ಕ್ಯಾನ್ಸರ್ ರೋಗ ತಡೆಗಟ್ಟುವ ಕಾಕಡು ಪ್ಲಮ್ ಹಣ್ಣಿನ ಬಗ್ಗೆ ನೀವು ತಿಳಿಯಲೇಬೇಕು
ಶತಮಾನಗಳಿಂದ ಆಸ್ಟ್ರೇಲಿಯಾದ ಸ್ಥಳೀಯ ಜನರು ಕಾಕಡು ಪ್ಲಮ್ ಮರದ ಭಾಗಗಳನ್ನು ಮತ್ತು ಅದರ ಹಣ್ಣುಗಳನ್ನು ಹಲವಾರು ವಿಧಗಳಲ್ಲಿ ಬಳಸುತ್ತಿದ್ದಾರೆ. ಕಾಕಡು ಪ್ಲಮ್ ಪ್ರಪಂಚದಾದ್ಯಂತ ಬೇರೆಲ್ಲ ಹಣ್ಣಿನಲ್ಲಿ ಕಂಡುಬರುವುದಕ್ಕಿಂತ ಅತ್ಯಧಿಕ ಪ್ರಮಾಣದ ವಿಟಮಿನ್ ಸಿ ಅನ್ನು ಹೊಂದಿದೆ. ಆರೋಗ್ಯಕ್ಕೆ ಕಾಕಡು ಪ್ಲಮ್ ಹಣ್ಣಿನ ಪ್ರಯೋಜನಗಳ ಬಗ್ಗೆ ಮಾಹಿತಿ ಇಲ್ಲಿದೆ.

ನಮಗೆ ಹೆಚ್ಚು ಪರಿಚಿತವಲ್ಲದ ಕೆಲವು ಹಣ್ಣು, ಬೀಜಗಳಿಂದ ಕೂಡ ನಮ್ಮ ಆರೋಗ್ಯಕ್ಕೆ ಏನೆಲ್ಲ ಪ್ರಯೋಜನಗಳಿವೆ ಎಂಬುದನ್ನು ನಾವು ತಿಳಿದುಕೊಳ್ಳಬೇಕಾಗುತ್ತದೆ. ಹೆಚ್ಚು ಜನರಿಗೆ ತಿಳಿದಿಲ್ಲದ ಕಾಕಡು ಪ್ಲಮ್ ಅನ್ನು ಆಸ್ಟ್ರೇಲಿಯಾದಲ್ಲಿ ಹೆಚ್ಚು ಬೆಳೆಯಲಾಗುತ್ತದೆ. ಆದರೆ, ಇದರ ಹಣ್ಣುಗಳ ಮಹತ್ವ ಬಹಳ ಮಹತ್ವದ್ದಾಗಿದೆ. ಔಷಧೀಯ ಮತ್ತು ಸೌಂದರ್ಯವರ್ಧಕ ಬಳಕೆಗಳಿಂದ ಹಿಡಿದು ಅಧಿಕ ಪೌಷ್ಟಿಕಾಂಶಗಳಿರುವ ಈ ಕಾಕಡು ಪ್ಲಮ್ ಪ್ರಯೋಜನಗಳು ಅನೇಕ.
ಶತಮಾನಗಳಿಂದ ಆಸ್ಟ್ರೇಲಿಯಾದ ಸ್ಥಳೀಯ ಜನರು ಕಾಕಡು ಪ್ಲಮ್ ಮರದ ಭಾಗಗಳನ್ನು ಮತ್ತು ಅದರ ಹಣ್ಣುಗಳನ್ನು ಹಲವಾರು ವಿಧಗಳಲ್ಲಿ ಬಳಸುತ್ತಿದ್ದಾರೆ. ಆರೋಗ್ಯಕ್ಕೆ ಕಾಕಡು ಪ್ಲಮ್ ಹಣ್ಣಿನ ಪ್ರಯೋಜನಗಳ ಬಗ್ಗೆ ಮಾಹಿತಿ ಇಲ್ಲಿದೆ.
ಸೊಳ್ಳೆ ಕಚ್ಚಿದಾಗ, ಚರ್ಮದ ಹುಣ್ಣುಗಳು, ಶೀತ, ಜ್ವರ, ತಲೆನೋವು ಬಂದಾಗ ಕಾಕಡು ಪ್ಲಮ್ ಬಳಸಿದರೆ ರಿಲೀಫ್ ಸಿಗುತ್ತದೆ. ತ್ವಚೆ ಮತ್ತು ಕೂದಲ ರಕ್ಷಣೆಗಾಗಿ ಕಾಸ್ಮೆಟಿಕ್ ವಸ್ತುಗಳಲ್ಲೂ ಇದನ್ನು ಬಳಸಲಾಗುತ್ತದೆ. ಕೂದಲು ಉತ್ಪನ್ನಗಳು, ಲಿಪ್ ಬಾಮ್, ಫೇಸ್ ವಾಶ್, ಲೋಷನ್ಗಳಲ್ಲಿ ಕಾಕಡು ಪ್ಲಮ್ ಬಳಸಲಾಗುತ್ತದೆ.
ಇದನ್ನೂ ಓದಿ: ದಿನವೂ ಟೀ ಕುಡಿಯುವುದರಿಂದ ನಿಮ್ಮ ದೇಹದಲ್ಲಾಗುವ ಬದಲಾವಣೆಗಳೇನು?
ವಿಟಮಿನ್ ಸಿಯ ಆಗರ:
ಕಾಕಡು ಪ್ಲಮ್ ಪ್ರಪಂಚದಾದ್ಯಂತ ಬೇರೆಲ್ಲ ಹಣ್ಣಿನಲ್ಲಿ ಕಂಡುಬರುವುದಕ್ಕಿಂತ ಅತ್ಯಧಿಕ ಪ್ರಮಾಣದ ವಿಟಮಿನ್ ಸಿ ಅನ್ನು ಹೊಂದಿದೆ. ಕಿತ್ತಳೆ ಹಣ್ಣಿನಲ್ಲೇ ಅತಿಹೆಚ್ಚು ವಿಟಮಿನ್ ಸಿ ಎಂದು ನೀವು ಭಾವಿಸಿದ್ದರೆ ಈ ಹಣ್ಣಿನಲ್ಲಿ ಕಿತ್ತಳೆ ಹಣ್ಣಿನಲ್ಲಿರುವ ವಿಟಮಿನ್ ಸಿಗಿಂತ 100 ಪಟ್ಟು ಹೆಚ್ಚು ಅಂಶವಿದೆ. ಈ ಹಣ್ಣು ಹೆಚ್ಚಿನ ಉತ್ಕರ್ಷಣ ನಿರೋಧಕ ಸಾಮರ್ಥ್ಯವನ್ನು ಹೊಂದಿದೆ. ಇದು ಬೆರಿ ಹಣ್ಣುಗಳಿಗಿಂತ 5.2 ಪಟ್ಟು ಹೆಚ್ಚು ಪ್ರಬಲವಾಗಿದೆ.
ಸೋಂಕುಗಳಿಗೆ ರಾಮಬಾಣ:
ಕಾಕಡು ಪ್ಲಮ್ನ ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳಿಂದಾಗಿ ಇದು ಬ್ಯಾಕ್ಟೀರಿಯಾ, ಶಿಲೀಂಧ್ರ ಮತ್ತು ವೈರಲ್ ಸೋಂಕುಗಳಿಂದ ಪರಿಹಾರ ನೀಡುತ್ತದೆ. ಈ ಹಣ್ಣು ವಿಟಮಿನ್ ಇಯ ಉತ್ತಮ ಮೂಲವಾಗಿದೆ. ಇದರಲ್ಲಿ ಫೋಲೇಟ್ ಅಂಶ ಹೆಚ್ಚಾಗಿದೆ.
ಕಣ್ಣಿನ ಆರೋಗ್ಯ ಸುಧಾರಿಸುತ್ತದೆ:
ಕಾಕಡು ಪ್ಲಮ್ ಕಣ್ಣುಗಳ ಆರೋಗ್ಯಕ್ಕೆ ಬಹಳ ಅತ್ಯುತ್ತಮವಾದ ಹಣ್ಣು. ಈ ಹಣ್ಣಿನಲ್ಲಿ ಹೆಚ್ಚಿನ ಪ್ರಮಾಣದ ಲುಟೀನ್ ಇದೆ. ಇದು ಮಾನವನ ಕಣ್ಣಿನಲ್ಲಿ ಕಂಡುಬರುವ ಕ್ಯಾರೊಟಿನಾಯ್ಡ್ ಆರೋಗ್ಯಕ್ಕೆ ಒಳ್ಳೆಯದು. ಕಾಕಡು ಪ್ಲಮ್ ಹಣ್ಣಿನ ಸೇವನೆಯು ಕಣ್ಣಿನ ಪೊರೆ, ದೃಷ್ಟಿ ಸಮಸ್ಯೆಗಳು ಮತ್ತು ವಯಸ್ಸಿಗೆ ಸಂಬಂಧಿಸಿದ ಮ್ಯಾಕ್ಯುಲರ್ ಡಿಜೆನರೇಶನ್ ಅಪಾಯವನ್ನು ಕಡಿಮೆ ಮಾಡುತ್ತದೆ.
ರಕ್ತದೊತ್ತಡ ನಿಯಂತ್ರಿಸುತ್ತದೆ:
ಕಾಕಡು ಪ್ಲಮ್‌ನಲ್ಲಿ ಪೊಟ್ಯಾಸಿಯಂ ಮತ್ತು ಸೋಡಿಯಂ ಅನುಪಾತವು ಹೆಚ್ಚು ಪ್ರಮಾಣದಲ್ಲಿದೆ. ಅಧಿಕ ಪೊಟ್ಯಾಸಿಯಂ ಹೊಂದಿರುವ ಆಹಾರಗಳು ಸೋಡಿಯಂನ ಪರಿಣಾಮಗಳನ್ನು ಕಡಿಮೆಗೊಳಿಸುತ್ತವೆ. ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ಕಾಕಡು ಪ್ಲಮ್ ಅತ್ಯುತ್ತಮ ಆಹಾರ.
ಇದನ್ನೂ ಓದಿ: ಆಹಾರ ಬಿಸಿಯಾಗಿರಲು ಬಳಸುವ ಅಲ್ಯುಮಿನಿಯಂ ಫಾಯಿಲ್ ಎಷ್ಟು ಸೇಫ್?
ಕ್ಯಾನ್ಸರ್ ರೋಗವನ್ನು ತಡೆಗಟ್ಟುತ್ತದೆ:
ಕಾಕಡು ಪ್ಲಮ್‌ನಲ್ಲಿರುವ ಪೋಷಕಾಂಶಗಳು ಕೆಲವು ರೀತಿಯ ಕ್ಯಾನ್ಸರ್‌ಗಳ ವಿರುದ್ಧ ರಕ್ಷಣೆ ನೀಡುತ್ತವೆ. ಈ ಹಣ್ಣಿನ ಉರಿಯೂತದ ಗುಣಲಕ್ಷಣಗಳು ಕ್ಯಾನ್ಸರ್ ಕೋಶಗಳನ್ನು ಕೊಲ್ಲುತ್ತವೆ ಎಂದು ತಿಳಿದುಬಂದಿದೆ.
ಜೀರ್ಣಕ್ರಿಯೆಗೆ ಸಹಕಾರಿ:
ಕಾಕಡು ಪ್ಲಮ್ಸ್ ನಯವಾದ, ತಿರುಳಿರುವ ಮತ್ತು ನಾರಿನಿಂದ ಕೂಡಿದ ಹಣ್ಣಾಗಿದೆ. ಆಹಾರದ ಫೈಬರ್ ಅಂಶವು ಜೀರ್ಣಾಂಗ ವ್ಯವಸ್ಥೆಗೆ ಸಾಕಷ್ಟು ಪ್ರಯೋಜನಕಾರಿಯಾಗಿದೆ. ಕಾರ್ಬೋಹೈಡ್ರೇಟ್‌ಗಳ ಸೇವನೆಯ ನಂತರ ಸಂಭವಿಸುವ ರಕ್ತದಲ್ಲಿನ ಸಕ್ಕರೆಯ ಹೆಚ್ಚಳವನ್ನು ನಿಯಂತ್ರಿಸುವಲ್ಲಿ ಫೈಬರ್ ಸಹಾಯ ಮಾಡುತ್ತದೆ.
ಭ್ರೂಣದ ಬೆಳವಣಿಗೆಗೆ ಸಹಕಾರಿ:
ಕಾಕಡು ಪ್ಲಮ್ ತಾಮ್ರದ ಅಂಶ ಮತ್ತು ಫೋಲೇಟ್‌ನ ಅತ್ಯುತ್ತಮ ಮೂಲವಾಗಿದೆ. ಭ್ರೂಣದ ಬೆಳವಣಿಗೆಗೆ ನಿರ್ಣಾಯಕವಾಗಿರುವ ಕೆಂಪು ರಕ್ತ ಕಣಗಳು, ಮೂಳೆಗಳು, ಪ್ರಮುಖ ಕಿಣ್ವಗಳನ್ನು ರೂಪಿಸಲು ದೇಹಕ್ಕೆ ತಾಮ್ರದ ಅಂಶ ಬೇಕಾಗುತ್ತದೆ. ಫೋಲೇಟ್ ನರದ ರಚನೆಯಲ್ಲಿ ಸಹಾಯ ಮಾಡುತ್ತದೆ. ಈ ಹಣ್ಣಿನಲ್ಲಿ ಐರನ್ ಅಂಶ ಹೆಚ್ಚಾಗಿರುವುದರಿಂದ ಇದು ಕೆಂಪು ರಕ್ತ ಕಣಗಳ ಉತ್ಪಾದನೆಗೆ ಸಹಾಯ ಮಾಡುತ್ತದೆ, ದೇಹದ ವಿವಿಧ ಅಂಗಗಳಿಗೆ ಆಮ್ಲಜನಕವನ್ನು ಸಾಗಿಸಲು ಅವಶ್ಯಕವಾಗಿದೆ.
ಇದಿಷ್ಟೇ ಅಲ್ಲದೆ, ಕಾಕಡು ಪ್ಲಮ್ಸ್ ಥಯಾಮಿನ್, ರೈಬೋಫ್ಲಾವಿನ್, ಮೆಗ್ನೀಸಿಯಂ, ಫೈಬರ್, ಸತು ಮತ್ತು ಕ್ಯಾಲ್ಸಿಯಂನಂತಹ ಅಗತ್ಯ ಪೋಷಕಾಂಶಗಳನ್ನು ದೇಹಕ್ಕೆ ಒದಗಿಸುತ್ತದೆ. ಈ ಸೂಕ್ಷ್ಮ ಪೋಷಕಾಂಶಗಳು ವಿವಿಧ ಅಂಗಗಳ ಕಾರ್ಯಗಳಿಗೆ ಅಗತ್ಯವಾಗಿದೆ. ಈ ಹಣ್ಣಿನಲ್ಲಿ ಕಡಿಮೆ ಕ್ಯಾಲೋರಿಗಳು, ಸಾಕಷ್ಟು ಪ್ರೋಟೀನ್, ಕಾರ್ಬೋಹೈಡ್ರೇಟ್, ಫೈಬರ್ ಮತ್ತು ಸೂಕ್ಷ್ಮ ಪೋಷಕಾಂಶಗಳಿವೆ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ