Star Fruit Benefits: ಸ್ಟಾರ್ ಫ್ರೂಟ್ ತಿನ್ನುವುದರಿಂದ ಎಷ್ಟೋ ಪ್ರಯೋಜನಗಳಿವೆ, ತಿಳಿದರೆ ಖಂಡಿತಾ ನೀವೂ ತಿನ್ನುತ್ತೀರಿ
ಹಣ್ಣುಗಳಲ್ಲಿ, ಸ್ಟಾರ್ ಫ್ರೂಟ್ ಹಣ್ಣು ವಿಶಿಷ್ಟ ಆಕಾರವನ್ನು ಹೊಂದಿದೆ. ಈ ನಕ್ಷತ್ರಾಕಾರದ ಹಣ್ಣು ರಸಭರಿತವಾಗಿರುವುದು ಮಾತ್ರವಲ್ಲ, ಮಾಗಿದ ಹಣ್ಣುಗಳು ಹಳದಿ ಮತ್ತು ಸಿಹಿಯಾಗಿರುತ್ತವೆ. ಇನ್ನೂ ಬಲಿಯದ ಹಣ್ಣುಗಳು ಹುಳಿಯಾಗಿರುತ್ತವೆ. ಈ ನಕ್ಷತ್ರ ಹಣ್ಣಿನಲ್ಲಿ ವಿಟಮಿನ್ ಎ, ಬಿ ಮತ್ತು ಸಿ ಸಮೃದ್ಧವಾಗಿದೆ. ಇವುಗಳನ್ನು ತಿನ್ನುವುದರಿಂದ ಆಗುವ ಆರೋಗ್ಯ ಪ್ರಯೋಜನಗಳೇನು ಈಗ ತಿಳಿಯೋಣ.
Updated on: Jun 08, 2023 | 4:55 PM

ನಾರಿನಂಶ ಅಧಿಕ: ಈ ಹಣ್ಣಿನಲ್ಲಿ ನಾರಿನಂಶ ಹೆಚ್ಚಿದ್ದು ಕ್ಯಾಲೋರಿ ಕಡಿಮೆಯಿರುತ್ತದೆ. ಇದರಲ್ಲಿರುವ ಫೈಬರ್ ಜೀರ್ಣಾಂಗ ವ್ಯವಸ್ಥೆಗೆ ಒಳ್ಳೆಯದು. ಇದಲ್ಲದೆ, ಈ ಹಣ್ಣು ಕರುಳನ್ನು ಶುದ್ಧೀಕರಿಸುತ್ತದೆ.

ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುತ್ತದೆ: ಸ್ಟಾರ್ ಹಣ್ಣುಗಳು ನಿಮ್ಮ ಕೊಲೆಸ್ಟ್ರಾಲ್ ಅನ್ನು ನಿಯಂತ್ರಣದಲ್ಲಿ ಇಡುತ್ತವೆ. ಇದು ರಕ್ತದಲ್ಲಿ ಸಂಗ್ರಹವಾದ ಕೊಬ್ಬನ್ನು ಸಹ ತೆಗೆದುಹಾಕುತ್ತದೆ.

ದೇಹ ತೂಕ ಕಡಿಮೆ ಮಾಡಿಕೊಳ್ಳಲು ನೆರವು: ಪೋಷಕಾಂಶಗಳ ಪೂರ್ಣವಾಗಿದ್ದು, ಕಡಿಮೆ ಕ್ಯಾಲೋರಿ ಹೊಂದಿರುವ ಈ ಸ್ಟಾರ್ ಹಣ್ಣು ತೂಕ ಇಳಿಕೆಗೆ ಸೂಕ್ತ ಹಣ್ಣು. ಚಯಾಪಚಯವನ್ನು ಹೆಚ್ಚಿಸುತ್ತದೆ. ದೇಹದಲ್ಲಿ ಹೆಚ್ಚಿನ ಕ್ಯಾಲೊರಿಗಳನ್ನು ಕರಗಿಸಲು ಸಹಾಯ ಮಾಡುತ್ತದೆ.

ಹೃದಯಕ್ಕೆ ಒಳ್ಳೆಯದು: ಸೋಡಿಯಂ, ಪೊಟ್ಯಾಸಿಯಂ ಮತ್ತು ಇತರ ಖನಿಜಗಳಲ್ಲಿ ಸಮೃದ್ಧವಾಗಿರುವ ಸ್ಟಾರ್ ಹಣ್ಣುಗಳು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

Star Fruit Health Benefits: ಸ್ಟಾರ್ ಫ್ರೂಟ್ ತಿನ್ನುವುದರಿಂದ ಎಷ್ಟೋ ಪ್ರಯೋಜನಗಳಿವೆ

ಉತ್ತಮ ಇಮ್ಯುನಿಟಿ ಬೂಸ್ಟರ್: ಸ್ಟಾರ್ ಫ್ರೂಟ್ ನಲ್ಲಿ ವಿಟಮಿನ್ ಸಿ ಅಧಿಕವಾಗಿದೆ. ಸ್ಟಾರ್ ಹಣ್ಣಿನಲ್ಲಿ ಮೆಗ್ನೀಸಿಯಂ, ಕಬ್ಬಿಣ, ಸತು, ಮ್ಯಾಂಗನೀಸ್, ಪೊಟ್ಯಾಸಿಯಂ, ರಂಜಕವಿದೆ.

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್ ನ್ಯೂಸ್ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್ ಆಲ್ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು. ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು



