International Stammering Awareness Day 2024: ತೊದಲುವಿಕೆ ಸಮಸ್ಯೆಗೆ ಈ ಚಿಕಿತ್ಸೆಯಲ್ಲಿದೆ ಪರಿಹಾರ

ಪ್ರಪಂಚದಾದ್ಯಂತ ಸುಮಾರು 1.5% ಜನರು ತೊದಲುವಿಕೆಯಂತಹ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಸಮಾಜವು ಅಂತಹ ಜನರನ್ನು ನೋಡುವ ರೀತಿಯೇ ಭಿನ್ನವಾಗಿರುವ ಕಾರಣ ಅವರು ಅನೇಕ ರೀತಿಯ ಮಾನಸಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ತೊದಲುವಿಕೆ ಎಂಬುದು ಮಾತಿಗೆ ಸಂಬಂಧಿತ ಅಸ್ವಸ್ಥತೆಯಾಗಿದ್ದು, ಈ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಅಕ್ಟೋಬರ್ 22 ರಂದು ಅಂತಾರಾಷ್ಟ್ರೀಯ ತೊದಲುವಿಕೆ ಜಾಗೃತಿ ದಿನವನ್ನು ಆಚರಿಸಲಾಗುತ್ತದೆ. ಹಾಗಾದ್ರೆ ಈ ದಿನದ ಆಚರಣೆ ಯಾವಾಗದಿಂದ ಪ್ರಾರಂಭವಾಯಿತು ಎನ್ನುವುದರ ಮಾಹಿತಿ ಇಲ್ಲಿದೆ.

International Stammering Awareness Day 2024: ತೊದಲುವಿಕೆ ಸಮಸ್ಯೆಗೆ ಈ ಚಿಕಿತ್ಸೆಯಲ್ಲಿದೆ ಪರಿಹಾರ
ಸಾಂದರ್ಭಿಕ ಚಿತ್ರ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Oct 22, 2024 | 9:52 AM

ಸಣ್ಣ ಮಕ್ಕಳು ತೊದಲು ಮಾತನಾಡುವುದನ್ನು ಕೇಳುವುದೇ ಕಿವಿಗೆ ಇಂಪು. ಅದೇ ದೊಡ್ಡವರೇನಾದರೂ ಮಾತಿನ ನಡುವೆ ತೊದಲುತ್ತಿದ್ದರೆ ಗೇಲಿ ಮಾಡುವವರೇ ಹೆಚ್ಚು. ಈ ತೊದಲುವಿಕೆ ಎಂದು ಕರೆಯಲಾಗುವ ಮಾತಿನ ಉಗ್ಗು, ಬಾಲ್ಯದಲ್ಲಿಯೇ ಅಂಟಿಕೊಳ್ಳುವ ಒಂದು ಅಸ್ವಸ್ಥತೆಯಾಗಿದೆ. ಇದು ಮಕ್ಕಳ ಭಾವನೆಗಳ ಸರಾಗ ಹರಿವಿಗೆ ಸಮಸ್ಯೆ ಉಂಟುಮಾಡುತ್ತದೆ. ಮಕ್ಕಳು ಬೆಳೆಯುತ್ತ ಹೋದಂತೆ ಮಾತಿನ ನಡುವೆ ತೊದಲುತ್ತಿದ್ದರೆ ಪೋಷಕರು ಇದನ್ನು ತಿದ್ದುವ ಪ್ರಯತ್ನ ಅಥವಾ ಸರಿಯಾದ ಚಿಕಿತ್ಸೆ ಕೊಡಿಸುವುದು ಬಹಳ ಮುಖ್ಯ. ಇದೇ ಅಭ್ಯಾಸವಾಗಿ ಬಿಟ್ಟರೆ ಆ ಮಕ್ಕಳು ಬೆಳೆದು ದೊಡ್ಡವರಾದ ಮೇಲೆ ಸಾಕಷ್ಟು ಅವಮಾನಗಳನ್ನು ಅನುಭವಿಸುವ ಸಾಧ್ಯತೆಯೇ ಹೆಚ್ಚು. ಸಮಾಜವು ಆ ವ್ಯಕ್ತಿಗಳು ಮಾತನಾಡುವ ರೀತಿಗೆ ತಮಾಷೆ ಮಾಡಬಹುದು, ಇದು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಈ ತೊದಲುವಿಕೆಯ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಅಕ್ಟೋಬರ್ 22 ರಂದು ಅಂತಾರಾಷ್ಟ್ರೀಯ ತೊದಲುವಿಕೆ ಜಾಗೃತಿ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.

ಅಂತಾರಾಷ್ಟ್ರೀಯ ತೊದಲುವಿಕೆ ಜಾಗೃತಿ ದಿನದ ಇತಿಹಾಸ

ಅಂತಾರಾಷ್ಟ್ರೀಯ ತೊದಲುವಿಕೆ ಜಾಗೃತಿ ದಿನವನ್ನು ಆಚರಣೆಯೂ 1998 ರಲ್ಲಿ ಪ್ರಾರಂಭವಾಯಿತು. ಇಂಟರ್ನ್ಯಾಷನಲ್ ಸ್ಟಟರಿಂಗ್ ಅಸೋಸಿಯೇಷನ್, ಇಂಟರ್ನ್ಯಾಷನಲ್ ಫ್ಲೂಯೆನ್ಸಿ ಅಸೋಸಿಯೇಷನ್ ​​​​ಮತ್ತು ಯುರೋಪಿಯನ್ ಲೀಗ್ ಆಫ್ ಸ್ಟಟರಿಂಗ್ ಅಸೋಸಿಯೇಷನ್ಸ್ ಈ ಸಮಸ್ಯೆಯನ್ನು ಗಂಭೀರ ಸಾಮಾಜಿಕ ಕಾಳಜಿಯ ಸಮಸ್ಯೆ ಎಂದು ಕರೆಯಲಾಯಿತು. ಆ ಸಮಯದಲ್ಲಿ ತೊದಲುವಿಕೆಯ ಸಮಸ್ಯೆಯಿಂದ ಬಳಲುತ್ತಿರುವವರು ಸಾಕಷ್ಟು ಕಿರುಕುಳ ಅನುಭವಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ತೊದಲುವಿಕೆ ಜಾಗೃತಿ ದಿನವನ್ನು ಜಾಗತಿಕವಾಗಿ ಆಚರಿಸಲು ನಿರ್ಧರಿಸಲಾಗಿದೆ. ಅಂದಿನಿಂದ ಪ್ರತಿ ವರ್ಷ ಅಕ್ಟೋಬರ್ 22 ರಂದು ಅಂತಾರಾಷ್ಟ್ರೀಯ ತೊದಲುವಿಕೆ ಜಾಗೃತಿ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.

ಅಂತಾರಾಷ್ಟ್ರೀಯ ತೊದಲುವಿಕೆ ಜಾಗೃತಿ ದಿನದ ಮಹತ್ವ ಹಾಗೂ ಆಚರಣೆ

ತೊದಲುವಿಕೆಯಂತಹ ಸಮಸ್ಯೆಯನ್ನು ಎದುರಿಸುತ್ತಿರುವ ಜನರನ್ನು ನಾವು ನಮ್ಮ ಸುತ್ತಮುತ್ತಲಿನಲ್ಲಿ ನೋಡುತ್ತೇವೆ. ಈ ವ್ಯಕ್ತಿಗಳನ್ನು ಗೇಲಿ ಮಾಡುವವರೇ ಹೆಚ್ಚು. ಆದರೆ ಹಾಸ್ಯವು ಆ ಜನರ ಮೇಲೆ ಮಾನಸಿಕ ಪ್ರಭಾವ ಬೀರುತ್ತದೆ. ಹೀಗಾಗಿ ಈ ತೊದಲುವಿಕೆಯ ಬಗ್ಗೆ ಅರಿವು ಮೂಡಿಸಲು ಮತ್ತು ಶಿಕ್ಷಣ ನೀಡುವ ಸಲುವಾಗಿ ಈ ದಿನವು ಮಹತ್ವದ್ದಾಗಿದೆ. ಈ ಆಚರಣೆಯೂ ತೊದಲುವಿಕೆಯಿಂದ ಬಳಲುತ್ತಿರುವ ಜನರ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಇದಲ್ಲದೇ ವಿವಿಧ ರೀತಿಯ ಜಾಗೃತಿ ಕಾರ್ಯಕ್ರಮಗಳನ್ನು ಕೂಡ ಆಯೋಜಿಸುವ ತೊದಲುವಿಕೆಯಿಂದ ಬಳಲುತ್ತಿರುವ ಜನರನ್ನು ಬೆಂಬಲಿಸಲಾಗುತ್ತದೆ.

ಇದನ್ನೂ ಓದಿ: ಬಳಕೆಯಲ್ಲಿರುವ ರಕ್ತದೊತ್ತಡದ ಔಷಧಕ್ಕಿಂತ ಹೊಸ 3-ಇನ್-1 ಔಷಧಿ ಹೆಚ್ಚು ಪರಿಣಾಮಕಾರಿ, ಅಧ್ಯಯನದಲ್ಲಿ ಬಹಿರಂಗ

ತೊದಲುವಿಕೆಗೆ ಚಿಕಿತ್ಸೆ ಏನು?

ತೊದಲುವಿಕೆಗೆ ಚಿಕಿತ್ಸೆ ನೀಡಲು ಎರಡು ವಿಧಾನಗಳನ್ನು ಅಳವಡಿಸಿಕೊಳ್ಳಲಾಗಿದೆ. ಇವುಗಳಲ್ಲಿ ಮೊದಲನೆಯದು ಸ್ಪೀಚ್ ಥೆರಪಿ, ಇದರಲ್ಲಿ ವೈದ್ಯರು ಮಾತನಾಡುವ ವೇಗವನ್ನು ಕಡಿಮೆ ಮಾಡುವ ಬಗ್ಗೆ ಮಾತನಾಡುತ್ತಾರೆ. ಇದಲ್ಲದೆ, ವ್ಯಕ್ತಿಯು ಯಾವ ನಿರ್ದಿಷ್ಟ ಪದದಲ್ಲಿ ಸಿಲುಕಿಕೊಳ್ಳುತ್ತಾನೆ ಎಂಬುದರ ಬಗ್ಗೆಯೂ ಗಮನ ನೀಡಲಾಗುತ್ತದೆ. ಅದಲ್ಲದೇ, ಇನ್ನೊಂದು ಅರಿವಿನ ವರ್ತನೆಯ ಚಿಕಿತ್ಸೆಯಾಗಿದ್ದು, ಇದು ವ್ಯಕ್ತಿಯ ಮಾತನಾಡುವ ಶಕ್ತಿ ಮತ್ತು ನಡವಳಿಕೆಯನ್ನು ಸುಧಾರಿಸುವ ಮಾನಸಿಕ ಚಿಕಿತ್ಸೆಯಾಗಿದೆ.

ತೊದಲುವಿಕೆ ಸಮಸ್ಯೆ ನಿವಾರಣೆಗೆ ವ್ಯಾಯಾಮಗಳಿವು

* ಶಾರೀರಿಕ ಕಾರಣಗಳಿಂದ ಉಂಟಾಗುವ ತೊದಲುವಿಕೆಗೆ ಕೆಳಗಿನ ವ್ಯಾಯಾಮಗಳು ಪರಿಣಾಮಕಾರಿಯಾಗಿದೆ. ಹೀಗಾಗಿ ಈ ಉಚ್ಚಾರಣಾ ಸ್ವರಕ್ಕೆ ಅನುಗುಣವಾಗಿ ಪ್ರತಿ ಬಾರಿ ಮುಖದ ಸ್ನಾಯುಗಳನ್ನು ವಿರೂಪಗೊಳಿಸಿ, ಸಾಧ್ಯವಾದಷ್ಟು ಅಭಿವ್ಯಕ್ತಿ ಶಬ್ದಗಳನ್ನು ಉಚ್ಚರಿಸಲು ಪ್ರಯತ್ನಿಸುವುದು ಉತ್ತಮ.

* ವೇಗವಾಗಿ ಓದುವ ಅಭ್ಯಾಸ ಬೆಳೆಸಿಕೊಳ್ಳಿ. ಇಲ್ಲಿ ಪದಗಳನ್ನು ತಪ್ಪಾಗಿ ಉಚ್ಚರಿಸಲು ನಿಮ್ಮನ್ನು ಅನುಮತಿಸದಿರಿ ಮತ್ತು ಯಾವುದೇ ಪದ ಅಥವಾ ಉಚ್ಚಾರಾಂಶದಲ್ಲಿ ನಿಲ್ಲಬೇಡಿ. ಎರಡು ಮೂರು ತಿಂಗಳುಗಳವರೆಗೆ ಇದನ್ನು ಪುನರಾವರ್ತಿಸಿದರೆ, ಈ ವ್ಯಾಯಾಮವು ಸ್ನಾಯುವಿನ ಒತ್ತಡವನ್ನು ನಿವಾರಿಸಲು ಮತ್ತು ಮಾತಿನಲ್ಲಿ ಉಂಟಾಗುವ ಅಡಚಣೆಗಳನ್ನು ಸರಿಪಡಿಸುತ್ತದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ
ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ: ಸಿಎಂ
ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ: ಸಿಎಂ
Video: ಕಜಾಕಿಸ್ತಾನ ವಿಮಾನ ಪತನದ ಮೊದಲು ಹಾಗೂ ನಂತರದ ಭಯಾನಕ ವಿಡಿಯೋ
Video: ಕಜಾಕಿಸ್ತಾನ ವಿಮಾನ ಪತನದ ಮೊದಲು ಹಾಗೂ ನಂತರದ ಭಯಾನಕ ವಿಡಿಯೋ
ಸುಖಾಸುಮ್ಮನೆ ವಿರಾಟ್ ಕೊಹ್ಲಿ ಕಿರಿಕ್: ತಿರುಗಿ ನಿಂತ ಸ್ಯಾಮ್ ಕೊನ್​ಸ್ಟಾಸ್
ಸುಖಾಸುಮ್ಮನೆ ವಿರಾಟ್ ಕೊಹ್ಲಿ ಕಿರಿಕ್: ತಿರುಗಿ ನಿಂತ ಸ್ಯಾಮ್ ಕೊನ್​ಸ್ಟಾಸ್
ಬಡತನದಿಂದ ಮುಕ್ತಿ ಹೊಂದಲು, ಮನೆಯಲ್ಲಿ ನೆಮ್ಮದಿಗೆ ಇಲ್ಲಿದೆ ಸುಲಭ ಉಪಾಯ
ಬಡತನದಿಂದ ಮುಕ್ತಿ ಹೊಂದಲು, ಮನೆಯಲ್ಲಿ ನೆಮ್ಮದಿಗೆ ಇಲ್ಲಿದೆ ಸುಲಭ ಉಪಾಯ
ಸಫಲ ಏಕಾದಶಿಯ ಈ ದಿನ ನಿಮ್ಮ ರಾಶಿ ಭವಿಷ್ಯ ಹೇಗಿರಲಿದೆ ನೋಡಿ
ಸಫಲ ಏಕಾದಶಿಯ ಈ ದಿನ ನಿಮ್ಮ ರಾಶಿ ಭವಿಷ್ಯ ಹೇಗಿರಲಿದೆ ನೋಡಿ
ಕ್ರಿಸ್​ಮಸ್ ಸಂಭ್ರಮ: ಬೆಂಗಳೂರಿನಲ್ಲಿ ಟ್ರಾಫಿಕ್ ​​ಜಾಮ್, ಸವಾರರು ಪರದಾಟ
ಕ್ರಿಸ್​ಮಸ್ ಸಂಭ್ರಮ: ಬೆಂಗಳೂರಿನಲ್ಲಿ ಟ್ರಾಫಿಕ್ ​​ಜಾಮ್, ಸವಾರರು ಪರದಾಟ