AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Easy Tips: ಕಡಿಮೆ ಎಣ್ಣೆಯಲ್ಲಿ ರುಚಿಕರವಾದ ಅಡುಗೆ ಮಾಡಲು ಈ ಸರಳ ಸಲಹೆಗಳನ್ನು ಅನುಸರಿಸಿ

ಕರಿದ ಆಹಾರಗಳಿಂದ ಸಾಧ್ಯವಾದಷ್ಟು ದೂರವಿರುವುದು ಉತ್ತಮ ಎನ್ನಲಾಗುತ್ತದೆ. ಈಗಿನ ಯುವ ಜನತೆಗೆ ಇದು ಸ್ವಲ್ಪ ಕಷ್ಟವಾದರೂ ಕೂಡ ಆರೋಗ್ಯ ಕಾಪಾಡಿಕೊಳ್ಳುವುದಕ್ಕೆ ಬಹಳ ಮುಖ್ಯವಾಗಿದೆ. ಅದರಲ್ಲಿಯೂ ಟ್ರೈಗ್ಲಿಸರೈಡ್ಗಳು ಅಥವಾ ಕೊಲೆಸ್ಟ್ರಾಲ್, ಕೊಬ್ಬಿನ ಯಕೃತ್ತು, ಬೊಜ್ಜು ಸಮಸ್ಯೆ ಇರುವವರು ಹೆಚ್ಚಿನ ಎಣ್ಣೆಯುಕ್ತ ಆಹಾರವನ್ನು ಸೇವಿಸಬಾರದು. ಒಂದು ಹನಿ ಎಣ್ಣೆಯಿಂದ ಯಾವ ಆಹಾರಗಳನ್ನು ಬೇಯಿಸಲು ಸಾಧ್ಯವಿಲ್ಲವಾದರೂ, ಅಡುಗೆಯಲ್ಲಿ ಎಣ್ಣೆಯ ಪ್ರಮಾಣವನ್ನು ಕಡಿಮೆ ಮಾಡಬಹುದು. 5 ಚಮಚ ಎಣ್ಣೆ ಬಳಸುವ ಬದಲು ಅದನ್ನು ಸ್ವಲ್ಪ ಕಡಿಮೆ ಮಾಡಿ, ರುಚಿಯಾಗಿ ಅಡುಗೆ ಮಾಡಬಹುದು. ಹಾಗಾದರೆ ತೈಲದ ಬಳಕೆಯನ್ನು ಕಡಿಮೆ ಮಾಡುವುದು ಹೇಗೆ? ಇಲ್ಲಿದೆ ಸರಳ ಸಲಹೆ.

Easy Tips: ಕಡಿಮೆ ಎಣ್ಣೆಯಲ್ಲಿ ರುಚಿಕರವಾದ ಅಡುಗೆ ಮಾಡಲು ಈ ಸರಳ ಸಲಹೆಗಳನ್ನು ಅನುಸರಿಸಿ
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷತಾ ವರ್ಕಾಡಿ|

Updated on: Nov 09, 2024 | 12:00 PM

Share

ಆರೋಗ್ಯ ಕಾಪಾಡಿಕೊಳ್ಳುವುದಕ್ಕೆ ಉತ್ತಮ ಆಹಾರ ಸೇವನೆ ಮಾಡುವುದು ಬಹಳ ಅವಶ್ಯಕ. ಸಾಮಾನ್ಯವಾಗಿ ಪ್ರತಿನಿತ್ಯ ಹೆಚ್ಚು ಎಣ್ಣೆಯುಕ್ತ ಮತ್ತು ಮಸಾಲೆಯುಕ್ತ ಆಹಾರ ಸೇವಿಸಿದರೆ, ಕೊಲೆಸ್ಟ್ರಾಲ್ ಹಾಗೂ ಮಧುಮೇಹ ಸಮಸ್ಯೆಗಳು ಹೆಚ್ಚಾಗುತ್ತವೆ ಎಂದು ತಜ್ಞರು ಹೇಳುತ್ತಾರೆ. ಅದಕ್ಕಾಗಿಯೇ ಕರಿದ ಆಹಾರಗಳಿಂದ ಸಾಧ್ಯವಾದಷ್ಟು ದೂರವಿರುವುದು ಉತ್ತಮ ಎನ್ನಲಾಗುತ್ತದೆ.

ಈಗಿನ ಯುವ ಜನತೆಗೆ ಇದು ಸ್ವಲ್ಪ ಕಷ್ಟವಾದರೂ ಕೂಡ ಆರೋಗ್ಯ ಕಾಪಾಡಿಕೊಳ್ಳುವುದಕ್ಕೆ ಬಹಳ ಮುಖ್ಯವಾಗಿದೆ. ಅದರಲ್ಲಿಯೂ ಟ್ರೈಗ್ಲಿಸರೈಡ್ಗಳು ಅಥವಾ ಕೊಲೆಸ್ಟ್ರಾಲ್, ಕೊಬ್ಬಿನ ಯಕೃತ್ತು, ಬೊಜ್ಜು ಸಮಸ್ಯೆ ಇರುವವರು ಹೆಚ್ಚಿನ ಎಣ್ಣೆಯುಕ್ತ ಆಹಾರವನ್ನು ಸೇವಿಸಬಾರದು. ಒಂದು ಹನಿ ಎಣ್ಣೆಯಿಂದ ಯಾವ ಆಹಾರಗಳನ್ನು ಬೇಯಿಸಲು ಸಾಧ್ಯವಿಲ್ಲವಾದರೂ, ಅಡುಗೆಯಲ್ಲಿ ಎಣ್ಣೆಯ ಪ್ರಮಾಣವನ್ನು ಕಡಿಮೆ ಮಾಡಬಹುದು. 5 ಚಮಚ ಎಣ್ಣೆ ಬಳಸುವ ಬದಲು ಅದನ್ನು ಸ್ವಲ್ಪ ಕಡಿಮೆ ಮಾಡಿ, ರುಚಿಯಾಗಿ ಅಡುಗೆ ಮಾಡಬಹುದು. ಹಾಗಾದರೆ ತೈಲದ ಬಳಕೆಯನ್ನು ಕಡಿಮೆ ಮಾಡುವುದು ಹೇಗೆ? ಇಲ್ಲಿದೆ ಸರಳ ಸಲಹೆ.

  • ಕಡಿಮೆ ಎಣ್ಣೆ ಬಳಸಿ ರುಚಿಯಾಗಿ ಅಡುಗೆ ಮಾಡಲು ನಾನ್- ಸ್ಟಿಕ್ ಪ್ಯಾನ್ ಅನ್ನು ಬಳಸಬಹುದು. ಇದಕ್ಕೆ ನೀವು ಸ್ವಲ್ಪ ಎಣ್ಣೆ ಹಾಕಿದರೆ ಸಾಕು, ಅದರಿಂದ ಆಹಾರವನ್ನು ಚೆನ್ನಾಗಿ ಬೇಯಿಸಬಹುದು. ಆದ್ದರಿಂದ ಹೆಚ್ಚಾಗಿ ಎಣ್ಣೆ ಬಳಕೆ ಮಾಡುವ ಆಹಾರಗಳಲ್ಲಿ ನಾನ್- ಸ್ಟಿಕ್ ಪಾತ್ರೆಗಳನ್ನು ಬಳಕೆ ಮಾಡಬಹುದು.
  • ಎಣ್ಣೆ ಪಾತ್ರೆಯಿಂದ ನೇರವಾಗಿ ಬಾಣಲೆಗೆ ಎಣ್ಣೆ ಹಾಕುವ ಬದಲು, ಚಮಚ ಅಥವಾ ಅಳತೆ ಕಪ್ ಗಳ ಮೂಲಕ ಪಾತ್ರೆಗೆ ಎಣ್ಣೆಯನ್ನು ಹಾಕಲು ಪ್ರಯತ್ನಿಸಿ. ನೀವು ಈ ರೀತಿ ಮಾಡಿದರೆ, ಎಣ್ಣೆಯ ಬಳಕೆ ಕಡಿಮೆಯಾಗುತ್ತದೆ. ಆರೋಗ್ಯವೂ ಚೆನ್ನಾಗಿರುತ್ತದೆ. ಹಾಗಾಗಿ ಎಣ್ಣೆಯನ್ನು ನೇರವಾಗಿ ಸುರಿಯುವುದನ್ನು ತಪ್ಪಿಸಿ. ಇಲ್ಲವಾದಲ್ಲಿ ಇದು ನಿಮ್ಮ ಅರಿವಿಗೆ ಬರದೆಯೇ ಅಳತೆಗಿಂತ ಹೆಚ್ಚಾಗಬಹುದು.
  • ಕರಿದ ಆಹಾರಗಳನ್ನು ಕಡಿಮೆ ಸೇವನೆ ಮಾಡಿದರೆ, ಕಡಿಮೆ ಎಣ್ಣೆ ದೇಹಕ್ಕೆ ಹೋಗುತ್ತದೆ. ಹಾಗಾಗಿ ಇದರ ಬದಲಿಗೆ ಬೇಯಿಸಿದ ಆಹಾರವನ್ನು ಹೆಚ್ಚಾಗಿ ತಿನ್ನಲು ಪ್ರಯತ್ನಿಸಿ. ಮೀನು, ಮಾಂಸ ಮತ್ತು ಮೊಟ್ಟೆಗಳನ್ನು ಕಡಿಮೆ ಎಣ್ಣೆ ಮತ್ತು ಮಸಾಲೆಗಳೊಂದಿಗೆ ಹಬೆಯಲ್ಲಿ ಬೇಯಿಸಿ ತಿನ್ನಬಹುದು.
  • ಈ ರೀತಿ ಚಿಕ್ಕ ಚಿಕ್ಕ ಸಲಹೆಗಳನ್ನು ಅನುಸರಿಸಿದರೆ ಆಹಾರದಲ್ಲಿ ಅಡುಗೆ ಎಣ್ಣೆ ಬಳಕೆ ಮಾಡುವುದನ್ನು ಕಡಿಮೆ ಮಾಡಬಹುದು.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ