AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Health Tips: ಆಯುಷ್ಯ ಕಡಿಮೆ ಮಾಡುವ ಈ ಆಹಾರಗಳ ಸೇವನೆ ಆದಷ್ಟು ಕಡಿಮೆ ಮಾಡಿ

ಇತ್ತೀಚಿನ ಕೆಲವು ಅಧ್ಯಯನಗಳ ಪ್ರಕಾರ, ಕೆಲವು ಆಹಾರಗಳು ನಿಮ್ಮ ಜೀವಿತಾವಧಿಯನ್ನು ಕಡಿಮೆ ಮಾಡಬಹುದು. ಏಕೆಂದರೆ ಈ ಆಹಾರವನ್ನು ಸೇವಿಸುವುದರಿಂದ ಗಂಭೀರ ಕಾಯಿಲೆಗಳು ಬರಬಹುದು. ಇಂತಹ ಆಹಾರಗಳನ್ನು ಸೇವಿಸುವುದರಿಂದ ಮಧುಮೇಹ, ಹೃದ್ರೋಗ, ಅಧಿಕ ರಕ್ತದೊತ್ತಡ, ಬುದ್ಧಿಮಾಂದ್ಯತೆಯಂತಹ ಗಂಭೀರ ಸಮಸ್ಯೆಗಳು ಬರಬಹುದು ಎನ್ನುತ್ತಾರೆ ಆರೋಗ್ಯ ತಜ್ಞರು.

TV9 Web
| Updated By: Rakesh Nayak Manchi|

Updated on:Jan 21, 2023 | 6:47 PM

Share
Healthy Foods expectancy Don't eat foods that reduce life expectancy health tips in kannada

ನೆಚ್ಚಿನ ಆಹಾರವನ್ನು ತಿನ್ನಲು ಎಲ್ಲರೂ ಇಷ್ಟಪಡುತ್ತಾರೆ. ಕೆಲವರು ದಿನವಿಡೀ ವಿವಿಧ ಆಹಾರಗಳನ್ನು ತಿನ್ನುತ್ತಲೇ ಇರುತ್ತಾರೆ. ಹೀಗಿದ್ದಾಗ ಕೆಲವೊಂದು ಆಹಾರಗಳು ನಿಮ್ಮ ಜೀವಿತಾವಧಿಯನ್ನು ಕಡಿಮೆ ಮಾಡುತ್ತವೆ ಎಂಬುದನ್ನು ನೆನಪಿನಲ್ಲಿಡಿ. ಅಂತಹ ಆಹಾರಗಳನ್ನು ಹೆಚ್ಚು ಸೇವಿಸಿದರೆ ಮಧುಮೇಹ, ಹೃದ್ರೋಗ, ಅಧಿಕ ರಕ್ತದೊತ್ತಡ, ಬುದ್ಧಿಮಾಂದ್ಯತೆಯಂತಹ ಗಂಭೀರ ಸಮಸ್ಯೆಗಳು ಬರಬಹುದು ಎಂದು ವೈದ್ಯರು ಎಚ್ಚರಿಸುತ್ತಾರೆ.

1 / 5
Healthy Foods expectancy Don't eat foods that reduce life expectancy health tips in kannada

ಸಂಸ್ಕರಿಸಿದ ಮಾಂಸ: ಸಂಸ್ಕರಿತ ಆಹಾರವನ್ನು ಖರೀದಿಸುವುದರ ಜೊತೆಗೆ ಅನೇಕ ಜನರು ಶಾಪಿಂಗ್ ಮಾಲ್‌ಗಳಿಂದ ಸಂಸ್ಕರಿಸಿದ ಮಾಂಸವನ್ನು ಖರೀದಿಸುತ್ತಾರೆ. ಈ ಆಹಾರವು ದೇಹಕ್ಕೆ ತುಂಬಾ ಹಾನಿಕಾರಕವಾಗಿದೆ. ಹೀಗಾಗಿ ಸಂಸ್ಕರಿಸಿದ ಆಹಾರದಿಂದ ಆದಷ್ಟು ದೂರವಿರಿ.

2 / 5
Healthy Foods expectancy Don't eat foods that reduce life expectancy health tips in kannada

ಪ್ಯಾಕೇಜ್ ಮಾಡಿದ ಆಹಾರಗಳು: ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಆಹಾರಗಳನ್ನು ಮುಚ್ಚಿದ ಪ್ಯಾಕೆಟ್‌ಗಳಲ್ಲಿ ಮಾರಾಟ ಮಾಡಲಾಗುತ್ತದೆ. ಅಂತಹ ಆಹಾರವು ಸೋಂಕಿಗೆ ಕಾರಣವಾಗಬಹುದು. ಇದು ಆರೋಗ್ಯಕ್ಕೆ ಹಾನಿಕಾರಕವಾಗಿದ್ದು, ಪ್ಯಾಕೇಜ್ ಆಹಾರಗಳ ಸೇವನೆಯನ್ನು ಆದಷ್ಟು ಕಡಿಮೆ ಮಾಡಿ.

3 / 5
Healthy Foods expectancy Don't eat foods that reduce life expectancy health tips in kannada

ಕಾರ್ನ್‌ಫ್ಲೇಕ್ಸ್: ಕಾರ್ನ್‌ಫ್ಲೇಕ್‌ಗಳು ಅನೇಕ ಜನರಿಗೆ ಮುಖ್ಯವಾದ ತಿಂಡಿಯಾಗಿದೆ. ಆದರೆ ಇದರಲ್ಲಿ ಸಕ್ಕರೆಯ ಪ್ರಮಾಣ ಬಹಳ ಹೆಚ್ಚಾಗಿರುತ್ತದೆ. ಇದು ರಕ್ತದಲ್ಲಿನ ಸಕ್ಕರೆಯನ್ನು ಹೆಚ್ಚಿಸುತ್ತದೆ. ಇದು ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ. ಹೀಗಾಗಿ ಈ ಆಹಾರದಿಂದ ಆದಷ್ಟು ದೂರವಿರುವುದು ಉತ್ತಮ.

4 / 5
Healthy Foods expectancy Don't eat foods that reduce life expectancy health tips in kannada

ಮ್ಯಾಗಿ, ಯಿಪ್ಪಿಯಂತಹ ಫಾಸ್ಟ್ ಫುಡ್​ಗಳು ಹೆಚ್ಚಿನವರು ಇಷ್ಟಪಡುತ್ತಾರೆ. ಇದರ ನಿತ್ಯ ಸೇವನೆಯಿಂದ ಆರೋಗ್ಯಕ್ಕೆ ಮಾರಕವಾಗಬಹುದು. ಏಕೆಂದರೆ ಇದರಲ್ಲಿ ಸೋಡಿಯಂ ಪ್ರಮಾಣ ತುಂಬಾ ಹೆಚ್ಚಿರುತ್ತದೆ. ಇದು ಆರೋಗ್ಯದ ಅಪಾಯಗಳನ್ನು ಹೆಚ್ಚಿಸುತ್ತದೆ.

5 / 5

Published On - 7:30 am, Sat, 21 January 23