AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸಂಭವಾಮಿ ಯುಗೇ ಯುಗೇ’ ಸಿನಿಮಾದ ಸಾಂಗ್​ ಬಿಡುಗಡೆ ಮಾಡಿದ ಶ್ರುತಿ ಹರಿಹರನ್

‘ಸಂಭವಾಮಿ ಯುಗೇ ಯುಗೇ’ ಚಿತ್ರ ಜೂನ್‍ 21ರಂದು ರಿಲೀಸ್​ ಆಗಲಿದೆ. ಈ ಸಿನಿಮಾದ ಹೊಸ ಹಾಡನ್ನು ಶ್ರುತಿ ಹರಿಹರನ್ ಬಿಡುಗಡೆ ಮಾಡಿ ಶುಭ ಕೋರಿದ್ದಾರೆ. ಚೇತನ್​ ಚಂದ್ರಶೇಖರ್​ ಶೆಟ್ಟಿ ನಿರ್ದೇಶನದ ಈ ಸಿನಿಮಾಗೆ ಪ್ರತಿಭಾ ಬಂಡವಾಳ ಹೂಡಿದ್ದಾರೆ. ಜಯ್ ಶೆಟ್ಟಿ, ನಿಶಾ ರಜಪೂತ್ ಅವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

‘ಸಂಭವಾಮಿ ಯುಗೇ ಯುಗೇ’ ಸಿನಿಮಾದ ಸಾಂಗ್​ ಬಿಡುಗಡೆ ಮಾಡಿದ ಶ್ರುತಿ ಹರಿಹರನ್
ಶ್ರುತಿ ಹರಿಹರನ್​, ನಿಶಾ, ಜಯ್​ ಶೆಟ್ಟಿ
ಮದನ್​ ಕುಮಾರ್​
|

Updated on:May 26, 2024 | 4:59 PM

Share

ಚೇತನ್ ಚಂದ್ರಶೇಖರ್ ಶೆಟ್ಟಿ ಅವರು ‘ಸಂಭವಾಮಿ ಯುಗೇಯುಗೇ’ (Sambhavami Yuge Yuge) ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ನಿರ್ಮಾಪಕಿ ಪ್ರತಿಭಾ ಅವರು ‘ರಾಜಲಕ್ಷ್ಮಿ ಎಂಟರ್​ಟೇನ್ಮೆಂಟ್’ ಬ್ಯಾನರ್​ ಮೂಲಕ ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಜಯ್ ಶೆಟ್ಟಿ ಅವರು ನಾಯಕನಾಗಿ ನಟಿಸಿದ್ದಾರೆ. ಇತ್ತೀಚೆಗೆ ‘ಸಂಭವಾಮಿ ಯುಗೇಯುಗೇ’ ಸಿನಿಮಾದ ಮೊದಲ ಸಾಂಗ್​ ಬಿಡುಗಡೆ ಆಯಿತು. ‘ಡೋಲು ತಮಟೆ ವಾದ್ಯ…’ ಎಂಬ ಈ ಹಾಡನ್ನು ನಟಿ ಶ್ರುತಿ ಹರಿಹರನ್​ (Sruthi Hariharan) ಅವರು ರಿಲೀಸ್​ ಮಾಡಿದರು. ಜಾನಪದ ಶೈಲಿಯಲ್ಲಿ ಈ ಹಾಡು ಮೂಡಿಬಂದಿದೆ.

‘ಸಂಭವಾಮಿ ಯುಗೇಯುಗೇ’ ಸಿನಿಮಾದ ಈ ಹಾಡಿಗೆ ಅರಸು ಅಂತಾರೆ ಅವರು ಸಾಹಿತ್ಯ ಬರೆದಿದ್ದಾರೆ. ಗೀತಾ ಮಾಸ್ಟರ್ ಅವರು ಡ್ಯಾನ್ಸ್​ ಕೊರಿಯೋಗ್ರಫಿ ಮಾಡಿದ್ದಾರೆ. ಪೂರನ್ ಶೆಟ್ಟಿಗಾರ್ ಅವರು ಸಂಗೀತ ನೀಡಿದ್ದಾರೆ. ನಕಾಶ್ ಮತ್ತು ಸ್ಪರ್ಶಾ ಅವರ ಕಂಠದಲ್ಲಿ ಈ ಸಾಂಗ್​ ಮೂಡಿಬಂದಿದೆ. ‘ಇದು ನನ್ನ ಮೊದಲ ಸಿನಿಮಾವಾದರೂ ನನ್ನ ಮೇಲೆ ನಂಬಿಕೆಯಿಟ್ಟು ಚಾನ್ಸ್​ ನೀಡಿದ ನಿರ್ಮಾಪಕಿ ಪ್ರತಿಭಾ ಅವರಿಗೆ ಧನ್ಯವಾದಗಳು. ಇದು ಕಮರ್ಷಿಯಲ್‍ ಥ್ರಿಲ್ಲರ್​ ಅಂಶಗಳಿರುವ ಸಿನಿಮಾ’ ಎಂದು ನಿರ್ದೇಶಕ ಚೇತನ್​ ಚಂದ್ರಶೇಖರ್​ ಶೆಟ್ಟಿ ಹೇಳಿದ್ದಾರೆ.

ಮಂಡ್ಯ, ಚನ್ನಪಟ್ಟಣ, ರಾಮನಗರ ಮುಂತಾದ ಕಡೆಗಳಲ್ಲಿ ‘ಸಂಭವಾಮಿ ಯುಗೇಯುಗೇ’ ಸಿನಿಮಾಗೆ ಚಿತ್ರೀಕರಣ ಮಾಡಲಾಗಿದೆ. ‘ನಾನು 10 ವರ್ಷಗಳಿಂದ ಅನೇಕ ನಿರ್ದೇಶಕರ ಜತೆ ಕೆಲಸ ಮಾಡಿದ್ದೆ. ಇದು ಒಂದು ಹಳ್ಳಿಯ ಕಥೆ ಇರುವ ಸಿನಿಮಾ. ಹಳ್ಳಿಯ ಯುವಕರು ವಿದ್ಯಾಭ್ಯಾಸ ಮಾಡಿ ಪಟ್ಟಣಕ್ಕೆ ಹೋಗಿ ನೆಲೆಸುತ್ತಾರೆ. ಇದರಿಂದ ಮುಂದಿನ ತಲೆಮಾರಿನ ಕಥೆ ಏನಾಗುತ್ತದೆ? ಗ್ರಾಮೀಣ ಭಾಗ ಉಳಿಯುವುದು ಹೇಗೆ? ಆದ್ದರಿಂದ ಯುವಕರು ಹಳ್ಳಿಯಲ್ಲೇ ವಾಸಿಸಬೇಕು ಎಂಬುದೇ ಈ ಸಿನಿಮಾದ ಆಶಯ’ ಎಂದು ನಿರ್ದೇಶಕರು ಹೇಳಿದ್ದಾರೆ.

‘ಸಂಭವಾಮಿ ಯುಗೇಯುಗೇ’ ಸಿನಿಮಾ ಜೂನ್‍ 21ಕ್ಕೆ ಬಿಡುಗಡೆ ಆಗಲಿದೆ. ‘ಇದೊಂದು ಕೃಷಿ ಹಾಗೂ ರೈತರ ಸಿನಿಮಾ’ ಎಂದು ನಾಯಕ ನಟ ಜಯ್ ಶೆಟ್ಟಿ ಹೇಳಿದ್ದಾರೆ. ‘ತನಗೆ ಆಶ್ರಯ ನೀಡಿದ ಊರಿಗೆ ಏನಾದರೂ ಮಾಡಬೇಕು ಎಂದು ನಾಯಕ ಮುಂದಾಗುತ್ತಾನೆ. ಆತ ಆ ಊರಿನ ಪಂಚಾಯ್ತಿ ಅಧ್ಯಕ್ಷ ಆಗುತ್ತಾನೆ. ಮುಂದೇನಾಗುತ್ತದೆ ಎಂಬುದು ಸಿನಿಮಾದ ಕಥೆ’ ಎಂದು ಅವರು ಹೇಳಿದ್ದಾರೆ. ವಿಜಯಪುರ ಮೂಲದ ನಿಶಾ ರಜಪೂತ್ ಅವರು ಈ ಸಿನಿಮಾಗೆ ನಾಯಕಿ ಆಗಿದ್ದಾರೆ.

ಇದನ್ನೂ ಓದಿ:  ‘ಇನ್ಮುಂದೆ ಸಿನಿಮಾ ಲೇಟ್​ ಮಾಡಲ್ಲ’: ಭರವಸೆ ನೀಡಿದ ನಟ ಧ್ರುವ ಸರ್ಜಾ

‘ನಾನು ಬಿಜಾಪುರದವಳು. ಬೆಳೆದಿದ್ದು ಮುಂಬೈನಲ್ಲಿ. ಕನ್ನಡದ ಸಿನಿಮಾದಲ್ಲಿ ಅಭಿನಯಿಸಬೇಕು ಎನ್ನುವ ಆಸೆ ಇತ್ತು. ಹೀಗಿರುವಾಗಲೇ ಈ ಸಿನಿಮಾದಲ್ಲಿ ನಟಿಸುವ ಚಾನ್ಸ್​ ಸಿಕ್ಕಿತು. 9 ವರ್ಷಗಳ ಕಾಲ ಮಾಡಲಿಂಗ್‍ ಮಾಡಿದ್ದೇನೆ. ನನ್ನ ಭಾಷೆ ಹಾಗೂ ನಟನೆಯನ್ನು ತಿದ್ದಿತೀಡಿದ ನಿರ್ದೇಶಕ ಚೇತನ್‍ ಶೆಟ್ಟಿ ಅವರಿಗೆ ಧನ್ಯವಾದಗಳು’ ಎಂದು ನಿಶಾ ಹೇಳಿದ್ದಾರೆ. ಅಶೋಕ್ ಕುಮಾರ್, ಮಧುರಾ ಗೌಡ, ರಾಜೇಂದ್ರ ಕಾರಂತ್‍, ವಿಕ್ಟರಿ ವಾಸು, ಅಶ್ವಿನ್‍ ಹಾಸನ್‍ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ರಾಜು ಹೆಮ್ಮಿಗೆಪುರ ಅವರು ಛಾಯಾಗ್ರಹಣ ಮಾಡಿದ್ದಾರೆ. ಕಾರ್ಯಕಾರಿ ನಿರ್ಮಾಪಕರಾಗಿ ದಿನೇಶ್ ರಾಜನ್ ಕೆಲಸ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 4:58 pm, Sun, 26 May 24

ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ