Dengue Vaccine: ಭಾರತದ ಮೊದಲ ಡೆಂಗ್ಯೂ ಲಸಿಕೆ: ಮೊದಲ ಹಂತದ ಕ್ಲಿನಿಕಲ್ ಪ್ರಯೋಗಕ್ಕೆ ಅನುಮೋದನೆ

| Updated By: ನಯನಾ ರಾಜೀವ್

Updated on: Sep 15, 2022 | 11:20 AM

ದೇಶದ ಪ್ರಮುಖ ಲಸಿಕೆ ತಯಾರಕ ಸಂಸ್ಥೆಯಾದ ಇಂಡಿಯನ್ ಇಮ್ಯುನೊಲಾಜಿಕಲ್ಸ್ ಲಿಮಿಟೆಡ್, ಡೆಂಗ್ಯೂ ಲಸಿಕೆಯ ಹಂತ-1 ಪ್ರಯೋಗಕ್ಕೆ ಅನುಮತಿ ಪಡೆದಿದೆ.

Dengue Vaccine: ಭಾರತದ ಮೊದಲ ಡೆಂಗ್ಯೂ ಲಸಿಕೆ: ಮೊದಲ ಹಂತದ ಕ್ಲಿನಿಕಲ್ ಪ್ರಯೋಗಕ್ಕೆ ಅನುಮೋದನೆ
Dengue
Follow us on

ದೇಶದ ಪ್ರಮುಖ ಲಸಿಕೆ ತಯಾರಕ ಸಂಸ್ಥೆಯಾದ ಇಂಡಿಯನ್ ಇಮ್ಯುನೊಲಾಜಿಕಲ್ಸ್ ಲಿಮಿಟೆಡ್, ಡೆಂಗ್ಯೂ ಲಸಿಕೆಯ ಹಂತ-1 ಪ್ರಯೋಗಕ್ಕೆ ಅನುಮತಿ ಪಡೆದಿದೆ. ಈ ಲಸಿಕೆಯನ್ನು ಯುಎಸ್ ಮೂಲದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ.
ನ್ಯಾಷನಲ್ ಸೆಂಟರ್ ಫಾರ್ ವೆಕ್ಟರ್ ಬಾರ್ನ್ ಡಿಸೀಸ್ ಕಂಟ್ರೋಲ್ ಪ್ರಕಾರ, ಕಳೆದ ವರ್ಷ ದೇಶಾದ್ಯಂತ 1,93,245 ಡೆಂಗ್ಯೂ ಪ್ರಕರಣಗಳು ಮತ್ತು 346 ಸಾವುಗಳು ವರದಿಯಾಗಿವೆ.

ಈ ವರ್ಷ, 30,000 ಕ್ಕೂ ಹೆಚ್ಚು ಜನರು ಈಗಾಗಲೇ ಡೆಂಗ್ಯೂಗೆ ತುತ್ತಾಗಿದ್ದಾರೆ ಮತ್ತು ಗರಿಷ್ಠ ಮಳೆಗಾಲದಲ್ಲಿ ಸಂಖ್ಯೆಗಳು ವೇಗವಾಗಿ ಏರುತ್ತಿವೆ.
ಮಳೆಗಾಲ ಬಂದ ಕೂಡಲೇ ಸೊಳ್ಳೆಗಳ ಕಾಟ ಪ್ರಾರಂಭವಾಗುತ್ತದೆ. ಸೊಳ್ಳೆ ಕಡಿತ ಪ್ರತಿಯೊಬ್ಬರ ಜೀವನವನ್ನು ಶೋಚನೀಯಗೊಳಿಸುತ್ತವೆ. ಮಳೆಗಾಲದಲ್ಲಿ ಕೊಳಕು ನೀರು ಮತ್ತು ಅದರ ಶೇಖರಣೆಯಿಂದಾಗಿ, ಲಕ್ಷಾಂತರ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ.

ಇದು ಕೆಲವೇ ದಿನಗಳಲ್ಲಿ ಡೆಂಗ್ಯೂ, ಮಲೇರಿಯಾ, ಝಿಕಾ, ಚಿಕನ್ ಗುನ್ಯಾ, ಹಳದಿ ಜ್ವರದಂತಹ ಮಾರಣಾಂತಿಕ ರೋಗಗಳಿಗೆ ಕಾರಣವಾಗುತ್ತದೆ. ಆದುದರಿಂದ ಎಚ್ಚರವಹಿಸುವುದು ಮುಖ್ಯ. ಪ್ರತಿ ವರ್ಷ, ಜುಲೈನಿಂದ ನವೆಂಬರ್ ವರೆಗೆ, ಡೆಂಗ್ಯೂ ರೋಗದ ಪ್ರಕರಣಗಳು ಕ್ರಮೇಣವಾಗಿ ಹೆಚ್ಚಾಗುವುದನ್ನು ಗಮನಿಸಬಹುದು ಮುಖ್ಯವಾಗಿ ನೀರು ನಿಲ್ಲುವುದು ಮತ್ತು ನೈರ್ಮಲ್ಯವಿಲ್ಲದ ಪ್ರದೇಶದಲ್ಲಿ ಕಾಣಿಸಿಕೊಳ್ಳುತ್ತವೆ.

ಡೆಂಗ್ಯೂ ವೈರಸ್ ಹೆಣ್ಣು ಈಡಿಸ್ ಸೊಳ್ಳೆಯ ಕಚ್ಚುವಿಕೆಯ ಮೂಲಕ ಹರಡುತ್ತದೆ. 400 ಮೀಟರ್‌ಗಳ ಸೀಮಿತ ದೂರದವರೆಗೆ ಹಾರಬಲ್ಲದು. ತಾಪಮಾನವು 16 ಡಿಗ್ರಿಗಿಂತ ಕಡಿಮೆಯಾದರೆ ಡೆಂಗ್ಯೂ ಸೊಳ್ಳೆಗಳು ಸಂತಾನೋತ್ಪತ್ತಿ ಮಾಡಲು ಸಾಧ್ಯವಿಲ್ಲ.

ಶಿಶುಗಳು, ಚಿಕ್ಕ ಮಕ್ಕಳು ಮತ್ತು ವಯಸ್ಸಾದವರು ಸುಲಭವಾಗಿ ಈ ರೋಗಗಳಿಗೆ ಬಲಿಯಾಗುತ್ತಾರೆ, ಏಕೆಂದರೆ ಅವರ ರೋಗನಿರೋಧಕ ಶಕ್ತಿ ದುರ್ಬಲವಾಗಿರುತ್ತದೆ. ಈ ರೋಗಗಳಲ್ಲಿ ಅತ್ಯಂತ ಸಾಮಾನ್ಯವಾದುದು ಡೆಂಗ್ಯೂ, ಇದು ಪ್ರತಿವರ್ಷ ಸಾವಿರಾರು ಜನರ ಸಾವಿಗೆ ಪ್ರಮುಖ ಕಾರಣವಾಗಿದೆ. ಆದ್ರೆ ಇನ್ಮುಂದೆ ಡೆಂಗ್ಯೂ ಜ್ವರ ತಗುಲಿದರೆ ಭಯ ಬೇಕಿಲ್ಲ.

ಡೆಂಗ್ಯೂ ಲಸಿಕೆಯ ಹಂತ-1 ಪ್ರಯೋಗಕ್ಕೆ ಅನುಮತಿ ದೊರೆತಿದೆ. ದೇಶದ ಮುಂಚೂಣಿಯಲ್ಲಿರುವ ಲಸಿಕೆ ತಯಾರಿಕಾ ಸಂಸ್ಥೆ ಇಂಡಿಯನ್ ಇಮ್ಯುನೊಲಾಜಿಕಲ್ಸ್ ಲಿಮಿಟೆಡ್, ಡೆಂಗ್ಯೂ ಲಸಿಕೆಯ ಹಂತ-1 ಪ್ರಯೋಗಕ್ಕೆ ಅನುಮತಿ ಪಡೆದಿದೆ. ಈ ಲಸಿಕೆಯನ್ನು ಯುಎಸ್ ಮೂಲದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ.

ಡೆಂಗ್‌ವಾಕ್ಸಿಯಾ ಲಸಿಕೆಯು ಯುನೈಟೆಡ್ ಸ್ಟೇಟ್ಸ್‌ನಲ್ಲಿ 9 ರಿಂದ 16 ವರ್ಷ ವಯಸ್ಸಿನ ಮಕ್ಕಳಲ್ಲಿ ಬಳಕೆಗೆ ಲಭ್ಯವಿದೆ ಮತ್ತು ಹಿಂದಿನ ಡೆಂಗ್ಯೂ ವೈರಸ್ ಸೋಂಕಿನ ಪ್ರಯೋಗಾಲಯ-ದೃಢಪಡಿಸಿದ ಪುರಾವೆಗಳು ಮತ್ತು ಡೆಂಗ್ಯೂ ಸಾಮಾನ್ಯವಾಗಿರುವ ಪ್ರದೇಶಗಳಲ್ಲಿ ವಾಸಿಸುತ್ತವೆ.
ಪ್ರತಿ ವರ್ಷ, ಜುಲೈನಿಂದ ನವೆಂಬರ್ ವರೆಗೆ, ಡೆಂಗ್ಯೂ ರೋಗದ ಪ್ರಕರಣಗಳು ಹೆಚ್ಚಾಗುವುದನ್ನು ಗಮನಿಸಬಹುದು ಮುಖ್ಯವಾಗಿ ನೀರು ನಿಲ್ಲುವುದು ಮತ್ತು ಅನೈರ್ಮಲ್ಯ ಪ್ರದೇಶಗಳಿಂದಾಗಿ ಡೆಂಗ್ಯೂ ಬಹು ಬೇಗನೇ ಹರಡುತ್ತದೆ.

ಅಮೆರಿಕನ್ನರು ಲಸಿಕೆಯನ್ನು ನೀಡಲು ಪ್ರಾರಂಭಿಸಿದ್ದರೂ ಸಹ, ಭಾರತದಲ್ಲಿ ನಿರಂತರವಾಗಿ ರೂಪಾಂತರಗೊಳ್ಳುವ ಡೆಂಗ್ಯೂ ವೈರಸ್‌ನ ನಾಲ್ಕು ರೂಪಾಂತರಗಳನ್ನು ಇದು ಹೇಗೆ ಎದುರಿಸುತ್ತದೆ ಎಂಬುದನ್ನು ತಜ್ಞರು ಇನ್ನೂ ಕಂಡುಹಿಡಿಯಲಿಲ್ಲ.

 

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ