International Yoga Day 2024: ಈ ಯೋಗಾಸನಗಳು ಅಲ್ಝೈಮರ್ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡುತ್ತೆ

| Updated By: ಅಕ್ಷಯ್​ ಪಲ್ಲಮಜಲು​​

Updated on: Jun 21, 2024 | 2:00 PM

 ತಜ್ಞರು ಹೇಳುವ ಪ್ರಕಾರ, ಅಲ್ಝೈಮರ್ ಕಾಯಿಲೆಯನ್ನು ತಡೆಗಟ್ಟಲು, ಯೋಗವನ್ನು ನಿಮ್ಮ ದೈನಂದಿನ ದಿನಚರಿಯಲ್ಲಿ ಸೇರಿಸಬೇಕು. ಅನೇಕ ಯೋಗಾಸನಗಳು ಮಾನಸಿಕ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಮತ್ತು ಅಲ್ಝೈಮರ್ ಕಾಯಿಲೆಯ ಅಂಶಗಳನ್ನು ಕಡಿಮೆ ಮಾಡುತ್ತದೆ.

International Yoga Day 2024: ಈ ಯೋಗಾಸನಗಳು ಅಲ್ಝೈಮರ್ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡುತ್ತೆ
ಸಾಂದರ್ಭಿಕ ಚಿತ್ರ
Follow us on

ಅಲ್ಝೈಮರ್ ಕಾಯಿಲೆ ಗಂಭೀರ ನರವೈಜ್ಞಾನಿಕ ಅಸ್ವಸ್ಥತೆಗಳಲ್ಲಿ ಒಂದಾಗಿದೆ. ಇದು ಇತ್ತೀಚಿನ ವರ್ಷಗಳಲ್ಲಿ ವೇಗವಾಗಿ ಪ್ರಗತಿ ಹೊಂದುತ್ತಿರುವುದು ಸುಳ್ಳಲ್ಲ. ಇದರ ಪರಿಣಾಮವು 60 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ವಿಜ್ಞಾನಿಗಳು ಸಹ ಅಲ್ಝೈಮರ್ ಕಾಯಿಲೆಗೆ ಕಾರಣಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಇದು ತಜ್ಞರಿಗೆ ಒಂದು ರೀತಿಯ ಒಗಟಾಗಿದೆ. ಆದ್ದರಿಂದ ಇದಕ್ಕೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಇಲ್ಲ. ತಜ್ಞರು ಹೇಳುವ ಪ್ರಕಾರ, ಅಲ್ಝೈಮರ್ ಕಾಯಿಲೆಯನ್ನು ತಡೆಗಟ್ಟಲು, ಯೋಗವನ್ನು ನಿಮ್ಮ ದೈನಂದಿನ ದಿನಚರಿಯಲ್ಲಿ ಸೇರಿಸಬೇಕು. ಅನೇಕ ಯೋಗಾಸನಗಳು ಮಾನಸಿಕ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಮತ್ತು ಅಲ್ಝೈಮರ್ ಕಾಯಿಲೆಯ ಅಂಶಗಳನ್ನು ಕಡಿಮೆ ಮಾಡುತ್ತದೆ.

ಅಲ್ಝೈಮರ್ ಅನ್ನು ತಡೆಗಟ್ಟಲು ಮಾಡಬಹುದಾದ ಯೋಗಾಸನಗಳು;

ವಜ್ರಾಸನ ಯೋಗ

ಈ ಯೋಗಾಸನವನ್ನು ಅಭ್ಯಾಸ ಮಾಡಿ. ಏಕಂದರೆ ವಜ್ರಾಸನವನ್ನು ಮಾಡುವುದರಿಂದ ಮನಸ್ಸು ಶಾಂತ ಮತ್ತು ಸ್ಥಿರವಾಗಿರುತ್ತದೆ. ಜೀರ್ಣಕಾರಿ ಆಮ್ಲೀಯತೆ ಮತ್ತು ಗ್ಯಾಸ್ ಆಗದಂತೆ ಇದು ತಡೆಯುತ್ತದೆ. ಈ ಆಸನದ ನಿಯಮಿತ ಅಭ್ಯಾಸದಿಂದ, ಅಲ್ಝೈಮರ್- ಬುದ್ಧಿಮಾಂದ್ಯತೆಯ ಅಪಾಯವನ್ನು ಕಡಿಮೆ ಮಾಡಬಹುದು.

ಪಶ್ಚಿಮೋತ್ಥಾನಾಸನ

ಈ ಆಸನವು ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಸುಧಾರಿಸುವಲ್ಲಿ ಪ್ರಯೋಜನಕಾರಿಯಾಗಿದೆ. ಪಶ್ಚಿಮೋತ್ಥಾನಾಸನವು ಅಲ್ಝೈಮರ್ ಕಾಯಿಲೆಯ ಅಂಶಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಧಿಕ ರಕ್ತದೊತ್ತಡ ಮತ್ತು ಮಧುಮೇಹದಿಂದ ಬಳಲುತ್ತಿರುವ ರೋಗಿಗಳಿಗೂ ಇದು ಪ್ರಯೋಜನಕಾರಿಯಾಗಿದೆ. ರಕ್ತ ಪರಿಚಲನೆಯನ್ನು ಉತ್ತೇಜಿಸಲು, ನಿದ್ರಾಹೀನತೆ, ಖಿನ್ನತೆ ಮತ್ತು ಆತಂಕವನ್ನು ಕಡಿಮೆ ಮಾಡಲು ಪಶ್ಚಿಮೋತ್ಥಾನಾಸನವನ್ನು ಅಭ್ಯಾಸ ಮಾಡಬಹುದು.

ಇದನ್ನೂ ಓದಿ: ಆರೋಗ್ಯಕರ ಕೂದಲಿಗಾಗಿ ಬೆಸ್ಟ್ ಯೋಗಾಸನಗಳಿವು

ಶಿರ್ಷಾಸನ

ಈ ಆಸನವು ರಕ್ತ ಪರಿಚಲನೆಯನ್ನು ಹೆಚ್ಚಿಸುವಲ್ಲಿ ಪರಿಣಾಮಕಾರಿಯಾಗಿದೆ. ಇದನ್ನು ಅಭ್ಯಾಸ ಮಾಡುವ ಮೂಲಕ, ದೇಹದ ಒಟ್ಟಾರೆ ಆರೋಗ್ಯವನ್ನು ಕಾಪಾಡಬಹುದು. ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಈ ಯೋಗವನ್ನು ಅಭ್ಯಾಸ ಮಾಡಿ.

ಸೂಚನೆ: ಯೋಗ ತಜ್ಞರ ಸಲಹೆಯ ಆಧಾರದ ಮೇಲೆ ಈ ಆಸನಗಳನ್ನು ಪ್ರಯತ್ನಿಸಿ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 1:59 pm, Fri, 21 June 24