ಋತುಬಂಧದ ಆರಂಭಿಕ ಲಕ್ಷಣ ಹಾಗೂ ವೈದ್ಯಕೀಯ ಆರೈಕೆಯ ಬಗ್ಗೆ ಇಲ್ಲಿದೆ ಮಾಹಿತಿ

ಮಹಿಳೆಯರಲ್ಲಿ ಋತುಬಂಧದ ಸಮಯದಲ್ಲಿ ಆಗುವ ದೈಹಿಕ ಹಾಗೂ ಮಾನಸಿಕ ಬದಲಾವಣೆಗಳೇನು? ಹಾಗೂ ವೈದ್ಯಕೀಯ ಆರೈಕೆ, ಹಾರ್ಮೋನ್​​ ಏರಿಳಿತಗಳಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿದುಕೊಳ್ಳಿ.

ಋತುಬಂಧದ ಆರಂಭಿಕ ಲಕ್ಷಣ ಹಾಗೂ ವೈದ್ಯಕೀಯ ಆರೈಕೆಯ ಬಗ್ಗೆ ಇಲ್ಲಿದೆ ಮಾಹಿತಿ
Follow us
ಅಕ್ಷತಾ ವರ್ಕಾಡಿ
|

Updated on: Oct 20, 2024 | 4:47 PM

ಋತುಬಂಧವು ಮಹಿಳೆಯ ಜೀವನದ ಒಂದು ಭಾಗ. ಈ ಸಮಯದಲ್ಲಿ ಮಹಿಳೆಯರು ಸಾಕಷ್ಟು ದೈಹಿಕ ಮತ್ತು ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಇದು 40-50 ನೇ ವಯಸ್ಸಿನಲ್ಲಿ ಸಂಭವಿಸುತ್ತದೆ. ಇದು ನೈಸರ್ಗಿಕ ಪ್ರಕ್ರಿಯೆ ಆದರೆ ಋತುಬಂಧ ಸಮಯದಲ್ಲಿ ಮಹಿಳೆಯರು ಕೆಲವು ರೋಗಲಕ್ಷಣಗಳನ್ನು ಅನುಭವಿಸುತ್ತಾರೆ. ಇದು ಮಹಿಳೆಯ ಸಂತಾನೋತ್ಪತ್ತಿ ಜೀವನದ ಅಂತ್ಯವನ್ನು ಸೂಚಿಸುತ್ತದೆ. ಅಂದರೆ ಮಹಿಳೆಯ ಜೀವನದಲ್ಲಿ ಇನ್ನು ಮುಂದೆ ಸಂತಾನೋತ್ಪತ್ತಿ ಮಾಡಲು ಸಾಧ್ಯವಾಗದ ಸಮಯ ಮತ್ತು ಆಕೆಯ ಋತುಚಕ್ರವು ಕೊನೆಗೊಳ್ಳುವ ಸಮಯವಾಗಿದೆ.

@TheLancet ಎಂಬ ಟ್ವಟರ್​ ಖಾತೆಯಲ್ಲಿ ಋತುಬಂಧಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿ, ವೈದ್ಯಕೀಯ ಆರೈಕೆ ಮತ್ತು ಅಗತ್ಯವಿರುವ ದೈಹಿಕ ಹಾಗೂ ಮಾನಸಿಕ ಬೆಂಬಲದ ಕುರಿತ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ.

ಮೇಲೆ ನೀಡಲಾದ ಮಾಹಿತಿಯ ಪ್ರಕಾರ ಋತುಬಂಧದ ಲಕ್ಷಣಗಳಿವು:

1. ಹೆಚ್ಚು ರಕ್ತಸ್ರಾವ ಮತ್ತು ಅನಿಯಮಿತ ಮುಟ್ಟು:

ಮಹಿಳೆಯರಲ್ಲಿ ಋತುಬಂಧದ ಸಮಯದಲ್ಲಿ ಕಂಡುಬರುವ ಪ್ರಮುಖ ಸಮಸ್ಯೆಗಳಲ್ಲಿ ಒಂದು ಹೆಚ್ಚು ರಕ್ತಸ್ರಾವ ಮತ್ತು ಅನಿಯಮಿತ ಮುಟ್ಟು. ಸಾಮಾನ್ಯವಾಗಿ ತಿಂಗಳಿಗೊಮ್ಮೆ ಪೀರಿಯಡ್‌ ಆಗುವ ದೇಹದಲ್ಲಾಗುವ ಹಾರ್ಮೋನ್ ಬದಲಾವಣೆಗಳಿಂದ ಏರುಪೇರಾಗಿ ತಿಂಗಳಿಗೆ ಎರಡು ಸಲವೂ ಆಗಬಹುದು. ಕೆಲವರಲ್ಲಿ ಹೆಚ್ಚು ರಕ್ತಸ್ರಾವವಾದರೆ ಇನ್ನೂ ಕೆಲವರಲ್ಲಿ ರಕ್ತಸ್ರಾವದ ಕೊರತೆಯಾಗಬಹುದು.

2. ರಾತ್ರಿಯಲ್ಲಿ ಅತಿಯಾದ ಬೆವರುವಿಕೆ:

ರಾತ್ರಿ ಮಲಗಿರುವಾಗ ಅತಿಯಾದ ಬೇವರಿನಿಂದಾಗಿ ಪದೇ ಪದೇ ಎಚ್ಚರವಾಗುವುದು. ದೇಹದಲ್ಲಿ ಶಾಖ ವಿಪರೀತವಾಗುವುದು ಋತುಬಂಧದ ಸಮಯದಲ್ಲಿ ಕಂಡುಬರುವ ಪ್ರಮುಖ ಸಮಸ್ಯೆಗಳಲ್ಲಿ ಒಂದು. ಋತುಬಂಧದ ಸಮಯದಲ್ಲಿ ಹಾರ್ಮೋನ್​​ ಏರಿಳಿತಗಳಿಂದ ಈ ರೀತಿಯ ಸಮಸ್ಯೆ ಕಾಡುತ್ತದೆ.

3. ನಿದ್ರಾಹೀನತೆ ಮತ್ತು ಮಾನಸಿಕ ಒತ್ತಡ:

ನಿದ್ರಾಹೀನತೆ ಜೊತೆಗೆ ಮಾನಸಿಕ ಒತ್ತಡ ಋತುಬಂಧದ ಸಮಯದಲ್ಲಿ ಹಾರ್ಮೋನ್​​ ಏರಿಳಿತಗಳಿಂದ ಈ ರೀತಿಯ ಸಮಸ್ಯೆ ಕಾಡುತ್ತದೆ. ಪದೇ ಪದೇ ಎಚ್ಚರಗೊಳ್ಳುವುದು, ಮಾನಸಿಕ ಖಿನ್ನತೆಗೆ, ಕಾರಣಗಳೇ ಇಲ್ಲದೇ ಸುಮ್ಮ ಸುಮ್ಮನೇ ಯೋಚನೆ, ಬೇಸರ ಮುಂದಾದ ಲಕ್ಷಣಗಳು ಕಂಡುಬರುತ್ತದೆ.

4. ಒಣಚರ್ಮದ ಸಮಸ್ಯೆ:

ಋತುಬಂಧದ ಸಮಯದಲ್ಲಿ ದೇಹ ಸಂಪೂರ್ಣ ಶುಷ್ಕವಾಗವ ಲಕ್ಷಣ ಕಂಡುಬರಬಹುದು. ಜೊತೆಗೆ ನಿಮ್ಮ ಖಾಸಗಿ ಅಂಗವು ಸಹ ಶುಷ್ಕವಾಗಿರಲಿದೆ. ಈ ಸಂದಭದಲ್ಲಿ ದೇಹಕ್ಕೆ ಹರಳೆಣ್ಣೆ ಸ್ನಾನ ಒಳ್ಳೆಯದು. ದೇಹ ಒಣಗದಂತೆ ನೋಡಿಕೊಳ್ಳುವುದರಿಂದ ಒಣಚರ್ಮದಿಂದ ಮುಕ್ತಿ ಪಡೆಯಬಹುದು

@TheLancet ಎಂಬ ಟ್ವಟರ್​ ಖಾತೆಯಲ್ಲಿ ನೀಡಿರುವ ಫೋಸ್ಟ್​​ ಪ್ರಕಾರ ಮಹಿಳೆಯರಲ್ಲಿ ಋತುಬಂಧದ ನಂತರದ ದಿನಗಳಲ್ಲಿ ಕ್ಯಾನ್ಸರ್‌ ಕಂಡುಬರುವ ಸಾಧ್ಯತೆ ಹೆಚ್ಚು. ಈ ಬಗ್ಗೆ ಸಾಕಷ್ಟು ಎಚ್ಚರಿಕೆ ಹಾಗೂ ಜಾಗೃತೆ ವಹಿಸಬೇಕು.

ಇದನ್ನೂ ಓದಿ: ಋತುಬಂಧದ ಸಮಯದಲ್ಲಿ ಸ್ತನಗಳ ಆರೋಗ್ಯವನ್ನು ಈ ರೀತಿ ಕಾಪಾಡಿಕೊಳ್ಳಿ

ಅಕಾಲಿಕ ಋತುಬಂಧದ ಪರೀಕ್ಷೆ :

ಋತುಬಂಧವನ್ನು ಆಂಟಿ-ಮುಲರಿಯನ್ ಹಾರ್ಮೋನ್ (AMH) ಪರೀಕ್ಷೆ ಮೂಲಕ ಪತ್ತೆ ಮಾಡಬಹುದು. ಈಸ್ಟ್ರೊಜೆನ್ ಮಟ್ಟವನ್ನು ಪರಿಶೀಲಿಸಿ ಋತುಬಂಧದ ಬಗ್ಗೆ ಪರೀಕ್ಷೆ ಮಾಡಬಹುದು. ಋತುಬಂಧದಲ್ಲಿ ಈಸ್ಟ್ರೊಜೆನ್ ಮಟ್ಟವು ಕಡಿಮೆಯಾಗುತ್ತದೆ. ಇದಲ್ಲದೇ ಫಾಲಿಕಲ್ ಸ್ಟಿಮ್ಯುಲೇಟಿಂಗ್ ಹಾರ್ಮೋನ್ ಮಟ್ಟವು ಸತತವಾಗಿ 30 mIU/mL ಗಿಂತ ಹೆಚ್ಚಿದ್ದರೆ ಮತ್ತು ಒಂದು ವರ್ಷದಿಂದ ಮುಟ್ಟಾಗದೆ ಹೋದಲ್ಲಿ ಇದು ಋತುಬಂಧದ ಅವಧಿಯನ್ನು ಸೂಚಿಸುತ್ತದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ
ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ: ಸಿಎಂ
ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ: ಸಿಎಂ
Video: ಕಜಾಕಿಸ್ತಾನ ವಿಮಾನ ಪತನದ ಮೊದಲು ಹಾಗೂ ನಂತರದ ಭಯಾನಕ ವಿಡಿಯೋ
Video: ಕಜಾಕಿಸ್ತಾನ ವಿಮಾನ ಪತನದ ಮೊದಲು ಹಾಗೂ ನಂತರದ ಭಯಾನಕ ವಿಡಿಯೋ
ಸುಖಾಸುಮ್ಮನೆ ವಿರಾಟ್ ಕೊಹ್ಲಿ ಕಿರಿಕ್: ತಿರುಗಿ ನಿಂತ ಸ್ಯಾಮ್ ಕೊನ್​ಸ್ಟಾಸ್
ಸುಖಾಸುಮ್ಮನೆ ವಿರಾಟ್ ಕೊಹ್ಲಿ ಕಿರಿಕ್: ತಿರುಗಿ ನಿಂತ ಸ್ಯಾಮ್ ಕೊನ್​ಸ್ಟಾಸ್
ಬಡತನದಿಂದ ಮುಕ್ತಿ ಹೊಂದಲು, ಮನೆಯಲ್ಲಿ ನೆಮ್ಮದಿಗೆ ಇಲ್ಲಿದೆ ಸುಲಭ ಉಪಾಯ
ಬಡತನದಿಂದ ಮುಕ್ತಿ ಹೊಂದಲು, ಮನೆಯಲ್ಲಿ ನೆಮ್ಮದಿಗೆ ಇಲ್ಲಿದೆ ಸುಲಭ ಉಪಾಯ
ಸಫಲ ಏಕಾದಶಿಯ ಈ ದಿನ ನಿಮ್ಮ ರಾಶಿ ಭವಿಷ್ಯ ಹೇಗಿರಲಿದೆ ನೋಡಿ
ಸಫಲ ಏಕಾದಶಿಯ ಈ ದಿನ ನಿಮ್ಮ ರಾಶಿ ಭವಿಷ್ಯ ಹೇಗಿರಲಿದೆ ನೋಡಿ
ಕ್ರಿಸ್​ಮಸ್ ಸಂಭ್ರಮ: ಬೆಂಗಳೂರಿನಲ್ಲಿ ಟ್ರಾಫಿಕ್ ​​ಜಾಮ್, ಸವಾರರು ಪರದಾಟ
ಕ್ರಿಸ್​ಮಸ್ ಸಂಭ್ರಮ: ಬೆಂಗಳೂರಿನಲ್ಲಿ ಟ್ರಾಫಿಕ್ ​​ಜಾಮ್, ಸವಾರರು ಪರದಾಟ