ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಇತ್ತೀಚಿನ ದಿನಗಳಲ್ಲಿ ಮದ್ಯ ವ್ಯಸನಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಇದರ ಸೇವನೆ ಆರೋಗ್ಯಕ್ಕೆ ಅಪಾಯಕಾರಿ ಎಂದು ತಿಳಿದಿದ್ದರೂ, ಆ ಅಭ್ಯಾಸವನ್ನು ಬಿಡಲು ಸಾಧ್ಯವಾಗುವುದಿಲ್ಲ. ಇಂತಹವರಲ್ಲಿ ಅನೇಕರು ಆಲ್ಕೋಹಾಲ್ ಜೊತೆಗೆ ನೀರು, ತಂಪು ಪಾನೀಯಗಳು ಅಥವಾ ಸೋಡಾ ಬೆರೆಸಿಕೊಂಡು ಕುಡಿಯುತ್ತಾರೆ. ಈ ರೀತಿ ಮಾಡುವುದು ಆರೋಗ್ಯಕ್ಕೆ ತುಂಬಾ ಅಪಾಯಕಾರಿ. ಇದರಿಂದಾಗಿ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳು ಉದ್ಭವಿಸುತ್ತವೆ ಎಂದು ತಜ್ಞರು ಹೇಳುತ್ತಾರೆ. ಹಾಗಾದರೆ ಈ ರೀತಿ ಮಾಡುವುದರಿಂದ ಯಾವ ರೀತಿಯ ಸಮಸ್ಯೆಗಳು ಉಂಟಾಗುತ್ತವೆ? ಇಲ್ಲಿದೆ ಸಂಪೂರ್ಣ ಮಾಹಿತಿ.
ತಂಪು ಪಾನೀಯವು ಪರಿಮಳಯುಕ್ತವಾಗಿದ್ದು ಇದರಲ್ಲಿ ಬಳಸುವ ರುಚಿಗಳು ನೈಸರ್ಗಿಕ ಅಥವಾ ಕೃತಕವಾಗಿರುತ್ತವೆ, ಸಾಮಾನ್ಯವಾಗಿ ಹೆಚ್ಚುವರಿ ಸಿಹಿಕಾರಕವನ್ನು ಒಳಗೊಂಡಿರುತ್ತವೆ. ವಾಸ್ತವದಲ್ಲಿ, ಸೋಡಾ ಮತ್ತು ತಂಪು ಪಾನೀಯಗಳು ಸಾಕಷ್ಟು ಕ್ಯಾಲೊರಿಗಳನ್ನು ಹೊಂದಿರುತ್ತವೆ. ಆಲ್ಕೋಹಾಲ್ ನೊಂದಿಗೆ ಸೋಡಾ ಅಥವಾ ತಂಪು ಪಾನೀಯಗಳನ್ನು ಕುಡಿಯುವುದರಿಂದ, ದೇಹಕ್ಕೆ ಹೆಚ್ಚುವರಿ ಕ್ಯಾಲೊರಿ ಸೇರಿಕೊಳ್ಳುತ್ತದೆ. ಇದರ ಪರಿಣಾಮವಾಗಿ ತೂಕ ಹೆಚ್ಚಾಗುತ್ತದೆ. ಅಧಿಕ ತೂಕವು ಹೃದ್ರೋಗದಂತಹ ಅನೇಕ ಕಾಯಿಲೆಗಳ ಅಪಾಯವನ್ನು ಕೂಡ ಹೆಚ್ಚಿಸುತ್ತದೆ.
ಸೋಡಾದಲ್ಲಿರುವ ಸೋಡಿಯಂ ಕಾರ್ಬೋನೇಟ್ ಮತ್ತು ಆಮ್ಲಗಳು ಜೀರ್ಣಾಂಗ ವ್ಯವಸ್ಥೆಯನ್ನು ಹಾನಿಗೊಳಿಸುತ್ತವೆ. ಇದು ಅಜೀರ್ಣ ಮತ್ತು ಆಮ್ಲೀಯತೆ ಗೆ ಕಾರಣವಾಗಬಹುದು. ಕೆಲವು ಸೋಡಾಗಳು ಕೆಫೀನ್ ಅನ್ನು ಹೊಂದಿರುತ್ತವೆ. ಇದು ದೇಹವನ್ನು ಸಕ್ರಿಯವಾಗಿರಿಸುತ್ತದೆ. ಆದರೆ ಎರಡನ್ನೂ ಒಟ್ಟಿಗೆ ಕುಡಿದರೆ, ದೀರ್ಘಕಾಲ ಎಚ್ಚರವಾಗಿರುತ್ತೀರಿ. ಇದು ತುಂಬಾ ಅಪಾಯಕಾರಿ. ಏಕಂದರೆ ಇದರಿಂದ ದೇಹದಲ್ಲಿ ನಿರ್ಜಲೀಕರಣ ಉಂಟಾಗುತ್ತದೆ ನಂತರ ತಲೆನೋವು, ವಾಂತಿಯಂತಹ ಸಮಸ್ಯೆಗಳು ಬರುತ್ತದೆ.
ಇದನ್ನೂ ಓದಿ: ಒಗ್ಗರಣೆಗೆ ಬಳಸೋ ಸಾಸಿವೆಯಲ್ಲಿದೆ ಅನೇಕ ಆರೋಗ್ಯ ಪ್ರಯೋಜನಗಳು
ಸೋಡಾದಲ್ಲಿ ಫಾಸ್ಪರಿಕ್ ಆಮ್ಲವಿದೆ. ಇದು ಮೂಳೆಗಳನ್ನು ದುರ್ಬಲಗೊಳಿಸುತ್ತದೆ, ಮೂತ್ರಪಿಂಡಗಳನ್ನು ಹಾನಿಗೊಳಿಸುತ್ತದೆ ಮತ್ತು ಹಲ್ಲುಗಳಿಗೂ ಒಳ್ಳೆಯದಲ್ಲ. ಸೋಡಾ ಮತ್ತು ತಂಪು ಪಾನೀಯಗಳು ಹೈ ಫ್ರಕ್ಟೋಸ್ ಕಾರ್ನ್ ಸಿರಪ್ ಎಂಬ ಸಕ್ಕರೆಯನ್ನು ಹೊಂದಿರುತ್ತವೆ. ಇದು ದೇಹಕ್ಕೆ ತುಂಬಾ ಹಾನಿಕಾರಕವಾಗಿದ್ದು ತೂಕ ಹೆಚ್ಚಳ ಮತ್ತು ಮಧುಮೇಹದಂತಹ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಸೋಡಾದೊಂದಿಗೆ ಮದ್ಯಪಾನ ಮಾಡುವುದರಿಂದ ಈ ಸಮಸ್ಯೆಗಳು ಇನ್ನಷ್ಟು ಹದಗೆಡುತ್ತವೆ.
ಇದೆಲ್ಲದರ ಹೊರತಾಗಿ ಆಲ್ಕೋಹಾಲ್ ಗೆ ಸೋಡಾವನ್ನು ಸೇರಿಸುವುದರಿಂದ ದೇಹದಲ್ಲಿ ಕೆಲವು ಬದಲಾವಣೆಗಳು ಉಂಟಾಗುತ್ತವೆ ಜೊತೆಗೆ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತವೆ. ಸೋಡಾ ಕಾರ್ಬೊನೇಟೆಡ್ ಅಂಶವಿರುವ ಪಾನೀಯವಾಗಿದ್ದು ಸಾಕಷ್ಟು ನೊರೆಯನ್ನು ಹೊಂದಿರುತ್ತದೆ. ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಆದರೆ ಸೋಡಾ ಅಥವಾ ಪಾನೀಯಗಳ ಬದಲು, ಸ್ವಲ್ಪ ನೀರು ಅಥವಾ ಕಡಿಮೆ ಕ್ಯಾಲೊರಿ ಇರುವ ಸೋಡಾವನ್ನು ಬಳಸಬಹುದು.
ಸೂಚನೆ: ಆಲ್ಕೋಹಾಲ್ ಆರೋಗ್ಯಕ್ಕೆ ಅಪಾಯಕಾರಿ. ಈ ಅಭ್ಯಾಸ ಎಂದಿಗೂ ಒಳ್ಳೆಯದಲ್ಲ.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ