How to Do CPR: ಹಠಾತ್ ಹೃದಯ ಸ್ತಂಭನವಾದ ವ್ಯಕ್ತಿಗೆ ಮೊದಲು ನೀವು ಏನು ಮಾಡಬೇಕು? ತಕ್ಷಣದ ಕ್ರಮಗಳೇನು?

|

Updated on: Jan 21, 2023 | 3:31 PM

ಇಂದಿನ ಜೀವನಶೈಲಿಯಲ್ಲಿ ಹೃದಯಘಾತ ಸೇರಿದಂತೆ ಹಲವಾರು ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗಿ ಕಂಡುಬರುತ್ತಿದೆ. ಇಂತಹ ಸಮಯದಲ್ಲಿ ಆ ವ್ಯಕ್ತಿಗೆ ಮರುಜೀವವನ್ನು ನೀಡುವ ಕೆಲಸವನ್ನು ಸಿಪಿಆರ್ ನಿರ್ವಹಿಸುತ್ತದೆ.

How to Do CPR: ಹಠಾತ್ ಹೃದಯ ಸ್ತಂಭನವಾದ ವ್ಯಕ್ತಿಗೆ ಮೊದಲು ನೀವು ಏನು ಮಾಡಬೇಕು? ತಕ್ಷಣದ ಕ್ರಮಗಳೇನು?
ಸಾಂದರ್ಭಿಕ ಚಿತ್ರ
Follow us on

ಇಂದಿನ ಜೀವನಶೈಲಿಯಲ್ಲಿ ಹೃದಯಘಾತ ಸೇರಿದಂತೆ ಹಲವಾರು ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗಿ ಕಂಡುಬರುತ್ತಿದೆ. ಇಂತಹ ಸಮಯದಲ್ಲಿ ಆ ವ್ಯಕ್ತಿಗೆ ಮರುಜೀವವನ್ನು ನೀಡುವ ಕೆಲಸವನ್ನು ಸಿಪಿಆರ್ ನಿರ್ವಹಿಸುತ್ತದೆ. ಕಾರ್ಡಿಯೋ ಪಲ್ಮನರಿ ರಿಸಸಿಟೇಶನ್(ಸಿಪಿಆರ್) ಇದು ವ್ಯಕ್ತಿಯು ಮೂರ್ಛೆ ಹೋದರೆ, ಹೃದಯ ಬಡಿತವು ನಿಂತುಹೋದರೆ ಅಥವಾ ಆತನ ದೇಹದಲ್ಲಿ ಯಾವುದೇ ಚಲನವಲನಗಳು ಇಲ್ಲದ್ದಿದ್ದರೆ, ಆ ಸಮಯದಲ್ಲಿ ಉಸಿರಾಡಲು ನೆರವಾಗುತ್ತದೆ. ಇದು ಹೃದಯ ಮತ್ತು ಮೆದುಳಿನಲ್ಲಿ ರಕ್ತ ಪರಿಚಲನೆ ಸರಾಗವಾಗಿ ಆಗಲು ಸಹಾಯ ಮಾಡುತ್ತದೆ.

ಭಾರತದಲ್ಲಿ ಪ್ರತಿ ವರ್ಷ ಸಾವಿರಾರು ಜನರು ಹೃದಯಘಾತದಿಂದ ಸಾವನ್ನಪ್ಪುತ್ತಾರೆ. ನ್ಯಾಷನಲ್ ಕ್ರೈಮ್​​ ರೆಕಾರ್ಡ್ ಬ್ಯೂರೋ ಪ್ರಕಾರ, ಕಳೆದ ವರ್ಷಗಳಲ್ಲಿ 10 ವರ್ಷಗಳಲ್ಲಿ, 2012 ರಿಂದ 2021 ರವರೆಗೆ ದೇಶದಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ ಸಂಖ್ಯೆ ಶೇಕಡಾ 54ರಷ್ಟು ಹೆಚ್ಚಾಗಿದೆ ಎಂದು ತಿಳಿದು ಬಂದಿದೆ.

ಹೃದಯ ಸ್ತಂಭನವು ಹೃದಯದ ಕಾರ್ಯ, ಉಸಿರಾಟ ಹಾಗೂ ರಕ್ತ ಪರಿಚಲನೆಯಲ್ಲಿ ತೊಂದರೆಯುಂಟಾಗುವುದಾಗಿದೆ. ಇದು ಪ್ರಾಣ ಹಾನಿಗೂ ಕಾರಣವಾಗಬಹುದು. ಹೃದಯ ಸ್ತಂಭನದ ಮುಖ್ಯ ಲಕ್ಷಣಗಳು ಪ್ರಜ್ಞಾಹೀನತೆ ಮತ್ತು ಪ್ರತಿಕ್ರಿಯಿಸದಿರುವುದು. ಸಿಪಿಆರ್ ನಿಂದ ಹಠತ್ ಹೃದಯಸ್ತಂಭನದಿಂದ ಬಳಲುತ್ತಿರುವ ರೋಗಿಯನ್ನು ಡಿಫಿಬ್ರಿಲೇಟರ್, ಎಂಬ ಎಂಬ ಸಣ್ಣ ಸಾಧನದೊಂದಿಗೆ ಉಸಿರಾಡಲು ಸಹಾಯ ಮಾಡುತ್ತದೆ. ಅದಾಗ್ಯೂ ಕಾರ್ಡಿಯೋಪಲ್ಮನರಿ ರೆಸಸಿಟೇಶನ್(ಸಿಪಿಆರ್) ಎಂಬ ಪ್ರಕ್ರಿಯೆಯ ಸಹಾಯದಿಂದ ವ್ಯಕ್ತಿಗೆ ಮರುಜೀವ ನೀಡಬಹುದು. ಇದು ತುರ್ತು ಜೀವ ಉಳಿಸುವ ವಿಧಾನವಾಗಿದೆ.

ಸಿಪಿಆರ್‌ನ್ನು ಸರಿಯಾದ ರೀತಿಯಲ್ಲಿ ನೀಡುವುದು ಹೇಗೆ?

ಸಿಪಿಆರ್ ಮಾಡುವ ಪ್ರಕ್ರಿಯೆಯು ಅತ್ಯಂತ ಅಗತ್ಯ. ಏಕೆಂದರೆ ಇದು ಹೃದಯ ಸ್ತಂಭನದ ನಂತರ ಬದುಕುಳಿಯುವ ಸಾಧ್ಯತೆಗಳನ್ನು ದ್ವಿಗುಣಗೊಳಿಸಬಹುದು ಅಥವಾ ಮೂರುಪಟ್ಟು ಹೆಚ್ಚಿಸಬಹುದು. ಅಮೇರಿಕನ್ ಹಾರ್ಟ್ ಅಸೋಸಿಯೇಷನ್ ಪ್ರಕಾರ, ಸಿಪಿಆರ್ ರಕ್ತದ ಹರಿವನ್ನು ಸಕ್ರಿಯವಾಗಿರಿಸುತ್ತದೆ ಮತ್ತು ತರಬೇತಿ ಪಡೆದ ವೈದ್ಯಕೀಯ ಸಿಬ್ಬಂಧಿ ಸ್ಥಳಕ್ಕೆ ಬಂದ ನಂತರ ಯಶಸ್ವಿ ಪುನರುಜ್ಜೀವನದ ಅವಕಾಶವನ್ನು ವಿಸ್ತರಿಸುತ್ತದೆ.

ಹೈದರಬಾದ್‌ನ ಯಶೋದಾ ಹಾಸ್ಪಿಟಲ್‌ನ ಕ್ಯಾತ್ ಲ್ಯಾಬ್‌ನ ಸಿನಿಯರ್ ಕನ್ಸಲ್ಟೆಂಟ್ ಇಂಟರ್‌ವೆನ್ಷನಲ್ ಕಾರ್ಡಿಯಾಲಜಿಸ್ಟ್ ಹಾಗೂ ನಿರ್ದೇಶಕರಾಗಿರುವ ಡಾ. ಭರತ್ ವಿಜಯ್ ಪುರೋಹಿತ್ ಅವರು ಹಠಾತ್ ಹೃದಯ ಸ್ತಂಭನದಿಂದ ಬಳಲುತ್ತಿರುವ ರೋಗಿಯ ಮೇಲೆ ಸಿಪಿಆರ್ ಮಾಡುವ ಸರಿಯಾದ ವಿಧಾನದ ಬಗ್ಗೆ ತಿಳಿಸಿಕೊಟ್ಟಿದ್ದಾರೆ.

ಇದನ್ನೂ ಓದಿ: ಆಯುಷ್ಯ ಕಡಿಮೆ ಮಾಡುವ ಈ ಆಹಾರಗಳ ಸೇವನೆ ಆದಷ್ಟು ಕಡಿಮೆ ಮಾಡಿ

ಸಿಪಿಆರ್ ನಡೆಸಲು ಹಂತ ಹಂತದ ಮಾರ್ಗದರ್ಶನಗಳು ಇಲ್ಲಿವೆ:

ಹಂತ 1-ಸಹಾಯಕ್ಕಾಗಿ ಕರೆ ಮಾಡಿ:

ಹಠಾತ್ ಹೃದಯ ಸ್ತಂಭನದಿಂದ ವ್ಯಕ್ತಿಯು ಕೆಳಗೆ ಬಿದ್ದಾಗ, ರೋಗಿಯು ಪ್ರಜ್ಞಾಹೀನನಾಗಿದ್ದಾನೆಯೇ ಅಥವಾ ಇಲ್ಲವೇ ಎಂಬುದನ್ನು ನೀವು ಪರಿಶೀಲಿಸಬೇಕು. ಈ ಪ್ರಕ್ರಿಯೆಯಲ್ಲಿ ಉದಾಹರಣೆಗೆ ಸಾರ್ವಜನಿಕ ಸ್ಥಳಗಳಲ್ಲಿ ಯಾರಾದರೂ ಕೆಳಗೆ ಬೀಳುವುದನ್ನು ನೀವು ನೋಡಿದರೆ, ಅವರು ಪ್ರಜ್ಞಾಹೀನರಾಗುತ್ತಿದ್ದಾರೆಯೇ ಎಂಬುದನ್ನು ಪರಿಶೀಲಿಸಿ. ಅವರಿಗೆ ಪ್ರಜ್ಞೆ ಇದ್ದರೆ ಅವರೊಂದಿಗೆ ಮಾತನಾಡಲು ಪ್ರಯತ್ನಿಸಿ ಮತ್ತು ಅವರನ್ನು ಸ್ಪಂದಿಸುವಂತೆ ಇರಿಸಿಕೊಳ್ಳಿ ಮತ್ತು ತಕ್ಷಣವೇ ಸಹಾಯಕ್ಕಾಗಿ ಆಂಬ್ಯುಲೆನ್ಸ್​​ಗೆ ಕರೆ ಮಾಡಿ.

ಹಂತ 2 ನಾಡಿ ಮಿಡಿತ ಪರೀಕ್ಷಿಸಿ:

ನೀವು ಕೆಳಗೆ ಬಿದ್ದ ರೋಗಿಯ ಹತ್ತಿರ ಹೋಗಿ ಅವರು ಉಸಿರಾಡುತ್ತಿದ್ದಾರೆಯೇ ಅಥವಾ ಇಲ್ಲವೇ ಎಂದು ಪರಿಶೀಲಿಸಬೇಕು. ಕುತ್ತಿಗೆ ಪ್ರದೇಶದಲ್ಲಿ ಅವರ ನಾಡಿಯನ್ನು ಪರೀಕ್ಷಿಸಿ, ಮುಖ್ಯವಾಗಿ ಅದು ಹೃದಯಕ್ಕೆ ಹತ್ತಿರದಲ್ಲಿದೆ . ಬಿಪಿ ಕಡಿಮೆಯಾದರೂ, ಕುತ್ತಿಗೆಯ ಸುತ್ತ ನಾಡಿ ಮಿಡಿತವನ್ನು ನೀವು ಅನುಭವಿಸಬಹುದು. ವ್ಯಕ್ತಿಯು ನಿಜವಾಗಿಯೂ ಪ್ರಜ್ಞಾಹೀನನಾಗಿದ್ದರೆ ಹಾಗೂ ನಾಡಿಮಿಡಿತವಿಲ್ಲವೇ ಎಂಬುದನ್ನು ಪರಿಶೀಲಿಸಲು 10 ಸೆಕೆಂಡುಗಳಿಂತ ಹೆಚ್ಚು ತೆಗೆದುಕೊಳ್ಳಬಾರದು.

ಹಂತ- 3 ಹೃದಯ ಪಂಪ್ ಮಾಡಬೇಕು:

ನೀವು ನಾಡಿ ಮಿಡಿತವನ್ನು ಅನುಭವಿಸದಿದ್ದರೆ, ಸಂಕೋಚನ ಎಂದು ಕರೆಯಲ್ಪಡುವ ಹಂತವನ್ನು ನಿರ್ವಹಿಸಬೇಕಾಗುತ್ತದೆ. ಈ ಪ್ರಕ್ರಿಯೆಯಲ್ಲಿ ನೀವು ಎದೆಯನ್ನು ಹಿಸುಕುವ ಮೂಲಕ ಕೃತಕವಾಗಿ ಹೃದಯ ಪಂಪ್ ಮಾಡಬೇಕು. ಇದರಿಂದ ಹೃದಯದಲ್ಲಿರುವ ಯಾವುದೇ ರಕ್ತವು ಹಾನಿಯಾಗದಂತೆ ದೇಹ ಮತ್ತು ಮೆದುಳಿನ ಪ್ರದೇಶಕ್ಕೆ ಹರಿಯುತ್ತದೆ.

ಇದನ್ನೂ ಓದಿ: ಅಪ್ಪುಗೆಯಿಂದಾಗುವ ಆರೋಗ್ಯ ಪ್ರಯೋಜನಗಳನ್ನು ತಿಳಿದುಕೊಳ್ಳಿ

ಹಂತ 4- ಬಾಯಿಯಿಂದ ಬಾಯಿಗೆ ಉಸಿರು ನೀಡಿ:

ವ್ಯಕ್ತಿಯು ಬಾಯಿಯಿಂದ ಬಾಯಿಗೆ ಉಸಿರು ನೀಡಿ ಸಹಾಯ ಮಾಡಬೇಕು. ಈ ಪ್ರಕ್ರಿಯೆಯಲ್ಲಿ ರೋಗಿಗೆ ಆಮ್ಲಜನಕವನ್ನು ನೀಡುವುದು ಮುಖ್ಯವಾಗಿರುತ್ತದೆ. ಈ ಪ್ರಕ್ರಿಯೆಯಲ್ಲಿ ನೀವು ಆಳವಾದ ಉಸಿರನ್ನು ತೆಗೆದುಕೊಳ್ಳಿ ಮತ್ತು ನಿಮ್ಮ ಎದೆಯನ್ನು ಗಾಳಿಯಿಂದ ತುಂಬಿಸಿ, ನಂತರ ಸಂಪೂರ್ಣ ಉಸಿರನ್ನು ರೋಗಿಗೆ ನೀಡಿ. ನಂತರ ಮತ್ತೆ ನೀವು ಸಿಪಿಆರ್‌ನ್ನು ಮುಂದುವರೆಸಿ. ಎರಡು ನಿಮಿಷಗಳ ನಂತರ ಮತ್ತೊಮ್ಮೆ ಉಸಿರಾಟವನ್ನು ವಿನಿಮಯ ಮಾಡಿಕೊಳ್ಳಬೇಕು. ಈ ಪ್ರಕ್ರಿಯೆಯಲ್ಲಿ ರೋಗಿಯೊಂದಿಗೆ ಇಬ್ಬರು ವ್ಯಕ್ತಿಗಳು ಇರಬೇಕು. ಒಬ್ಬರು ಉಸಿರಾಟವನ್ನು ನೀಡಿದರೆ ಇನ್ನೊಬ್ಬರು ಸಂಕೋಚನವನ್ನು ಮಾಡಬೇಕು ಎಂದು ಡಾ. ಪುರೋಹಿತ್ ಹೇಳಿದ್ದಾರೆ.

ಹಂತ 5- ಎ ಇ ಡಿ (Automated External Defibrillator):

ಇದು ನಾಡಿಮಿಡಿತವನ್ನು ಪರಿಶೀಲಿಸುತ್ತದೆ. ಹೃದಯ ಸ್ತಂಭನದಿಂದ ವ್ಯಕ್ತಿಯನ್ನು ಸರಿಪಡಿಸಲು ಎ ಇ ಡಿ ಬಳಸಲಾಗುತ್ತದೆ. ಈ ಚಿಕ್ಕ ಸಾಧನವನ್ನು ಸುಲಭವಾಗಿ ಬಳಸಬಹುದು ಮತ್ತು ಇದು ಮುಖ್ಯವಾಗಿ ಮಾಲ್, ರೆಸ್ಟೋರೆಂಟ್ ಮತ್ತು ಹೋಟೆಲ್‌ಗಳಂತಹ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಇರಬೇಕು. ಎ ಇ ಡಿ ಸಾಧನವು ಸ್ವಿಚ್ ಆನ್ ಮಾಡಿದ ಬಳಿಕ ಸ್ವಯಂ ಚಾಲಿತವಾಗಿ ಕೆಲಸ ಮಾಡುತ್ತದೆ. ನೀವು ಇದನ್ನು ರೋಗಿಯ ದೇಹಕ್ಕೆ ಸಂಪರ್ಕಿಸಿದಾಗ ಅದು ಹೃದಯ ಬಡಿತವನ್ನು ತಿಳಿಸುತ್ತದೆ.ನೀವು ನಾಡಿ ಮಿಡಿತವನ್ನು ತಿಳಿಯಲು ಸಾಧ್ಯವಾಗದಿದ್ದಾಗ, ಸಿಪಿಆರ್‌ನ್ನು ಅಗತ್ಯವಾಗಿರುತ್ತದೆ. ಆಂಬ್ಯಲೆನ್ಸ್ ಆಗಮಿಸಲು ಮತ್ತು ರೋಗಿಯನ್ನು ಆಸ್ಪತ್ರೆಗೆ ಕರೆದೊಯ್ಯಲು ನಿಮಗೆ ಸಾಕಷ್ಟು ಸಮಯವನ್ನು ನೀಡುತ್ತದೆ. ಈ ಮಧ್ಯೆ ರೋಗಿಯನ್ನು ಮತ್ತು ಗಾಳಿ ಬೆಳಕು ಇರುವ ಸ್ಥಳದಲ್ಲಿ ಇರಿಸಬೇಕು ಎಂದು ಡಾ. ಪರೋಹಿತ್ ಹೇಳುತ್ತಾರೆ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: 

Published On - 3:31 pm, Sat, 21 January 23