AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೃಹತ್ ಆರ್ಕೆಸ್ಟ್ರಾ, ಭಾರಿ ಮೊತ್ತದ ಆಡಿಯೋ ರೈಟ್ಸ್: ದಾಖಲೆ ಬರೆಯುತ್ತಿದೆ ‘ಕೆಡಿ’

ಧ್ರುವ ಸರ್ಜಾ ನಟನೆಯ ‘ಕೆಡಿ’ ಸಿನಿಮಾದ ಹಾಡುಗಳನ್ನು ಅಮೆರಿಕದ ಲಾಸ್ ಏಂಜಲ್ಸ್​ನಲ್ಲಿ ರೆಕಾರ್ಡ್ ಮಾಡಲಾಗಿದ್ದು ಸಿನಿಮಾಕ್ಕೆ ಅತಿ ದೊಡ್ಡ ಆರ್ಕೆಸ್ಟ್ರಾ ಬಳಸಲಾಗಿದೆ. ಹಿಂದಿ ಸಿನಿಮಾಗಳೂ ಸಹ ಇಷ್ಟು ದೊಡ್ಡ ಆರ್ಕೆಸ್ಟ್ರಾ ಬಳಸಿಲ್ಲ.

ಬೃಹತ್ ಆರ್ಕೆಸ್ಟ್ರಾ, ಭಾರಿ ಮೊತ್ತದ ಆಡಿಯೋ ರೈಟ್ಸ್: ದಾಖಲೆ ಬರೆಯುತ್ತಿದೆ ‘ಕೆಡಿ’
ಮಂಜುನಾಥ ಸಿ.
|

Updated on: May 26, 2024 | 1:05 PM

Share

ಧ್ರುವ ಸರ್ಜಾ (Dhruva Sarja) ನಟನೆಯ ‘ಮಾರ್ಟಿನ್’ (Martin) ಸಿನಿಮಾದ ಬಿಡುಗಡೆ ದಿನಾಂಕವನ್ನು ಇತ್ತೀಚೆಗಷ್ಟೆ ಘೋಷಿಸಲಾಗಿದೆ. ಅದಾದ ಎರಡನೇ ದಿನದಲ್ಲಿ ಧ್ರುವ ಸರ್ಜಾ ನಟನೆಯ ‘ಕೆಡಿ’ ಸಿನಿಮಾದ ಬಿಡುಗಡೆ ಬಗ್ಗೆ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. ಇಂದು ಸುದ್ದಿಗೋಷ್ಠಿ ನಡೆಸಿದ ಚಿತ್ರತಂಡ ಸಿನಿಮಾದ ಬಿಡುಗಡೆ ದಿನಾಂಕ, ಸಿನಿಮಾದ ಸಂಗೀತ ಇನ್ನಿತರೆ ವಿಷಯಗಳ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ಮಾತ್ರವಲ್ಲದೆ ಸಿನಿಮಾದ ಸಂಗೀತದ ಕುರಿತಾಗಿ ವಿಡಿಯೋ ಒಂದನ್ನು ಸಹ ಹಂಚಿಕೊಳ್ಳಲಾಗಿದೆ. ಸಿನಿಮಾದ ಸಂಗೀತಕ್ಕೆ ಎಷ್ಟು ಪ್ರಾಧಾನ್ಯತೆ ನೀಡಲಾಗಿದೆ ಎಂಬುದನ್ನು ವಿಡಿಯೋ ಸಾರಿ ಹೇಳುತ್ತಿದೆ.

ಅಮೆರಿಕದ ಲಾಸ್ ಏಂಜಲ್ಸ್​ನಲ್ಲಿ ಈ ಸಿನಿಮಾಕ್ಕೆ ಸಂಗೀತವನ್ನು ಲೈವ್ ರೆಕಾರ್ಡ್ ಮಾಡಲಾಗಿದ್ದು, ಅರ್ಜುನ್ ಜನ್ಯ ಹಾಗೂ ಪ್ರೇಮ್ ಇಬ್ಬರೂ ಖುದ್ದಾಗಿ ತೆರಳಿ ಸಂಗೀತಗಾರರಿಗೆ ನಿರ್ದೇಶನ ನೀಡಿ ರೆಕಾರ್ಡ್ ಮಾಡಿಕೊಂಡಿದ್ದಾರೆ. ‘ಕೆಡಿ’ ಸಿನಿಮಾಕ್ಕೆ ಆರ್ಕೆಸ್ಟ್ರಾ ಒದಗಿಸಿರುವ ಆರ್ಕೆಸ್ಟ್ರಾ ಸಿಇಒ ಬೇಲಿಂಟ್ ಸಪ್​ಜೋನ್ ಹೇಳಿರುವಂತೆ, ‘ಇಷ್ಟು ದೊಡ್ಡ ಆರ್ಕೆಸ್ಟ್ರಾ ಬಳಸುತ್ತಿರುವ ಮೊದಲ ಭಾರತೀಯ ಸಿನಿಮಾ ಇದು. ಇನ್ಯಾವುದೇ ಭಾರತೀಯ ಸಿನಿಮಾಕ್ಕೆ ನಾವು ಇಷ್ಟು ದೊಡ್ಡ ಆರ್ಕೆಸ್ಟ್ರಾ ಬಳಸಿಲ್ಲ’ ಎಂದಿದ್ದಾರೆ.

ಮುಂದುವರೆದು ಮಾತನಾಡಿ, ‘ಅದ್ಭುತವಾದ ಸಂಗೀತವನ್ನು ನಾವು ರೆಕಾರ್ಡ್ ಮಾಡಿದ್ದೇವೆ. ಭಾರತೀಯ ಸಂಗೀತವನ್ನು ಭಿನ್ನವಾಗಿ ನಾವು ನುಡಿಸಿದ್ದು ಅಪರೂಪವಾಗಿತ್ತು. ಸಂಗೀತದಲ್ಲಿ ಸಾಕಷ್ಟು ರಿದಮ್​ಗಳಿದ್ದವು, ಅದು ನುಡಿಸುವುದು ಸವಾಲಿನದ್ದಾಗಿತ್ತು. ಇದೊಂದು ದೊಡ್ಡ ಸಿನಿಮಾ ಎಂಬುದು ನಮಗೆ ಅರ್ಥವಾಗಿದೆ. ನಮಗೆ ನಿಮ್ಮೊಂದಿಗೆ (ಅರ್ಜುನ್ ಜನ್ಯ) ಕೆಲಸ ಮಾಡುವುದು ಹೆಮ್ಮೆ ಎನಿಸುತ್ತದೆ. ನೀವು (ಪ್ರೇಮ್) ಭಾರತದ ಯಶಸ್ವಿ ನಿರ್ದೇಶಕರಲ್ಲಿ ಒಬ್ಬರು ಎಂದು ತಿಳಿದುಬಂತು. ನಿಮ್ಮ ಸಿನಿಮಾಕ್ಕೆ ಶುಭವಾಗಲಿ’ ಎಂದಿದ್ದಾರೆ.

ಇದನ್ನೂ ಓದಿ:ದರ್ಶನ್ ದೆಸೆಯಿಂದ ಸಿಕ್ಕ ‘ಜೊತೆ-ಜೊತೆಯಲಿ’ ಸಿನಿಮಾ ನೆನಪಿಸಿಕೊಂಡ ಪ್ರೇಮ್

ವಿಡಿಯೋನಲ್ಲಿ ಮಾತನಾಡಿರುವ ಪ್ರೇಮ್, ಇಷ್ಟು ದೊಡ್ಡ ಆರ್ಕೆಸ್ಟ್ರಾ ಹಾಕಿ ಸಂಗೀತ ರೆಕಾರ್ಡ್ ಮಾಡಿರುವ ಮೊದಲ ಸಿನಿಮಾ ನಮ್ಮ ಕನ್ನಡದ ಸಿನಿಮಾ ಎಂದು ಹೇಳಿಕೊಳ್ಳಲು ಹೆಮ್ಮೆ ಆಗುತ್ತದೆ. ಎಲ್ಲವೂ ನಮ್ಮ ‘ಕೆಡಿ’ಗಾಗಿ ಎಂದಿದ್ದಾರೆ ಪ್ರೇಮ್. ಸಿನಿಮಾದ ಹಾಡುಗಳಿಗೆ ಪ್ರೇಮ್ ಹಾಗೂ ಮಂಜುನಾಥ್ ಕನ್ನಡ ಲಿರಿಕ್ಸ್ ಬರೆದಿದ್ದಾರೆ. ಹಿಂದಿ ಸಾಹಿತ್ಯವನ್ನು ರಖೀಬ್ ಆಲಮ್ ಬರೆದಿದ್ದಾರೆ, ತಮಿಳು ಸಾಹಿತ್ಯವನ್ನು ಮದನ್ ಕರ್ಕಿ ಬರೆದಿದ್ದಾರೆ. ಮಲಯಾಳಂ ಸಾಹಿತ್ಯವನ್ನು ಗೋಪಾಲನ್ ಬರೆದಿದ್ದಾರೆ.

‘ಕೆಡಿ’ ಸಿನಿಮಾದಲ್ಲಿ ಧ್ರುವ ಸರ್ಜಾ ಜೊತೆಗೆ ಸಂಜಯ್ ದತ್, ಶಿಲ್ಪಾ ಶೆಟ್ಟಿ, ರೀಶ್ಮಾ ನಾಣಯ್ಯ ಇನ್ನೂ ಕೆಲವರು ನಟಿಸಿದ್ದಾರೆ. ಸಿನಿಮಾಕ್ಕೆ ಪ್ರೇಮ್ ನಿರ್ದೇಶನ ಮಾಡಿದ್ದು, ಬಂಡವಾಳವನ್ನು ಕೆವಿಎನ್ ಪ್ರೊಡಕ್ಷನ್ ಬಂಡವಾಳ ಹೂಡಿದೆ. ಸಿನಿಮಾ ಡಿಸೆಂಬರ್ ತಿಂಗಳಲ್ಲಿ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಕುರುಡುಮಲೆ ವಿನಾಯಕ ದೇಗುಲದಲ್ಲಿ ಮೋದಿ ಹೆಸರಲ್ಲಿ ಬಿ.ವೈ.ವಿಜಯೇಂದ್ರ ಪೂಜೆ
ಕುರುಡುಮಲೆ ವಿನಾಯಕ ದೇಗುಲದಲ್ಲಿ ಮೋದಿ ಹೆಸರಲ್ಲಿ ಬಿ.ವೈ.ವಿಜಯೇಂದ್ರ ಪೂಜೆ