Health Tips: ಊಟ, ತಿಂಡಿ ಆದ ಮೇಲೆ ಸಿಹಿ ತಿನ್ನಬೇಕು ಅನ್ನಿಸುತ್ತಾ?
ಊಟ ಮಾಡಿದ ಮೇಲೆ ನಿಮಗೆ ಸಿಹಿ ತಿನ್ನಬೇಕು ಎಂದು ಅನಿಸುತ್ತಿದೆಯೇ? ದೋಸೆ, ಇಡ್ಲಿ, ರೊಟ್ಟಿ ಏನೇ ತಿನ್ನಲಿ ಆದರೂ ಕೂಡ ಸ್ವೀಟ್ ತಿನ್ನೋ ಬಯಕೆ ಕಡಿಮೆ ಆಗ್ತಾ ಇಲ್ವಾ? ಏನು ಇಲ್ಲಾ ಅಂದರೆ ಮಾವಿನಹಣ್ಣು, ಬಾಳೆಹಣ್ಣನ್ನಾದರೂ ತಿನ್ನಬೇಕೆಂದು ಮನಸ್ಸು ಬಯಸುತ್ತಾ? ಹಾಗಾದರೆ ಊಟವಾದ ಬಳಿಕ ಈ ರೀತಿ ಸಿಹಿ ತಿನ್ನುವ ಬಯಕೆ ಏಕೆ ಬರುತ್ತೆ? ಇದು ಸಾಮಾನ್ಯವೇ? ತಿಳಿಯಿರಿ.
ಎಷ್ಟೇ ರುಚಿಕರ ಊಟ ಮಾಡಿದ ಮೇಲೂ ನಿಮಗೆ ಸಿಹಿ ತಿನ್ನಬೇಕು ಎಂದು ಅನಿಸುತ್ತಿದೆಯೇ? ದೋಸೆ, ಇಡ್ಲಿ, ರೊಟ್ಟಿ ಏನೇ ತಿನ್ನಲಿ ಆದರೂ ಕೂಡ ಸ್ವೀಟ್ ತಿನ್ನೋ ಬಯಕೆ ಕಡಿಮೆ ಆಗ್ತಾ ಇಲ್ವಾ? ಏನು ಇಲ್ಲಾ ಅಂದರೆ ಮಾವಿನಹಣ್ಣು, ಬಾಳೆಹಣ್ಣನ್ನಾದರೂ ತಿನ್ನಬೇಕೆಂದು ಮನಸ್ಸು ಬಯಸುತ್ತಾ? ಹಾಗಾದರೆ ಊಟವಾದ ಬಳಿಕ ಈ ರೀತಿ ಸಿಹಿ ತಿನ್ನುವ ಬಯಕೆ ಏಕೆ ಬರುತ್ತೆ? ಇದು ಸಾಮಾನ್ಯವೇ? ತಿಳಿದುಕೊಳ್ಳಿ.
ಇದರರ್ಥ ನಿಮ್ಮ ಆಹಾರದಲ್ಲಿ ಪ್ರೊಟೀನ್ ಅಂಶ ತುಂಬಾ ಕಡಿಮೆ ಇದೆ. ಹಾಗಾಗಿ ನಿಮಗೆ ಈ ರೀತಿಯ ಸಮಸ್ಯೆ ಕಾಡುತ್ತದೆ ಎಂದು ತಜ್ಞರು ಹೇಳುತ್ತಾರೆ. ಡಾ. ಸೌಮ್ಯಶ್ರೀ ಶರ್ಮ ಅವರು ಹೇಳುವ ಪ್ರಕಾರ “ಆಯುರ್ವೇದದಲ್ಲಿ ಪ್ರೊಟೀನ್ ಜಾಸ್ತಿ ಇರುವ ಆಹಾರಗಳ ಬಳಕೆ ಮಾಡಬಾರದು ಆದರೆ ಪ್ರೊಟೀನ್ ಒಳಗೊಂಡಿರುವ ಆಹಾರವನ್ನು ಸೇವನೆ ಮಾಡಬಹುದು. ಅಂದರೆ ಅತಿಯಾದ ಸೇವನೆ ಒಳ್ಳೆಯದಲ್ಲ. ಮಿತ ಬಳಕೆ ಇದ್ದರೆ ಈ ಸಮಸ್ಯೆ ಬರುವುದಿಲ್ಲ” ಎಂದು ಅವರು ಹೇಳುತ್ತಾರೆ.
ಇದನ್ನೂ ಓದಿ: ನೆನೆಸಿದ ಖರ್ಜೂರ ತಿನ್ನುವುದರಿಂದ ಹೃದಯಕ್ಕೆ ಒಳ್ಳೆಯದು
ಪ್ರೋಟೀನ್ ಅಂಶವಿರುವ ಆಹಾರಗಳು:
ಸಾಮಾನ್ಯವಾಗಿ ಹಣ್ಣು – ತರಕಾರಿಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬಹುದು. ಇದರ ಜೊತೆಗೆ ಇನ್ನಿತರ ಆಹಾರ ಪದಾರ್ಥಗಳಾದ ಮೊಸರು, ಮೊಟ್ಟೆ, ಮೀನು, ಬೀಜಗಳು, ಬೆಳೆ ಕಾಳುಗಳನ್ನು ನಿಯಮಿತವಾಗಿ ಸೇರಿಸಿಕೊಳ್ಳಿ. ಅದನ್ನು ಆದಷ್ಟು ಬೇಯಿಸಿ ತಿನ್ನಿ. ಇವು ಮಿತವಾಗಿದ್ದರೆ ಆರೋಗ್ಯಕರವಾದ ಆಹಾರ ಪದ್ಧತಿಯ ಜೊತೆಗೆ ಆರೋಗ್ಯಕರವಾದ ದೇಹ ಕೂಡ ನಮ್ಮದಾಗುತ್ತದೆ. ಈ ರೀತಿ ಪ್ರೊಟೀನ್ ಇರುವ ಆಹಾರ ಸೇವನೆ ಮಾಡಿದ ಮೇಲೂ ನಿಮಗೆ ಸಿಹಿ ತಿನ್ನುವ ಬಯಕೆ ಇದ್ದರೆ ಒಣ ಖರ್ಜುರವನ್ನು ಸೇವನೆ ಮಾಡಿ.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: