Fish medicine: ಅಸ್ತಮಾ ರೋಗಿಗಳಿಗೆ ಆಪತ್ಭಾಂಧವ! ಮತ್ತೆ ವಿವಾದದ ಗೂಡಾದ ಹೈದರಾಬಾದಿನ ಕುಖ್ಯಾತ ಮೀನಿನ ಪ್ರಸಾದ, ಶುಕ್ರವಾರದಿಂದ ವಿತರಣೆ

|

Updated on: Jun 08, 2023 | 3:11 PM

ಜೀವಂತ ಮೀನನ್ನು ಬಾಯಿಗೆ ಹಾಕಿಕೊಳ್ಳುವಾಗ ಏನಾದರೂ ತೊಂದರೆ ಎದುರಾದರೆ ಜೀವ ಬೆದರಿಕೆ ಇದೆ ಎಂದು ವೈದ್ಯರು ಹೇಳುತ್ತಿದ್ದು, ಮೀನಿನ ಪ್ರಸಾದ ಸೇವನೆಯಿಂದ ಅಸ್ತಮಾ ವಾಸಿಯಾಗುತ್ತದೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Fish medicine: ಅಸ್ತಮಾ ರೋಗಿಗಳಿಗೆ ಆಪತ್ಭಾಂಧವ! ಮತ್ತೆ ವಿವಾದದ ಗೂಡಾದ ಹೈದರಾಬಾದಿನ ಕುಖ್ಯಾತ ಮೀನಿನ ಪ್ರಸಾದ, ಶುಕ್ರವಾರದಿಂದ ವಿತರಣೆ
Fish medicine: ಅಸ್ತಮಾ ರೋಗಿಗಳಿಗೆ ಆಪತ್ಭಾಂಧವ!
Follow us on

ಹೈದರಾಬಾದ್: ಮೀನು ಪ್ರಸಾದ… ಅನೇಕ ದಶಕಗಳಿಂದ ಕಲರವ ಮಾಡುತ್ತಿರುವ ಕೋಟ್ಯಂತರ ಅಸ್ತಮಾ ರೋಗಿಗಳು (asthma patients) ಮಹಾ ಪ್ರಸಾದದಂತೆ ಸ್ವೀಕರಿಸುವ ಔಷಧವಿದು. ಈ ಪ್ರಸಾದಕ್ಕಾಗಿ ಉತ್ತರದ ರಾಜ್ಯಗಳ ರೋಗಿಗಳು ಕೂಡ ಹೈದರಾಬಾದ್‌ಗೆ ಬಹಳ ನಂಬಿಕೆಯಿಂದ ಬರುತ್ತಾರೆ. ಈ ಪ್ರಸಾದ ಹೇಗೆ ಕೆಲಸ ಮಾಡುತ್ತದೋ, ಏನೋ ಸಾಬೀತಾಗಿಲ್ಲ. ಆದರೂ ಇದನ್ನು ಆಶ್ರಯಿಸಿ ಬರುವ ಆಸ್ತಮಾ ರೋಗಿಗಳ ಸಂಖ್ಯೆ ಏರುತ್ತಲೇ ಇದೆ. ಇದೇ ವೇಳೆ ಮತ್ತೊಮ್ಮೆ ಇದು ವಿವಾದದ ಗೂಡಂಗಡಿಯಾಗಿದೆ. ಮೀನಿನ ಪ್ರಸಾದಕ್ಕೆ (Fish medicine) ಯಾವುದೇ ಆಧಾರಗಳಿಲ್ಲ ಎನ್ನುವವರು ಕೆಲವರಿದ್ದಾರೆ. ಇದು ಅದ್ಭುತವಾಗಿ ಕೆಲಸ ಮಾಡುತ್ತದೆ (health) ಎಂದು ವಾದಿಸುವವರೂ ಇದ್ದಾರೆ. ಆದರೆ ಯಾವುದೂ ಸಾಬೀತಾಗಿಲ್ಲ. ಹಾಗಾದರೆ ಇದು ಔಷಧಿಯೋ.. ಪ್ರಸಾದವೋ? ಎಂಬ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಈ ವಿಚಾರದಲ್ಲಿ ನ್ಯಾಯಾಲಯದ ತೀರ್ಪನ್ನು ಧಿಕ್ಕರಿಸಲಾಗುತ್ತಿದೆ ಎಂಬ ಟೀಕೆಗಳೂ ಕೇಳಿ ಬರುತ್ತಿವೆ.

ಮೃಗಶಿರ ಮಾಸ ಆರಂಭವಾದರೆ ಸಾಕು ತೆಲುಗು ರಾಜ್ಯಗಳಲ್ಲಿ ಅಸ್ತಮಾ ರೋಗಿಗಳು ಬತ್ತಿನ ಸಹೋದರರನ್ನು (Battina Brothers) ನೆನಪಿಸಿಕೊಳ್ಳುತ್ತಾರೆ. ಮೃಗಶಿರ ಕಾರ್ತಿನಾಡು ನೀಡುವ ಮೀನಿನ ಪ್ರಸಾದವು ಎಲ್ಲಕ್ಕಿಂತ ಹೆಚ್ಚು ಪ್ರಸಿದ್ಧವಾಗಿದೆ. ಸುಮಾರು 175 ವರ್ಷಗಳಿಂದ.. ಈ ಮೀನಿನ ಪ್ರಸಾದವನ್ನು ಉಚಿತವಾಗಿ ಹಂಚುತ್ತಿದ್ದಾರೆ. ಪ್ರತಿ ವರ್ಷ ಲಕ್ಷಾಂತರ ಜನರು ಈ ಪ್ರಸಾದವನ್ನು ಸ್ವೀಕರಿಸಲು ಸರತಿ ಸಾಲಿನಲ್ಲಿ ನಿಲ್ಲುತ್ತಾರೆ. ಅವರಲ್ಲಿ ಅನೇಕರು ತಮ್ಮ ಅಸ್ತಮಾ ನಿಯಂತ್ರಣದಲ್ಲಿದೆ ಎಂದು ಹೇಳುತ್ತಾರೆ. ಆದರೆ ಇದೇ ಮೀನು ಪ್ರಸಾದದ ಬಗ್ಗೆ ಹಲವು ಟೀಕೆಗಳಿವೆ.

ಮೀನು ಪ್ರಸಾದ ವಿತರಣೆ ಬಗ್ಗೆ ಮೊದಲಿನಿಂದಲೂ ಜನ ವಿಜ್ಞಾನ ವೇದಿಕೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದೆ. ಯಾವುದೇ ವೈಜ್ಞಾನಿಕ ದೃಢೀಕರಣವಿಲ್ಲದೆ ಅಕ್ರಮವಾಗಿ ಮೀನು ಪ್ರಸಾದ ವಿತರಿಸಲಾಗುತ್ತಿದೆ ಎಂಬುದು ಅವರ ಆರೋಪ. 2013ರಲ್ಲಿ ಜನ ವಿಜ್ಞಾನ ವೇದಿಕೆ ಹೈಕೋರ್ಟ್‌ ಮೆಟ್ಟಿಲೇರಿತ್ತು. ಈ ಔಷಧಿಯಿಂದ ಯಾವುದೇ ಹಾನಿಗಳಿವೆಯೇ ಎಂಬ ಬಗ್ಗೆ ಹೈಕೋರ್ಟ್‌ ಯಾವುದೇ ತೀರ್ಮಾನಕ್ಕೆ ಬರಲಿಲ್ಲ. ಇದರೊಂದಿಗೆ ಇದನ್ನು ‘ಔಷಧ’ ಎಂದು ಕರೆಯಬಾರದು ಎಂದು ಹೈಕೋರ್ಟ್ ಆದೇಶಿಸಿದೆ. ಆದರೆ ‘ಪ್ರಸಾದ’ ಹೆಸರಿನಲ್ಲಿ ಸಹೋದರರು ಹಂಚುತ್ತಿದ್ದಾರೆ.

ಈ ವರ್ಷವೂ ಮೀನು ಪ್ರಸಾದ ವಿತರಿಸಲು ಬತ್ತಿನ ಸಹೋದರರು ಸಿದ್ಧತೆ ನಡೆಸಿದ್ದಾರೆ. ನಾಂಪಲ್ಲಿಯಲ್ಲಿರುವ ವಸ್ತುಪ್ರದರ್ಶನ ಮೈದಾನದಲ್ಲಿ ನಾಳೆ ಶುಕ್ರವಾರದಿಂದ (ಈ ತಿಂಗಳ 9) ಎರಡು ದಿನಗಳ ಕಾಲ ಮೀನು ಪ್ರಸಾದ ವಿತರಿಸಲಾಗುವುದು. ಯುಪಿ, ಬಿಹಾರ ಮತ್ತು ಇತರ ರಾಜ್ಯಗಳಿಂದ ಅಸ್ತಮಾ ರೋಗಿಗಳು ವಿತರಣೆಗೆ ಮೂರು ದಿನಗಳ ಮೊದಲು ಪ್ರಸಾದಕ್ಕಾಗಿ ಹೈದರಾಬಾದ್‌ಗೆ ಬರುತ್ತಾರೆ.

ಆದರೆ ಮೀನು ಪ್ರಸಾದ ವಿತರಿಸಿದರೆ ನ್ಯಾಯಾಲಯದ ಆಜ್ಞೆ ಉಲ್ಲಂಘಿಸಿದ ಆರೋಪದ ಮೇಲೆ ಜನ ವಿಜ್ಞಾನ ವೇದಿಕೆ ನೇತೃತ್ವದಲ್ಲಿ ಪ್ರಕರಣ ದಾಖಲಿಸಲಾಗುವುದು. ಇದಕ್ಕೆ ಸರಕಾರ ವ್ಯವಸ್ಥೆ ಮಾಡಿರುವುದು ಅನುಚಿತವಾಗಿದೆ. ಮೀನು ಪ್ರಸಾದ ವಿತರಣೆ ನಿಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ. ಮಕ್ಕಳ ಹಕ್ಕುಗಳ ಸಂಘದಂತಹ ಸಂಘಟಕರು ಕೂಡ ಆಕ್ಷೇಪಣೆಗಳನ್ನು ಎತ್ತುತ್ತಲೇ ಇದ್ದಾರೆ. ಕೊರಮೀನು ಮೀನಿನ ಬಾಯಿಗೆ (korameenu fish) ಅರಿಶಿನದ ಪೇಸ್ಟ್ ಹಾಕಿ ಜನರ ಬಾಯಿಗೆ ಹಾಕಿದರೆ ರೋಗ ವಾಸಿಯಾಗುತ್ತದೆ ಎಂದು ನಂಬುವುದಾದರೂ ಹೇಗೆ ಎಂದು ಪ್ರಶ್ನಿಸುತ್ತಾರೆ ಜನ ವಿಜ್ಞಾನ ವೇದಿಕೆಯ ಸದಸ್ಯರು.

ಜೀವಂತ ಮೀನನ್ನು ಬಾಯಿಗೆ ಹಾಕಿಕೊಳ್ಳುವಾಗ ಏನಾದರೂ ತೊಂದರೆ ಎದುರಾದರೆ ಜೀವ ಬೆದರಿಕೆ ಇದೆ ಎಂದು ವೈದ್ಯರು ಹೇಳುತ್ತಿದ್ದು, ಮೀನಿನ ಪ್ರಸಾದ ಸೇವನೆಯಿಂದ ಅಸ್ತಮಾ ವಾಸಿಯಾಗುತ್ತದೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮತ್ತೊಂದೆಡೆ ಮೀನಿನ ಪ್ರಸಾದ ವಿಚಾರವಾಗಿ ನ್ಯಾಯಾಲಯದ ಮೊರೆ ಹೋಗುತ್ತೇವೆ ಎಂಬುದು ವಿಚಾರವಾದಿಗಳ ವಾದವಾಗಿದೆ.

Published On - 3:02 pm, Thu, 8 June 23