ಕಾರು ಅಪಘಾತದಲ್ಲಿ ಮೃತಪಟ್ಟಿಲ್ಲ ಕಿರುತೆರೆ ನಟಿ ಪವಿತ್ರಾ; ಶಾಕಿಂಗ್ ವಿಚಾರ ಬಿಚ್ಚಿಟ್ಟ ಪತಿ

‘ಯಾರಿಗೂ ಹಾನಿ ಆಗಿಲ್ಲ. ನನ್ನ ಕೈಗೆ, ತಲೆಗೆ ಪೆಟ್ಟಾಗಿತ್ತು. ಅದರಿಂದ ರಕ್ತ ಬಂದಿತ್ತು. ಇದನ್ನು ನೋಡಿ ಪವಿತ್ರಾ ಶಾಕ್ ಆದರು. ಹೀಗಾಗಿ ಉಸಿರು ನಿಂತಿತ್ತು. ಇದು ಸಡನ್ ಸ್ಟ್ರೋಕ್ ಎಂದು ವೈದ್ಯರು ಹೇಳಿದ್ದಾರೆ. ನನನ್ನು 1 ಗಂಟೆಗೆ ಆಸ್ಪತ್ರೆಗೆ ಕರೆದುಕೊಂಡು ಹೊದರು’ ಎಂದು ಅಸಲಿ ವಿಚಾರ ರಿವೀಲ್ ಮಾಡಿದ್ದಾರೆ ಚಂದು.

ಕಾರು ಅಪಘಾತದಲ್ಲಿ ಮೃತಪಟ್ಟಿಲ್ಲ ಕಿರುತೆರೆ ನಟಿ ಪವಿತ್ರಾ; ಶಾಕಿಂಗ್ ವಿಚಾರ ಬಿಚ್ಚಿಟ್ಟ ಪತಿ
ಪವಿತ್ರಾ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:May 14, 2024 | 2:00 PM

ಕನ್ನಡ ಕಿರುತೆರೆ ನಟಿಸಿದ್ದ ಪವಿತ್ರಾ (Pavitra Jayaram) ಅವರು ಇತ್ತೀಚೆಗೆ ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಭೀಕರ ರಸ್ತೆ ಅಪಘಾತದಲ್ಲಿ ಅವರು ಗಾಯಗೊಂಡು ಮೃತಪಟ್ಟರು ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ಅಸಲಿಗೆ ಪವಿತ್ರಾ ಕಾರು ಅಪಘಾತದಲ್ಲಿ ಮೃತಪಟ್ಟೇ ಇಲ್ಲ ಎಂದು ಗೆಳೆಯ ಚಂದು ಅವರು ಹೇಳಿದ್ದಾರೆ. ಅಲ್ಲಿ ನಡೆದಿದ್ದು ಏನು ಎಂಬುದನ್ನು ಕಾರಿನಲ್ಲಿ ಇದ್ದ ತೆಲುಗು ನಟ, ಪತಿ ಚಂದು ವಿವರಿಸಿದ್ದಾರೆ. ಪವಿತ್ರಾ ಹಾಗೂ ಚಂದು ಹಲವು ವರ್ಷಗಳ ಕಾಲ ಒಟ್ಟಾಗಿ ಕೆಲಸ ಮಾಡುತ್ತಾ ಬಂದಿದ್ದಾರೆ.

‘ನಾವು ಬೆಂಗಳೂರಿನಿಂದ ಹೈದರಾಬಾದ್​ಗೆ ಟ್ರಾವೆಲ್ ಮಾಡುತ್ತಿದ್ದೆವು. ಮಧ್ಯಾಹ್ನ 2:30ಕ್ಕೆ ಬೆಂಗಳೂರಿನಿಂದ ಹೊರಟೆವು. ಸಂಜೆ 6:30ಕ್ಕೆ ಮಳೆ ಬಂತು. ಹೀಗಾಗಿ, ಸಾಕಷ್ಟು ಟ್ರಾಫಿಕ್ ಜಾಮ್ ಆಯಿತು. ಮೂರು ಗಂಟೆ ಜಾಮ್ ಇತ್ತು. ಮಧ್ಯರಾತ್ರಿ 12:30ರ ಸಮಯದಲ್ಲಿ ನಾವು ಸಂಪೂರ್ಣವಾಗಿ ನಿದ್ರಿಸಿದ್ದೆವು. ನಾನು ಹಿಂದಿನ ಸೀಟ್​ನಲ್ಲಿ ಕುಳಿತಿದ್ದೆ. ನನ್ನ ಪಕ್ಕದಲ್ಲಿ ಪವಿತ್ರಾ ಕುಳಿತಿದ್ದರು’ ಎಂದಿದ್ದಾರೆ ಚಂದು.

‘ನಾವು ಸಂಪೂರ್ಣವಾಗಿ ನಿದ್ರಿಸುತ್ತಿದ್ದೆವು. ಚಾಲಕ ಹೇಳೋದು ಏನು ಎಂದರೆ ಆತ 80 ಫೀಟ್ ರೋಡ್​ನಲ್ಲಿ ಸಾಗುತ್ತಿದ್ದನಂತೆ. ಕೆಎಸ್​ಆರ್​ಟಿಸಿ ಬಸ್ ಒಂದು ಓವರ್ ಟೇಕ್ ಮಾಡುವಾಗ ಕಾರಿಗೆ ಟಚ್ ಮಾಡಿದೆ. ಚಾಲಕ ಶಾಕ್​ ಆಗಿ ಸ್ಟೇರಿಂಗ್​ನ ಉಲ್ಟಾ ತಿರುಗಿಸಿದ್ದಾನೆ. ಇದರಿಂದ ಕಾರು ಪಕ್ಕದ ರಸ್ತೆಗೆ ಹೋಗಿದೆ. ಎದುರಿನಿಂದ ಬಸ್ ಬರುತ್ತಿತ್ತು. ಆ ಬಸ್​ನಿಂದ ಮಿರರ್​ಗೆ ಹೊಡೆದು ಬ್ಲಾಸ್ಟ್ ಆಯಿತು’ ಎಂದಿದ್ದಾರೆ ಚಂದು.

ಇದನ್ನೂ ಓದಿ: ಕಿರುತೆರೆ ನಟಿ ಪವಿತ್ರಾ ಜಯರಾಂ ನಿಧನ, ಇಲ್ಲಿವೆ ಅವರ ಅಪರೂಪದ ಚಿತ್ರ, ಮಾಹಿತಿ

‘ಯಾರಿಗೂ ಹಾನಿ ಆಗಿಲ್ಲ. ನನ್ನ ಕೈಗೆ, ತಲೆಗೆ ಪೆಟ್ಟಾಗಿತ್ತು. ಅದರಿಂದ ರಕ್ತ ಬಂದಿತ್ತು. ಇದನ್ನು ನೋಡಿ ಪವಿತ್ರಾ ಶಾಕ್ ಆದರು. ಹೀಗಾಗಿ ಉಸಿರು ನಿಂತಿತ್ತು. ಇದು ಸಡನ್ ಸ್ಟ್ರೋಕ್ ಎಂದು ವೈದ್ಯರು ಹೇಳಿದ್ದಾರೆ. ಅವರನ್ನು ಆಸ್ಪತ್ರೆಗೆ ಸೇರಿಸಲು ಆ್ಯಂಬುಲೆನ್ಸ್ ಕೂಡ ಸಿಗಲಿಲ್ಲ. ನನನ್ನು 1 ಗಂಟೆಗೆ ಆಸ್ಪತ್ರೆಗೆ ಕರೆದುಕೊಂಡು ಹೊದರು. 3 ಗಂಟೆಗೆ ಎಚ್ಚರವಾಯಿತು. ಆಗ ಈ ವಿಚಾರ ಗೊತ್ತಾಯಿತು’ ಎಂದು ಹೇಳಿದ್ದಾರೆ ಚಂದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:17 am, Tue, 14 May 24