿದ್ದರೆ, ಸ್ವಲ್ಪ ಕಡಿಮೆ ಪ್ರಮಾಣದಲ್ಲಿ ನೀರು ಕುಡಿಯಬಹುದು.

ವಯಸ್ಸು:

ವಯಸ್ಸು ಮತ್ತು ಬಾಯಾರಿಕೆ ನಡುವೆ ನೇರ ಸಂಬಂಧವಿದೆ ಏಕೆಂದರೆ, ಮಕ್ಕಳು ಓಡುತ್ತಾ ದೈಹಿಕವಾಗಿ ಕ್ರಿಯಾಶೀಲರಾಗುತ್ತಾರೆ, ಅವರಿಗೆ ನೀರು ಕುಡಿಯುವ ಅಗತ್ಯವು ಹೆಚ್ಚಾಗುತ್ತದೆ. ಆದ್ದರಿಂದ ವಯಸ್ಸು ಹೆಚ್ಚಾದಂತೆ ಬಾಯಾರಿಕೆ ಕಡಿಮೆಯಾಗಿರುತ್ತದೆ.

ಸುತ್ತಮುತ್ತಲಿನ ಪ್ರದೇಶ:

ಬಾಯಾರಿಕೆಯು ನಮ್ಮ ಸುತ್ತಮುತ್ತಲಿನ ಪ್ರದೇಶಗಳಿಗೆ ನೇರವಾಗಿ ಸಂಬಂಧಿಸಿದೆ. ಏಕೆಂದರೆ ಶಾಖ ಅಧಿಕ ಇರುವ ಪ್ರದೇಶಗಳಲ್ಲಿ, ಜನರಿಗೆ ಕುಡಿಯಲು ಹೆಚ್ಚು ನೀರು ಬೇಕಾಗುತ್ತದೆ. ಆದ್ದರಿಂದ ಶೀತ ಪ್ರದೇಶಗಳಲ್ಲಿ ಕಡಿಮೆ ನೀರು. ಏಕೆಂದರೆ, ಬೆವರಿನಲ್ಲಿ ನಮ್ಮ ದೇಹದಿಂದ ಶಾಖ ಹೊರಹೋಗುತ್ತದೆ. ಅದಕ್ಕಾಗಿಯೇ ನಾವು ನಮ್ಮ ದೇಹವನ್ನು ತೇವಾಂಶದಿಂದಿರಿಸಲು ಹೆಚ್ಚು ನೀರು ಕುಡಿಯಬೇಕು.

ಇದನ್ನೂ ಓದಿ: ಚಳಿಗಾಲದಲ್ಲಿ ಚರ್ಮ ಒಡೆಯದಂತೆ ತಡೆಯುವ ಸೂಪರ್​ಫುಡ್​ಗಳಿವು

ವೈದ್ಯಕೀಯ ಇತಿಹಾಸ ?

ಅನೇಕ ವಿಧದ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗೆ ಹೆಚ್ಚು ನೀರು ಬೇಕಾಗುತ್ತದೆ. ಪ್ರತೀ ದಿನ ಸಾಕಷ್ಟು ಔಷಧಿಗಳನ್ನು ಕುಡಿಯುವುರಿಂದ ದೇಹಕ್ಕೆ ಹೆಚ್ಚಿನ ನೀರು ಅಗತ್ಯವಿರುತ್ತದೆ. ಆದ್ದರಿಂದ ದೇಹಕ್ಕೆ ಪ್ರತಿದಿನ 8 ರಿಂದ 10 ಗ್ಲಾಸ್ ದ್ರವದ ಅಗತ್ಯವಿದೆ.

ದೇಹಕ್ಕೆ ನೀರು ಏಕೆ ಬೇಕು?

ದೇಹದಲ್ಲಿ ನೀರಿನ ಕೊರತೆಯು ನಿರ್ಜಲೀಕರಣಕ್ಕೆ ಕಾರಣವಾಗಬಹುದು, ಇದು ಚರ್ಮದ ಸಮಸ್ಯೆಗಳು ಮತ್ತು ಉಸಿರಾಟದ ತೊಂದರೆಗಳಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. ಆದ್ದರಿಂದ ದೇಹಕ್ಕೆ ನೀರು ತುಂಬಾ ಅಗತ್ಯ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ