ICMR Dietary Guidelines Part 9: ತೂಕ ಇಳಿಸಿಕೊಳ್ಳಬೇಕಾ? ನಿಮ್ಮ ಆಹಾರ ಕ್ರಮ ಹೇಗಿರಬೇಕು, ಸರ್ಕಾರದ ಆಹಾರ ಮಾರ್ಗಸೂಚಿಯಲ್ಲಿ ಏನಿದೆ?

| Updated By: ಅಕ್ಷಯ್​ ಪಲ್ಲಮಜಲು​​

Updated on: May 20, 2024 | 6:00 PM

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು (ಐಸಿಎಂಆರ್‌) ಭಾರತೀಯರ ಆಹಾರ ಕ್ರಮ ಹೇಗಿರಬೇಕು ಎಂಬುದರ ಬಗ್ಗೆ ಶಿಫಾರಸುಗಳನ್ನು ಪ್ರಕಟಿಸಿದೆ. ಆಹಾರ ಕ್ರಮದಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡರೆ ಅತಿಯಾದ ತೂಕ, ಬೊಜ್ಜು ಹಾಗೂ ಸ್ಥೂಲಕಾಯತೆ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು ಎಂದು ಐಸಿಎಂಆರ್ ತಿಳಿಸಿದೆ.

ICMR Dietary Guidelines Part 9: ತೂಕ ಇಳಿಸಿಕೊಳ್ಳಬೇಕಾ? ನಿಮ್ಮ ಆಹಾರ ಕ್ರಮ ಹೇಗಿರಬೇಕು, ಸರ್ಕಾರದ ಆಹಾರ ಮಾರ್ಗಸೂಚಿಯಲ್ಲಿ ಏನಿದೆ?
Follow us on

ಇತ್ತೀಚೆಗಿನ ದಿನಗಳಲ್ಲಿ ಅಧಿಕ ತೂಕ ಹಾಗೂ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿರುವವರ ಸಂಖ್ಯೆಯು ಅಧಿಕವಾಗಿದೆ. ಹೀಗಾಗಿ ಹೆಚ್ಚಿನವರು ತೂಕದ ನಷ್ಟಕ್ಕೆ ನಾನಾ ರೀತಿಯ ಔಷಧಿಗಳ ಮೊರೆ ಹೋಗುತ್ತಿದ್ದಾರೆ. ಆದರೆ ಸೇವಿಸುವ ಆಹಾರವನ್ನು ಮಿತವಾಗಿದ್ದರೆ ಬೊಜ್ಜು ಹಾಗೂ ತೂಕವನ್ನು ಇಳಿಸಿಕೊಳ್ಳಬಹುದು. ಆದರೆ ದಿನಕ್ಕೆ ಆಹಾರಗಳು ದಿನಕ್ಕೆ 1000 kcal ಗಿಂತ ಕಡಿಮೆ ಇರಬಾರದು ಹಾಗೂ ಸೇವಿಸುವ ಆಹಾರದಲ್ಲಿ ಎಲ್ಲಾ ಪೋಷಕಾಂಶಗಳಿರಬೇಕೆಂದು ಹೇಳಿದೆ.

ಕಿಬ್ಬೊಟ್ಟೆಯ ಬೊಜ್ಜು, ಅಧಿಕ ತೂಕ ಮತ್ತು ಸ್ಥೂಲಕಾಯತೆಯನ್ನು ತಡೆಗಟ್ಟಲು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು. ವಾರಕ್ಕೆ ಅರ್ಧ ಕಿಲೋಗ್ರಾಂ ತೂಕದ ಕಡಿತವನ್ನು ಸುರಕ್ಷಿತವೆಂದು ಪರಿಗಣಿಸಲಾಗುತ್ತದೆ. ತ್ವರಿತ ತೂಕ ನಷ್ಟದ ವಿಧಾನಗಳು ಮತ್ತು ಸ್ಥೂಲಕಾಯ ವಿರೋಧಿ ಔಷಧಗಳ ಬಳಕೆಯನ್ನು ತಪ್ಪಿಸಬೇಕು ಎನ್ನಲಾಗಿದೆ.

ಇದನ್ನೂ ಓದಿ: ಪ್ರೊಟೀನ್ ಸಪ್ಲಿಮೆಂಟ್ಸ್ ಸೇವನೆ ಆರೋಗ್ಯಕ್ಕೆ ಹಾನಿಕಾರಕ, ಎಚ್ಚರಿಕೆ ನೀಡಿದ ಕೇಂದ್ರ

ಆರೋಗ್ಯಕರ ತೂಕಕ್ಕೆ ಯಾವೆಲ್ಲಾ ಆಹಾರಗಳು ಸೂಕ್ತ?

ಆರೋಗ್ಯಕರ ತೂಕ ಮತ್ತು ಸೊಂಟದ ಸುತ್ತಳತೆಯನ್ನು ಕಾಪಾಡಿಕೊಳ್ಳಲು ತಾಜಾ ತರಕಾರಿಗಳು, ಧಾನ್ಯಗಳು, ಕಾಳುಗಳು ಮತ್ತು ಬೀನ್ಸ್ ಗಳು ಆಹಾರದಲ್ಲಿ ಸೇರಿಸಿಕೊಳ್ಳಿ. ಚರ್ಮರಹಿತ ಕೋಳಿ, ಮಾಂಸ ಮತ್ತು ಸ್ವಲ್ಪ ಪ್ರಮಾಣ ಮೀನು ಸೇವನೆಯು ದೇಹಕ್ಕೆ ಕಡಿಮೆ ಕ್ಯಾಲೋರಿಗಳನ್ನು ಒದಗಿಸುತ್ತದೆ. ನೀರು, ಗಿಡಮೂಲಿಕೆ ಚಹಾ ಅಥವಾ ಸಿಹಿಗೊಳಿಸದ ಪಾನೀಯಗಳು ಆರೋಗ್ಯಕ್ಕೆ ಉತ್ತಮವಾಗಿದೆ. ನಿಯಮಿತ ದೈಹಿಕ ಚಟುವಟಿಕೆ ಮತ್ತು ಯೋಗವು ತೂಕವನ್ನು ಕಳೆದುಕೊಳ್ಳಲು ಮತ್ತು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಉತ್ತಮ ಮಾರ್ಗವಾಗಿದೆ. ಆದರೆ ಸಕ್ಕರೆ, ಸಂಸ್ಕರಿಸಿದ ಉತ್ಪನ್ನಗಳು ಸೋಡಾ ಮತ್ತು ಹಣ್ಣಿನ ರಸಗಳಂತಹ ಸಕ್ಕರೆ ಪಾನೀಯಗಳನ್ನು ಸೇವನೆಯನ್ನು ಕಡಿಮೆ ಮಾಡಿ ಎಂದು ತಿಳಿಸಿದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ