ಪ್ರತಿದಿನ ಬಿಳಿ ಬ್ರೆಡ್ ಸೇವಿಸುತ್ತಿರುವವರು ಗಮನಿಸಿ; ವಿವಿಧ ಕಾಯಿಲೆಗಳಿಗೆ ಇದು ಕಾರಣವಾಗಬಹುದು ಎಚ್ಚರ

ಪ್ರತಿದಿನ ಬಿಳಿ ಬ್ರೆಡ್ ಸೇವಿಸುತ್ತಿರುವವರು ಗಮನಿಸಿ; ವಿವಿಧ ಕಾಯಿಲೆಗಳಿಗೆ ಇದು ಕಾರಣವಾಗಬಹುದು ಎಚ್ಚರ
ಬ್ರೆಡ್

ಬ್ರೆಡ್ ಅಥವಾ ಬ್ರೆಡ್​ನ ಇನ್ನೀತರ ತಿಂಡಿ ತಿನ್ನಲು ಎಷ್ಟು ರುಚಿಕರವಾಗಿರುತ್ತವೆಯೋ ಅವುಗಳು ಆರೋಗ್ಯಕ್ಕೆ ಹಾನಿಕಾರಕವು ಹೌದು. ಬ್ರೆಡ್ ಪೊಟ್ಯಾಸಿಯಮ್ ಬ್ರೋಮೇಟ್ ಅನ್ನು ಹೊಂದಿರುತ್ತದೆ. ಇದು ನಮ್ಮ ಆರೋಗ್ಯಕ್ಕೆ ತುಂಬಾ ಹಾನಿಕಾರಕವಾಗಿದೆ.

TV9kannada Web Team

| Edited By: preethi shettigar

Dec 30, 2021 | 7:10 AM

ಬೆಳಗ್ಗಿನ ಉಪಹಾರಕ್ಕೆ ಏನು ತಿನ್ನಬೇಕು ಎಂಬುವುದು ಎಲ್ಲರ ಮನಸ್ಸಿನಲ್ಲಿರುವ ದೊಡ್ಡ ಪ್ರಶ್ನೆ. ಬೆಳಗಿನ ಉಪಹಾರವಾಗಲಿ, ಸಂಜೆಯ ತಿಂಡಿ ಆಗಲಿ ಇದಕ್ಕೆಲ್ಲ ಏನು ಇಲ್ಲ ಎಂದಾದಾಗ, ಮೊದಲು ನೆನಪಿಗೆ ಬರುವುದೇ ಬ್ರೆಡ್​. ಸಾಮಾನ್ಯವಾಗಿ ಲೆಕ್ಕವಿಲ್ಲದಷ್ಟು ಮನೆಗಳಲ್ಲಿ ಪ್ರತಿದಿನ ಬೆಳಿಗ್ಗೆ ಉಪಹಾರಕ್ಕೆ ಬ್ರೆಡ್ (Bread)​ ಸೇವಿಸಲಾಗುತ್ತದೆ. ಶಾಲಾ ಮಕ್ಕಳಾಗಲಿ, ಕಚೇರಿಗೆ ಹೋಗುವ ಯುವಕರೇ ಆಗಿರಲಿ, ಪ್ರತಿಯೊಬ್ಬರೂ ಬ್ರೆಡ್ ಅನ್ನು ಇಷ್ಟಪಡುತ್ತಾರೆ. ಏಕೆಂದರೆ ಇದು ಸಿದ್ಧ ತಿಂಡಿ ಮತ್ತು ರುಚಿಯಾಗಿಯೂ ಇರುತ್ತದೆ.

ಅಂದಹಾಗೆ, ಬ್ರೆಡ್ ಅಥವಾ ಬ್ರೆಡ್​ನ ಇನ್ನೀತರ ತಿಂಡಿ ತಿನ್ನಲು ಎಷ್ಟು ರುಚಿಕರವಾಗಿರುತ್ತವೆಯೋ ಅವುಗಳು ಆರೋಗ್ಯಕ್ಕೆ ಹಾನಿಕಾರಕವು ಹೌದು. ಬ್ರೆಡ್ ಪೊಟ್ಯಾಸಿಯಮ್ ಬ್ರೋಮೇಟ್ ಅನ್ನು ಹೊಂದಿರುತ್ತದೆ. ಇದು ನಮ್ಮ ಆರೋಗ್ಯಕ್ಕೆ ತುಂಬಾ ಹಾನಿಕಾರಕವಾಗಿದೆ. ನಿಯಮಿತವಾಗಿ ಬಿಳಿ ಬ್ರೆಡ್ ಅನ್ನು ಆಹಾರದಲ್ಲಿ ಸೇವಿಸುತ್ತಿದ್ದರೆ ತೊಂದರೆ ಇಲ್ಲ. ಆದರೆ ಪ್ರತಿದಿನ ಇದರ ಸೇವನೆಯು ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ಗಂಭೀರ ಕಾಯಿಲೆಗಳಿಗೆ ಗುರಿಯಾಗುವಂತೆ ಮಾಡುತ್ತದೆ.

ಬಿಳಿ ಬ್ರೆಡ್ ಮಾಡುವುದು ಹೇಗೆ? ಬಿಳಿ ಬ್ರೆಡ್ ತಯಾರಿಸಲು ಗೋಧಿ ಹಿಟ್ಟು ಅಥವಾ ಮೈದಾ ಹಿಟ್ಟನ್ನು ಬಳಸಲಾಗುತ್ತದೆ. ಅವುಗಳನ್ನು ವಿವಿಧ ರಾಸಾಯನಿಕಗಳನ್ನು ಬಳಸಿ ಬಿಳುಪುಗೊಳಿಸಲಾಗುತ್ತದೆ. ಪೆರಾಕ್ಸೈಡ್, ಕ್ಲೋರಿನ್ ಡೈಆಕ್ಸೈಡ್ ಮತ್ತು ಪೊಟ್ಯಾಸಿಯಮ್ ಬ್ರೋಮೇಟ್ ನಂತಹ ರಾಸಾಯನಿಕಗಳನ್ನು ಬ್ರೆಡ್ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಇದರ ಅತಿಯಾದ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ.

ಬಿಳಿ ಬ್ರೆಡ್ ಸೇವಿಸಬಾರದು ಏಕೆ? ಪ್ರತಿಯೊಂದು ವಿಧದ ಬ್ರೆಡ್‌ನಲ್ಲಿಯೂ ಅದೇ ಪ್ರಮಾಣದ ಕ್ಯಾಲೋರಿಗಳು ಕಂಡುಬರುತ್ತವೆ. ಬಿಳಿ ಬ್ರೆಡ್​ ಸುಮಾರು 77 ಕ್ಯಾಲೊರಿಗಳನ್ನು ಹೊಂದಿರುತ್ತದೆ ಎಂದು ಹೇಳಲಾಗುತ್ತದೆ. ಆದರೆ ಗ್ಲೈಸೆಮಿಕ್ ಇಂಡೆಕ್ಸ್ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತದೆ.

ರಕ್ತದ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ ಗ್ಲೈಮ್ಯಾಕ್ಸ್‌ನ ರೂಪವು ಬಿಳಿ ಬ್ರೆಡ್‌ನಲ್ಲಿ ಅಧಿಕವಾಗಿದೆ. ಅಂದರೆ ಅದು ಗ್ಲೂಕೋಸ್ ಮಟ್ಟವನ್ನು ವೇಗವಾಗಿ ಹೆಚ್ಚಿಸುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ವೇಗವಾಗಿ ಹೆಚ್ಚಿಸುತ್ತದೆ. ಇದರಿಂದಾಗಿ ದೇಹದಲ್ಲಿ ಅನೇಕ ರೋಗಗಳು ಸಂಭವಿಸುತ್ತವೆ.

ತೂಕ ಹೆಚ್ಚಳ ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ ಬ್ರೆಡ್​ ಸೇವಿಸಬೇಡಿ. ವಾಸ್ತವವಾಗಿ ಬಿಳಿ ಬ್ರೆಡ್ ತ್ವರಿತವಾಗಿ ತೂಕವನ್ನು ಹೆಚ್ಚಿಸಲು ಕೆಲಸ ಮಾಡುತ್ತದೆ. ಈ ಬ್ರೆಡ್ ಪೋಷಕಾಂಶಗಳು ಮತ್ತು ಫೈಬರ್ ಅನ್ನು ಹೊಂದಿರುವುದಿಲ್ಲ. ಹೀಗಾಗಿ ಅಧಿಕ ಪ್ರಮಾಣದಲ್ಲಿ ಬ್ರೆಟ್​ ಸೇವಿಸುವ ಮುನ್ನ ಎಚ್ಚರಿಕೆ ವಹಿಸಿ.

ಇದನ್ನೂ ಓದಿ: Health Care Tips: ಸೀತಾಫಲ ತಿಂದರೆ ಆರೋಗ್ಯದಲ್ಲಿ ಅನೇಕ ಬದಲಾವಣೆಗಳಾಗುತ್ತದೆ; ಅಪಾಯದ ಬಗ್ಗೆ ಇರಲಿ ಎಚ್ಚರ

Women Health: ಮುಟ್ಟಾದ ಮೂರು ದಿನಗಳ ಕಾಲ ತಲೆ ಸ್ನಾನ ಮಾಡುವುದಿಲ್ಲ; ಯಾಕೆ ಗೊತ್ತಾ?

Follow us on

Related Stories

Most Read Stories

Click on your DTH Provider to Add TV9 Kannada