Fennel Seeds : ಶುಗರ್ ಲೆವೆಲ್ ಹೆಚ್ಚಾದ್ರೆ ಟೆನ್ಶನ್ ಆಗ್ಬೇಡಿ, ಈ ಕಾಳನ್ನು ಈ ರೀತಿ ಸೇವಿಸಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Jun 12, 2024 | 4:14 PM

ಇತ್ತೀಚೆಗಿನ ದಿನಗಳಲ್ಲಿ ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವ ಸಂಖ್ಯೆಯೂ ಹೆಚ್ಚಾಗುತ್ತಿದೆ. ಈ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರು ಗ್ಲೂಕೋಸ್ ಮಟ್ಟವನ್ನು ನಿಯಂತ್ರಣದಲ್ಲಿಡಬೇಕು. ಏಕಾಏಕಿ ಹೆಚ್ಚಳವಾದ ಶುಗರ್ ಲೆವೆಲ್ ಕಂಟ್ರೋಲ್ ಆಗಬೇಕೆಂದರೆ ಸೋಂಪು ಕಾಳನ್ನು ಈ ರೀತಿಯಾಗಿ ಸೇವಿಸುವುದು ಪರಿಣಾಮಕಾರಿಯಾಗಿದೆ.

Fennel Seeds : ಶುಗರ್ ಲೆವೆಲ್ ಹೆಚ್ಚಾದ್ರೆ ಟೆನ್ಶನ್ ಆಗ್ಬೇಡಿ, ಈ ಕಾಳನ್ನು ಈ ರೀತಿ ಸೇವಿಸಿ
ಸಾಂದರ್ಭಿಕ ಚಿತ್ರ
Follow us on

ಇತ್ತೀಚಿನ ದಿನಗಳಲ್ಲಿ ಮಧುಮೇಹ ಅಥವಾ ಸಕ್ಕರೆ ಕಾಯಿಲೆ ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ಈ ಹಿಂದೆ ವಯಸ್ಸಾದವರಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದ ಕಾಯಿಲೆಯೂ ಇದೀಗ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿದೆ. ಸಕ್ಕರೆ ಪ್ರಮಾಣವು ಹೆಚ್ಚಾದರೆ ದೇಹದ ಅಂಗಾಂಗಗಳಿಗೆ ಹಾನಿಯಾಗುತ್ತದೆ. ಹೆಚ್ಚಳವಾದ ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ಕಡಿಮೆ ಮಾಡುವುದು ಕಷ್ಟಕರ. ಆಹಾರಕ್ರಮದಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳುವುದು ಅಗತ್ಯ. ಅದಲ್ಲದೇ, ಮನೆಯಲ್ಲೇ ಈ ಸೋಂಪು ಕಾಳನ್ನು ವಿವಿಧ ರೀತಿಯಲ್ಲಿ ಸೇವಿಸಿದರೆ ತಕ್ಷಣವೇ ನಿಯಂತ್ರಣಕ್ಕೆ ತರಬಹುದು.

* ಸೋಂಪು ನೀರು : ಸೋಂಪು ಕಾಳಿನ ನೀರು ಮಧುಮೇಹಿಗಳಲ್ಲಿ ಸಕ್ಕರೆಮಟ್ಟ ಅಧಿಕವಾಗಿದ್ದರೆ ನಿಯಂತ್ರಿಸಲು ಸಹಕಾರಿಯಾಗಿದೆ. ಹೀಗಾಗಿ ರಾತ್ರಿ ಮಲಗುವ ಮುನ್ನ ಒಂದು ಚಮಚ ಸೋಂಪನ್ನು ಒಂದು ಲೋಟ ನೀರಿಗೆ ಹಾಕಿ ನೆನೆಸಿಟ್ಟು, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ನೀರನ್ನು ಕುಡಿಯುವುದರಿಂದ ಸಕ್ಕರೆ ಪ್ರಮಾಣವು ನಿಯಂತ್ರಣಕ್ಕೆ ಬರುತ್ತದೆ.

* ಸೋಂಪು ಟೀ : ಮಧುಮೇಹಿಗಳು ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸೋಂಪು ಕಾಳಿನ ಟೀ ಮಾಡಿ ಕುಡಿಯುವುದು ಪರಿಣಾಮಕಾರಿಯಾಗಿದೆ. ಒಂದು ಲೋಟ ನೀರನ್ನು ಬಿಸಿ ಮಾಡಿ, ಅದಕ್ಕೆ ಚಮಚ ಸೋಂಪು ಕಾಳು ಸೇರಿಸಬೇಕು. ಅರ್ಧಕ್ಕೆ ಬರುವಷ್ಟು ಚೆನ್ನಾಗಿ ಕುದಿಸಿ ಈ ಸೋಂಪು ಟೀಯನ್ನು ಬಿಸಿಯಾಗಿರುವಾಗಲೇ ಕುಡಿದರೆ ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ನಿಯಂತ್ರಣಕ್ಕೆ ತರಬಹುದು.

ಇದನ್ನೂ ಓದಿ: ಜೀರ್ಣಕಾರಿ ಸಮಸ್ಯೆಗಳಿಂದ ಹೈರಾಣವಾಗಿದ್ದರೆ ಮಜ್ಜಿಗೆ ಹುಲ್ಲನ್ನು ಈ ರೀತಿ ಬಳಸಿ

* ಸೋಂಪು ಕಾಳಿನ ಸೇವನೆ : ಕೆಲವರಿಗೆ ಊಟವಾದ ಬಳಿಕ ಸೋಂಪು ಕಾಳನ್ನು ಬಾಯಿಗೆ ಹಾಕಿಕೊಳ್ಳುವ ಅಭ್ಯಾಸವಿರುತ್ತದೆ. ಆದರೆ ಸಕ್ಕರೆ ಕಾಯಿಲೆಯಲ್ಲಿ ಬಳಲುತ್ತಿರುವವರಲ್ಲಿ ಶುಗರ್ ಲೆವೆಲ್ ಹೆಚ್ಚಾಗಿದ್ದರೆ, ಇದನ್ನು ತಿನ್ನುವ ತಕ್ಷಣವೇ ನಿಯಂತ್ರಣಕ್ಕೆ ತರಬಹುದು. ದಿನಕ್ಕೆ ನಾಲ್ಕು ಬಾರಿ ತಿಂದ ನಂತರ ಸೋಂಪು ಕಾಳನ್ನು ಜಗಿಯುವುದರಿಂದ ಜೀರ್ಣಕ್ರಿಯೆಯೂ ಸುಧಾರಿಸುವುದಲ್ಲದೆ, ರಕ್ತದಲ್ಲಿನ ಸಕ್ಕರೆ ಅಂಶವು ನಿಯಂತ್ರಣಕ್ಕೆ ಬರುತ್ತದೆ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: