ದೇಹದ ನೋವು ಸಾಮಾನ್ಯ ಸಮಸ್ಯೆಯಾಗಿದೆ. ನಾವು ಹಲವು ಬಾರಿ ದೀರ್ಘಕಾಲ ಕುಳಿತಲ್ಲೇ, ಕುಳಿತುಕೊಂಡು ಕೆಲಸ ಮಾಡುವುದರಿಂದ ಬೆನ್ನು ನೋವು ಉದ್ಭವಿಸಬಹುದು. ದೀರ್ಘಕಾಲ ನಿಂತು ಕೆಲಸ ಮಾಡುವುದರಿಂದ ಕಾಲು ನೋವಿಗೆ ಉದ್ಭವಿಸಬಹುದು. ಇದಲ್ಲದೆ, ಕೀಲು ನೋವು, ಹೊಟ್ಟೆ ನೋವು, ಮೂಳೆ ನೋವು ಮತ್ತು ಸ್ನಾಯು ನೋವು ಕೂಡ ಇರುತ್ತದೆ. ಇದರಿಂದ ನಡೆಯಲು ಅಥವಾ ಕುಳಿತುಕೊಳ್ಳಲು ಕಷ್ಟವಾಗುತ್ತದೆ. ಕೆಲವೊಮ್ಮೆ ನೋವು ತುಂಬಾ ತೀವ್ರವಾಗಿ, ಕೆಲಸ ಮಾಡಲು ಸಹ ಕಷ್ಟವಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ದೇಹದ ನೋವಿನ ಕಾರಣಗಳನ್ನು ಗುರುತಿಸುವುದು ಮತ್ತು ಸರಿಯಾದ ಸಮಯದಲ್ಲಿ ಚಿಕಿತ್ಸೆ ಪಡೆಯುವುದು ಅವಶ್ಯಕ. ಹಾಗಾದರೆ ನೋವನ್ನು ಹೋಗಲಾಡಿಸಲು ಯಾವ ಮನೆಮದ್ದುಗಳನ್ನು ಅನುಸರಿಸಬೇಕು ಎಂಬುದನ್ನು ಈಗ ತಿಳಿಯೋಣ
ದೇಹದ ನೋವಿನಿಂದಾಗುವ ತೊಂದರೆಗಳು
1. ಸಂಧಿವಾತ
2. ಸ್ನಾಯು ದೌರ್ಬಲ್ಯ
3. ದೀರ್ಘಕಾಲದ ಆಯಾಸ
4. ಒತ್ತಡ, ಆತಂಕ, ಖಿನ್ನತೆ
5. ನಿದ್ರಾಹೀನತೆಯ ಸಮಸ್ಯೆ
6. ಆಲಸ್ಯ
7. ವಿಟಮಿನ್ ಡಿ ಕೊರತೆ
8. ನಿರ್ಜಲೀಕರಣ
ದೈಹಿಕ ನೋವನ್ನು ನಿವಾರಿಸಲು ಮನೆಮದ್ದುಗಳು
1. ಆರೋಗ್ಯಕರ ಆಹಾರ
ದೈಹಿಕ ನೋವನ್ನು ನಿವಾರಿಸಲು ನಿಮ್ಮ ಆಹಾರಕ್ರಮದ ಬಗ್ಗೆ ಗಮನ ಕೊಡಿ. ನೀವು ಸೇವಿಸುವ ಆಹಾರದಲ್ಲಿ ಎಲ್ಲಾ ರೀತಿಯ ಖನಿಜಗಳು, ವಿಟಮಿನ್ಗಳು, ಕ್ಯಾಲ್ಸಿಯಂ, ಕಬ್ಬಿಣ ಮತ್ತು ಪ್ರೋಟೀನ್ಗಳನ್ನು ಒಳಗೊಂಡಿರಬೇಕು. ಇದಕ್ಕಾಗಿ, ನೀವು ಬೀಟ್ರೂಟ್, ಬ್ರೊಕೊಲಿ, ಪಾಲಕ, ಪನೀರ್, ಗ್ರೀನ್ಸ್ ಮತ್ತು ಹಣ್ಣುಗಳನ್ನು ತಿನ್ನಬೇಕು . ಇದರೊಂದಿಗೆ ನಿತ್ಯವೂ ಹಾಲು ಕುಡಿಯುವುದು ಒಳ್ಳೆಯದು.
3. ಹೆಚ್ಚು ನೀರು ಕುಡಿಯಿರಿ
ನೀರಿನ ಕೊರತೆಯಿಂದ ಮೂಳೆ ನೋವು ಉಂಟಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ದೇಹವನ್ನು ಹೈಡ್ರೇಟ್ ಮಾಡಲು ಸಾಕಷ್ಟು ನೀರು ಕುಡಿಯಿರಿ. ಇದರೊಂದಿಗೆ ನೀವು ಜ್ಯೂಸ್ನ್ನು ಸಹ ಸೇವಿಸಬಹುದು. ತೆಂಗಿನ ನೀರು ಕುಡಿಯುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ವಾಸ್ತವವಾಗಿ, ತೆಂಗಿನ ನೀರು ಅಥವಾ ಗಂಜಿಯನ್ನು ಸೇವಿಸುವುದರಿಂದ, ದೇಹದಲ್ಲಿರುವ ವಿಷಕಾರಿ ಅಂಶ ಹೊರಹೋಗುತ್ತದೆ. ಇದರಿಂದ ದೇಹ ಕ್ರಿಯಾಶೀಲವಾಗುತ್ತದೆ. ನೀರು ಹೆಚ್ಚಿಗೆ ಕುಡಿಯುವುದರಿಂದ ನೋವಿನ ಸಮಸ್ಯೆ ಕೂಡ ದೂರವಾಗುತ್ತದೆ.
4. ಮನೆಯಲ್ಲಿನ ಮಸಾಲೆ ಪದಾರ್ಥಗಳು
ನೋವನ್ನು ನಿವಾರಣಗೆ ಮಸಾಲೆ ಪದರ್ಥಗಳು ಕೂಡ ಸಹಾಯಕಾರಿ. ನಿಮಗೆ ಸ್ನಾಯು, ಕೀಲು, ತಲೆನೋವು, ಹೊಟ್ಟೆನೋವು ಇದ್ದರೆ ಮಸಾಲೆಗಳಾದ ಶುಂಠಿ, ಬೆಳ್ಳುಳ್ಳಿ, ಅರಿಶಿನ, ದಾಲ್ಚಿನ್ನಿ ಇತ್ಯಾದಿಗಳನ್ನು ಬಳಸಬಹುದು. ಇವು ದೈಹಿಕ ನೋವನ್ನು ಕಡಿಮೆ ಮಾಡಲು ಅವು ಪರಿಣಾಮಕಾರಿ.
ಮತ್ತಷ್ಟು ಆರೋಗ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ