International Yoga Day 2024 : ಆರೋಗ್ಯಕರ ಕೂದಲಿಗಾಗಿ ಬೆಸ್ಟ್ ಯೋಗಾಸನಗಳಿವು
ಪ್ರತಿವರ್ಷ ಜೂನ್ 21 ರಂದು ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತದೆ. ಯೋಗದ ಮಹತ್ವ ತಿಳಿಸುವ ದಿನ ಇದಾಗಿದ್ದು, ಯೋಗಾಭ್ಯಾಸ ಮಾಡುವ ಮೂಲಕ ಈ ದಿನವನ್ನು ಆಚರಿಸಲಾಗುತ್ತದೆ. ಈ ಯೋಗವು ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಮಾತ್ರವಲ್ಲದೇ ಕೂದಲಿನ ಸಮಸ್ಯೆಗಳನ್ನು ಸುಲಭವಾಗಿ ನಿವಾರಿಸುತ್ತದೆ. ಹಾಗಾದ್ರೆ ಕೂದಲಿನ ಆರೋಗ್ಯವನ್ನು ಕಾಪಾಡಲು ಯಾವೆಲ್ಲಾ ಆಸನಗಳು ಸೂಕ್ತ ಎನ್ನುವುದರ ಮಾಹಿತಿ ಇಲ್ಲಿದೆ.
ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವುದು, ಬಿಳಿ ಕೂದಲಿನ ಸಮಸ್ಯೆಯೂ ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ಹೆಚ್ಚಿನ ಮಹಿಳೆಯರು ಈ ಸಮಸ್ಯೆಗಳನ್ನು ನಿವಾರಿಸಿಕೊಂಡು ಸೊಂಪಾದ ಕೂದಲು ಬೆಳೆಯಲು ಮಾರುಕಟ್ಟೆಯಲ್ಲಿ ಸಿಗುವ ನಾನಾ ರೀತಿಯ ಉತ್ಪನ್ನಗಳನ್ನು ಬಳಸುತ್ತಾರೆ. ಈ ಸೌಂದರ್ಯ ವರ್ಧಕಗಳಂತಹ ಉತ್ಪನ್ನಗಳಿಂದ ಪ್ರಯೋಜನವಂತೂ ಆಗುವುದಿಲ್ಲ. ಆದರೆ ಈ ಕೆಲವು ಯೋಗಾಸನಗಳನ್ನು ಪ್ರತಿದಿನ ಮಾಡುವುದರಿಂದ ಕೂದಲಿನ ಸಮಸ್ಯೆಯನ್ನು ದೂರವಾಗಿಸಬಹುದು.
- ಸರ್ವಾಂಗಾಸನ: ಈ ಆಸನವು ನೆತ್ತಿಯ ರಕ್ತ ಪರಿಚಲನೆಯನ್ನು ಸುಧಾರಿಸಿ, ಥೈರಾಯ್ಡ್ ಗ್ರಂಥಿಯನ್ನು ಉತ್ತೇಜಿಸುತ್ತದೆ. ಹೀಗಾಗಿ ಹಾರ್ಮೋನ್ ಮಟ್ಟವನ್ನು ನಿಯಂತ್ರಣಕ್ಕೆ ಬರುತ್ತದೆ. ಇದು ಕೂದಲಿನ ಸಮಸ್ಯೆಗಳನ್ನು ನಿವಾರಿಸಿ, ಕೂದಲಿನ ಬೆಳವಣಿಗೆಯಾಗುತ್ತದೆ.
- ವಜ್ರಾಸನ : ದಿನನಿತ್ಯ ಈ ಆಸನವನ್ನು ಮಾಡುವುದರಿಂದ ಒತ್ತಡವನ್ನು ಕಡಿಮೆ ಮಾಡಿ ಕೂದಲು ಉದುರುವಿಕೆಗೆ ಸಮಸ್ಯೆಯನ್ನು ನಿವಾರಿಸುತ್ತದೆ.
- ಬಲಯಂ ಮುದ್ರೆ: ಉಗುರುಗಳನ್ನು ಪರಸ್ಪರ ಉಜ್ಜುವುದನ್ನು ಬಲಯಂ ಮುದ್ರೆ ಎನ್ನಲಾಗುತ್ತದೆ. ದಿನಕ್ಕೆ ಐದರಿಂದ ಹತ್ತು ನಿಮಿಷಗಳ ಕಾಲ ಈ ಮುದ್ರೆಯನ್ನು ಮಾಡುವುದರಿಂದ ಕೂದಲು ಉದುರುವುದು ನಿಲ್ಲುತ್ತದೆ.
- ಉಷ್ಟ್ರಾಸನ : ಉಷ್ಟ್ರಾಸನದಿಂದ ನೆತ್ತಿಯ ಕಡೆಗೆ ರಕ್ತದ ಹರಿವನ್ನು ಪ್ರೇರೇಪಿಸುತ್ತದೆ. ಈ ಮೂಲಕ ಕೂದಲು ಉದುರುವಿಕೆ ಹಾಗೂ ಅಕಾಲಿಕವಾಗಿ ಕೂದಲು ಬಿಳಿಯಾಗುವುದನ್ನು ತಡೆದು ಸೊಂಪಾಗಿ ಬೆಳೆಯುವಂತೆ ನೋಡಿಕೊಳ್ಳುತ್ತದೆ.
- ಪಾದಹಸ್ತಾಸನ : ಪ್ರತಿ ದಿನಾಲೂ ಈ ಆಸನವನ್ನು ಮಾಡುವುದರಿಂದ ರಕ್ತ ಪರಿಚಲನೆ ವೇಗವಾಗಿ ಆಗಲು ಸಹಕಾರಿಯಾಗಿದೆ. ಈ ಭಂಗಿಯು ಕೂದಲಿನ ಕೋಶಗಳಿಗೆ ಆಮ್ಲಜನಕವನ್ನು ಒದಗಿ, ಅವುಗಳ ಆರೋಗ್ಯವನ್ನು ಕಾಪಾಡುತ್ತದೆ. ಅದಲ್ಲದೇ, ಒತ್ತಡವನ್ನು ನಿವಾರಿಸಿ ಕೂದಲು ಉದುರುವಿಕೆಯನ್ನು ತಡೆಯುತ್ತದೆ.
- ಹಲಾಸನ : ಈ ಭಂಗಿಯಲ್ಲಿ ದೇಹದ ವಿವಿಧ ಭಾಗಗಳಿಗೆ ರಕ್ತ ಪರಿಚಲನೆ ಸರಿಯಾಗಿ ಆಗುವಂತೆ ಮಾಡುತ್ತದೆ. ನೇರವಾಗಿ ತಲೆಯ ಭಾಗಕ್ಕೆ ರಕ್ತ ಪರಿಚಲನೆ ಹೆಚ್ಚಿಸಿ ಕೂದಲಿನ ಆರೋಗ್ಯವನ್ನು ಕಾಪಾಡುತ್ತದೆ.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: