Health Tips: ಆ್ಯಂಟಿಆಕ್ಸಿಡೆಂಟ್ಗಳಿಂದ ಸಮೃದ್ಧವಾಗಿರುವ ಈ 5 ತರಕಾರಿಗಳ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು
ಆ್ಯಂಟಿಆಕ್ಸಿಡೆಂಟ್ಗಳು ಜೀವಕೋಶಗಳ ಹಾನಿಯ ವಿರುದ್ಧ ಹೋರಾಡುತ್ತವೆ ಮತ್ತು ದೇಹದಿಂದ ಸ್ವತಂತ್ರ ರಾಡಿಕಲ್ಗಳನ್ನು ತೆಗೆದುಹಾಕುವ ಮೂಲಕ ಗಂಭೀರ ರೋಗಗಳಿಂದ ರಕ್ಷಿಸುತ್ತವೆ.
ಉತ್ತಮ ಆರೋಗ್ಯದೊಂದಿಗೆ ದೇಹವು ಸದಾ ಸದೃಢವಾಗಿರುವಂತೆ ನೋಡಿಕೊಳ್ಳಲು ಹೆಚ್ಚಿನ ಜನರು ಬಯಸುತ್ತಾರೆ. ಇದಕ್ಕಾಗಿ ಅಗತ್ಯ ಪೋಷಕಾಂಶಗಳೊಂದಿಗೆ ಉತ್ತಮ ಆಹಾರವನ್ನು ಸೇವಿಸುವುದು ಬಹಳ ಮುಖ್ಯ. ಪೌಷ್ಟಿಕಾಂಶಯುಕ್ತ ಆಹಾರದ ಹೊರತಾಗಿ, ಆ್ಯಂಟಿಆಕ್ಸಿಡೆಂಟ್ಗಳು ನಮ್ಮ ದೇಹವನ್ನು ಆರೋಗ್ಯವಾಗಿಡುವಲ್ಲಿ ಅತ್ಯಂತ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಅದರಲ್ಲು ಕೆಲವು ತರಕಾರಿಗಳು ಆ್ಯಂಟಿಆಕ್ಸಿಡೆಂಟ್ ಶಕ್ತಿಯನ್ನು ಒದಗಿಸುತ್ತವೆ. ಹಾಗಿದ್ದರೆ ದೇಹವನ್ನು ಆರೋಗ್ಯವಾಗಿಡಲು ಯಾವೆಲ್ಲ ತರಕಾರಿಗಳ ಸೇವನೆ ಅಗತ್ಯ ಎಂದು ತಿಳಿದುಕೊಳ್ಳೊಣ.
ಆ್ಯಂಟಿಆಕ್ಸಿಡೆಂಟ್ಗಳು ಮಾನವ ನಿರ್ಮಿತ ಅಥವಾ ನೈಸರ್ಗಿಕವಾಗಿರಬಹುದು. ಇವುಗಳು ವಿವಿಧ ಆಹಾರಗಳಲ್ಲಿ ಕಂಡುಬರುತ್ತವೆ. ಈ ಆ್ಯಂಟಿಆಕ್ಸಿಡೆಂಟ್ಗಳು ಜೀವಕೋಶಗಳ ಹಾನಿಯ ವಿರುದ್ಧ ಹೋರಾಡುತ್ತವೆ ಮತ್ತು ದೇಹದಿಂದ ಸ್ವತಂತ್ರ ರಾಡಿಕಲ್ಗಳನ್ನು ತೆಗೆದುಹಾಕುವ ಮೂಲಕ ಗಂಭೀರ ರೋಗಗಳಿಂದ ರಕ್ಷಿಸುತ್ತವೆ. ಆದ್ದರಿಂದ ನಿಮ್ಮ ಆಹಾರವನ್ನು ಹೆಚ್ಚು ಆರೋಗ್ಯಕರವಾಗಿಸಲು, ಈ 5 ಆ್ಯಂಟಿಆಕ್ಸಿಡೆಂಟ್ ಸಮೃದ್ಧ ತರಕಾರಿಗಳನ್ನು ಸೇವಿಸುವುದು ಸೂಕ್ತ.
ಎಲೆಕೋಸು ಎಲೆಕೋಸು ಆ್ಯಂಟಿಆಕ್ಸಿಡೆಂಟ್ಗಳ ಅತ್ಯುತ್ತಮ ಮೂಲವಾಗಿದೆ. ಎಲೆಕೋಸಿನಲ್ಲಿ ಅತ್ಯಧಿಕ ಪ್ರಮಾಣದ ಆ್ಯಂಟಿಆಕ್ಸಿಡೆಂಟ್ಗಳಿವೆ. ಈ ತರಕಾರಿಯು ವಿಟಮಿನ್ ಸಿ ಯಿಂದ ಕೂಡಿದ್ದು, ರೋಗನಿರೋಧಕ ಶಕ್ತಿಯನ್ನು ನಿರ್ಮಿಸುವಲ್ಲಿ ಸಹಾಯ ಮಾಡುತ್ತದೆ. ಈ ತರಕಾರಿ ಉರಿಯೂತವನ್ನು ಎದುರಿಸಲು ಸಹಾಯ ಮಾಡುತ್ತದೆ. ಇದು ತೂಕ ನಷ್ಟಕ್ಕೆ ಕೂಡ ಸಹಾಯ ಮಾಡುತ್ತದೆ. ದೇಹವನ್ನು ನಿರ್ವಿಷಗೊಳಿಸುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆಯನ್ನು ನಿರ್ವಹಿಸುತ್ತದೆ. ಜತೆಗೆ ಆರೋಗ್ಯಕರ ಚರ್ಮವನ್ನು ಉತ್ತೇಜಿಸುತ್ತದೆ.
ಬ್ರೊಕೋಲಿ ಬ್ರೊಕೋಲಿಯಲ್ಲಿ ಕ್ಯಾರೊಟಿನಾಯ್ಡ್, ಲ್ಯೂಟೀನ್, ಜೀಕ್ಸಾಂಥಿನ್ ಮತ್ತು ಬೀಟಾ-ಕ್ಯಾರೋಟಿನ್ ನಂತಹ ಆ್ಯಂಟಿಆಕ್ಸಿಡೆಂಟ್ಗಳಿವೆ. ಇದು ವರ್ಷಪೂರ್ತಿ ಲಭ್ಯವಿದೆ ಮತ್ತು ಇದನ್ನು ಹಲವು ವಿಧಗಳಲ್ಲಿ ಬೇಯಿಸಬಹುದು. ತರಕಾರಿ ಸಲಾಡ್ ಮತ್ತು ಪಾಸ್ತಾದಲ್ಲಿ ಬ್ರೊಕೋಲಿ ಸೇರಿಸಿದರೆ, ಉತ್ತಮ ರುಚಿ ನೀಡುತ್ತದೆ.
ಟೊಮೆಟೋ ಟೊಮೆಟೋ ಆ್ಯಂಟಿಆಕ್ಸಿಡೆಂಟ್ಗಳ ಉತ್ತಮ ಮೂಲವಾಗಿದೆ. ಈ ತರಕಾರಿ ವರ್ಷವಿಡೀ ಲಭ್ಯವಿದೆ. ಈ ತರಕಾರಿಯನ್ನು ಸಾಮಾನ್ಯವಾಗಿ ನಾವು ತಯಾರಿಸುವ ಎಲ್ಲಾ ಅಡುಗೆಯಲ್ಲೂ ಬಳಸಲಾಗುತ್ತದೆ. ಇದರಲ್ಲಿ ವಿಟಮಿನ್ ಎ ಮತ್ತು ವಿಟಮಿನ್ ಸಿ ಕೂಡ ಇದೆ. ಈ ತರಕಾರಿಯನ್ನು ಬೇಯಿಸಿ ಅಥವಾ ಹಸಿ ತಿನ್ನಬಹುದು.
ಲೆಟಿಸ್ ಲೆಟಿಸ್ ಸಲಾಡ್ ಮತ್ತು ಬರ್ಗರ್‌ಗಳಲ್ಲಿ ಬಳಸುವ ಒಂದು ತರಕಾರಿಯಾಗಿದೆ. ಈ ತರಕಾರಿಯು ಆ್ಯಂಟಿಆಕ್ಸಿಡೆಂಟ್ಗಳಿಂದ ಸಮೃದ್ಧವಾಗಿದೆ ಮತ್ತು ಇತರ ಹಲವು ಪ್ರಯೋಜನಗಳನ್ನು ಹೊಂದಿದೆ. ಈ ತರಕಾರಿ ಹೆಚ್ಚಿನ ಫೈಬರ್ನಿಂದ ಕೂಡಿದೆ. ಇದು ತೂಕ ಇಳಿಸಲು ಸಹಾಯ ಮಾಡುತ್ತದೆ.
ಆಲೂಗಡ್ಡೆ ಆಲೂಗಡ್ಡೆ ಎಲ್ಲರಿಗೂ ಇಷ್ಟವಾಗುತ್ತದೆ ಮತ್ತು ಪ್ರತಿಯೊಬ್ಬರ ಅಡುಗೆ ಮನೆಯಲ್ಲಿಯೂ ಇದು ಇರುತ್ತದೆ. ಅವುಗಳು ಹೆಚ್ಚಿನ ಮಟ್ಟದ ಆ್ಯಂಟಿಆಕ್ಸಿಡೆಂಟ್ಗಳನ್ನು ಹೊಂದಿರುತ್ತವೆ. ಇವುಗಳು ಸಂಯುಕ್ತಗಳಾಗಿವೆ. ಆಲೂಗಡ್ಡೆಯಲ್ಲಿ ವಿಟಮಿನ್ ಸಿ, ಪೊಟ್ಯಾಸಿಯಮ್ ಮತ್ತು ಮ್ಯಾಂಗನೀಸ್ ಕೂಡ ಇರುತ್ತದೆ. ಈ ತರಕಾರಿ ಉರಿಯೂತವನ್ನು ತಡೆಯಲು ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: Health Tips: ಹಲಸಿನ ಹಣ್ಣಿನ ಸೇವನೆಯ ಆರೋಗ್ಯ ಪ್ರಯೋಜನಗಳು ಬಹಳಷ್ಟಿವೆ; ಈ ಕೆಲವು ಸಲಹೆಗಳು ನಿಮಗಾಗಿ
Health Tips: ಬಾಳೆ ಎಲೆಯ ಮೇಲೆ ಊಟ ಮಾಡುವ ಅಭ್ಯಾಸ ಇದೆಯೇ? ಆರೋಗ್ಯಕರ ಪ್ರಯೋಜನಗಳ ಬಗ್ಗೆ ತಿಳಿಯಿರಿ
Published On - 7:47 am, Wed, 22 September 21