ಹಿರಿತೆರೆಗೆ ಬರಲಿರುವ ಸ್ಮೈಲ್ ಗುರು, ಹಿರಿಯ ನಿರ್ದೇಶಕ ಮಹೇಶ್ ಬಾಬು ಆಕ್ಷನ್-ಕಟ್
ಕಿರುತೆರೆಯಿಂದ ಹಿರಿತೆರೆಗೆ ಬಂದು ಹಲವರು ಸ್ಟಾರ್ಗಳಾಗಿದ್ದಾರೆ. ಇದೀಗ ಮತ್ತೊಬ್ಬ ಕಿರುತೆರೆ ನಟ ಹಿರಿತೆರೆಗೆ ಬರಲು ಸಜ್ಜಾಗಿದ್ದಾರೆ. ಧಾರಾವಾಹಿ, ರಿಯಾಲಿಟಿ ಶೋಗಳಲ್ಲಿ ನಟಿಸಿರುವ ಸ್ಮೈಲ್ ಗುರು ರಕ್ಷಿತ್ ಇದೀಗ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದು, ಅವರ ಮೊದಲ ಸಿನಿಮಾವನ್ನು ಅನುಭವಿ ನಿರ್ದೇಶಕ ಮಹೇಶ್ ಬಾಬು ನಿರ್ದೇಶಿಸುತ್ತಿದ್ದಾರೆ.
ಕಿರುತೆರೆಯಿಂದ (Srial) ಹಿರಿತೆರೆಗೆ ಬಂದು ಒಳ್ಳೆಯ ನಟರಾಗಿ, ಸ್ಟಾರ್ಗಳಾಗಿ ಗುರುತಿಸಿಕೊಂಡಿರುವ ಹಲವು ನಟರಿದ್ದಾರೆ. ಯಶ್, ಗೋಲ್ಡನ್ ಸ್ಟಾರ್ ಗಣೇಶ್, ರಾಧಿಕಾ ಪಂಡಿತ್, ಅಚ್ಯುತ್ ಕುಮಾರ್ ಹೀಗೆ ಪಟ್ಟಿ ಉದ್ದವಾಗುತ್ತಾ ಹೋಗುತ್ತದೆ. ಇದೀಗ ಮತ್ತೊಬ್ಬ ಕಿರುತೆರೆ ಸೆಲೆಬ್ರಿಟಿ ಹಿರಿತೆರೆಗೆ ಬಡ್ತಿ ಪಡೆಯಲು ಸಜ್ಜಾಗಿದ್ದಾರೆ. ಅವರಿಗೆ ಕನ್ನಡ ಚಿತ್ರರಂಗದ ಪ್ರತಿಭಾವಂತ ನಿರ್ದೇಶಕರಲ್ಲಿ ಒಬ್ಬರಾದ ಮಹೇಶ್ ಬಾಬು ಬೆಂಬಲ ಹಾಗೂ ಮಾರ್ಗದರ್ಶನ ದೊರೆಯುತ್ತಿದೆ.
ಕಿರುಚಿತ್ರ, ಧಾರಾವಾಹಿ, ರಿಯಾಲಿಟಿ ಶೋನಲ್ಲಿ ಮಿಂಚಿದ್ದ ಸ್ಮೈಲ್ ಗುರು ರಕ್ಷಿತ್ ಈಗ ಸಿನಿಮಾರಂಗಕ್ಕೆ ಕಾಲಿಡುತ್ತಿದ್ದಾರೆ. ಸ್ಮೈಲ್ ಗುರು ರಕ್ಷಿತ್ ಅವರ ಮೊದಲ ಸಿನಿಮಾಕ್ಕೆ ಮಹೇಶ್ ಬಾಬು ನಿರ್ದೇಶನ ಮಾಡಲಿದ್ದಾರೆ. ಕನ್ನಡ ಚಿತ್ರರಂಗಕ್ಕೆ ‘ಆಕಾಶ್’, ‘ಅರಸು’ ಅಂತಹ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿರುವ ಮಹೇಶ್ ಬಾಬು ಹೊಸ ನಟ ರಕ್ಷಿತ್ಗೆ ನಿರ್ದೇಶನ ಮಾಡುತ್ತಿರುವುದು ಸಿನಿಮಾದ ಬಗ್ಗೆ ಕುತೂಹಲ ಮೂಡಿಸಿದೆ. ಈ ಸಿನಿಮಾ ಮೂಲಕ ಎ ಕ್ಲಾಸ್ ರಿಯಲ್ ಎಟರ್ಸ್ಸ್ ಸಂಸ್ಥಾಪರಾಗಿರುವ ಅನುರಾಗ್ ಆರ್ ಹಾಗೂ ಮಿಥುನ್ ಅವರುಗಳು ನಿರ್ಮಾಪಕರಾಗುತ್ತಿದ್ದಾರೆ. ಇವರಿಗೂ ಇದು ನಿರ್ಮಾಪಕರಾಗಿ ಮೊದಲ ಸಿನಿಮಾ.
ಇದನ್ನೂ ಓದಿ:ಮಹೇಶ್ ಬಾಬು ನಿರ್ದೇಶನದ ಹೊಸ ಸಿನಿಮಾಗೆ ‘ಕನ್ನಡತಿ’ ಧಾರಾವಾಹಿಯ ಸ್ಮೈಲ್ ಗುರು ರಕ್ಷಿತ್ ಹೀರೋ
ಈ ಸಿನಿಮಾದ ಮೂಲಕ ‘ವೀರ ಮದಕರಿ’ಯಲ್ಲಿ ಬಾಲನಟಿಯಾಗಿ ಅಭಿನಯಿಸಿದ್ದ ಜೆರುಶಾ ನಾಯಕಿಯಾಗಿ ಬಡ್ತಿ ಪಡೆಯುತ್ತಿದ್ದಾರೆ. ಈ ಸಿನಿಮಾನಲ್ಲಿ ಮತ್ತೊಬ್ಬ ನಾಯಕಿ ಸಹ ಇರಲಿದ್ದು, ಅವರ ಪರಿಚಯವನ್ನು ಶೀಘ್ರವೇ ಚಿತ್ರತಂಡ ಮಾಡಲಿದೆ. ಮಹೇಶ್ ಬಾಬು ನಿರ್ದೇಶಿಸುತ್ತಿರುವ ಈ ಸಿನಿಮಾದಲ್ಲಿ ಚೊಚ್ಚಲ ಬಾರಿಗೆ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ರಕ್ಷಿತ್ ಅದಕ್ಕೆ ಬೇಕಾಗಿರೋ ತಯಾರಿಯನ್ನು ಮಾಡಿಕೊಂಡಿದ್ದಾರೆ. ಸಿನಿಮಾದ ಹೆಸರನ್ನು ಶೀಘ್ರವೇ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಹೇಳಿದೆ. ಜೂನ್ 15ರಿಂದ ಶೂಟಿಂಗ್ ಶುರು ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.
ಸಿನಿಮಾದ ನಿರ್ಮಾಪಕರಾದ ಅನುರಾಗ್ ಆರ್ ಮೂಲತಃ ಬೆಂಗಳೂರಿನವರೇ. ಅವರಿಗೆ ಸಿನಿಮಾ ಮೇಲಿನ ಒಲವು ಅವರನ್ನು ಚಿತ್ರರಂಗಕ್ಕೆ ಕರೆದುಕೊಂಡು ಬಂದಿದೆ. ಸದಭಿರುಚಿಯ ಸಿನಿಮಾ ಕೊಡಬೇಕೆಂಬ ಕಾರಣಕ್ಕೆ ಅನುಭವಿ ನಿರ್ದೇಶಕ ಮಹೇಶ್ ಬಾಬುವರಂತಹ ದಿಗ್ಗಜ ನಿರ್ದೇಶಕರ ಜೊತೆ ಕೈ ಜೋಡಿಸಿದ್ದಾರೆ. ಇನ್ನು ಸಿನಿಮಾದ ಮತ್ತೊಬ್ಬ ನಿರ್ಮಾಪಕ ಸ್ಟ್ಯಾಂಡಿ ಮೇಕರ್ಸ್ಸ್ ಎಂಎಂಎಂ ಗ್ರೂಪ್ಸ್ ನ ಒಡೆಯ ಮಿಥುನ್ ಕೆ.ಎಸ್ ಸಹ ಸಿನಿಮಾ ಪ್ರೇಮಿಯಾಗಿದ್ದು, ಎ ಕ್ಲಾಸ್ ಸಿನಿ ಫಿಲ್ಮಂಸ್ ಹಾಗೂ ಎಂಎಂಎಂ ಪಿಕ್ಚರ್ಸ್ ಜಂಟಿಯಾಗಿ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಮಿಥುನ್ಗೆ ಚಿತ್ರರಂಗ ಹೊಸದಲ್ಲಿ, ಕೆಲವಾರು ಸಿನಿಮಾಗಳಿಗೆ ಅವರು ತಂತ್ರಜ್ಞರಾಗಿ ದುಡಿದಿದ್ದಾರೆ. ಈ ಸಿನಿಮಾ ಮೂಲಕ ಅವರು ನಿರ್ಮಾಪಕರಾಗಿ ಬಡ್ತಿ ಪಡೆಯುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ