‘ತ್ರಿನಯನಿ’ ಧಾರಾವಾಹಿ ನಟಿ ಸಾವು ಹೇಗೆ ಆಯ್ತು? ವಿವರಿಸಿದ ಸಂಬಂಧಿಕರು
ನಟಿ ಪವಿತ್ರಾ ಜಯರಾಮ್ ಅವರು ರಸ್ತೆ ಅಪಘಾತದಲ್ಲಿ ನಿಧನರಾಗಿದ್ದು, ಮಂಡ್ಯದಲ್ಲಿ ಒಕ್ಕಲಿಗ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ಮಾಡಲಾಗಿದೆ. ಅಪಘಾತದಲ್ಲಿ ಪವಿತ್ರಾ ಅವರಿಗೆ ಹೆಚ್ಚು ಗಾಯ ಆಗಿರಲಿಲ್ಲ. ಹಾಗಿದ್ದರೂ ಕೂಡ ಅವರು ಕೊನೆಯುಸಿರು ಎಳೆದರು. ಅದಕ್ಕೆ ಕಾರಣ ಏನು ಎಂಬುದನ್ನು ಅವರ ಕುಟುಂಬದವರು ವಿವರಿಸಿದ್ದಾರೆ. ಆ ವಿಡಿಯೋ ಇಲ್ಲಿದೆ..
ರಸ್ತೆ ಅಪಘಾತದಲ್ಲಿ ನಟಿ ಪವಿತ್ರಾ ಜಯರಾಮ್ (Pavithra Jayaram) ಅವರು ಭಾನುವಾರ (ಮೇ 12) ನಿಧನರಾಗಿದ್ದಾರೆ. ಇಂದು (ಮೇ 13) ಮಂಡ್ಯದಲ್ಲಿ ಅವರ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಸ್ನೇಹಿತರ ಜೊತೆ ಪವಿತ್ರಾ ಅವರು ಕಾರಿನಲ್ಲಿ ಬೆಂಗಳೂರಿನಿಂದ ಹೈದರಾಬಾದ್ಗೆ ಪ್ರಯಾಣ ಮಾಡುವಾಗ ಅಪಘಾತ (Pavithra Jayaram Accident) ಸಂಭವಿಸಿತ್ತು. ಆದರೆ ಅವರಿಗೆ ಹೆಚ್ಚೇನೂ ಗಾಯ ಆಗಿರಲಿಲ್ಲ. ಹಾಗಿದ್ದರೂ ಕೂಡ ಅವರು ಕೊನೆಯುಸಿರು ಎಳೆದರು. ಆ ಘಟನೆ ಬಗ್ಗೆ ಸಂಬಂಧಿಕರು ಪ್ರತಿಕ್ರಿಯೆ ನೀಡಿದ್ದಾರೆ. ‘ಶೂಟಿಂಗ್ ಸಲುವಾಗಿ ಪವಿತ್ರಾ ಅವರು ಹೈದರಾಬಾದ್ಗೆ ತೆರಳುತ್ತಿದ್ದರು. ಅಲ್ಲಿ ಅಪಘಾತ ಆಯಿತು. ಹತ್ತಿರದಲ್ಲೇ ಆಸ್ಪತ್ರೆ ಇತ್ತು. ಆದರೆ ಸರಿಯಾದ ಸಮಯದಲ್ಲಿ ಆಂಬ್ಯುಲೆನ್ಸ್ ಬರಲಿಲ್ಲ. ಜೊತೆಯಲ್ಲಿ ಇದ್ದವರಿಗೆ ಹೆಚ್ಚೇನೂ ಗಾಯ ಆಗಿಲ್ಲ. ಚಂದು ಎಂಬುವವರಿಗೆ ಸ್ವಲ್ಪ ಗಾಯ ಆಗಿದೆ. ಅವರ ಮುಖವೆಲ್ಲ ರಕ್ತವಾಗಿತ್ತು. ಅವರನ್ನು ನೋಡಿ ಗಾಬರಿಯಾಗಿ ಪವಿತ್ರಾಗೆ ಉಸಿರು ನಿಂತಿದೆ’ ಎಂದು ಸಂಬಂಧಿಕರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಪವಿತ್ರಾ ಜಯರಾಮ್ ನಿಧನಕ್ಕೆ (Pavithra Jayaram Death) ಅಭಿಮಾನಿಗಳು ಮತ್ತು ಅನೇಕ ಸೆಲೆಬ್ರಿಟಿಗಳು ಕಂಬನಿ ಮಿಡಿದಿದ್ದಾರೆ. ದರ್ಶನ್ ನಟನೆಯ ಹೊಸ ಸಿನಿಮಾದಲ್ಲಿ ನಟಿಸುವ ಸಲುವಾಗಿ ಮಾತುಕಥೆಗೆ ಬಂದಿದ್ದ ನಟಿ ಪವಿತ್ರಾ ಜಯರಾಮ್ ಅವರು ವಾಪಸ್ ಹೈದರಾಬಾದ್ಗೆ ಹೋಗುವಾಗ ಈ ದುರ್ಘಟನೆ ನಡೆದಿದೆ. ‘ತ್ರಿನಯನಿ’ ಧಾರಾವಾಹಿಯಲ್ಲಿ ನಟಿಸಿ ಅವರು ಫೇಮಸ್ ಆಗಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.