
ಪ್ರಾಸ್ಟೇಟ್ ಕ್ಯಾನ್ಸರ್ ಬಗ್ಗೆ ಕೇಳಿರಬಹುದು. ಇದು ಒಂದು ರೀತಿಯ ವೃಷಣ ಕ್ಯಾನ್ಸರ್ (Cancer) ಹಿಂದೆ ಮಧ್ಯವಯಸ್ಕ ಪುರುಷರಲ್ಲಿ ಹೆಚ್ಚಾಗಿ ಕಂಡುಬರುತ್ತಿದ್ದ ಈ ವೃಷಣ ಕ್ಯಾನ್ಸರ್ ಇತ್ತೀಚಿನ ದಿನಗಳಲ್ಲಿ ಸಣ್ಣ ವಯಸ್ಸಿನವರ ಮೇಲೂ ಪರಿಣಾಮ ಬೀರುತ್ತಿದೆ. ಇತ್ತೀಚಿನ ಅಧ್ಯಯನದ ಪ್ರಕಾರ, ವೃಷಣ ಕ್ಯಾನ್ಸರ್ ಅಪಾಯ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಪುರುಷರ ವೃಷಣಗಳಲ್ಲಿ ಕಂಡುಬರುವ ಈ ಕ್ಯಾನ್ಸರ್ ಎಷ್ಟೇ ಜಾಗರೂಕರಾಗಿದ್ದರೂ ನಿಯಂತ್ರಿಸುವುದು ಸ್ವಲ್ಪ ಕಷ್ಟ. ಆದ್ದರಿಂದ, ರೋಗಲಕ್ಷಣಗಳನ್ನು ಮೊದಲೇ ಗುರುತಿಸುವುದು ಬಹಳ ಮುಖ್ಯ ಎಂದು ವೈದ್ಯರು ಹೇಳುತ್ತಾರೆ. ಹಾಗಾದರೆ ಇದರ ಲಕ್ಷಣಗಳು ಹೇಗಿರುತ್ತದೆ, ಹೊಟ್ಟೆಯ ಕೆಳಭಾಗದಲ್ಲಿ ನೋವು ಕಂಡುಬರುವುದಕ್ಕೆ ನಿಜವಾದ ಕಾರಣವೇನು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಆರಂಭಿಕ ಹಂತದ ಪ್ರಾಸ್ಟೇಟ್ ಕ್ಯಾನ್ಸರ್ ಲಕ್ಷಣಗಳು ಅಷ್ಟು ಸ್ಪಷ್ಟವಾಗಿರುವುದಿಲ್ಲ. ಇದು ಕಾಣಿಸಿಕೊಳ್ಳುವ ಹೊತ್ತಿಗೆ, ರೋಗವು ಕೆಲವು ಹಂತಗಳನ್ನು ದಾಟಿರುತ್ತದೆ. ಈ ಹಂತಗಳಲ್ಲಿ, ಚಿಕಿತ್ಸೆ ಸ್ವಲ್ಪ ಕಷ್ಟಕರವಾಗುತ್ತದೆ. ಹಾಗಾಗಿ ನಿಮ್ಮ ಮೂತ್ರ ಗುಲಾಬಿ ಅಥವಾ ಕೆಂಪು ಬಣ್ಣದಲ್ಲಿ ಕಾಣಿಸಿಕೊಂಡರೆ, ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ರಕ್ತಸ್ರಾವದ ಜೊತೆಗೆ, ಮೂತ್ರ ವಿಸರ್ಜಿಸುವಾಗ ಸುಡುವ ಸಂವೇದನೆ ಅನುಭವಕ್ಕೆ ಬರುವುದನ್ನು ಕೂಡ ಪರೀಕ್ಷಿಸುವುದು ಮುಖ್ಯವಾಗುತ್ತದೆ.
ಸಾಮಾನ್ಯವಾಗಿ ಕೆಲವರಲ್ಲಿ ಮೂತ್ರ ವಿಸರ್ಜಿಸಲು ಪ್ರಚೋದನೆಯಾಗುತ್ತದೆ, ಆದರೆ ಅದನ್ನು ಸರಿಯಾಗಿ ಹೊರಹಾಕಲು ಸಾಧ್ಯವಾಗುವುದಿಲ್ಲ. ಮೂತ್ರಕೋಶ ಖಾಲಿಯಾಗಿದ್ದಾಗ ಈ ರೀತಿ ಅನುಭವವಾಗುವುದು ದೊಡ್ಡ ಸಮಸ್ಯೆಯಲ್ಲ. ಆದರೆ ಮೂತ್ರಕೋಶದಿಂದ ಮೂತ್ರ ವಿಸರ್ಜಿಸಲು ಸಾಧ್ಯವಾಗದಿರುವುದನ್ನು ನಿರ್ಲಕ್ಷ್ಯ ಮಾಡಬಾರದು. ಏಕೆಂದರೆ ಮೂತ್ರವು ನಿಮ್ಮ ಮೂತ್ರನಾಳದ ಮೂಲಕ ಹಾದುಹೋಗುತ್ತದೆ. ಕ್ಯಾನ್ಸರ್ ಬೆಳವಣಿಗೆಯಾದಾಗ, ಮೂತ್ರನಾಳವು ಕಿರಿದಾಗುತ್ತದೆ, ಇದರಿಂದಾಗಿ ಮೂತ್ರವು ಮುಂದಕ್ಕೆ ಹರಿಯುವ ಬದಲು ಹಿಂದಕ್ಕೆ ಹರಿಯುತ್ತದೆ.
ಇದನ್ನೂ ಓದಿ: ಮೊಟ್ಟೆ ಸೇವನೆಯಿಂದ ಕ್ಯಾನ್ಸರ್ ಬರಲ್ಲ: FSSAI ಸ್ಪಷ್ಟನೆ
ಇದು ವೃಷಣ ಕ್ಯಾನ್ಸರ್‌ನ ಆರಂಭಿಕ ಲಕ್ಷಣಗಳಲ್ಲಿ ಒಂದಾಗಿದೆ. ಆಗಾಗ ಮೂತ್ರ ವಿಸರ್ಜನೆ ಮಾಡುವ ಸಮಯದಲ್ಲಿ ಅನೇಕರಲ್ಲಿ ಕೆಳ ಬೆನ್ನು, ಹೊಟ್ಟೆಯ ಕೆಳಭಾಗ ಮತ್ತು ತೊಡೆಸಂದು ಪ್ರದೇಶಗಳಲ್ಲಿ ನೋವು ಕಂಡುಬರುತ್ತದೆ. ಏಕೆಂದರೆ ಮೂತ್ರವು ಸಂಪೂರ್ಣವಾಗಿ ಹೊರಹಾಕಲ್ಪಡುವ ಬದಲು ಮೂತ್ರಕೋಶದಲ್ಲಿ ಉಳಿಯುವುದರಿಂದ ತೊಡೆಸಂದಿಯ ಸುತ್ತಲಿನ ಸ್ನಾಯುಗಳಲ್ಲಿ ನೋವು ಉಂಟಾಗುತ್ತದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ