ಬದಲಾಗುತ್ತಿರುವ ಹವಾಮಾನಕ್ಕೆ ಆರೋಗ್ಯದ ಕುರಿತಾಗಿ ವಿಶೇಷ ಕಾಳಜಿ ಇರುವ ಅಗತ್ಯವಿದೆ. ಕೆಮ್ಮು, ಜ್ವರದಂತಹ ಆರೋಗ್ಯ ಸಮಸ್ಯೆಗಳು ಚಳಿಗಾಲದ ಸಮಯದಲ್ಲಿ ಮಾಮೂಲಿ. ಹಾಗಿರುವಾಗ ಕೆಲವೊಂದಿಷ್ಟು ಟಿಪ್ಸ್ಗಳು ನಿಮಗಾಗಿ ಈ ಕೆಳಗಿನಂತಿದೆ. ನಿಮ್ಮಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಇಲ್ಲಿದೆ ಕೆಲವು ಸಲಹೆಗಳು. ರೋಗನಿರೋಧಕ ಶಕ್ತಿಯನ್ನು ಹೊಂದಿರುವ ಆಹಾರ ಪದಾರ್ಥಗಳನ್ನು ಸೇವಿಸುವುದು ಒಳ್ಳೆಯದು. ಈ ಕೆಲವು ಪದಾರ್ಥಗಳು ನಿಮ್ಮಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ.
ನಿಮಗೆ ಸಾಮಾನ್ಯ ಶೀತ, ಜ್ವರದಂತಹ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವುದನ್ನು ತಪ್ಪಿಸಲು ನೀವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು. ಈ ಕೆಲವು ಆಹಾರ ಪದಾರ್ಥಗಳು ನಿಮ್ಮಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ. ಇವುಗಳಿಂದ ಆರೋಗ್ಯ ಸುಧಾರಿಸುತ್ತದೆ.
ರೋಗನಿರೋಧಕ ಶಕ್ತಿ ಹೆಚ್ಚಿಸುವ ಅರಿಶಿಣ
ಅರಿಶಿಣದಲ್ಲಿ ಕರ್ಕ್ಯುಮಿನ್ ಎಂಬ ಅಂಶವಿದೆ. ಇದು ಉರಿಯೂತದ ಮತ್ತು ಆಂಟಿವೈರಲ್ ಗುಣಲಕ್ಷಣಗಳನ್ನು ಹೊಂದಿದೆ. ಇದು ನಿಮ್ಮ ಆರೋಗ್ಯ ಸುಧಾರಣೆಗೆ ಸಹಾಯಕ. ವಿಶೇಷವಾಗಿ ಚಳಿಗಾಲದ ಸಮಯದಲ್ಲಿ ಹಾಲಿಗೆ ಚಿಟಿಕೆ ಅರಿಶಿಣ ಬೆರೆಸಿ ಕುಡಿಯುವ ಮೂಲಕ ಕೀಲು ನೋವು ಮತ್ತು ಸ್ನಾಯು ನೋವಿನ ಉರಿಯೂತವನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಇದು ನಿಮ್ಮಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಪಾಲಾಕ್
ಉತ್ಕರ್ಷಣ ನಿರೋಧಕಗಳು, ಫೈಬರ್, ಜೀವಸತ್ವಗಳು ಮತ್ತು ಕಬ್ಬಿಣದ ಪೋಷಕಾಂಶಗಳು ಪಾಲಾಕ್ನಲ್ಲಿ ಸಮೃದ್ಧವಾಗಿರುತ್ತದೆ. ಪಾಲಾಕ್ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದರ ಜೊತೆಗೆ ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ.
ಆಮ್ಲಾ ರಸ
ಮನೆಯಲ್ಲಿ ಆಮ್ಲಾ ರಸ ತಯಾರಿಸಿ ಸೇವಿಸಿ. ಕೇವಲ 4 ರಿಂದ 5 ಆಮ್ಲಾವನ್ನು ತೆಗೆದುಕೊಳ್ಳಿ. ಅವುಗಳನ್ನು ಸಣ್ಣ ತುಂಡುಗಳಾನ್ನಾಗಿ ಕತ್ತರಿಸಿ. ಇದಕ್ಕೆ ಒಂದು ಲೋಟ ನೀರು ಸೇವಿಸಿ. ಇದಕ್ಕೆ ಒಂದು ಚಿಟಿಕೆ ಕರಿಮೆಣಸಿನ ಪುಡಿ, 1 ಚಿಟಿಕೆ ಕಲ್ಲು ಉಪ್ಪು, ಒಂದು ಚಮಚ ನಿಂಬೆ ರಸವನ್ನು ಸೇರಿಸಿ ಮಿಶ್ರಣ ಮಾಡಿ. ಇದನ್ನು ಸ್ವಲ್ಪ ಸಿಹಿಯಾಗಿಸಲು ನೀವು ಜೇನುತುಪ್ಪವನ್ನು ಸಹ ಮಿಶ್ರಣ ಮಾಡಬಹುದು. ಈ ಮಿಶ್ರಣವನ್ನು ಬೆಳಿಗ್ಗೆ ಕುಡಿಯುವ ಅಭ್ಯಾಸ ಮಾಡಿಕೊಳ್ಳಿ. ಇದರಿಂದ ನಿಮ್ಮಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ.
ಇದನ್ನೂ ಓದಿ:
Health Tips: ಬಿಸಿ ನೀರು ಕುಡಿಯುವಾಗ ಈ 3 ಪದಾರ್ಥಗಳನ್ನು ಸೇರಿಸಿ; ಆರೋಗ್ಯಕರ ಬದಲಾವಣೆಯ ಬಗ್ಗೆ ತಿಳಿಯಿರಿ