ಇತ್ತೀಚಿನ ಸಂದರ್ಶನವೊಂದರಲ್ಲಿ, ಕಲ್ಕಿ ಕೊಚ್ಲಿನ್ ಹೆರಿಗೆಯ ನಂತರ ತನ್ನ ಲೈಂಗಿಕ ಜೀವನದಲ್ಲಿ ಆದ ಬದಲಾವಣೆಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ನನ್ನ ಮಗಳಿಗೆ ಜನ್ಮ ನೀಡಿದ ಸಮಯದಲ್ಲಿ ನನ್ನ ಖಾಸಗಿ ಅಂಗಗಳು ಸಂಪೂರ್ಣವಾಗಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿದಂತೆ ಭಾಸವಾಗಿತ್ತು. ಸಹಜ ಸ್ಥಿತಿಗೆ ಮರಳಲು ನನಗೆ ಬಹಳ ಸಮಯ ಹಿಡಿಯಿತು, ನಾನು ನಿಧಾನವಾಗಿ ಲೈಂಗಿಕ ಜೀವನಕ್ಕೆ ಮರಳಿದಾಗ, ಅದು ನನಗೆ ತುಂಬಾ ನೋವಿನಿಂದ ಕೂಡಿತ್ತು. ಆ ಸಮಯದಲ್ಲಿ ನಾನು ನನ್ನ ಸಂಗಾತಿಯೊಂದಿಗೆ ಆತ್ಮೀಯವಾಗಿರಲು ಹೆದರುತ್ತಿದ್ದೆ. ನಾನು ಈ ಸಂಪೂರ್ಣ ಘಟನೆಯನ್ನು ನೆನಪಿಸಿಕೊಳ್ಳುತ್ತೇನೆ ಏಕೆಂದರೆ ಯಾವ ಹೆಣ್ಣು ಕೂಡ ಈ ಕುರಿತು ಮುಕ್ತವಾಗಿ ಮಾತನಾಡಲು ಹಿಂಜರಿಯುತ್ತಾರೆ. ಈ ಬಗ್ಗೆ ಅರಿವು ಮೂಡಿಸಲು ಮಾತನಾಡುತ್ತಿರುವೆ ಎಂದು ಹೇಳಿಕೊಂಡಿದ್ದಾರೆ.
ಹೆರಿಗೆಯ ನಂತರ ಪ್ರತೀ ಹೆಣ್ಣಿಗೂ ಮುಖ್ಯವಾಗಿ ತನ್ನ ಗಂಡನ ಬೆಂಬಲ ಅಗತ್ಯವಿರುತ್ತದೆ. ನನ್ನ ಮಗುವಿನ ಜನನದ ನಂತರ ನಾನು ಕೆಲವು ಸಮಸ್ಯೆಗಳನ್ನು ಎದುರಿಸಿದೆ. ಇದರಿಂದಾಗಿ ನಾನು ಮತ್ತೆ ಸ್ತ್ರೀರೋಗತಜ್ಞರ ಬಳಿಗೆ ಹೋಗಿ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು. ಹೆರಿಗೆಯ ನಂತರ ಲೈಂಗಿಕ ಜೀವನವನ್ನು ಪುನರಾರಂಭಿಸುವುದು ಪ್ರತೀ ಮಹಿಳೆಗೆ ಸವಾಲಿನ ಕೆಲಸ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮಹಿಳೆಗೆ ಈ ರೋಗಗಳಿದ್ದಾಗ ಗರ್ಭಧರಿಸಬಾರದು; ಇಲ್ಲಿದೆ ಡಾ. ಮಂಜು ವರ್ಮಾ ನೀಡಿರುವ ಸಲಹೆ
ಇದಲ್ಲದೇ ಸ್ತ್ರೀರೋಗ ತಜ್ಞ ಡಾ.ನ್ಯಾನ್ಸಿ ನಾಗ್‌ಪಾಲ್ ಹೇಳುವಂತೆ, ಹೆರಿಗೆಯ ನಂತರ ಮಹಿಳೆಯರು ಹೆಚ್ಚಾಗಿ ದೈಹಿಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಲೈಂಗಿಕ ಸಮಯದಲ್ಲಿ ನೋವು ಅಥವಾ ಅಸ್ವಸ್ಥತೆಯನ್ನು ಹೊಂದಿರುತ್ತಾರೆ. ಈ ಅವಧಿಯಲ್ಲಿ ಪಾಲುದಾರರ ಭಾವನಾತ್ಮಕ ಬೆಂಬಲ ಬಹಳ ಮುಖ್ಯ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:38 pm, Tue, 22 October 24