Sign In

By signing in or creating an account, you agree with Associated Broadcasting Company's Terms & Conditions and Privacy Policy.

Cashew Katli Recipe: ಸುಲಭವಾಗಿ ಮನೆಯಲ್ಲೇ ಮಾಡಿ ಗೋಡಂಬಿ ಬರ್ಫಿ

ಮನೆಯಲ್ಲಿ ಎಷ್ಟು ಅಂತ ಇರೋದಿಕ್ಕೆ ಆಗುತ್ತೆ ಅಂತ ನೀವು ಯೋಚಿಸುತ್ತಿದ್ದೀರಾ? ಚಿಂತೆ ಬಿಟ್ಟಾಕಿ. ಮನೆಯಲ್ಲೆ ಸುಲಭವಾಗಿ ಸಿಹಿ ತಿಂಡಿಗಳನ್ನು ಮಾಡಿ ತಿನ್ನಿ. ಸಾಮಾನ್ಯವಾಗಿ ಎಲ್ಲರೂ ಇಷ್ಟಪಟ್ಟು ತಿನ್ನುವ ಸಿಹಿ ತಿಂಡಿ ಅಂದರೆ ಅದು ಕಾಜು ಬರ್ಫಿ.

Cashew Katli Recipe: ಸುಲಭವಾಗಿ ಮನೆಯಲ್ಲೇ ಮಾಡಿ ಗೋಡಂಬಿ ಬರ್ಫಿ
ಗೋಡಂಬಿ ಬರ್ಫಿ
Follow us
TV9 Web
| Updated By: sandhya thejappa

Updated on: Jun 21, 2021 | 9:10 AM

ಮಳೆಗಾಲ ಬೇರೆ ಪ್ರಾರಂಭವಾಗಿದೆ. ಹೊರಗಡೆ ಧಾರಕಾರ ಮಳೆ ಸುರಿಯುತ್ತಿದೆ. ಮನೆಯಲ್ಲಿ ಕೂತು ಕೂತು ಸಾಕಾಯ್ತು. ಹೊರಗಡೆ ಹೋಗೋಣ ಅಂದರೆ ಮಳೆ. ಮನೆಯಲ್ಲಿ ಎಷ್ಟು ಅಂತ ಇರೋದಿಕ್ಕೆ ಆಗುತ್ತೆ ಅಂತ ನೀವು ಯೋಚಿಸುತ್ತಿದ್ದೀರಾ? ಚಿಂತೆ ಬಿಟ್ಟಾಕಿ. ಮನೆಯಲ್ಲೆ ಸುಲಭವಾಗಿ ಸಿಹಿ ತಿಂಡಿಗಳನ್ನು ಮಾಡಿ ತಿನ್ನಿ. ಸಾಮಾನ್ಯವಾಗಿ ಎಲ್ಲರೂ ಇಷ್ಟಪಟ್ಟು ತಿನ್ನುವ ಸಿಹಿ ತಿಂಡಿ ಅಂದರೆ ಅದು ಕಾಜು ಬರ್ಫಿ. ಮಕ್ಕಳಿಗಂತೂ ತುಂಬಾ ಇಷ್ಟ. ತಿನ್ನಬೇಕು ಅಂತ ಅನಿಸಿದಾಗೆಲ್ಲ ಬೇಕ್ರಿಗೆ ಹೋಗಿ ತರುತ್ತೀರ. ಇದರ ಬದಲು ನೀವೇ ಮನೆಯಲ್ಲಿ ಸುಲಭವಾಗಿ ಈ ಕಾಜು ಬರ್ಫಿಯನ್ನು ಮಾಡಬಹುದು.

ಕಾಜು ಬರ್ಫಿ ಮಾಡುವುದು ತುಂಬಾ ಸುಲಭ. ಸಕ್ಕರೆ, ತುಪ್ಪ, ಗೋಂಡಬಿ ಮತ್ತು ಖೋಯಾ ಸೇರಿದಂತೆ ಇತರೆ ಸಾಮಾಗ್ರಿಗಳನ್ನು ಬಳಸಿ ಮನೆಯಲ್ಲೇ ಸರಳವಾಗಿ ಕಾಜು ಬರ್ಫಿಯನ್ನು ಮಾಡಬಹುದು. ಗೋಡಂಬಿ ಕಾಜು ಬರ್ಫಿ ಮಾಡಲು ಬೇಕಾದ ಸಾಮಾಗ್ರಿಗಳು ಹೀಗಿವೆ, 2 ಕಪ್ ಗೋಡಂಬಿ 1 ಕಪ್ ಸಕ್ಕರೆ ಅರ್ಧ ಕಪ್ ನೀರು 2 ಚಮಚ ತುಪ್ಪ ಅರ್ಧ ಚಮಚ ಏಲಕ್ಕೆ ಪುಡಿ 500 ಗ್ರಾಂ ಖೋಯಾ ಅಲಂಕರಿಸಲು ಬೆಳ್ಳಿ ಬಣ್ಣದ ಹಾಳೆ (edible silver foil)

ಮಾಡುವ ವಿಧಾನ ಗೋಡಂಬಿಯನ್ನು ಮಿಕ್ಸರ್ ಗ್ರೈಂಡರ್​ನ ಹಾಕಿ. ಚೆನ್ನಾಗಿ ಪುಡಿಯಾಗುವರೆಗು ಗೋಡಂಬಿಯನ್ನು ಗ್ರೈಂಡ್ ಮಾಡಿ. ಪಡಿಯಾದ ನಂತರ ಗೋಡಂಬಿ ಪುಡಿಯನ್ನು ಜರಡಿ ಮೂಲಕ ಸೋಸಬೇಕು ಅಥವಾ ಫಿಲ್ಟರ್ ಮಾಡಬೇಕು. ಈ ರೀತಿ ಮಾಡುವುದರಿಂದ ಯಾವುದೇ ಉಂಡೆಗಳೂ ಉಳಿಯುವುದಿಲ್ಲ. ಚೆನ್ನಾಗಿ ಗ್ರೈಂಡ್ ಆಗಿರುವ ಪುಡಿ ಮಾತ್ರ ಸಿಗುತ್ತದೆ. ನಂತರ ಬೇರೆ ಪಾತ್ರೆಯಲ್ಲಿ ಸಕ್ಕರೆ ಮತ್ತು ಖೋಯಾವನ್ನು ಚೆನ್ನಾಗಿ ಮಿಶ್ರಣ ಮಾಡಬೇಕು.

ನಂತರ ಸಕ್ಕರೆ-ಖೋಯಾ ಮಿಶ್ರಣವನ್ನು ಬಾಣಲೆಯಲ್ಲಿ ಹಾಕಿ. ಅದಕ್ಕೆ ಅರ್ಧ ಕಪ್ ನೀರನ್ನು ಸೇರಿಸಿ 5 ನಿಮಿಷ ಚೆನ್ನಾಗಿ ತಿರುಗಿಸಿ. ಬಳಿಕ ಸಕ್ಕರೆ ಕರಗಿ, ಮಿಶ್ರಣ ದಪ್ಪವಾಗುತ್ತದೆ. ಇದಕ್ಕೆ ಏಲಕ್ಕಿ ಪುಡಿ, ತುಪ್ಪ ಮತ್ತು ಗೋಡಂಬಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಕಾಜು ಬರ್ಫಿ ಮೃದುವಾಗಿರಬೇಕಾದರೆ ಹೆಚ್ಚು ಬೇಯಿಸಬಾರದು.

ಒಂದು ದೊಡ್ಡ ತಟ್ಟೆಯನ್ನು ತೆಗೆದುಕೊಂಡು ಅದಕ್ಕೆ ಸಿದ್ಧವಾರಿರುವ ಮಿಶ್ರಣವನ್ನು ಹಾಕಿ. ಅದರ ಮೇಲೆ ಒಂದು ಚಮಚ ತುಪ್ಪವನ್ನು ಸವರಿ. ಬಳಿಕ ಅದರ ಮೇಲೆ ಬೆಳ್ಳಿ ಬಣ್ಣದ ಹಾಳೆಯನ್ನು ಹಾಕಿ, ವಜ್ರಾಕಾರದಲ್ಲಿ ಕತ್ತಿರಿಸಿ ತಿನ್ನಿ.

ಗೋಡಂಬಿ ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ? ಗೋಡಂಬಿ ಪ್ರೋಟೀನ್, ಫೈಬರ್, ಸತು, ರಂಜಕ, ಉತ್ಕರ್ಷಣ ನಿರೋಧಕಗಳಂತಹ ಪೋಷಕಾಂಶಗಳನ್ನು ಹೊಂದಿರುತ್ತದೆ. ಇದು ರಕ್ತದಲ್ಲಿನ ಕೊಲೆಸ್ಟ್ರಾಲ್​ನ ನಿಯಂತ್ರಿಸುವ ಸ್ಟಿಯರಿಕ್ ಆಮ್ಲವನ್ನು ಹೊಂದಿರುತ್ತದೆ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ದೇಹದಲ್ಲಿನ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ. ಇದು ಹೃದಯ ಸಂಬಂಧ ಸಮಸ್ಯೆಗಳು ಕಡಿಮೆ ಮಾಡಲು ಸಹಾಯಕವಾಗಿದೆ. ಅಲ್ಲದೆ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಇದನ್ನೂ ಓದಿ

Health Tips: ಕೊವಿಡ್ ಸಮಯದಲ್ಲಿ ನೀವು ಪಾಲಿಸಲೇಬೇಕಾದ ಐದು ಆಹಾರ ಪದ್ಧತಿಗಳು

World Yoga Day 2021: ಇಂದು ಚೀನಾದಲ್ಲೂ ವಿಶ್ವ ಯೋಗ ದಿನಾಚರಣೆ; ಚೀನಿಯರನ್ನೂ ಸೆಳೆಯುತ್ತಿದೆ ಭಾರತ ಮೂಲದ ಯೋಗ

(How to make Cashew Kaju Katli Burfi in home)

ರಾಜಸ್ಥಾನದ ರಾಜ್ಯಪಾಲ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​ನಲ್ಲಿ ಬೆಂಕಿ
ರಾಜಸ್ಥಾನದ ರಾಜ್ಯಪಾಲ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​ನಲ್ಲಿ ಬೆಂಕಿ
‘ಕೆಡಿ’ ಸಿನಿಮಾದ ನಿಜವಾದ ‘ಹೀರೋ’ ಅನ್ನು ಕೊಂಡಾಡಿದ ಧ್ರುವ ಸರ್ಜಾ
‘ಕೆಡಿ’ ಸಿನಿಮಾದ ನಿಜವಾದ ‘ಹೀರೋ’ ಅನ್ನು ಕೊಂಡಾಡಿದ ಧ್ರುವ ಸರ್ಜಾ
ಹೊಸ ಚೆಂಡಿನಲ್ಲಿ ನಾನೇ ಬೆಸ್ಟ್; ರೋಹಿತ್​ಗೆ ಸಿರಾಜ್ ತಿರುಗೇಟು
ಹೊಸ ಚೆಂಡಿನಲ್ಲಿ ನಾನೇ ಬೆಸ್ಟ್; ರೋಹಿತ್​ಗೆ ಸಿರಾಜ್ ತಿರುಗೇಟು
ಮಹಿಳೆಯರನ್ನು ಕೋಟ್ಯಾಧಿಪತಿ ಮಾಡುತ್ತೇವೆ;WITT ಶೃಂಗಸಭೆಯಲ್ಲಿ ಸ್ಮೃತಿ ಇರಾನಿ
ಮಹಿಳೆಯರನ್ನು ಕೋಟ್ಯಾಧಿಪತಿ ಮಾಡುತ್ತೇವೆ;WITT ಶೃಂಗಸಭೆಯಲ್ಲಿ ಸ್ಮೃತಿ ಇರಾನಿ
2025 ಅಂತ್ಯದೊಳಗೆ ದೇಶಿ ಸೆಮಿಕಂಡಕ್ಟರ್ ಚಿಪ್, ಎಐ ಆರಂಭ;ಅಶ್ವಿನಿ ವೈಷ್ಣವ್
2025 ಅಂತ್ಯದೊಳಗೆ ದೇಶಿ ಸೆಮಿಕಂಡಕ್ಟರ್ ಚಿಪ್, ಎಐ ಆರಂಭ;ಅಶ್ವಿನಿ ವೈಷ್ಣವ್
ಹೋಟೆಲ್​ನವರು ಚೆನ್ನಾಗಿ ನೋಡಿಕೊಂಡರು: ಬ್ಯಾಂಕಾಕ್​ನಿಂದ ವಾಪಸ್ಸಾದವರು
ಹೋಟೆಲ್​ನವರು ಚೆನ್ನಾಗಿ ನೋಡಿಕೊಂಡರು: ಬ್ಯಾಂಕಾಕ್​ನಿಂದ ವಾಪಸ್ಸಾದವರು
ಅರ್ಜುನ್ ಜನ್ಯಗೆ ಹಾಡು ಹೊಳೆಯುವುದೆಲ್ಲಿ: ಸಂಗತಿ ವಿವರಿಸಿದ ಪ್ರೇಮ್
ಅರ್ಜುನ್ ಜನ್ಯಗೆ ಹಾಡು ಹೊಳೆಯುವುದೆಲ್ಲಿ: ಸಂಗತಿ ವಿವರಿಸಿದ ಪ್ರೇಮ್
ಮ್ಯಾನ್ಮಾರ್​ಗೆ ಸಹಾಯ ಮಾಡುವ ಆಪರೇಷನ್​ಗೆ ಸರ್ಕಾರ ದೇವರ ಹೆಸರಿಟ್ಟಿದ್ದೇಕೆ?
ಮ್ಯಾನ್ಮಾರ್​ಗೆ ಸಹಾಯ ಮಾಡುವ ಆಪರೇಷನ್​ಗೆ ಸರ್ಕಾರ ದೇವರ ಹೆಸರಿಟ್ಟಿದ್ದೇಕೆ?
ಕೆಲ ಸೆಕೆಂಡ್​​ಗಳ ರೀಲ್ಸ್​ಗೆ ಬಳಸಿದ ಮಚ್ಚು ಫೈಬರ್​ದ್ದಾಗಿತ್ತು: ವಿನಯ್ ಗೌಡ
ಕೆಲ ಸೆಕೆಂಡ್​​ಗಳ ರೀಲ್ಸ್​ಗೆ ಬಳಸಿದ ಮಚ್ಚು ಫೈಬರ್​ದ್ದಾಗಿತ್ತು: ವಿನಯ್ ಗೌಡ
ಯುಗಾದಿ: ಕೆಆರ್​ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಶಾಕ್, ಹೂವಿನ ದರ ಏರಿಕೆ
ಯುಗಾದಿ: ಕೆಆರ್​ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಶಾಕ್, ಹೂವಿನ ದರ ಏರಿಕೆ