ಬಳಕೆಯಲ್ಲಿರುವ ರಕ್ತದೊತ್ತಡದ ಔಷಧಕ್ಕಿಂತ ಹೊಸ 3-ಇನ್-1 ಔಷಧಿ ಹೆಚ್ಚು ಪರಿಣಾಮಕಾರಿ, ಅಧ್ಯಯನದಲ್ಲಿ ಬಹಿರಂಗ

ಇತ್ತೀಚೆಗಿನ ದಿನಗಳಲ್ಲಿ ಅಧಿಕ ರಕ್ತದೊತ್ತಡ ಸಮಸ್ಯೆಯೂ ಎಲ್ಲರನ್ನು ಕಾಡುತ್ತಿದೆ. ಆದರೆ ಇದೀಗ ಹೊಸ 3-ಇನ್-1 ರಕ್ತದೊತ್ತಡದ ಔಷಧವು ರಕ್ತದೊತ್ತಡ ನಿಯಂತ್ರಣವನ್ನು ತೋರಿಸಿದೆ ಎನ್ನುವುದು ಅಧ್ಯಯನದಿಂದ ಬಹಿರಂಗವಾಗಿದೆ. ಈ ಹೊಸ ಅಧ್ಯಯನವು ರಕ್ತದೊತ್ತಡ ನಿರ್ವಹಣೆಯ ಹೊರತಾಗಿ ಮಧುಮೇಹ ಮತ್ತು ಹೃದ್ರೋಗಗಳಲ್ಲಿ ಅದರ ಬಳಕೆಯ ಸಾಮರ್ಥ್ಯದ ಬಗ್ಗೆ ಭಾರತೀಯ ತಜ್ಞರಿಗೆ ಭರವಸೆಯನ್ನು ಮೂಡಿಸಿದೆ.

ಬಳಕೆಯಲ್ಲಿರುವ ರಕ್ತದೊತ್ತಡದ ಔಷಧಕ್ಕಿಂತ ಹೊಸ 3-ಇನ್-1 ಔಷಧಿ ಹೆಚ್ಚು ಪರಿಣಾಮಕಾರಿ, ಅಧ್ಯಯನದಲ್ಲಿ ಬಹಿರಂಗ
ಸಾಂದರ್ಭಿಕ ಚಿತ್ರ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Oct 21, 2024 | 2:04 PM

ಇಂದಿನ ಜನರ ಜೀವನ ಶೈಲಿ ಹಾಗೂ ಆಹಾರ ಕ್ರಮದಿಂದ ಅಧಿಕ ರಕ್ತದೊತ್ತಡ ಪ್ರಸ್ತುತ ಅನೇಕರನ್ನು ಪೀಡಿಸುತ್ತಿರುವ ಕಾಯಿಲೆಯಾಗಿದೆ. ಈ ಕಾಯಿಲೆಯೂ ಒಮ್ಮೆ ಬಂದರೆ ಸಾಕು, ಜೀವನ ಪರ್ಯಂತ ಔಷಧಿಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಆದರೆ ಇದೀಗ ಟೆಲ್ಮಿಸಾರ್ಟನ್, ಅಮ್ಲೋಡಿಪೈನ್ ಮತ್ತು ಇಂಡಪಮೈಡ್ ಮೂರು ಔಷಧಗಳ ಸಂಯೋಜನೆಗಳನ್ನೊಳಗೊಂಡ GMRx2 ಹೊಸ ಟ್ರಿಪಲ್ ಸಂಯೋಜಿತ ಔಷಧವು ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ಸಹಕಾರಿಯಾಗಿದೆ ಎಂದು ಅಧ್ಯಯನದಿಂದ ಬಹಿರಂಗವಾಗಿದೆ.

ವೈದ್ಯಕೀಯ ಜರ್ನಲ್ ದಿ ಲ್ಯಾನ್ಸೆಟ್‌ನಲ್ಲಿ ಅದರ ಇತ್ತೀಚಿನ ಆವೃತ್ತಿಯಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, “ಟೆಲ್ಮಿಸಾರ್ಟನ್, ಅಮ್ಲೋಡಿಪೈನ್ ಮತ್ತು ಇಂಡಪಮೈಡ್‌ನ ಕಡಿಮೆ-ಡೋಸ್ ಏಕ-ಮಾತ್ರೆ ಸಂಯೋಜನೆಗಳ (SPC) ಉತ್ಪನ್ನವು ಈ ಎರಡು ಸಂಯೋಜನೆಗಳಿಗೆ ಹೋಲಿಸಿದರೆ ರಕ್ತದೊತ್ತಡ ಕಡಿಮೆ ಮಾಡುವಲ್ಲಿ GMRx2 ಹೊಸ ಔಷಧವು ಪರಿಣಾಮಕಾರಿಯಾಗಿದೆ. ಈ ಹೊಸ ಅಧ್ಯಯನವು ಭಾರತೀಯರಿಗೆ ಬಹಳಷ್ಟು ಅನುಕೂಲಕರವಾಗಲಿದೆ.

ವಿಶ್ವ ಆರೋಗ್ಯ ಸಂಸ್ಥೆಯ (WHO) ಅಂದಾಜಿನ ಪ್ರಕಾರ ಭಾರತದಲ್ಲಿ ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವ ಅಂದಾಜು 22 ಕೋಟಿ ಜನರಲ್ಲಿ, ಕೇವಲ 12 ಪ್ರತಿಶತದಷ್ಟು ಜನರು ತಮ್ಮ ರಕ್ತದೊತ್ತಡವನ್ನು ನಿಯಂತ್ರಣವನ್ನು ಹೊಂದಿದ್ದಾರೆ. ಬೇರೆ ಆರೋಗ್ಯ ಸಮಸ್ಯೆಗಳಿಗಿಂತ ಅಧಿಕ ರಕ್ತದೊತ್ತಡವು ಹೆಚ್ಚು ಜನರ ಸಾವಿಗೆ ಕಾರಣವಾಗುತ್ತಿದೆ. ಆದರೆ ಈ ಹೊಸ ಟ್ರಿಪಲ್ ಸಿಂಗಲ್ ಮಾತ್ರೆಗಳು ರಕ್ತದೊತ್ತಡ ನಿಯಂತ್ರಿಸಲು ಸಹಕಾರಿಯಾಗಿದೆ ಎನ್ನುವುದು ದೃಢವಾಗಿದೆ.

ಅಕ್ಟೋಬರ್ 19 ರಂದು ಪ್ರಕಟವಾದ ಅಧ್ಯಯನವು ಮೂರು ಸಂಭವನೀಯ ಎರಡು-ಔಷಧಗಳ ಸಂಯೋಜನೆಯನ್ನು ಮೂರು ಆಂಟಿ ಹೈಪರ್ಟೆನ್ಸಿವ್ ಔಷಧಿಗಳ ಕಡಿಮೆ-ಡೋಸ್ ಕಾಕ್ಟೈಲ್ನ್ ನೊಂದಿಗೆ ಹೋಲಿಸಲಾಗಿದೆ. ಇದು ಅಧಿಕ ರಕ್ತದೊತ್ತಡದ ನಿರ್ವಹಣೆಗೆ ಹೊಸ ಚಿಕಿತ್ಸಕ ಆಯ್ಕೆಯನ್ನು ಒದಗಿಸುತ್ತದೆ. ಈ ಔಷಧದ ಬಳಕೆಯೂ ರಕ್ತದೊತ್ತಡ ನಿಯಂತ್ರಣದಲ್ಲಿ ಗಣನೀಯ ಸುಧಾರಣೆಗೆ ಕಾರಣವಾಗಿದೆ. ಈ ಅಧ್ಯಯನ ಬಳಿಕ ಭಾರತೀಯ ವೈದ್ಯರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

ಫೋರ್ಟಿಸ್ ಸಿ-ಡಾಕ್ ಹಾಸ್ಪಿಟಲ್ ಫಾರ್ ಡಯಾಬಿಟಿಸ್ ಅಂಡ್ ಅಲೈಡ್ ಸೈನ್ಸಸ್‌ನ ಅಧ್ಯಕ್ಷ ಡಾ ಅನೂಪ್ ಮಿಶ್ರಾ, “ವಿಭಿನ್ನ ಕಾರ್ಯವಿಧಾನಗಳನ್ನು ಗುರಿಯಾಗಿಸಿಕೊಂಡು ಬಹು ಔಷಧಿಗಳ ಮುಂಚೂಣಿಯಲ್ಲಿರುವ ಡೋಸಿಂಗ್ ಒಂದು ನವೀನ ಪರಿಕಲ್ಪನೆಯಾಗಿದೆ, ಇದು ಅಧಿಕ ರಕ್ತದೊತ್ತಡ ಮಾತ್ರವಲ್ಲದೆ ಮಧುಮೇಹ ಮತ್ತು ಹೃದಯ ವೈಫಲ್ಯಕ್ಕೂ ಅನ್ವಯಿಸುತ್ತದೆ. ಈ ಔಷಧವನ್ನು ತೆಗೆದುಕೊಳ್ಳುವುದು ಸುಲಭವಾಗಿದೆ ಎಂದಿದ್ದಾರೆ.

ಇದನ್ನೂ ಓದಿ: ಋತುಬಂಧದ ಆರಂಭಿಕ ಲಕ್ಷಣ ಹಾಗೂ ವೈದ್ಯಕೀಯ ಆರೈಕೆಯ ಬಗ್ಗೆ ಇಲ್ಲಿದೆ ಮಾಹಿತಿ

ಹೈದರಾಬಾದ್‌ನ ಅಪೋಲೋ ಆಸ್ಪತ್ರೆಗಳ ನರವಿಜ್ಞಾನಿ ಡಾ ಸುಧೀರ್ ಕುಮಾರ್ “ಅಧಿಕ ರಕ್ತದೊತ್ತಡ ಹೊಂದಿರುವ ರೋಗಿಗಳಲ್ಲಿ ಕಳಪೆ ರಕ್ತದೊತ್ತಡ ನಿಯಂತ್ರಣಕ್ಕೆ ಒಂದು ಕಾರಣವೆಂದರೆ ಹೆಚ್ಚಿನ ಮಾತ್ರೆಗಳ ಸೇವನೆಯಿಂದ ಕಳಪೆ ಮಟ್ಟದಲ್ಲಿ ಔಷಧವನ್ನು ತೆಗೆದುಕೊಳ್ಳುವುದಾಗಿದೆ. ಟ್ರಿಪಲ್ ಡ್ರಗ್ ಸಂಯೋಜನೆಯೊಂದಿಗೆ ಈ ಸಮಸ್ಯೆಗಳನ್ನು ನಿವಾರಿಸಬಹುದು. ಮೂರು ಮಾತ್ರೆಗ ಸಂಯೋಜನೆಯೂ ಒಂದೇ ಮಾತ್ರೆಯಲ್ಲಿ ಇರುವುದರಿಂದ ಪ್ರತಿ 24 ಗಂಟೆಗಳಿಗೊಮ್ಮೆ ಒಂದೇ ಮಾತ್ರೆಯನ್ನು ತೆಗೆದುಕೊಳ್ಳುವುದು ಸುಲಭದಾಯಕವಾಗಿದೆ. ಈ ಟ್ರಿಪಲ್ ಡ್ರಗ್ ಸಂಯೋಜನೆಯು ಪರೋಕ್ಷವಾಗಿ ಪಾರ್ಶ್ವವಾಯು ಮತ್ತು ಹೃದಯಾಘಾತದ ಅಪಾಯದಲ್ಲಿ ಗಮನಾರ್ಹ ಇಳಿಕೆಗೆ ಕಾರಣವಾಗಬಹುದು. ಇದನ್ನು ಔಷಧವಾಗಿ ಬಳಸುವ ಮೊದಲು ಹೆಚ್ಚಿನ ಅಧ್ಯಯನಗಳನ್ನು ಮಾಡುವ ಅವಶ್ಯಕತೆಯಿದೆ ಎಂದಿದ್ದಾರೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಮ್ಮ ಆದಾಯಕ್ಕೆ ಮೀರಿದ ಪ್ರಕರಣ ಈಗ ರಾಷ್ಟ್ರೀಯ ವಿಷಯವೆಂದ ಶಿವಕುಮಾರ್
ತಮ್ಮ ಆದಾಯಕ್ಕೆ ಮೀರಿದ ಪ್ರಕರಣ ಈಗ ರಾಷ್ಟ್ರೀಯ ವಿಷಯವೆಂದ ಶಿವಕುಮಾರ್
ಗೃಹ ಸಚಿವ ಪರಮೇಶ್ವರ್​ ತವರು ಜಿಲ್ಲೆಯಲ್ಲಿ ಸೋರುತಿಹುದು ಪೊಲೀಸ್​ ಠಾಣೆ
ಗೃಹ ಸಚಿವ ಪರಮೇಶ್ವರ್​ ತವರು ಜಿಲ್ಲೆಯಲ್ಲಿ ಸೋರುತಿಹುದು ಪೊಲೀಸ್​ ಠಾಣೆ
ಟೀಮ್ ಇಂಡಿಯಾದ ಸೋಲಿನ ಬೆನ್ನಲ್ಲೇ ಕೀರ್ತನೆಯಲ್ಲಿ ಕಾಣಿಸಿಕೊಂಡ ಕೊಹ್ಲಿ
ಟೀಮ್ ಇಂಡಿಯಾದ ಸೋಲಿನ ಬೆನ್ನಲ್ಲೇ ಕೀರ್ತನೆಯಲ್ಲಿ ಕಾಣಿಸಿಕೊಂಡ ಕೊಹ್ಲಿ
ಸಿಎಂ ಮಗನ ಸಾವಿಗೆ ಭೈರತಿ ಕಾರಣ ಅಂತ ಜನ ಮಾತನಾಡಿಕೊಳ್ಳುತ್ತಿದ್ದಾರೆ: ಶೋಭಾ
ಸಿಎಂ ಮಗನ ಸಾವಿಗೆ ಭೈರತಿ ಕಾರಣ ಅಂತ ಜನ ಮಾತನಾಡಿಕೊಳ್ಳುತ್ತಿದ್ದಾರೆ: ಶೋಭಾ
ರಾತ್ರಿ ತಂಗಿದ್ದ ಗುಡಿ ನಡುಗಡ್ಡೆಯಾಗಿದ್ದು ಭಕ್ತರಿಗೆ ಬೆಳಗ್ಗೆ ಗೊತ್ತಾಗಿದೆ
ರಾತ್ರಿ ತಂಗಿದ್ದ ಗುಡಿ ನಡುಗಡ್ಡೆಯಾಗಿದ್ದು ಭಕ್ತರಿಗೆ ಬೆಳಗ್ಗೆ ಗೊತ್ತಾಗಿದೆ
ಎರಡು ಬಸ್​ಗಳ ನಡುವೆ ಡಿಕ್ಕಿ, ಪ್ರಯಾಣಿಕರು ಪವಾಡಸದೃಶ ರೀತಿಯಲ್ಲಿ ಪಾರು
ಎರಡು ಬಸ್​ಗಳ ನಡುವೆ ಡಿಕ್ಕಿ, ಪ್ರಯಾಣಿಕರು ಪವಾಡಸದೃಶ ರೀತಿಯಲ್ಲಿ ಪಾರು
ಬಿಜೆಪಿ-ಜೆಡಿಎಸ್ ಮೈತ್ರಿಗೆ ನಾವು ಹುಳಿ ಹಿಂಡುತ್ತಿಲ್ಲವೆಂದ ಚಲುವರಾಯಸ್ವಾಮಿ
ಬಿಜೆಪಿ-ಜೆಡಿಎಸ್ ಮೈತ್ರಿಗೆ ನಾವು ಹುಳಿ ಹಿಂಡುತ್ತಿಲ್ಲವೆಂದ ಚಲುವರಾಯಸ್ವಾಮಿ
ಇಂದು ಸುರಿದ ಮಳೆಗೆ ಬೆಂಗಳೂರು ಡಬಲ್ ರೋಡಲ್ಲಿ ಸಿಂಗಲ್ ರೋಡೂ ಕಾಣಿಸ್ತಿಲ್ಲ
ಇಂದು ಸುರಿದ ಮಳೆಗೆ ಬೆಂಗಳೂರು ಡಬಲ್ ರೋಡಲ್ಲಿ ಸಿಂಗಲ್ ರೋಡೂ ಕಾಣಿಸ್ತಿಲ್ಲ
ಮೆಕ್​ಡೊನಾಲ್ಡ್​ನಲ್ಲಿ ಫ್ರೆಂಚ್​ಫ್ರೈಸ್ ಮಾಡಿದ ಡೊನಾಲ್ಡ್​ ಟ್ರಂಪ್
ಮೆಕ್​ಡೊನಾಲ್ಡ್​ನಲ್ಲಿ ಫ್ರೆಂಚ್​ಫ್ರೈಸ್ ಮಾಡಿದ ಡೊನಾಲ್ಡ್​ ಟ್ರಂಪ್
‘ಬರಬಾರದಿತ್ತು’; ಬಿಗ್ ಬಾಸ್ ಮನೆಯಲ್ಲಿ ಮೊದಲ ದಿನವೇ ಸುಸ್ತಾದ ಹನುಮಂತ್
‘ಬರಬಾರದಿತ್ತು’; ಬಿಗ್ ಬಾಸ್ ಮನೆಯಲ್ಲಿ ಮೊದಲ ದಿನವೇ ಸುಸ್ತಾದ ಹನುಮಂತ್