ಸ್ನೇಹಿತೆ ಪವಿತ್ರಾ ಜಯರಾಮ್​ ನಿಧನಕ್ಕೆ ಕಣ್ಣೀರು ಹಾಕಿದ ನಟ ಚಂದು ಗೌಡ

ನಟಿ ಪವಿತ್ರಾ ಜಯರಾಮ್​ ಅಂತ್ಯ ಸಂಸ್ಕಾರವನ್ನು ಮಂಡ್ಯದಲ್ಲಿ ಮಾಡಲಾಗಿದೆ. ‘ಹಲವು ವರ್ಷಗಳ ಕಾಲ ಅವರ ಜೊತೆ ಕೆಲಸ ಮಾಡಿದ್ದೇನೆ. ಮೂರು ದಿನಗಳ ಮುನ್ನ ಅವರೊಂದಿಗೆ ಮಾತನಾಡಿದ್ದೆ. ಮತ್ತೆ ಮೇ 15ರಿಂದ ಜೊತೆಯಲ್ಲಿ ಶೂಟಿಂಗ್​ ಮಾಡಬೇಕಿತ್ತು. ಅಷ್ಟರಲ್ಲಿ ಈ ರೀತಿ ಆಗಿದೆ. ಅವರ ನಿಧನದಿಂದ ತುಂಬ ನೋವಾಗಿದೆ’ ಎಂದು ಕಿರುತೆರೆ ನಟ ಚಂದು ಗೌಡ ಹೇಳಿದ್ದಾರೆ.

ಸ್ನೇಹಿತೆ ಪವಿತ್ರಾ ಜಯರಾಮ್​ ನಿಧನಕ್ಕೆ ಕಣ್ಣೀರು ಹಾಕಿದ ನಟ ಚಂದು ಗೌಡ
|

Updated on: May 13, 2024 | 8:01 PM

ತೆಲುಗಿನ ‘ತ್ರಿನಯನಿ’ ಧಾರಾವಾಹಿಯಲ್ಲಿ (Trinayani Serial) ನಟಿಸುತ್ತಿದ್ದ ಕನ್ನಡದ ನಟಿ ಪವಿತ್ರಾ ಜಯರಾಮ್​ ಅವರು ಕಾರು ಅಪಘಾತದಲ್ಲಿ ಮೇ 12ರಂದು ಮೃತರಾದರು. ಅವರ ಅಗಲಿಕೆಗೆ ಅನೇಕರು ಕಂಬನಿ ಮಿಡಿದಿದ್ದಾರೆ. ಕಿರುತೆರೆಯ ಖ್ಯಾತ ನಟ ಚಂದು ಗೌಡ ಕೂಡ ಪವಿತ್ರಾ ಜಯರಾಮ್​ (Pavithra Jayaram) ಆತ್ಮಕ್ಕೆ ಶಾಂತಿ ಕೋರಿದ್ದಾರೆ. ‘ತ್ರಿನಯನಿ’ ಧಾರಾವಾಹಿಯಲ್ಲಿ ಚಂದು ಗೌಡ ಮತ್ತು ಪವಿತ್ರಾ ಜಯರಾಮ್​ ಅವರು ಜೊತೆಯಾಗಿ ನಟಿಸುತ್ತಿದ್ದರು. ಆ ಒಡನಾಟವನ್ನು ನೆನೆದು ಚಂದು ಗೌಡ ಕಣ್ಣೀರು ಹಾಕಿದ್ದಾರೆ. ಅಂತ್ಯಕ್ರಿಯೆಗೆ ಹಾಜರಾಗಿದ್ದ ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ‘ಈ ಸಂದರ್ಭದಲ್ಲಿ ಏನು ಹೇಳಬೇಕು ಅಂತ ತಿಳಿಯಲ್ಲ. ತುಂಬ ನೋವಾಗುತ್ತದೆ. ಯಾರೂ ಇದನ್ನು ನಿರೀಕ್ಷಿಸಿರಲಿಲ್ಲ. ಐದು ವರ್ಷಗಳ ಕಾಲ ನಾವೆಲ್ಲರೂ ಜೊತೆಯಾಗಿ ಕೆಲಸ ಮಾಡಿದ್ದೇವೆ. ಮನೆಗಿಂತಲೂ ಜಾಸ್ತಿ ಶೂಟಿಂಗ್​ ಸೆಟ್​ನಲ್ಲಿ ಜೀವನ ಮಾಡಿದ್ದೇವೆ. ತಿಂಗಳಿಗೆ 15 ದಿನ ಹೈದರಾಬಾದ್​ನಲ್ಲಿ ಕೆಲಸ ಮಾಡುತ್ತಿದ್ದೆವು. ಅವರ ಜೊತೆಗಿನ ಒಡನಾಟ ದೊಡ್ಡದು. ಅವರು ಬೇರೆ ಅಲ್ಲ, ಮನೆಯವರು ಬೇರೆ ಅಲ್ಲ. ಇಷ್ಟು ಹತ್ತಿರದವರು ತೀರಿಕೊಂಡಾಗ ಹೇಳಿಕೊಳ್ಳಲಾಗದಷ್ಟು ನೋವಾಗುತ್ತದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಅಂತ ಬೇಡಿಕೊಳ್ಳುತ್ತೇನೆ. ಇಷ್ಟು ಚಿಕ್ಕ ವಯಸ್ಸಿಗೆ ದೇವರು ಅವರನ್ನು ಕರೆಸಿಕೊಂಡಿದ್ದಾನೆ. ಅವರು ಇಲ್ಲ ಅಂದಾಗ ಬಹಳ ನೋವಾಗುತ್ತದೆ’ ಎಂದು ಚಂದು ಗೌಡ (Chandu Gowda) ಹೇಳಿದ್ದಾರೆ. ಇಂದು (ಮೇ 13) ಮಂಡ್ಯದಲ್ಲಿ ಪವಿತ್ರಾ ಜಯರಾಮ್​ ಅವರ ಅಂತ್ಯಕ್ರಿಯೆ ಮಾಡಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow us
FIR ದಾಖಲಾಗಿದ್ದರೂ ಸುದೀರ್ಘ 8 ವರೆ ಗಂಟೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ CM
FIR ದಾಖಲಾಗಿದ್ದರೂ ಸುದೀರ್ಘ 8 ವರೆ ಗಂಟೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ CM
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದ ಗೋಡೆ ಕುಸಿದು ಇಬ್ಬರು ಸಾವು
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದ ಗೋಡೆ ಕುಸಿದು ಇಬ್ಬರು ಸಾವು
ಈ ಪ್ರಕರಣದಲ್ಲಿ ನಂಗೆ ಗಂಡಾಂತರ ಇಲ್ಲ: ಲೋಕಾಯುಕ್ತ ವಿಚಾರಣೆ ಬಳಿಕ HDK ಮಾತು
ಈ ಪ್ರಕರಣದಲ್ಲಿ ನಂಗೆ ಗಂಡಾಂತರ ಇಲ್ಲ: ಲೋಕಾಯುಕ್ತ ವಿಚಾರಣೆ ಬಳಿಕ HDK ಮಾತು
ಸಿಎಂ ವಿರುದ್ಧ FIR: ಪಂಜು ಹಿಡಿದು ಪ್ರತಿಭಟನೆ ನಡೆಸಿದ ಸಿದ್ದು ಬೆಂಬಲಿಗರು
ಸಿಎಂ ವಿರುದ್ಧ FIR: ಪಂಜು ಹಿಡಿದು ಪ್ರತಿಭಟನೆ ನಡೆಸಿದ ಸಿದ್ದು ಬೆಂಬಲಿಗರು
ದಿಲ್ಲಿಯಿಂದ ನೇರವಾಗಿ ಬೆಂಗಳೂರಿನ ಲೋಕಾಯುಕ್ತ ಕಚೇರಿಗೆ ಬಂದ ಕುಮಾರಸ್ವಾಮಿ
ದಿಲ್ಲಿಯಿಂದ ನೇರವಾಗಿ ಬೆಂಗಳೂರಿನ ಲೋಕಾಯುಕ್ತ ಕಚೇರಿಗೆ ಬಂದ ಕುಮಾರಸ್ವಾಮಿ
ಅರಮನೆ ಆವರಣದಲ್ಲಿ ಸಿದ್ದುಗೆ ದಸರಾ ಆನೆಗಳು ಸೆಲ್ಯೂಟ್
ಅರಮನೆ ಆವರಣದಲ್ಲಿ ಸಿದ್ದುಗೆ ದಸರಾ ಆನೆಗಳು ಸೆಲ್ಯೂಟ್
‘ದೇವರ’ ಬಿಡುಗಡೆ, ಜೂ ಎನ್​ಟಿಆರ್ ಬೃಹತ್ ಕಟೌಟ್​ಗೆ ಬೆಂಕಿ: ವಿಡಿಯೋ ನೋಡಿ
‘ದೇವರ’ ಬಿಡುಗಡೆ, ಜೂ ಎನ್​ಟಿಆರ್ ಬೃಹತ್ ಕಟೌಟ್​ಗೆ ಬೆಂಕಿ: ವಿಡಿಯೋ ನೋಡಿ
ರೋಹಿತ್​ಗೂ ಅಚ್ಚರಿ ತರಿಸಿದ ಆಕಾಶ್ ಉರುಳಿಸಿದ ವಿಕೆಟ್; ವಿಡಿಯೋ ನೋಡಿ
ರೋಹಿತ್​ಗೂ ಅಚ್ಚರಿ ತರಿಸಿದ ಆಕಾಶ್ ಉರುಳಿಸಿದ ವಿಕೆಟ್; ವಿಡಿಯೋ ನೋಡಿ
ತುಮಕೂರು-ಯಶವಂತಪುರ ಮೆಮು ರೈಲು ಸೇವೆಗೆ ಚಾಲನೆ, ಇಲ್ಲಿದೆ ಟ್ರೈನ್​ ಸಮಯ
ತುಮಕೂರು-ಯಶವಂತಪುರ ಮೆಮು ರೈಲು ಸೇವೆಗೆ ಚಾಲನೆ, ಇಲ್ಲಿದೆ ಟ್ರೈನ್​ ಸಮಯ
ಕುರುಬ ಸಮಾಜದವನಿಗೆ ಅನ್ಯಾಯ ಮಾಡ್ತಾವ್ರೆ, ಕಾಂಗ್ರೆಸ್ ಮುಖಂಡನ ಬೀದಿ ರಂಪಾಟ
ಕುರುಬ ಸಮಾಜದವನಿಗೆ ಅನ್ಯಾಯ ಮಾಡ್ತಾವ್ರೆ, ಕಾಂಗ್ರೆಸ್ ಮುಖಂಡನ ಬೀದಿ ರಂಪಾಟ