ಕಿಡ್ನಿ ಬೀನ್ ಅಥವಾ ರಾಜ್ಮಾ ದ್ವಿದಳ ಧಾನ್ಯವಾಗಿದ್ದು, ಇದನ್ನು ಭಾರತ ಮತ್ತು ವಿದೇಶಗಳಲ್ಲಿ ವಿವಿಧ ಸಾಂಪ್ರದಾಯಿಕ ಭಕ್ಷ್ಯಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಇದು ಕಿಡ್ನಿಯ ಬಣ್ಣ ಮತ್ತು ಹೋಲಿಕೆ ಹೊಂದಿರುವುದರಿಂದ ಇದಕ್ಕೆ ಕಿಡ್ನಿ ಬೀನ್ಸ್ ಎಂದು ಕರೆಯಲಾಗುತ್ತದೆ. ಕಿಡ್ನಿ ಬೀನ್ಸ್ಗಳಲ್ಲಿ ಪ್ರೋಟೀನ್ ಹೇರಳವಾಗಿದೆ. ಇದರ ಪ್ರೋಟೀನ್ ಅಂಶ ಕೆಂಪು ಮಾಂಸದಷ್ಟೇ ಇರುತ್ತದೆ. ಹೀಗಾಗಿ, ಸಸ್ಯಾಹಾರಿಗಳಿಗೆ ಕಿಡ್ನಿ ಬೀನ್ಸ್ ಅತ್ಯುತ್ತಮವಾದ ಆಹಾರವಾಗಿದೆ.
ಕಿಡ್ನಿ ಬೀನ್ಸ್ ತಾಮ್ರ, ಕಬ್ಬಿಣ, ಮ್ಯಾಂಗನೀಸ್, ರಂಜಕ, ವಿಟಮಿನ್ ಬಿ 1 ಮತ್ತು ಫೋಲೇಟ್‌ನಂತಹ ಖನಿಜಗಳ ಅತ್ಯುತ್ತಮ ಮೂಲವಾಗಿದೆ. ಇದರಲ್ಲಿ ಸಕ್ಕರೆ ಅಂಶ ಕಡಿಮಯಿದ್ದು, ಫೈಬರ್ ಅಂಶ ಹೆಚ್ಚಾಗಿರುತ್ತದೆ. ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವುದು, ಕೊಲೆಸ್ಟ್ರಾಲ್ ಕಡಿಮೆ ಮಾಡುವುದು ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಸೇರಿದಂತೆ ಹಲವಾರು ಆರೋಗ್ಯ ಪ್ರಯೋಜನಗಳನ್ನು ಕಿಡ್ನಿ ಬೀನ್ಸ್ ಒದಗಿಸುತ್ತದೆ.
ಇದನ್ನೂ ಓದಿ: ಫೈಬರ್ ಅಂಶ ಅಧಿಕವಾಗಿರುವ ಈ 6 ತರಕಾರಿಗಳನ್ನು ನಿರ್ಲಕ್ಷ್ಯಿಸಬೇಡಿ
ಕಿಡ್ನಿ ಬೀನ್ಸ್ ಸೇವನೆಯಿಂದ ಆರೋಗ್ಯಕ್ಕೆ ಆಗುವ ಪ್ರಯೋಜನಗಳ ಬಗ್ಗೆ ಮಾಹಿತಿ ಇಲ್ಲಿದೆ.
ರಕ್ತದ ಸಕ್ಕರೆ ಅಂಶವನ್ನು ನಿಯಂತ್ರಿಸುತ್ತದೆ:
ರಾಜ್ಮಾ ಒಂದು ಅತ್ಯುತ್ತಮ ದ್ವಿದಳ ಧಾನ್ಯವಾಗಿದ್ದು, ಇದು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಸ್ಥಿರಗೊಳಿಸಲು ಸಹಾಯ ಮಾಡುತ್ತದೆ. ಇದು ಕರಗುವ ಫೈಬರ್‌ನ ಉತ್ತಮ ಮೂಲವಾಗಿದೆ.
ಹೃದಯದ ಆರೋಗ್ಯಕ್ಕೆ ಉತ್ತಮವಾಗಿದೆ:
ರಾಜ್ಮಾದಲ್ಲಿರುವ ನಾರಿನಂಶವು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಲು ಪ್ರಯೋಜನಕಾರಿಯಾಗಿದೆ. ರಾಜ್ಮಾದಲ್ಲಿನ ಕರಗುವ ಫೈಬರ್ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಹಾಗೇ, ಹೊಟ್ಟೆಯಲ್ಲಿ ಜೆಲ್ ತರಹದ ವಸ್ತುವನ್ನು ರೂಪಿಸುವ ಮೂಲಕ ಉತ್ತಮ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ.
ಕ್ಯಾನ್ಸರ್ ರೋಗವನ್ನು ತಡೆಗಟ್ಟುತ್ತದೆ:
ರಾಜ್ಮಾದಲ್ಲಿ ಹೆಚ್ಚಿನ ಪ್ರಮಾಣದ ಉತ್ಕರ್ಷಣ ನಿರೋಧಕಗಳು ತುಂಬಿದ್ದು, ಇದು ಕ್ಯಾನ್ಸರ್ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ರಾಜ್ಮಾದಲ್ಲಿ ಫ್ಲೇವನಾಯ್ಡ್‌ಗಳಿದ್ದು, ಇದು ಕ್ಯಾನ್ಸರ್ ಕೋಶಗಳ ರಚನೆಯನ್ನು ತಡೆಯುವಲ್ಲಿ ಪ್ರಯೋಜನಕಾರಿಯಾಗಿದೆ. ಅಮೇರಿಕನ್ ಕ್ಯಾನ್ಸರ್ ಇನ್ಸ್ಟಿಟ್ಯೂಟ್ ಪ್ರಕಾರ, ರಾಜ್ಮಾದಲ್ಲಿರುವ ಲಿಗ್ನಾನ್ಸ್ ಮತ್ತು ಸಪೋನಿನ್ಗಳು ಕ್ಯಾನ್ಸರ್ ಕೋಶಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಹೊಂದಿವೆ.
ಇದನ್ನೂ ಓದಿ: ಪಾಲಕ್ ಸೊಪ್ಪನ್ನು ಸೂಪರ್ ಫುಡ್ ಎಂದು ಕರೆಯೋದೇಕೆ?
ತೂಕ ಕಡಿಮೆ ಮಾಡುತ್ತದೆ:
ರಾಜ್ಮಾದಲ್ಲಿ ಕರಗುವ ಫೈಬರ್ ಮತ್ತು ಪ್ರೋಟೀನ್ ಹೇರಳವಾಗಿದ್ದು, ಇದು ತೂಕ ಇಳಿಸುವ ಆಹಾರವಾಗಿದೆ. ಹೀಗಾಗಿ, ನಿಮ್ಮ ಡಯೆಟ್ ಫುಡ್ನಲ್ಲಿ ಕಿಡ್ನಿ ಬೀನ್ಸ್ ಅನ್ನು ಧಾರಾಳವಾಗಿ ಬಳಸಬಹುದು.
ಮೂಳೆಗಳನ್ನು ಬಲಪಡಿಸುತ್ತದೆ:
ರಾಜ್ಮಾವು ಅಗತ್ಯವಾದ ಖನಿಜಗಳು, ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ಗಳಿಂದ ತುಂಬಿದೆ. ಇದು ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ ಮತ್ತು ಆಸ್ಟಿಯೊಪೊರೋಸಿಸ್ ಅನ್ನು ತಡೆಯುತ್ತದೆ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ