Blood Pressure: ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಯಾವ ಕ್ರಮಗಳನ್ನು ಕೈಗೊಳ್ಳಬೇಕು? ಇಲ್ಲಿದೆ ಮಾಹಿತಿ

| Updated By: Pavitra Bhat Jigalemane

Updated on: Dec 29, 2021 | 11:21 AM

ವೈದ್ಯರ ಪ್ರಕಾರ ಉಪವಾಸ ಮಾಡುವುದರಿಂದ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಬಹುದು. ದೀರ್ಘಕಾಲದವರೆಗೆ ಅಧಿಕ ರಕ್ತದೊತ್ತಡಕ್ಕೆ ಮಾತ್ರೆಗಳನ್ನು ಸೇವಿಸುವುದರಿಂದ  ದೇಹದ ಆರೋಗ್ಯಕ್ಕೆ ಇನ್ನೊಂದು ರೀತಿಯಲ್ಲಿ ಹಾನಿಯುಂಟು ಮಾಡುತ್ತವೆ.

Blood Pressure: ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಯಾವ ಕ್ರಮಗಳನ್ನು ಕೈಗೊಳ್ಳಬೇಕು? ಇಲ್ಲಿದೆ ಮಾಹಿತಿ
ಪ್ರಾತಿನಿಧಿಕ ಚಿತ್ರ
Follow us on

ಬದಲಾದ ಜೀವನ ಶೈಲಿ, ಕೆಲಸದ ಒತ್ತಡದಿಂದ ಅಧಿಕ ರಕ್ತದೊತ್ತಡ ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಇತ್ತೀಚೆಗೆ ಯುವ ಜನತೆಯಲ್ಲಿಯೂ ಈ ಅಧಿಕ ರಕ್ತದೊತ್ತಡದ ಸಮಸ್ಯೆ ಕಾಣಿಸಕೊಳ್ಳುತ್ತಿದೆ. ಇದು ನಿಜಕ್ಕೂ ಅಪಾಯಕಾರಿಯಾಗಿದೆ, ಅಧಿಕ ರಕ್ತದೊತ್ತಡದಿಂದ ಹೃದಾಯಾಘಾತದಂತಹ ಮಾರಣಾಂತಿಕ ಸಮಸ್ಯೆಯೂ ಉಲ್ಬಣಿಸಬಹುದು. ಹೀಗಾಗಿ ಅದನ್ನು ನಿಯಂತ್ರಣದಲ್ಲಿರಿಸಿಕೊಳ್ಳುವುದು ಅಗತ್ಯವಾಗಿದೆ. ಈ ಕುರಿತು ನ್ಯೂಯಾರ್ಕ್​ನ ಡಾ.ಗಾರ್ಗರ್ ಅಧಿಕ ರಕ್ತದೊತ್ತಡವನ್ನು ಮಾತ್ರೆಗಳ ಸಹಾಯವಿಲ್ಲದೆ ಹೇಗೆ ನಿಯಂತ್ರಿಸಬಹುದು ಎನ್ನುವುದನ್ನು ಹೇಳಿದ್ದಾರೆ.

ವೈದ್ಯರ ಪ್ರಕಾರ ಉಪವಾಸ ಮಾಡುವುದರಿಂದ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಬಹುದು. ದೀರ್ಘಕಾಲದವರೆಗೆ ಅಧಿಕ ರಕ್ತದೊತ್ತಡಕ್ಕೆ ಮಾತ್ರೆಗಳನ್ನು ಸೇವಿಸುವುದರಿಂದ  ದೇಹದ ಆರೋಗ್ಯಕ್ಕೆ ಇನ್ನೊಂದು ರೀತಿಯಲ್ಲಿ ಹಾನಿಯುಂಟು ಮಾಡುತ್ತವೆ. ಹೀಗಾಗಿ ಉಪವಾಸ  ಮತ್ತು ಸಸ್ಯಾಧಾರಿತ  ಆಹಾರಗಳು ಅಧಿಕ ರಕ್ತದೊತ್ತಡವನ್ನು ಕಡಿಮೆಗೊಳಿಸಲು ಸಹಾಯಕವಾಗಿದೆ ಎನ್ನುತ್ತಾರೆ.  ಉಪವಾಸದಿಂದ ನಿಮ್ಮ ದೇಹದಲ್ಲಿರುವ ಅಧಿಕ ಕೊಬ್ಬು ಕೂಡ ಕರಗಿ ದೇಹ ಒಂದು ಹಂತಕ್ಕೆ ಸಮತೋಲನದಲ್ಲಿ ಇರುತ್ತವೆ. ಅಲ್ಲದೆ ನಿಮ್ಮ ತೂಕ ಇಳಿಕೆಗೂ ಸಹಾಯಕವಾಗಿದೆ. ಹೀಗಾಗಿ ಉಪವಾಸ ಮಾಡುವುದು ಆರೋಗ್ಯಕ್ಕೆ  ಉತ್ತಮ ಎನ್ನುತ್ತಾರೆ.

ಅಧಿಕ ರಕ್ತದೊತ್ತಡ ನಿಯಂತ್ರಿಸಲು ಕೈಗೊಳ್ಳಬೇಕಾದ ಕ್ರಮಗಳು
ತಿಂಗಳಿಗೊಮ್ಮೆಯಾದರೂ ಉಪವಾಸ ಮಾಡಿ. ಆದರೆ ನೆನಪಿಡಿ ಒಂದು ದಿನಕ್ಕಿಂತ ಹೆಚ್ಚು ದಿನ ವೈದ್ಯರ ಮೇಲ್ವಿಚಾರಣೆಯಿಲ್ಲದೆ ಉಪವಾಸ ಕೈಗೊಳ್ಳಬೇಡಿ.
ಅಧಿಕ ರಕ್ತದೊತ್ತಡ ಹೊಂದಿರುವ ವ್ಯಕ್ತಿಯು ಹೆಚ್ಚು ಸಸ್ಯ ಆಧಾರಿತ ಎಂದರೆ ಹೆಚ್ಚು ತರಕಾರಿ, ಹಣ್ಣುಗಳನ್ನು ಸೇವಿಸಬಹುದು ಇದು ಬಿಪಿಯನ್ನು 7 ಅಂಕಗಳಷ್ಟು ಕಡಿಮೆ ಮಾಡಲು ಸಹಾಯಕಾವಗಿದೆ. ಜತೆಗೆ ಮಾಂಸ ಸೇವನೆಯನ್ನು ಕಡಿಮೆ ಮಾಡುವುದರಿಂದ 11 ಅಂಕಗಳಷ್ಟು ನಿಮ್ಮ ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಬಹುದು ಎನ್ನುತ್ತಾರೆ ವೈದ್ಯರು.
ಆಲ್ಕೊಹಾಲ್​ ತ್ಯಜಿಸಿ ಪ್ರತಿದಿನ ಹಾಲಿನ ಸೇವನೆಯಿಂದ ನಿಮ್ಮ ಬಿಪಿ ಪ್ರಮಾಣವನ್ನು 5 ಪಾಯಿಂಟ್​ಗಳಷ್ಟು ಕಡಿಮೆ ಮಾಡಬಹುದು.
ಕನಿಷ್ಠ 3 ತಿಂಗಳ ಕಾಲ ನಿಯಮಿತವಾಗಿ ಏರೋಬಿಕ್ಸ್​ ವ್ಯಾಯಾಮ  ಮಾಡುವುದರಿಂದಲೂ ನಿಮ್ಮ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಬಹುದು.
ನಿಮ್ಮ ಬಿಪಿಯನ್ನು ನಿಯಂತ್ರಣದಲ್ಲಿಡಲು ಉಪ್ಪು ಕಡಿಮೆ ಸೇವನೆ ಮಾಡುವುದು ಅಗತ್ಯ.  ಉಪ್ಪಿನಲ್ಲಿರುವ ಸೋಡಿಯಂ ಅಂಶ ನಿಮ್ಮ ಬ್ಲಡ್​ ಪ್ರೆಶರ್​ಅನ್ನು ಹೆಚ್ಚು ಮಾಡುತ್ತವೆ. ಹೀಗಾಗಿ ಕಡಿಮೆ ಉಪ್ಪಿನ ಸೇವನೆಯಿಂದ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಬಹುದು.

ಹೀಗಾಗಿ ಡಾ.ಗಾರ್ಗರ್ ನಿಯಮಿತ ಯೋಗ, ಉಪವಾಸ ನಿಮ್ಮ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.  ಆಯುರ್ವೇದದಲ್ಲಿಯೂ ಈ ಉಪವಾಸದ ಪದ್ಧತಿ ಜಾರಿಯಲ್ಲಿದೆ. ಉಪವಾಸದಿಂದ ದೇಹದಲ್ಲಿರುವ ಅನಗತ್ಯ ಕೊಬ್ಬು ಕರಗುವ ಮೂಲಕ ದೇಹವನ್ನು ಸ್ವಚ್ಛಗೊಳಿಸುತ್ತದೆ. ಆದ್ದರಿಂದ ನೀರಿನೊಂದಿಗೆ ಉಪವಾಸದ ಅಭ್ಯಾಸ ಆರೋಗ್ಯಕ್ಕೆ ಒಳಿತು.

ಇದನ್ನೂ ಓದಿ:

Women Health: ಮುಟ್ಟಾದ ಮೂರು ದಿನಗಳ ಕಾಲ ತಲೆ ಸ್ನಾನ ಮಾಡುವುದಿಲ್ಲ; ಯಾಕೆ ಗೊತ್ತಾ?