
ಕಿವಿ (ears) ದೇಹದ ಪ್ರಮುಖ ಭಾಗವಾಗಿದೆ. ಇದರ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅಗತ್ಯ, ಅದರಲ್ಲೂ ಈ ಮಳೆಗಾಲದಲ್ಲಿ ಕಿವಿಯ ಬಗ್ಗೆ ತುಂಬಾ ಕಾಳಜಿಯನ್ನು ಕಾಪಾಡಿಕೊಳ್ಳಬೇಕು. ಕೆಲವೊಂದು ಬಾರಿ ಕಿವಿ ಇಂತಹ ಸಮಸ್ಯೆಗಳು ಉಂಟಾದಾಗ ಏನು ಮಾಡಬೇಕು ಎಂಬುದು ತಿಳಿದಿರುವುದು, ಆಗ್ಗಾಗೆ ಇಂತಹ ಸಮಸ್ಯೆಗಳು ಕಾಡುತ್ತಾ ಇರುತ್ತದೆ. ಆ ಸಮಸ್ಯೆಗಳು ಯಾವುವು? ಇಲ್ಲಿದೆ ನೋಡಿ ಕಿವಿಯಲ್ಲಿ ಕೊಳಕು ಸಂಗ್ರಹವಾಗುವುದು, ಕಿವಿಯಲ್ಲಿ ಆಗ್ಗಾಗೆ ಅಡಚಣೆ (blocked ear) ಉಂಟಾಗುವುದು. ಕಿವಿಯ ನೋವು ಕಾಣಿಸಿಕೊಳ್ಳುವುದು, ಹೀಗೆ ಅನೇಕ ಸಮಸ್ಯೆಗಳು ಒಮ್ಮೆ ಒಮ್ಮೆ ಕಾಡುತ್ತದೆ. ಇದಕ್ಕೆ ಯಾವ ರೀತಿಯ ಪರಿಹಾರವನ್ನು ಕಂಡುಕೊಳ್ಳಬಹುದು ಎಂಬುದನ್ನು ಆಹಾರ ತಜ್ಞೆ ದೀಪ್ಶಿಖಾ ಶರ್ಮಾ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹೇಳಿಕೊಂಡಿದ್ದಾರೆ.
ಆಗ್ಗಾಗೆ ಕಿವಿ ಬಂದ್ ಆಗುತ್ತದೆ. ಅಂದರೆ ಕಿವಿ ಮುಚ್ಚಿದಂತೆ ಆಗುವ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಸ್ವಲ್ಪ ಸಮಯದ ನಂತರ ತನ್ನಷ್ಟಕ್ಕೆ ಸರಿ ಹೋಗುತ್ತದೆ. ಒಂದು ವೇಳೆ ಇದಕ್ಕೆ ತಕ್ಷಣದ ಪರಿಹಾರವನ್ನು ಬಯಸಿದರೆ ಸಾಸಿವೆ ಎಣ್ಣೆಯನ್ನು ಬಳಸುವುದು ಉತ್ತಮ ಎಂದು ದೀಪ್ಶಿಖಾ ಶರ್ಮಾ ಹೇಳುತ್ತಾರೆ. ಕೇವಲ 2 ಹನಿ ಸಾಸಿವೆ ಎಣ್ಣೆಯನ್ನು ಹಾಕುವ ಮೂಲಕ ಕಿವಿಯ ಅಡಚಣೆಯನ್ನು ಪರಿಹಾರ ಮಾಡಿಕೊಳ್ಳಬಹುದು. ಸಾಸಿವೆ ಎಣ್ಣೆಯು ಬ್ಯಾಕ್ಟೀರಿಯಾ ವಿರೋಧಿ ಮತ್ತು ಶಿಲೀಂಧ್ರನಾಶಕ ಗುಣಗಳಿಂದ ಸಮೃದ್ಧವಾಗಿದೆ, ಇದು ಕಿವಿಯಲ್ಲಿರುವ ಸೋಂಕನ್ನು ಉಂಟುಮಾಡುವ ಸೂಕ್ಷ್ಮಜೀವಿಗಳನ್ನು ಕೊಲ್ಲುತ್ತದೆ. ಈ ಎಣ್ಣೆಯನ್ನು ಹಾಕುವುದರಿಂದ ಕೊಳಕು ಮೃದುವಾಗುತ್ತದೆ ಮತ್ತು ಹೊರಬರುತ್ತದೆ, ಇದು ಕಿವಿಯನ್ನು ಸ್ವಚ್ಛವಾಗಿಡಲು ಸಹಾಯ ಮಾಡುತ್ತದೆ, ಜೊತೆಗೆ ಸೋಂಕಿನ ಅಪಾಯವನ್ನು ಕಡಿಮೆ ಮಾಡುತ್ತದೆ. ಕಿವಿಯ ತುರಿಕೆಯನ್ನು ಕೂಡ ತಕ್ಷಣದಲ್ಲಿ ಕಡಿಮೆ ಮಾಡುತ್ತದೆ.
ಇದನ್ನೂ ಓದಿ: ಹವಾಮಾನಕ್ಕೆ ಅನುಗುಣವಾಗಿ ಯಾವ ಪಾತ್ರೆಯಲ್ಲಿ ನೀರು ಕುಡಿದರೆ ಆರೋಗ್ಯಕ್ಕೆ ಒಳ್ಳೆಯದು
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ