International Yoga Day 2024: ಅಂತಾರಾಷ್ಟ್ರೀಯ ಯೋಗ ದಿನ; ಮಕ್ಕಳ ಏಕಾಗ್ರತೆ ಹೆಚ್ಚಿಸಲು ಈ ಯೋಗಾಸನಗಳನ್ನು ಮಾಡಿಸಿ
ಮಕ್ಕಳು ಮೊಬೈಲ್ ಬಳಕೆ ಮಾಡುವುದನ್ನು ತಡೆಯಲು ಯೋಗಾಸನಗಳು ನೆರವಾಗುತ್ತವೆ. ನಿಮಗೆ ಇದು ಆಶ್ಚರ್ಯ ಎನಿಸಬಹುದು ಆದರೆ ಇದು ಸತ್ಯ. ಯೋಗ ಅಭ್ಯಾಸ ಮಕ್ಕಳ ಮಾನಸಿಕ ಸ್ಥಿತಿಯನ್ನು ಸುಧಾರಿಸುತ್ತದೆ. ಹಾಗಾದರೆ ಮಕ್ಕಳು ಯಾವ ಆಸನಗಳನ್ನು ಮಾಡಬೇಕು? ಯಾವುದು ಒಳ್ಳೆಯದು? ಸಂಪೂರ್ಣ ಮಾಹಿತಿ ಇಲ್ಲಿದೆ.
ಇಡೀ ದಿನ ಮೊಬೈಲ್, ಟ್ಯಾಬ್‌ಗಳನ್ನು ನೋಡುತ್ತಾ ಅದರಲ್ಲಿಯೇ ಮುಳುಗಿ ಹೋಗಿರುವ ಮಕ್ಕಳಿಗೆ ಏಕಾಗ್ರತೆಯ ಕೊರತೆ ಇರುತ್ತದೆ, ಇದು ಅವರ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು. ಹಾಗಾಗಿ ಅವರು ಮೊಬೈಲ್ ಬಳಕೆ ಮಾಡುವುದನ್ನು ತಡೆಯಲು ಯೋಗಾಸನಗಳು ನೆರವಾಗುತ್ತವೆ. ನಿಮಗೆ ಇದು ಆಶ್ಚರ್ಯ ಎನಿಸಬಹುದು ಆದರೆ ಇದು ಸತ್ಯ. ಯೋಗ ಅಭ್ಯಾಸ ಮಕ್ಕಳ ಮಾನಸಿಕ ಸ್ಥಿತಿಯನ್ನು ಸುಧಾರಿಸುತ್ತದೆ. ಹಾಗಾದರೆ ಮಕ್ಕಳು ಯಾವ ಆಸನಗಳನ್ನು ಮಾಡಬೇಕು? ಯಾವುದು ಒಳ್ಳೆಯದು? ಸಂಪೂರ್ಣ ಮಾಹಿತಿ ಇಲ್ಲಿದೆ.
ಅಧೋಮುಖ ಶ್ವಾನಾಸನ:
ಈ ಭಂಗಿ ತುಂಬಾ ಸರಳವಾಗಿದ್ದು ಅನೇಕ ರೀತಿಯ ಪ್ರಯೋಜನಗಳನ್ನು ನೀಡುತ್ತದೆ. ಮುಖ್ಯವಾಗಿ ಈ ಆಸನವು ದೇಹದಲ್ಲಿ ರಕ್ತ ಪರಿಚಲನೆ ಸುಧಾರಿಸಲು ಸಹಾಯ ಮಾಡುತ್ತದೆ. ಇವೆಲ್ಲದರ ಜೊತೆಗೆ ಕಾಲು, ತೋಳು ಮತ್ತು ಭುಜದ ಸ್ನಾಯುಗಳನ್ನು ಬಲಪಡಿಸುತ್ತದೆ ಹಾಗೂ ಬೆನ್ನಿನ ಕೆಳಭಾಗದ ನೋವನ್ನು ನಿವಾರಿಸುತ್ತದೆ. ಈ ಆಸನವನ್ನು ಮನೆಯಲ್ಲಿ ಮಾಡುವುದರಿಂದ ಮಕ್ಕಳಿಗೆ ತುಂಬಾ ಪ್ರಯೋಜನವಿದೆ.
ಧನುರಾಸನ ಅಥವಾ ಬಿಲ್ಲಿನ ಭಂಗಿ:
ಈ ಯೋಗಾಭ್ಯಾಸ ಮಕ್ಕಳಿಗೆ ಖುಷಿ ಕೊಡುತ್ತದೆ. ಇದು ಮೀನಿನ ರೀತಿ ಮಾಡಬೇಕಾಗಿರುವುದರಿಂದ ಯೋಗ ಮಾಡಲು ಆಸಕ್ತಿ ಹೆಚ್ಚುತ್ತದೆ. ಜೊತೆಗೆ ಏಕಾಗ್ರತೆಯೂ ಹೆಚ್ಚುತ್ತದೆ. ಆದರೆ ಮೊದಲ ಬಾರಿ ಯೋಗ ಮಾಡುವವರಾಗಿದ್ದರೆ ಇಂತಹ ಆಸನಗಳನ್ನು ಮಾಡುವಾಗ ಸ್ವಲ್ಪ ಜಾಗ್ರತೆ ವಹಿಸಿ.
ಸೇತುಬಂಧಾಸನ ಅಥವಾ ಸೇತುವೆಯ ಭಂಗಿ:
ಈ ಯೋಗಾಭ್ಯಾಸ ಮಾಡುವುದರಿಂದ ಬೆನ್ನಿನ ಮೂಳೆಗಳು, ಎದೆ, ಸೊಂಟ ಮತ್ತು ಭುಜಗಳು ಒಮ್ಮೆಲೆ ಹಿಗ್ಗಿದಂತಾಗಿ ನಿಮ್ಮ ದೇಹಕ್ಕೆ ಶಕ್ತಿಯನ್ನು ಒದಗಿಸುತ್ತದೆ. ಇದರ ಜೊತೆಯಲ್ಲಿ ಜೀರ್ಣ ಪ್ರಕ್ರಿಯೆ ಉತ್ತಮಗೊಂಡು ಮನಸ್ಸು ಪ್ರಶಾಂತಗೊಳ್ಳುತ್ತದೆ. ಮಕ್ಕಳು ಕೂಡ ಈ ಆಸನ ಮಾಡುವುದು ತುಂಬಾ ಒಳ್ಳೆಯದು.
ತಾಡಾಸನ ಅಥವಾ ಉದ್ಧವ ತಾಡಾಸನ:
ಉದ್ಧವ ತಾಡಾಸನವನ್ನು ಪರ್ವತ ಭಂಗಿ ಎಂದು ಕರೆಯಲಾಗುತ್ತದೆ. ಈ ಆಸನವು ಕರುಳಿನ ಆರೋಗ್ಯವನ್ನು ಉತ್ತಮಗೊಳಿಸುತ್ತದೆ. ಈ ಭಂಗಿಯು ಮಗುವಿನ ಸ್ನಾಯುಗಳಿಗೆ ವಿಶ್ರಾಂತಿ ಒದಗಿಸುತ್ತದೆ ಜೊತೆಗೆ ಮಕ್ಕಳ ಮನಸ್ಸು ನಿರಾಳ ಮಾಡಲು ಸಹಾಯ ಮಾಡುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 8:25 pm, Thu, 20 June 24