‘ಶೆಫ್ ಚಿದಂಬರ’ ಚಿತ್ರದ ಬಳಿಕ ತಮ್ಮಿಷ್ಟದ ಸಿಹಿ ತಿಂಡಿ ಮಾಡೋದು ಕಲಿತ ಅನಿರುದ್ಧ ಜತ್ಕರ್
‘ಶೆಫ್ ಚಿದಂಬರ’ ರಿಲೀಸ್ಗೆ ರೆಡಿ ಇದೆ. ಈ ಚಿತ್ರದ ಬಗ್ಗೆ ಫ್ಯಾನ್ಸ್ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸಸ್ಪೆನ್ಸ್ ಥ್ರಿಲ್ಲರ್ ಅಂಶ ಕೂಡ ಈ ಚಿತ್ರದಲ್ಲಿ ಇದೆ. ಈ ಚಿತ್ರದ ಟ್ರೇಲರ್ ಇಂದು ಈ ಸಂದರ್ಭದಲ್ಲಿ ಅವರು ಟಿವಿ9 ಕನ್ನಡ ಡಿಜಿಟಲ್ ಜೊತೆ ಅವರು ಇಷ್ಟಗಳ ಬಗ್ಗೆ ಮಾತನಾಡಿದ್ದಾರೆ.

ಅನಿರುದ್ಧ್ ಜತ್ಕರ್ (Chef Chidambara ) ಅವರು ಕಿರುತೆರೆ ಹಾಗೂ ಹಿರಿತೆರೆ ಎರಡರಲ್ಲೂ ಬ್ಯುಸಿ ಇದ್ದಾರೆ. ಉದಯ ಟಿವಿಯಲ್ಲಿ ಪ್ರಸಾರ ಕಾಣುತ್ತಿರುವ ‘ಸೂರ್ಯವಂಶ’ ಧಾರಾವಾಹಿಯಲ್ಲಿ ಅನಿರುದ್ಧ್ ನಟಿಸುತ್ತಿದ್ದಾರೆ. ಈಗ ಅವರ ನಟನೆಯ ‘ಶೆಫ್ ಚಿದಂಬರ’ ರಿಲೀಸ್ಗೆ ರೆಡಿ ಇದೆ. ಈ ಚಿತ್ರದ ಬಗ್ಗೆ ಫ್ಯಾನ್ಸ್ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಹೆಸರಿಗೆ ತಕ್ಕಂತೆ ಇದು ಸಂಪೂರ್ಣವಾಗಿ ಅಡುಗೆ ಬಗ್ಗೆ ಇರುವ ಕಥೆಯಲ್ಲ. ಸಸ್ಪೆನ್ಸ್ ಥ್ರಿಲ್ಲರ್ ಅಂಶ ಕೂಡ ಈ ಚಿತ್ರದಲ್ಲಿ ಇದೆ. ಈ ಚಿತ್ರದ ಟ್ರೇಲರ್ ಇಂದು (ಜೂನ್ 1) ಸಂಜೆ ರಿಲೀಸ್ ಆಗುತ್ತಿದೆ. ಈ ಸಂದರ್ಭದಲ್ಲಿ ಅವರು ಟಿವಿ9 ಕನ್ನಡ ಡಿಜಿಟಲ್ ಜೊತೆ ಮಾತನಾಡಿದ್ದಾರೆ. ತಮ್ಮಿಷ್ಟಗಳ ಬಗ್ಗೆ ಅವರು ಮಾತನಾಡಿದ್ದಾರೆ.
‘ಶೆಫ್ ಚಿದಂಬರ’ ಏನು?
ಕೊಲೆ ಸುತ್ತ ನಡೆಯುವ ಕಥೆಯನ್ನು ಈ ಸಿನಿಮಾ ಹೊಂದಿದೆ. ಇದನ್ನು ಹಾಸ್ಯ ರೂಪದಲ್ಲಿ ಹೇಳಿದ್ದೆವೆ. ಇದು ಹೊಸ ಪ್ರಯತ್ನ. ಟ್ರೇಲರ್ ನೋಡಿದರೆ ಕುತೂಹಲ ಮೂಡುತ್ತದೆ.
ನಿಮ್ಮ ಪಾತ್ರ ಏನು?
ನನ್ನದು ಬಾಣಸಿಗನ ಪಾತ್ರ. ನಾನು ಕೊಲೆಗಳ ಸುತ್ತ ಸಿಲುಕುತ್ತೇನೆ.
ನೀವು ಅಡುಗೆ ಮಾಡ್ತೀರಾ?
ನನಗೆ ಅಡುಗೆ ಬರಲ್ಲ. ಈ ಚಿತ್ರದಿಂದ ಸ್ವಲ್ಪ ಕಲಿತಿದ್ದೇನೆ. ತರಕಾರಿ ಹೆಚ್ಚುವುದನ್ನು ಕಲಿತೆ. ಒಂದು ಶೋನಲ್ಲಿ ನಾನು ಶ್ರೀಖಂಡ ಮಾಡಿದೆ.
ನಿಮ್ಮ ಇಷ್ಟದ ಅಡುಗೆ ಯಾವುದು?
ಶ್ರೀಖಂಡ, ಆಮ್ರಖಂಡ ನನಗೆ ಸಖತ್ ಇಷ್ಟ.
ನಿಮಗೆ ಯಾರ ಕೈ ರುಚಿ ಇಷ್ಟ
ಎಲ್ಲರಿಗೂ ಇರುವಂತೆ ನನಗೆ ಅಮ್ಮನ ಕೈರುಚಿ ಇಷ್ಟ. ನನ್ನ ಪತ್ನಿ, ಮಗಳ ಕೈ ರುಚಿ ಕೂಡ ಇಷ್ಟ.
ವಿಷ್ಣವುರ್ಧನ್ ಅವರ ಇಷ್ಟದ ಅಡುಗೆ ಯಾವುದು?
ವಡೆ, ಕೇಸರಿ ಬಾತ್ ಇಷ್ಟ. ಸಿಹಿ ಪದಾರ್ಥ ಸಖತ್ ಇಷ್ಟ.
ರೋಡ್ ಸೈಡ್ ಆಹಾರ ಇಷ್ಟವಾ?
ನಾನು ಸಾಕಷ್ಟು ಬಾರಿ ರಸ್ತೆ ಬದಿ ತಿಂಡಿಗಳನ್ನು ತಿಂದಿದ್ದೆನೆ. ಆಗ ಜನರನ್ನೂ ಭೇಟಿ ಮಾಡುತ್ತೇನೆ. ಭೇಲ್ ಪುರಿ, ಪಾನಿ ಪುರಿ ಸಖತ್ ಇಷ್ಟ.
ಇದನ್ನೂ ಓದಿ: ‘ಶೆಫ್ ಚಿದಂಬರ’ ಸಿನಿಮಾದ ಮೊದಲ ಹಾಡಿಗಾಗಿ ಮೈಕ್ ಹಿಡಿದ ಅನಿರುದ್ಧ್
ವಿಷ್ಣುವರ್ಧನ್ ಅವರಿಂದ ನಿಮಗೆ ಸಿಕ್ಕ ಮರೆಯಲಾಗದ ಮಾತು
ಎಲ್ಲರೂ ಜೊತೆಗೂ ಇರಿ, ಯಾರ ಜೊತೆಯೂ ಇರಬೇಡಿ. ತಾವರೆ ಎಲೆ ರೀತಿ ಇರಬೇಕು. ನೀರಿನಲ್ಲಿದ್ದರೂ ಅದಕ್ಕೆ ನೀರು ತಾಗಲ್ಲ.
ಪ್ರಾಣಿ ಸಾಕ್ತೀರಾ?
ಮನೆ ರಿನೋವೇಷನ್ ಮಾಡುವಾಗ ಅವುಗಳನ್ನು ಬೇರೆಯವರಿಗೆ ಕೊಟ್ಟೆವು. ಈಗ ಸಾಕಬೇಕೋ ಅಥವಾ ಬೇಡವೋ ಎನ್ನುವ ಚರ್ಚೆ ನಡೆಯುತ್ತಿದೆ. ಅವುಗಳ ಆಯಸ್ಸು ಕಡಿಮೆ. ಹೀಗಾಗಿ ಅಟ್ಯಾಚ್ಮೆಂಟ್ ಬೆಳೆದು ಅವರಿಲ್ಲದಾಗ ಬೇಸರ ಆಗುತ್ತದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 11:11 am, Sat, 1 June 24