Health Tips: ಈ ಪೌಷ್ಟಿಕ ಆಹಾರಕ್ಕಾಗಿ ನಿಮಗೆ ಬೇಕಾಗಿರುವುದು ಕೇವಲ ‘ಮೂರು’ ಪದಾರ್ಥಗಳು

| Updated By: preethi shettigar

Updated on: Jul 19, 2021 | 7:28 AM

ಪೌಷ್ಟಿಕಾಂಶ ಆಹಾರ ಸೇವಿಸದೆ ಸಣ್ಣ ಪುಣ್ಣ ಕೆಲಸ ಮಾಡಿದ ತಕ್ಷಣ ಸುಸ್ತಾಗುತ್ತಾರೆ. ಪದೇ ಪದೇ ಹಸಿವಾಗುತ್ತದೆ. ಹಾಗಂತ ಖಾಲಿ ಹೊಟ್ಟೆಯಲ್ಲಿ ಮಲಗುವುದು ಆರೋಗ್ಯ ದೃಷ್ಟಿಯಲ್ಲಿ ಸರಿಯಲ್ಲ. ಹೆಚ್ಚು ರುಚಿ ಸಿಗದಿದ್ದರೂ ಆರೋಗ್ಯ ಕಾಪಾಡಿಕೊಳ್ಳಲು ಪೌಷ್ಟಿಕ ಆಹಾರವನ್ನು ಸೇವಿಸಲೇಬೇಕು.

Health Tips: ಈ ಪೌಷ್ಟಿಕ ಆಹಾರಕ್ಕಾಗಿ ನಿಮಗೆ ಬೇಕಾಗಿರುವುದು ಕೇವಲ ‘ಮೂರು’ ಪದಾರ್ಥಗಳು
ಪೌಷ್ಟಿಕ ಆಹಾರ ಸೇವಿಸಿ (ಸಾಂಕೇತಿಕ ಚಿತ್ರ)
Follow us on

ದುಡಿಯುವುದು ಮೂರು ಹೊತ್ತಿನ ಊಟಕ್ಕಾದರೂ, ಈಗಿನ ಜೀವನ ಶೈಲಿಯಲ್ಲಿ ಊಟಕ್ಕೂ ಸಮಯವಿಲ್ಲದಂತಾಗಿದೆ. ಕೆಲಸದ ಒತ್ತಡದಿಂದ ಬಹುತೇಕರು ಪೌಷ್ಟಿಕಾಂಶ ಆಹಾರ ತಿನ್ನುತ್ತಿಲ್ಲ. ಕಡಿಮೆ ಸಮಯದಲ್ಲಿ ಸಿದ್ಧವಾಗುವ ಬ್ರೆಡ್ ಆ್ಯಂಡ್ ಜಾಮ್ನಂತಹ ಆಹಾರವನ್ನು ಸೇವಿಸುವವರ ಸಂಖ್ಯೆ ಹೆಚ್ಚಾಗಿದೆ. ಆದರೆ ಈ ಪದ್ಧತಿ ಆರೋಗ್ಯ ದೃಷ್ಟಿಯಿಂದ ಒಳ್ಳೆಯದಲ್ಲ. ಕಡಿಮೆ ಸಮಯದಲ್ಲೇ ಪೌಷ್ಟಿಕಾಂಶ ಆಹಾರವನ್ನು ತಿಂದು ಆರೋಗ್ಯ ಕಾಪಾಡಿಕೊಳ್ಳಿ.

ಪೌಷ್ಟಿಕಾಂಶ ಆಹಾರ ಸೇವಿಸದೆ ಸಣ್ಣ ಪುಣ್ಣ ಕೆಲಸ ಮಾಡಿದ ತಕ್ಷಣ ಸುಸ್ತಾಗುತ್ತಾರೆ. ಪದೇ ಪದೇ ಹಸಿವಾಗುತ್ತದೆ. ಹಾಗಂತ ಖಾಲಿ ಹೊಟ್ಟೆಯಲ್ಲಿ ಮಲಗುವುದು ಆರೋಗ್ಯ ದೃಷ್ಟಿಯಲ್ಲಿ ಸರಿಯಲ್ಲ. ಹೆಚ್ಚು ರುಚಿ ಸಿಗದಿದ್ದರೂ ಆರೋಗ್ಯ ಕಾಪಾಡಿಕೊಳ್ಳಲು ಪೌಷ್ಟಿಕ ಆಹಾರವನ್ನು ಸೇವಿಸಲೇಬೇಕು.

ಸಾಮಾನ್ಯವಾಗಿ ಎಲ್ಲರಿಗೂ ಮೊಸರನ್ನ ತಿಳಿದಿದೆ. ಇದು ಬಡವರಿಗೆ ಬಾಡೂಟವಿದ್ದಂತೆ. ನಾಲಿಗೆಗೆ ತುಂಬಾ ರುಚಿ ಕೊಡುವ ಮೊಸರನ್ನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದನ್ನು ಸೇವಿಸಿದರೆ ಪದೇ ಪದೇ ಹಸಿವಾಗಲ್ಲ. ಊಟವೂ ತೃಪ್ತಿಯಾಗಿಸುತ್ತದೆ. ಅಲ್ಲದೆ ಬಹುಮುಖ್ಯವಾಗಿ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಾಗುವುದಿಲ್ಲ. ಜೀರ್ಣಕ್ರಿಯೆಯು ಚೆನ್ನಾಗಿ ಆಗುತ್ತದೆ. ಮೊಸರನ್ನದಲ್ಲಿ ಕ್ಯಾಲ್ಸಿಯಂ ಮತ್ತು ಉತ್ತಮ ಕೊಬ್ಬುಗಳು ಅಧಿಕವಾಗಿರುತ್ತದೆ. ಇದನ್ನು ಬೆಳಿಗ್ಗೆ ಬ್ರೇಕ್ ಫಾಸ್ಟ್, ಮಧ್ಯಾಹ್ನ ಊಟಕ್ಕೆ ಮತ್ತು ರಾತ್ರಿ ಊಟಕ್ಕೂ ತಿನ್ನಬಹುದು.

ಮೊಸರನ್ನ

ಮೊಸರನ್ನ ಮಾಡಲು ಬೇಕಾಗುವ ಪದಾರ್ಥಗಳು
1 ಬೌಲ್ ಅನ್ನ
ಎರಡು ಚಮಚ ಮೊಸರು (ದೊಡ್ಡ ಚಮಚದಲ್ಲಿ)
ರುಚಿಗೆ ತಕ್ಕಷ್ಟು ಉಪ್ಪು

ಅನ್ನ ಸ್ವಲ್ಪ ಮೆದು ಇರಬೇಕು. ಅನ್ನ ತಣ್ಣಗಾದ ಬಳಿಕ ಅದಕ್ಕೆ ಮೊಸರು ಹಾಕಿ. ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಚೆನ್ನಾಗಿ ಕಲಸಿ. ಇದರೊಂದಿಗೆ ಉಪ್ಪಿನ ಕಾಯಿ ತಿಂದರೆ ರುಚಿ ಹೆಚ್ಚಾಗುತ್ತದೆ.

ಒಗ್ಗರಣೆ ಬೇಕೆನಿಸಿದರೆ
ಚಿಕ್ಕ ಬಾಣಲಿಗೆ ಎರಡರಿಂದ ಮೂರು ಚಮಚ ಅಡುಗೆ ಎಣ್ಣೆ ಹಾಕಿ. ಎಣ್ಣೆ ಕಾದ ನಂತರ ಸಾಸಿವೆ ಹಾಕಿ. ಇನ್ನು ಇದಕ್ಕೆ 5 ರಿಂದ 6 ಎಲೆ ಬೇವಿನ ಸೊಪ್ಪು, ಒಂದೂವರೆ ಚಮಚ ಉದ್ದಿನ ಬೇಳೆ ಮತ್ತು ಕಡಲೆಬೇಳೆ ಹಾಕಿ. ಜೊತೆಗೆ ಎರಡರಿಂದ ಮೂರು ಒಣ ಮೆಣಸಿನಕಾಯಿ ಮುರಿದು ಹಾಕಿ. ಈ ಒಗ್ಗರಣೆಯನ್ನು ಮೊಸರನ್ನಕ್ಕೆ ಹಾಕಿ ಚೆನ್ನಾಗಿ ಕಲಸಿ ತಿನ್ನಿ.

ಪ್ರಯೋಜನಗಳು:
* ಕರುಳಿಗೆ ಒಳ್ಳೆಯದು.
* ದೈಹಿಕ ಸಾಮರ್ಥ್ಯ ಹೆಚ್ಚಾಗುತ್ತದೆ.
* ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
* ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ.

ಇದನ್ನೂ ಓದಿ

Health Tips: ಮಳೆಗಾಲದ ಸಮಯದಲ್ಲಿ ಆರೋಗ್ಯ ದೃಷ್ಟಿಯಿಂದ ಈ ಕೆಲವು ವಿಷಯಗಳನ್ನು ನೀವು ಗಮನಿಸಲೇಬೇಕು

Health Tips: ಹುಣಸೆ ಹಣ್ಣಿನ ಸೇವನೆಯ ಆರೋಗ್ಯ ಪ್ರಯೋಜನಗಳನ್ನು ತಿಳಿಯಿರಿ

(How to make Curd Rice for good health in home)