AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸಂಪತ್ತಿಗೆ ಸವಾಲ್’ಗೆ 50 ವರ್ಷ; ಈ ಕಥೆಯನ್ನು ರಾಜ್​ಕುಮಾರ್ ಆಯ್ಕೆ ಮಾಡಿದ್ದು ಹೇಗೆ?

ಶಾರದಾ ಸಂಗೀತ ನಾಟಕ ಮಂಡಳಿ ಕನಕಪುರದಲ್ಲಿ ‘ಸಂಪತ್ತಿಗೆ ಸವಾಲು’ ನಾಟಕವನ್ನು ಪ್ರದರ್ಶನ ಮಾಡುತ್ತಿತ್ತು. ಆ ನಾಟಕದ ಬಗ್ಗೆ ರಾಜ್​ಕುಮಾರ್ ಕೇಳಿದ್ದರು. ಅವರು ಹೋಗಿ ನಾಟಕ ನೋಡಿದರು. ಅವರಿಗೆ ಈ ನಾಟಕ ಸಾಕಷ್ಟು ಇಷ್ಟವಾಯ್ತು. ಅದನ್ನು ಸಿನಿಮಾ ಮಾಡೋ ನಿರ್ಧಾರಕ್ಕೆ ಬಂದರು.

‘ಸಂಪತ್ತಿಗೆ ಸವಾಲ್’ಗೆ 50 ವರ್ಷ; ಈ ಕಥೆಯನ್ನು ರಾಜ್​ಕುಮಾರ್ ಆಯ್ಕೆ ಮಾಡಿದ್ದು ಹೇಗೆ?
ಸಂಪತ್ತಿಗೆ ಸವಾಲ್
ರಾಜೇಶ್ ದುಗ್ಗುಮನೆ
|

Updated on: Jun 01, 2024 | 1:09 PM

Share

ಡಾ. ರಾಜ್​ಕುಮಾರ್ ನಟನೆಯ ‘ಸಂಪತ್ತಿಗೆ ಸವಾಲ್’ ಸಿನಿಮಾ (Sampathige Savaal Movie) ಬಿಡುಗಡೆ ಆಗಿದ್ದು 1974ರಲ್ಲಿ. ಈ ಸಿನಿಮಾ ಅಂದಿನ ಕಾಲಕ್ಕೆ ದೊಡ್ಡ ಮಟ್ಟದಲ್ಲಿ ಗೆಲುವು ಕಂಡಿತ್ತು. ಎವಿ ಶೇಷಗಿರಿ ರಾವ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದರು. ರಾಜ್​ಕುಮಾರ್, ಮಂಜುಳಾ, ವಜ್ರಮುನಿ ಮೊದಲಾದವರು ಈ ಸಿನಿಮಾದಲ್ಲಿ ನಟಿಸಿದ್ದರು. ಈ ಚಿತ್ರದ ಹಾಡುಗಳ ಧ್ವನಿ ಸುರುಳಿಗಿಂತ ಸಂಭಾಷಣೆಗಳ ಧ್ವನಿ ಸುರುಳಿಯೇ ಪ್ರಸಿದ್ಧಿಯನ್ನು ಪಡೆಯಿತು. ಈ ಚಿತ್ರ ಆರಂಭ ಆಗಿದ್ದು ಹೇಗೆ ಎನ್ನುವ ಬಗ್ಗೆ ಇಲ್ಲಿದೆ ವಿವರ.

ಶಾರದಾ ಸಂಗೀತ ನಾಟಕ ಮಂಡಳಿ ಕನಕಪುರದಲ್ಲಿ ‘ಸಂಪತ್ತಿಗೆ ಸವಾಲು’ ನಾಟಕವನ್ನು ಪ್ರದರ್ಶನ ಮಾಡುತ್ತಿತ್ತು. ಆ ನಾಟಕದ ಬಗ್ಗೆ ರಾಜ್​ಕುಮಾರ್ ಕೇಳಿದ್ದರು. ಅವರು ಹೋಗಿ ನಾಟಕ ನೋಡಿದರು. ಅವರಿಗೆ ಈ ನಾಟಕ ಸಾಕಷ್ಟು ಇಷ್ಟವಾಯ್ತು. ಅದನ್ನು ಸಿನಿಮಾ ಮಾಡೋ ನಿರ್ಧಾರಕ್ಕೆ ಬಂದರು. ಈ ಬಗ್ಗೆ ಅವರು ಶಾರದಾ ಸಂಗೀತ ನಾಟಕ ಮಂಡಳಿಯ ಮಾಲೀಕ ಬಸವರಾಜಪ್ಪ ಅವರಿಗೆ ಮತ್ತು ನಾಟಕ ರಚನಾಕಾರ ಪಿ.ಬಿ. ಧುತ್ತರಗಿ ಅವರ ಬಳಿ ಈ ಬಗ್ಗೆ ಚರ್ಚಿಸಿ ಅವರನ್ನು ಒಪ್ಪಿಸಿದರು. ಇದೇ ಹೆಸರಲ್ಲಿ ಸಿನಿಮಾ ಕೂಡ ಮಾಡಲಾಯಿತು. ಈ ಸಿನಿಮಾ ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಿಗೂ ರಿಮೇಕ್ ಆಗಿದೆ.

‘ಯಾವ ನಾಯಿಗೆ ಬೇಕೋ, ಯಾವ ನಾಯಿಗೆ ಬೇಕೋ ನಿನ್ನ ಋಣ’, ‘ಬೇವರ್ಸಿ, ಹಳೆ ಬೇವರ್ಸಿ, ಬಿಕನಾಸಿ, ದರ್ವೇಸಿ’ ರೀತಿಯ ಡೈಲಾಗ್​ಗಳು ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆದವು. ಪಕ್ಕಾ ಹಳ್ಳಿ ಸೊಗಡಿನ ಕಥೆಗೆ, ಹಳ್ಳಿ ಸೊಗಡಿನ ಸಂಭಾಷಣೆಯನ್ನು ಬರೆದಿದ್ದರು ಚಿ. ಉದಯ್​ ಶಂಕರ್.

ಇದನ್ನೂ ಓದಿ: ರಾಜ್​ಕುಮಾರ್​ಗೆ ಅತಿಯಾದ ಪ್ರೀತಿ ಇದ್ದಿದ್ದು ಯಾರ ಮೇಲೆ?

‘ಸಂಪತ್ತಿಗೆ ಸವಾಲ್’ ಚಿತ್ರದ ‘ಯಾರೇ ಕೂಗಾಡಲಿ, ಊರೇ ಹೋರಾಡಲಿ’ ಹಾಡಿಗೆ ಈಗಲೂ ಬೇಡಿಕೆ ಇದೆ. ಈ ಹಾಡು ಬಂದು 50 ವರ್ಷ ಆದರೂ ಈಗಲೂ ಅನೇಕ ಕೇಳುಗರ ಫೇವರಿಟ್ ಎನಿಸಿಕೊಂಡಿದೆ. ಈ ಹಾಡಿನ ಮೂಲಕ ಡಾ. ರಾಜ್​ಕುಮಾರ್ ಅವರು ಪೂರ್ಣ ಪ್ರಮಾಣದ ಹಿನ್ನೆಲೆ ಗಾಯಕರಾಗಿ ರೂಪುಗೊಂಡರು. ಆ ಬಳಿಕ ಹಲವು ಹಾಡುಗಳನ್ನು ಹಾಡಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ