ಮೊಬೈಲ್ ಬರುವುದಕ್ಕೂ ಮುನ್ನ ‘ಕಾಗದ’ದಲ್ಲಿತ್ತು ಪ್ರೀತಿ-ಪ್ರೇಮ; ಟೀಸರ್ ನೋಡಿ..
ಹೊಸ ನಟ ಆದಿತ್ಯ ಅವರು ‘ಕಾಗದ’ ಸಿನಿಮಾಗೆ ಹೀರೋ ಆಗಿದ್ದಾರೆ. ಈ ಮೂಲಕ ಅವರು ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಿದ್ದಾರೆ. ಬಾಲನಟಿಯಾಗಿ ಗುರುತಿಸಿಕೊಂಡ ಅಂಕಿತಾ ಜಯರಾಂ ಅವರು ಈ ಸಿನಿಮಾದಲ್ಲಿ ಹೀರೋಯಿನ್ ಆಗಿದ್ದಾರೆ. ನೇಹಾ ಪಾಟೀಲ್, ನೀನಾಸಂ ಅಶ್ವತ್ಥ್ ಮುಂತಾದ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ. ‘ಕಾಗದ’ ಚಿತ್ರದ ಟೀಸರ್ ರಿಲೀಸ್ ಆಗಿದೆ.
ಪ್ರೇಮಕಥೆಗಳಿಗೆ ಕೊನೆ ಇಲ್ಲ. ಸಿನಿಮಾ ಪ್ರೇಕ್ಷಕರು ಇಂಥ ಕಥೆಗಳನ್ನು ಸದಾ ಕಾಲ ನೋಡಲು ಬಯಸುತ್ತಾರೆ. ಈಗಾಗಲೇ ಹಲವು ಬಗೆಯ ಲವ್ ಸ್ಟೋರಿಗಳನ್ನು ನೋಡಿದ್ದಾಗಿದೆ. ಹಾಗಿದ್ದರೂ ಕೂಡ ಹೊಸ ಹೊಸ ಪ್ರೇಮಕಥೆಯ ಸಿನಿಮಾಗಳು ತಯಾರಾಗುತ್ತಲೇ ಇವೆ. ಈಗ ಕನ್ನಡದಲ್ಲಿ ‘ಕಾಗದ’ (Kaagada) ಎಂಬ ಹೊಸ ಸಿನಿಮಾ ಸಿದ್ಧವಾಗಿದೆ. ಶೀರ್ಷಿಕೆಯೇ ಹೇಳುವಂತೆ ಕಾಗದಗಳು ವಿನಿಮಯ ಆಗುತ್ತಿದ್ದ ಕಾಲದ ಲವ್ ಸ್ಟೋರಿ ಇದು. ಅಂದರೆ, ಮೊಬೈಲ್ಗಳು ಬರುವುದಕ್ಕೂ ಮುನ್ನ ಇದ್ದ ಪ್ರೇಮಕಥೆ. ಅದನ್ನು ‘ಕಾಗದ’ ಸಿನಿಮಾದಲ್ಲಿ (Kannada Movie) ತೋರಿಸಲಾಗುತ್ತಿದೆ.
ಇತ್ತೀಚೆಗಷ್ಟೇ ‘ಕಾಗದ’ ಸಿನಿಮಾದ ಟೀಸರ್ ಬಿಡುಗಡೆ ಆಗಿದೆ. ಅರುಣ್ ಕುಮಾರ್ ಆಂಜನೇಯ ಅವರ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ರಂಜಿತ್ ಅವರ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬಂದಿದೆ. ‘ಜಂಕಾರ್ ಮ್ಯೂಸಿಕ್’ ಮೂಲಕ ‘ಕಾಗದ’ ಟೀಸರ್ ಬಿಡುಗಡೆ ಆಗಿದೆ. ಟೀಸರ್ ನೋಡಿದ ಸಿನಿಪ್ರಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಡಿಜಿಟಲ್ ಯುಗದ ಪ್ರೇಕ್ಷಕರಿಗೆ ‘ಕಾಗದ’ದ ಕಾಲದ ಪ್ರೇಮಕಥೆಯನ್ನು ತೋರಿಸಲು ಈ ಚಿತ್ರತಂಡ ಸಜ್ಜಾಗಿದೆ.
ಒಂದು ಮುಗ್ಧ ಪ್ರೇಮಕಥೆ ಈ ಸಿನಿಮಾದಲ್ಲಿ ಇದೆ. ಎರಡು ಹಳ್ಳಿಗಳ ಮಧ್ಯದ ದ್ವೇಷದ ನಡುವೆಯೂ ಅರಳಿದ ಪ್ರೀತಿಯ ಕಥೆ ಕೂಡ ಹೌದು. ಈಗಾಗಲೇ ಈ ಸಿನಿಮಾಗೆ ಚಿತ್ರೀಕರಣ ಮುಕ್ತಾಯ ಆಗಿದೆ. ಅಲ್ಲದೇ, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಕೂಡ ಮುಗಿದಿದೆ. ತೆರೆಗೆ ಬರಲು ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ಇತ್ತೀಚಿಗೆ ಬಿಡುಗಡೆ ಆದ ಟೀಸರ್ಗೆ ಜನರಿಂದ ಮೆಚ್ಚುಗೆ ಸಿಕ್ಕಿರುವುದಕ್ಕೆ ಚಿತ್ರತಂಡದವರು ಖುಷಿ ಆಗಿದ್ದಾರೆ.
ಇದನ್ನೂ ಓದಿ: ‘ಸಂಭವಾಮಿ ಯುಗೇ ಯುಗೇ’ ಸಿನಿಮಾದ ಸಾಂಗ್ ಬಿಡುಗಡೆ ಮಾಡಿದ ಶ್ರುತಿ ಹರಿಹರನ್
ನಿರ್ದೇಶಕ ರಂಜಿತ್ ಅವರು ಈ ಮೊದಲು ‘ಆ್ಯಪಲ್ ಕೇಕ್’ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳಿದ್ದರು. ಅವರ ಎರಡನೇ ಸಿನಿಮಾವಾಗಿ ‘ಕಾಗದ’ ಮೂಡಿಬಂದಿದೆ. ಈ ಸಿನಿಮಾದಲ್ಲಿ ನಾಲ್ಕು ಹಾಡುಗಳು ಇವೆ. ಅವುಗಳಿಗೆ ಪ್ರದೀಪ್ ವರ್ಮ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ವೀನಸ್ ನಾಗರಾಜ್ ಮೂರ್ತಿ ಅವರ ಛಾಯಾಗ್ರಹಣ ಈ ಸಿನಿಮಾಗಿದೆ. ಪವನ್ ಗೌಡ ಅವರು ಸಂಕಲನದ ಜವಾಬ್ದಾರಿ ನಿಭಾಯಿಸಿದ್ದಾರೆ.
‘ಕಾಗದ’ ಸಿನಿಮಾ ಟೀಸರ್:
‘ಕಾಗದ’ ಸಿನಿಮಾದ ಮೂಲಕ ಯುವ ನಟ ಆದಿತ್ಯ ಅವರು ಹೀರೋ ಆಗಿ ಚಿತ್ರರಂಗ ಪ್ರವೇಶ ಪಡೆಯುತ್ತಿದ್ದಾರೆ. ಬಾಲನಟಿಯಾಗಿ ಜನಪ್ರಿಯತೆ ಪಡೆದ ಅಂಕಿತಾ ಜಯರಾಂ ಈ ಚಿತ್ರಕ್ಕೆ ನಾಯಕಿ ಆಗಿದ್ದಾರೆ. ನೇಹಾ ಪಾಟೀಲ್ ಅವರಿಗೆ ಒಂದು ವಿಶೇಷ ಪಾತ್ರ ಈ ಸಿನಿಮಾದಲ್ಲಿದೆ. ಬಾಲರಾಜ್ ವಾಡಿ, ಅಶ್ವತ್ಥ್ ನೀನಾಸಂ, ಮಠ ಕೊಪ್ಪಳ, ಶಿವಮಂಜು ಸೇರಿದಂತೆ ಹಲವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 10:05 pm, Fri, 31 May 24