ಸಕ್ಕರೆ ಕಾಯಿಲೆ ಇರುವವರಿಗೆ ಸಿಹಿ ಸುದ್ದಿ! ಗ್ಲೂಕೋಸ್ ಮಟ್ಟವನ್ನು ಪರಿಶೀಲಿಸಲು ಕಡಿಮೆ ಬೆಲೆಗೆ ಹೊಸ ಸಾಧನ

ಐಐಟಿ ಮದ್ರಾಸ್ ವಿಜ್ಞಾನಿಗಳ ಸಂಶೋಧನೆ: ಮಧುಮೇಹ ರೋಗಿಗಳಿಗಾಗಿ ಐಐಟಿ ಮದ್ರಾಸ್ ಒಂದು ಸಾಧನವನ್ನು ಅಭಿವೃದ್ಧಿಪಡಿಸಿದೆ. ರಕ್ತದ ಅಗತ್ಯವಿಲ್ಲದೆಯೇ ಸಕ್ಕರೆ ಮಟ್ಟವನ್ನು ಪರಿಶೀಲಿಸಬಹುದಾದ ಹೊಸ ಸಾಧನವನ್ನು ಕಂಡು ಹಿಡಿದಿದ್ದಾರೆ. ಬೆರಳನ್ನು ಚುಚ್ಚದೆಯೇ ನಿಮ್ಮ ಗ್ಲೂಕೋಸ್ ಮಟ್ಟವನ್ನು ಪರಿಶೀಲಿಸಬಹುದು. ಸ್ಮಾರ್ಟ್ ವಾಚ್ ತರಹ ಇರುವ ಈ ಸಾಧನ ಸಕ್ಕರೆ ಕಾಯಿಲೆ ಇರುವವರಿಗೆ ವರದಾನವಾಗಿದೆ. ಹೌದು, ಮಧುಮೇಹಿಗಳಿಗೆ ಇದೊಂದು ಸಿಹಿ ಸುದ್ದಿ. ಈ ಬಗೆಗೆ ಮತ್ತಷ್ಟು ತಿಳಿಯಲು ಸ್ಟೋರಿ ಓದಿ.

ಸಕ್ಕರೆ ಕಾಯಿಲೆ ಇರುವವರಿಗೆ ಸಿಹಿ ಸುದ್ದಿ! ಗ್ಲೂಕೋಸ್ ಮಟ್ಟವನ್ನು ಪರಿಶೀಲಿಸಲು ಕಡಿಮೆ ಬೆಲೆಗೆ ಹೊಸ ಸಾಧನ
ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನುಪರಿಶೀಲಿಸುವ ಸಾಧನ

Updated on: Nov 20, 2025 | 6:28 PM

ಇತ್ತೀಚಿನ ದಿನಗಳಲ್ಲಿ ಮಧುಮೇಹಿಗಳ (Diabetes) ಸಂಖ್ಯೆಯಲ್ಲಿ ಏರಿಕೆ ಕಂಡುಬರುತ್ತಿದೆ. ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಇದರಿಂದ ಬಳಲುತ್ತಿರುವವರು ಹೆಚ್ಚಾಗುತ್ತಿದ್ದಾರೆ. ಯುವ ಜನತೆಯಿಂದ ಹಿಡಿದು ವೃದ್ಧರ ವರೆಗೆ ಪ್ರಪಂಚದಾದ್ಯಂತ ಲಕ್ಷಾಂತರ ಜನರು ಮಧುಮೇಹದಿಂದ ಬಳಲುತ್ತಿರುವುನ್ನು ಕಾಣಬಹುದಾಗಿದೆ. ನಿಮಗೆ ತಿಳಿದಿರುವಂತೆ ಇದೊಂದು ದೀರ್ಘಕಾಲದ ಕಾಯಿಲೆಯಾಗಿದ್ದು ಒಮ್ಮೆ ಬಂದರೆ, ಅದನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಬಹಳ ಶ್ರಮ ಪಡಬೇಕಾಗುತ್ತದೆ. ಮಾತ್ರವಲ್ಲ ಇದರ ಹಿಂದಿಯೇ ನಾನಾ ರೀತಿಯ ಆರೋಗ್ಯ ಸಮಸ್ಯೆಗಳು ಕೂಡ ಬರುತ್ತದೆ. ಹಾಗಾಗಿ ರೋಗಿಗಳು ಇನ್ಸುಲಿನ್ ಚುಚ್ಚುಮದ್ದು ಅಥವಾ ಮಾತ್ರೆಗಳನ್ನು ಅವಲಂಬಿಸಬೇಕಾಗುತ್ತದೆ. ಒಂದು ದಿನ ತಪ್ಪಿಸಿದರೂ ಕೂಡ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗಬಹುದು, ಆಗ ಮಧುಮೇಹ ರೋಗಿಗಳಿಗೆ ತೊಂದರೆಯಾಗಬಹುದು. ಈ ಕಾರಣದಿಂದಲೇ ಸಕ್ಕರೆ ಕಾಯಿಲೆ ಇರುವವರಿಗಾಗಿ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಪರೀಕ್ಷಿಸಲು ಮಾರುಕಟ್ಟೆಯಲ್ಲಿ ವಿವಿಧ ಸಾಧನಗಳು ಲಭ್ಯವಿವೆ. ಆಸ್ಪತ್ರೆಗೆ ಹೋಗುವ ಬದಲು ಮನೆಯಲ್ಲಿಯೇ ಗ್ಲುಕೋಮೀಟರ್ ಬಳಸಬಹುದು ಅಥವಾ ತೆಳುವಾದ ಸೂಜಿಯಿಂದ ಬೆರಳ ತುದಿಯನ್ನು ಚುಚ್ಚಿ ಗ್ಲುಕೋಮೀಟರ್ ಪರೀಕ್ಷಾ ಪಟ್ಟಿಯ ಮೇಲೆ ಒಂದು ಹನಿ ರಕ್ತವನ್ನು ಹಾಕುವ ಮೂಲಕ, ರಕ್ತದಲ್ಲಿನ ಗ್ಲೂಕೋಸ್‌ನ ಪ್ರಮಾಣವನ್ನು ಪರೀಕ್ಷಿಸಿಕೊಳ್ಳಬಹುದಾಗಿತ್ತು. ಆದರೆ ಈಗ ಅದಕ್ಕಿಂತ ಸರಳ ವಿಧಾನದಲ್ಲಿ ಗ್ಲೂಕೋಸ್ ಮಟ್ಟವನ್ನು ಪರೀಕ್ಷಿಸಬಹುದು (Glucose Monitor) ಎಂದರೆ ನೀವು ನಂಬುತ್ತೀರಾ!… ಹೌದು ಮಧುಮೇಹಿಗಳಿಗೆ ಇದೊಂದು ಸಿಹಿ ಸುದ್ದಿ. ಈ ಬಗೆಗೆ ಮತ್ತಷ್ಟು ತಿಳಿಯಲು ಸ್ಟೋರಿ ಓದಿ.

ಸಕ್ಕರೆ ಕಾಯಿಲೆ ಇರುವವರಿಗೆ ಇದು ವರದಾನ!

ಸಾಮಾನ್ಯವಾಗಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಮನೆಯಲ್ಲಿಯೇ ಪರಿಶೀಲಿಸಬಹುದು. ಆದರೆ ಇನ್ನು ಮುಂದೆ ಮಧುಮೇಹಿಗಳು ಈ ಹಿಂದೆ ಬಳಕೆ ಮಾಡುತ್ತಿದ್ದ ವಿಧಾನಕ್ಕಿಂತಲೂ ಸುಲಭವಾಗಿ ರಕ್ತದಲ್ಲಿನ ಗ್ಲೂಕೋಸ್‌ನ ಪ್ರಮಾಣವನ್ನು ಪರೀಕ್ಷಿಸಬಹುದು. ಬೆರಳನ್ನು ಚುಚ್ಚದೆಯೇ ನಿಮ್ಮ ಗ್ಲೂಕೋಸ್ ಮಟ್ಟವನ್ನು ಪರಿಶೀಲಿಸಬಹುದು. ಹೌದು, ಸಕ್ಕರೆ ಕಾಯಿಲೆ ಇರುವವರಿಗಾಗಿಯೇ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮದ್ರಾಸ್‌ನ ವಿಜ್ಞಾನಿಗಳು ಒಂದು ನವೀನ ಸಾಧನವನ್ನು ಅಭಿವೃದ್ಧಿಪಡಿಸಿದ್ದಾರೆ. ಸ್ಮಾರ್ಟ್‌ವಾಚ್‌ನಂತೆ ಕಾಣುವ ರಕ್ತದ ಗ್ಲೂಕೋಸ್ ಮಾನಿಟರಿಂಗ್ ಮಾಡುವ ಸಾಧನವೊಂದನ್ನು ಕಂಡುಹಿಡಿದಿದ್ದಾರೆ. ಕೇವಲ ಮಣಿಕಟ್ಟಿನ ಮೇಲೆ ವಾಚ್ ನಂತೆಯೇ ಧರಿಸಿದರೆ ಸಾಕು, ನಿಮ್ಮ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ತಿಳಿಯಬಹುದಾಗಿದೆ. ವಿಜ್ಞಾನಿಗಳು ಈ ಸಾಧನಕ್ಕೆ ಪೇಟೆಂಟ್ ಕೂಡ ಪಡೆದಿದ್ದು, ಕಡಿಮೆ ಬೆಲೆಯ ಡಿಸ್ಪ್ಲೇ ಮತ್ತು ಮೈಕ್ರೋನೀಡಲ್ ಸೆನ್ಸರ್ ಪ್ಯಾಚ್‌ನೊಂದಿಗೆ ಇದನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಸಾಧನ ಸಕ್ಕರೆ ಕಾಯಿಲೆ ಇರುವವರಿಗೆ ಒಂದು ವರದಾನವೆಂದರೆ ತಪ್ಪಾಗಲಾರದು.

ಇದನ್ನೂ ಓದಿ: ಮಧುಮೇಹ ಬರುವ ಮುನ್ನ ದೇಹದಲ್ಲಿ ಕಾಣಿಸಿಕೊಳ್ಳುವ 5 ಲಕ್ಷಣಗಳನ್ನು ಎಂದಿಗೂ ನಿರ್ಲಕ್ಷಿಸಬೇಡಿ

ಈ ಸಾಧನದ ಕುರಿತು ವಿಜ್ಞಾನಿ ಎಲ್. ಬಾಲಮುರುಗನ್ ಮಾತನಾಡಿದ್ದು, ‘ಇದು ಮಧುಮೇಹ ರೋಗಿಗಳಿಗೆ ತುಂಬಾ ಉಪಯುಕ್ತವಾಗಿರುತ್ತದೆ. ಅವರು ಯಾವುದೇ ರೀತಿಯ ನೋವಿಲ್ಲದೆ ಆಗಾಗ ರಕ್ತದಲ್ಲಿನ ಗ್ಲೂಕೋಸ್‌ನ ಪ್ರಮಾಣವನ್ನು ಪರೀಕ್ಷಿಸಿಕೊಳ್ಳಬಹು. ಈ ಕಡಿಮೆ ಬೆಲೆಯ ಸಾಧನವನ್ನು ಬಳಸುವ ಮೂಲಕ, ಕೇಂದ್ರ ಸರ್ಕಾರವು ಆಮದು ಮಾಡಿಕೊಂಡ ಸಾಧನಗಳ ಬಳಕೆಯನ್ನು ಕೂಡ ನಿಯಂತ್ರಿಸಬಹುದು. ಈ ಸಾಧನವನ್ನು ಸ್ಥಳೀಯವಾಗಿ ತಯಾರಿಸುವುದರಿಂದ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ. ಶೀಘ್ರದಲ್ಲೇ ರೋಗಿಗಳ ಮೇಲೆ ಕ್ಲಿನಿಕಲ್ ಪ್ರಯೋಗಗಳನ್ನು ನಡೆಸಲು ನಾವು ಸಿದ್ಧತೆ ನಡೆಸುತ್ತಿದ್ದೇವೆ’ ಎಂದು ಹೇಳಿದ್ದಾರೆ.

Source: tv9english.com

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ