ಇಂಗು ನೀರು ಸೇವನೆಯಿಂದ ಸಿಗುವ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿದರೆ ಆಶ್ಚರ್ಯವಾಗುತ್ತೆ

| Updated By: shruti hegde

Updated on: Oct 19, 2021 | 8:46 AM

Health Tips: ತಯಾರಿಸುವ ಅಡುಗೆಯಲ್ಲಿ ಇಂಗು ಸೇವಿಸುವ ಹೊರತಾಗಿ ಆರೋಗ್ಯ ಪ್ರಯೋಜನಗಳನ್ನು ಪಡೆಯುವುದಿದ್ದರೆ ಇಂಗು ನೀರು ಸೇವಿಸಿ. ನೀರಿನೊಂದಿಗೆ ಒಂದು ಚಿಟಿಕೆ ಇಂಗು ಮಿಶ್ರಣ ಮಾಡಿ ಕುಡಿಯುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ.

ಇಂಗು ನೀರು ಸೇವನೆಯಿಂದ ಸಿಗುವ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿದರೆ ಆಶ್ಚರ್ಯವಾಗುತ್ತೆ
ಸಂಗ್ರಹ ಚಿತ್ರ
Follow us on

ಅಡುಗೆಯಲ್ಲಿ ಸುವಾಸನೆ ಮತ್ತು ರುಚಿಯನ್ನು ಹೆಚ್ಚಿಸುವ ಸಲುವಾಗಿ ಇಂಗನ್ನು ಉಪಯೋಗಿಸುತ್ತಾರೆ. ವಿವಿಧ ಮಸಾಲೆಗಳೊಂದಿಗೆ ಇಂಗು ಸೇರಿಸಿ ಒಗ್ಗರಣೆ ಹಾಕಿ ಅಡುಗೆ ಮಾಡುವ ಮೂಲಕ ಪದಾರ್ಥದ ರುಚಿ ಇನ್ನೂ ಹೆಚ್ಚುತ್ತದೆ. ಇದು ಆರೊಗ್ಯಕ್ಕೂ ಸಹ ಒಳ್ಳೆಯ ಪ್ರಯೋಜನಗಳನ್ನು ನೀಡುತ್ತದೆ. ಇದರಲ್ಲಿ ಬ್ಯಾಕ್ಟೀರಿಯಾ ವಿರೋಧಿ, ಉರಿಯೂತ ನಿವಾರಕ ಗುಣಗಳಿರುವುದರಿಂದ ಆರೊಗ್ಯಕ್ಕೆ ಹಲವು ಪ್ರಯೋಜನಗಳಿವೆ.

ತಯಾರಿಸುವ ಅಡುಗೆಯಲ್ಲಿ ಇಂಗು ಸೇವಿಸುವ ಹೊರತಾಗಿ ಆರೋಗ್ಯ ಪ್ರಯೋಜನಗಳನ್ನು ಪಡೆಯುವುದಿದ್ದರೆ ಇಂಗು ನೀರು ಸೇವಿಸಿ. ನೀರಿನೊಂದಿಗೆ ಒಂದು ಚಿಟಿಕೆ ಇಂಗು ಮಿಶ್ರಣ ಮಾಡಿ ಕುಡಿಯುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ಒಂದು ಲೋಟ ಬೆಚ್ಚಗಿನ ನೀರಿಗೆ ಒಂದು ಚಿಟಿಕೆ ಇಂಗಿನ ಪುಡಿಯನ್ನು ಸೇರಿಸಿ. ಖಾಲಿ ಹೊಟ್ಟೆಯಲ್ಲಿ ಇದನ್ನು ಕುಡಿಯುವುದರಿಂದ ಆರೋಗ್ಯಕ್ಕೆ ಇನ್ನೂ ಹೆಚ್ಚಿನ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.

ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ
ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಇಂಗಿನ ಸೇವನೆ ಉತ್ತಮ. ಇದು ಜೀರ್ಣಾಂಗ ವ್ಯವಸ್ಥೆಯಿಂದ ಎಲ್ಲಾ ಹಾನಿಕಾರಕ ಜೀವಾಣುಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ. ಇದು ಅಜೀರ್ಣದಂತಹ ಸಮಸ್ಯೆಗೆ ಪರಿಹಾರ ನೀಡುತ್ತದೆ.

ತೂಕ ನಷ್ಟಕ್ಕೆ ಸಹಾಯಕ
ಇಂಗಿನ ನೀರು ಚಯಾಪಚಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇಂಗಿನ ನೀರು ಸೇವಿಸುವುದರಿಂದ ತೂಕ ನಷ್ಟಕ್ಕೆ ಸಹಾಯಕವಾಗಿದೆ. ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ಅನ್ನು ನಿಯಂತ್ರಣದಲ್ಲಿರಲು ಸಹಾಯಕ. ನಿಮ್ಮ ಹೃದಯ ಆರೋಗ್ಯವನ್ನು ಸುಧಾರಿಸುತ್ತದೆ.

ಶೀತ, ಜ್ವರ ಸಮಸ್ಯೆಗೆ ಪರಿಹಾರ
ಇಂಗು ನೀರು ಉಸಿರಾಟ ಸಮಸ್ಯೆಯನ್ನು ಸುಧಾರಿಸುತ್ತದೆ. ಶೀತ, ಜ್ವರ ಕಾಣಿಸಿಕೊಳ್ಳುತ್ತಿದ್ದರೆ ಇಂಗು ನೀರು ಸೇವಿಸುವ ಮೂಲಕ ಪರಿಹಾರ ಕಂಡುಕೊಳ್ಳಬಹುದಾಗಿದೆ. ಜತೆಗೆ ತಲೆನೋವಿನ ಸಮಸ್ಯೆಗೂ ಪರಿಹಾರ ಕಂಡುಕೊಳ್ಳಬಹುದಾಗಿದೆ.

ಅಧಿಕ ರಕ್ತದೊತ್ತಡ ನಿಯಂತ್ರಿಸಲು ಸಹಾಯಕ
ಇಂಗು ನೀರು ಅಧಿಕ ರಕ್ತದೊತ್ತಡ ಸಮಸ್ಯೆ ನಿಯಂತ್ರಣಕ್ಕೆ ಸಹಾಯಕವಾಗಿದೆ. ನೀರಿನ ಮೂಲಕ ಅಥವಾ ಮಜ್ಜಿಗೆಯಲ್ಲಿ ಚಿಟಿಕೆ ಇಂಗನ್ನು ಮಿಶ್ರಣ ಮಾಡಿ ಕುಡಿಯುವ ಮೂಲಕವೂ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದಾಗಿದೆ.

ಇದನ್ನೂ ಓದಿ:

Health Tips: ನಿಮ್ಮ ಈ ಕೆಲವು ಅಭ್ಯಾಸಗಳು ಮೂತ್ರಪಿಂಡಕ್ಕೆ ಹಾನಿಕಾರಕ!

Health Tips: ತಲೆ ಕೂದಲು ನಿಮ್ಮ ಆರೋಗ್ಯದ ಬಗ್ಗೆ ಬಹಳಷ್ಟು ಹೇಳುತ್ತದೆ; ನಿರ್ಲಕ್ಷ್ಯ ವಹಿಸದಿರುವುದು ಒಳಿತು