Tooth Ache: ಹಲ್ಲು ನೋವೇ? ಸಮಸ್ಯೆಗೆ ಮನೆ ಮದ್ದುಗಳನ್ನು ಬಳಸಿ ಪರಿಹಾರ ಪಡೆಯಿರಿ

| Updated By: Digi Tech Desk

Updated on: Sep 23, 2021 | 12:28 PM

Tooth Ache Remedies: ಹಲ್ಲುನೋವು ಕಡಿಮೆ ಮಾಡಲು ನೀವು ಮನೆಯಲ್ಲಿರುವ ಕೆಲ ಪದಾರ್ಥಗಳನ್ನು ಬಳಸಬಹುದು. ಹಲ್ಲು ನೋವಿಗೆ ತ್ವರಿತ ಪರಿಹಾರ ಮನೆಮದ್ದುಗಳು ಆಗಬಹುದು. ಆದರೆ ತೀವ್ರವಾದ ನೋವು ಕಾಣಿಸಿಕೊಳ್ಳುತ್ತಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

Tooth Ache: ಹಲ್ಲು ನೋವೇ? ಸಮಸ್ಯೆಗೆ ಮನೆ ಮದ್ದುಗಳನ್ನು ಬಳಸಿ ಪರಿಹಾರ ಪಡೆಯಿರಿ
ಸಾಂದರ್ಭಿಕ ಚಿತ್ರ
Follow us on

ಹಲ್ಲು ಆರೈಕೆ ಮಾಡುವುದು ತುಂಬಾ ಅವಶ್ಯಕ. ಹಲವು ಬಾರಿ ತುಂಬಾ ತಣ್ಣಗಿರುವ ಅಥವಾ ಬಿಸಿಯಾಗಿರುವ ಆಹಾರವನ್ನು ಸೇವಿಸಿದಾಗ ಹಲ್ಲಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಇದಕ್ಕೆ ಕಾರಣ ಒಸಡು ನೋವು ಅಥವಾ ಊತದ ಸಮಸ್ಯೆ ಇರಬಹುದು. ಕೆಲವೊಮ್ಮೆ ಹಲ್ಲುಗಳ ನೋವು ತುಂಬಾ ಹೆಚ್ಚಾಗುತ್ತದೆ. ಆಹಾರವನ್ನು ಸೇವಿಸಲು ಇದು ಸಮಸ್ಯೆಯನ್ನುಂಟು ಮಾಡುತ್ತದೆ. ಹಾಗಿರುವಾಗ ಮನೆ ಮದ್ದುಗಳಲ್ಲಿಯೇ ಹಲ್ಲು ನೋವಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ಹಲ್ಲುನೋವು ಕಡಿಮೆ ಮಾಡಲು ನೀವು ಮನೆಯಲ್ಲಿರುವ ಕೆಲ ಪದಾರ್ಥಗಳನ್ನು ಬಳಸಬಹುದು. ಹಲ್ಲು ನೋವಿಗೆ ತ್ವರಿತ ಪರಿಹಾರ ಮನೆಮದ್ದುಗಳು ಆಗಬಹುದು. ಆದರೆ ತೀವ್ರವಾದ ನೋವು ಕಾಣಿಸಿಕೊಳ್ಳುತ್ತಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಉಪ್ಪು ನೀರಿನಿಂದ ತೊಳೆಯುವುದು
ಗಂಟಲು ನೋವು, ಕೆಮ್ಮು ಮತ್ತು ಹಲ್ಲು ನೋವುಗಳನ್ನು ನಿವಾರಿಸಲು ಉಪ್ಪು ನೀರನ್ನು ಬಳಸಿ ಬಾಯಿ ತೊಳೆಯುವ ಅಭ್ಯಾಸ ಒಳ್ಳೆಯದು. ಒಂದು ಲೋಟ ಉಗುರು ಬೆಚ್ಚಗಿನ ನೀರನ್ನು ತೆಗೆದುಕೊಂಡು ಅದರಲ್ಲಿ ಸ್ವಲ್ಪ ಉಪ್ಪನ್ನು ಬೆರೆಸಿ ಬಾಯಿ ತೊಳೆಯುವುದು. ಆದರೆ ಊತದ ಸಮಸ್ಯೆಯಿದ್ದರೆ ವೈದ್ಯರನ್ನು ಸಂಪರ್ಕಿಸಿ.

ಬೆಳ್ಳುಳ್ಳಿ ಬಳಸಿ
ಹಲ್ಲು ನೋವಿನ ಸಮಸ್ಯೆ ಕಾಣಿಸಿಕೊಂಡಾಗ ಬೆಳ್ಳುಳ್ಳಿ ಅಗಿದು ನುಂಗುವುದರಿಂದ ಇದು ನೋವು ನಿವಾರಕವಾಗಿ ಕೆಲಸ ಮಾಡುತ್ತದೆ. ಬೆಳ್ಳುಳ್ಳಿಯನ್ನು ಚಿಕ್ಕದಾಗಿ ಕತ್ತರಿಸಿ, ಒಂದು ಚೂರನ್ನು ನೋವಿನ ಜಾಗದಲ್ಲಿ ಇಟ್ಟುಕೊಳ್ಳಿ. ಇದು ನಿಮ್ಮ ಹಲ್ಲು ನೋವು ಸಮಸ್ಯೆಗೆ ಪರಿಹಾರ ನೀಡುತ್ತದೆ.

ಲವಂಗದ ಎಣ್ಣೆ
ಲವಂಗ ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತದ ಗುಣಗಳನ್ನು ಹೊಂದಿದ್ದು, ನೋವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಲವಂಗದ ಎಣ್ಣೆಯನ್ನು ತಯಾರಿಸಿ ಉಗುರು ಬೆಚ್ಚಗಿರುವಾಗಲೇ ಹಲ್ಲಿನ ನೋವು ಕಾಣಿಸಿಕೊಳ್ಳುವ ಜಾಗದಲ್ಲಿ ಹಚ್ಚಿಕೊಳ್ಳಿ. ಬಹುಬೇಗ ಹಲ್ಲು ನೋವಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

ಇದನ್ನೂ ಓದಿ:

Health Tips: ನೀವು ಆರೋಗ್ಯವಾಗಿರಲು ಈ ಒಳ್ಳೆಯ ಅಭ್ಯಾಸಗಳನ್ನು ದಿನಚರಿಯಲ್ಲಿ ರೂಢಿಸಿಕೊಳ್ಳಿ

Health Tips: ಆ್ಯಂಟಿಆಕ್ಸಿಡೆಂಟ್​ಗಳಿಂದ ಸಮೃದ್ಧವಾಗಿರುವ ಈ 5 ತರಕಾರಿಗಳ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು

(Know about home remedies for tooth ache check in Kannada)

Published On - 8:56 am, Thu, 23 September 21