
ಇತ್ತೀಚೆಗಿನ ದಿನಗಳಲ್ಲಿ ಹೆಚ್ಚಿನವರಲ್ಲಿ ಮೂತ್ರ ಪಿಂಡದ ಕಲ್ಲಿನ ಸಮಸ್ಯೆಯು ಕಾಣಿಸಿಕೊಳ್ಳುತ್ತಿದೆ. ಆಹಾರದಲ್ಲಿ ಹೆಚ್ಚಿನ ಪ್ರಮಾಣದ ಆಕ್ಸಲೇಟ್ ಮತ್ತು ಕ್ಯಾಲ್ಸಿಯಂ ಕಲ್ಲುಗಳ ರಚನೆಗೆ ಕಾರಣವಾಗಬಹುದು. ಕಿಡ್ನಿ ಸ್ಟೋನ್ ಗಳಾದಾಗ ಹಳದಿ ಅಥವಾ ಕೆಂಪು ಬಣ್ಣದ ಮೂತ್ರ, ಕೆಳ ಬೆನ್ನು ನೋವು ಮತ್ತು ವಾಕರಿಕೆಯಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಮೂತ್ರಪಿಂಡದ ಕಲ್ಲಿನ ಸಮಸ್ಯೆಯು ಶುರುವಾದ ಆರಂಭದಲ್ಲೇ, ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆದುಕೊಳ್ಳದಿದ್ದರೆ ಚೇತರಿಕೆಗೆ ಶಸ್ತ್ರಚಿಕಿತ್ಸೆ ಕಡ್ಡಾಯವಾಗಿ ಮಾಡಿಸಬೇಕಾಗುತ್ತದೆ.
* ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಿರಿ : ಕಿಡ್ನಿ ಸಮಸ್ಯೆಗಳನ್ನು ತಡೆಯಲು ಸಾಕಷ್ಟು ನೀರು ಕುಡಿಯುವ ಅಭ್ಯಾಸವು ಬೆಳೆಸುವುದು ಒಳ್ಳೆಯದು. ದಿನಕ್ಕೆ ಎರಡರಿಂದ ಮೂರು ಲೀಟರ್ ನಷ್ಟು ನೀರು ಕುಡಿದಾಗ ಮೂತ್ರಪಿಂಡಗಳ ಕಾರ್ಯವು ದೇಹದಿಂದ ವಿಷವನ್ನು ತೆಗೆದುಹಾಕುವ ಕೆಲಸ ಮಾಡುತ್ತದೆ.
* ಸಿಟ್ರಸ್ ಹಣ್ಣುಗಳ ಸೇವನೆ: ನಿಂಬೆಹಣ್ಣು, ಕಿತ್ತಳೆ, ಮುಸಂಬಿಗಳಂತಹ ಹಣ್ಣುಗಳಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಈ ಸಿಟ್ರಸ್ ಹಣ್ಣುಗಳು ಡಿಟಾಕ್ಸಿಫೈಯರ್ ಗಳಾಗಿ ಕಾರ್ಯನಿರ್ವಹಿಸುತ್ತವೆ. ಇದು ಮೂತ್ರಪಿಂಡವು ಸರಿಯಾಗಿ ಕಾರ್ಯನಿರ್ವಹಿಸಲು ಸಹಕಾರಿಯಾಗಿದೆ.
* ಆಹಾರ ಪದಾರ್ಥಗಳಲ್ಲಿ ಉಪ್ಪು ಬಳಕೆ ಮಿತವಾಗಿರಲಿ : ಕೆಲವರು ತಮ್ಮ ಆಹಾರ ಗಳಲ್ಲಿ ಅತಿಯಾದ ಉಪ್ಪನ್ನು ಸೇವಿಸುತ್ತಾರೆ. ಅತಿಯಾದ ಉಪ್ಪಿನಾಂಶಯುಕ್ತ ಆಹಾರಗಳ ಸೇವನೆಯು ಮೂತ್ರಪಿಂಡದ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ಉಪ್ಪಿನಲ್ಲಿ ಸೋಡಿಯಂ ಅಂಶವನ್ನು ಮೂತ್ರಪಿಂಡಗಳಿಂದ ದೇಹದಿಂದ ಹೊರ ಹಾಕಲು ಸಾಧ್ಯವಾಗುವುದಿಲ್ಲ. ಈ ಉಪ್ಪು ಕಿಡ್ನಿ ಸ್ಟೋನ್ ರೂಪುಗೊಳ್ಳಲು ಕಾರಣವಾಗಬಹುದು.
* ಕಾಫಿಯಿಂದ ದೂರವಿರಿ : ಕೆಲವರಿಗೆ ದಿನಕ್ಕೆ ಮೂರು ನಾಲ್ಕು ಬಾರಿ ಕಾಫಿ ಹಾಗೂ ಟೀ ಕುಡಿಯುವ ಅಭ್ಯಾಸವಿರುತ್ತದೆ. ಒಂದು ವೇಳೆ ನಿಮಗೆ ಮೂತ್ರಪಿಂಡದ ತೊಂದರೆಯಿದ್ದರೆ ಕಾಫಿಯನ್ನು ತ್ಯಜಿಸುವುದು ಉತ್ತಮ. ಈ ಕಾಫಿಯಲ್ಲಿ ಕೆಫೀನ್ ಅಂಶವು ಅಧಿಕವಾಗಿದ್ದು, ಮೂತ್ರಪಿಂಡದ ಕಲ್ಲುಗಳ ಅಪಾಯವನ್ನು ಹೆಚ್ಚಿಸುವವ ಸಾಧ್ಯತೆಯಿದೆ.