ಆರೋಗ್ಯಕರ ಆಹಾರಕ್ಕಾಗಿ ನುಗ್ಗೆ ಸೊಪ್ಪು ಮತ್ತು ರಾಗಿಯನ್ನು ನಿಮ್ಮ ಆಹಾರ ಪದ್ಧತಿಯಲ್ಲಿ ಸೇರಿಸಿಕೊಳ್ಳಿ

| Updated By: preethi shettigar

Updated on: Oct 02, 2021 | 9:28 AM

ನೀವು ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು, ಉರಿಯೂತವನ್ನು ಕಡಿಮೆ ಮಾಡಲು ನಿಮ್ಮ ಆಹಾರ ಪದ್ಧತಿಯಲ್ಲಿ ನುಗ್ಗಿ ಸೊಪ್ಪು ಅಥವಾ ನುಗ್ಗೆಕಾಯಿಯಿಂದ ತಯಾರಿಸಿದ ಆಹಾರ ಪದಾರ್ಥಗಳನ್ನು ಸೇರಿಸಿಕೊಳ್ಳಿ.

ಆರೋಗ್ಯಕರ ಆಹಾರಕ್ಕಾಗಿ ನುಗ್ಗೆ ಸೊಪ್ಪು ಮತ್ತು ರಾಗಿಯನ್ನು ನಿಮ್ಮ ಆಹಾರ ಪದ್ಧತಿಯಲ್ಲಿ ಸೇರಿಸಿಕೊಳ್ಳಿ
ಸಾಂದರ್ಭಿಕ ಚಿತ್ರ
Follow us on

ಆಹಾರ ಪದ್ದತಿಯಲ್ಲಿ ನೀವು ಹಲವು ಆಹಾರ ಪದಾರ್ಥಗಳನ್ನು ಸೇರಿಸಿಕೊಳ್ಳುವ ಮೂಲಕ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು. ಆಹಾರದಲ್ಲಿ ಎಲ್ಲಾ ಬಗೆಯ ಪದಾರ್ಥಗಳು ಸೇರಿರಬೇಕು. ಇಂದೊಂದು ಬಗೆಯ ಆಹಾರ ಪದಾರ್ಥಗಳು ಸಹ ನಾನಾ ರೀತಿಯ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಹಾಗಿರುವಾಗ ನುಗ್ಗೆ ಸೊಪ್ಪು, ರಾಗಿಯನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳುವುದು ಒಳ್ಳೆಯದು. ಇದು ನಿಮ್ಮ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುವುದು.

ನುಗ್ಗೆ ಸೊಪ್ಪು
ನುಗ್ಗೆ ಸೊಪ್ಪು ಅಥವಾ ನುಗ್ಗೆಕಾಯಿ ನಿಮಗೆ ಆರೋಗ್ಯಕರ ಪ್ರಯೋಜನಗಳನ್ನು ನೀಡುತ್ತದೆ. ನೀವು ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು, ಉರಿಯೂತವನ್ನು ಕಡಿಮೆ ಮಾಡಲು ನಿಮ್ಮ ಆಹಾರ ಪದ್ಧತಿಯಲ್ಲಿ ನುಗ್ಗೆಸೊಪ್ಪು ಅಥವಾ ನುಗ್ಗೆಕಾಯಿಯಿಂದ ತಯಾರಿಸಿದ ಆಹಾರ ಪದಾರ್ಥಗಳನ್ನು ಸೇರಿಸಿಕೊಳ್ಳಿ. ಇದು ನಿಮ್ಮ ಆರೋಗ್ಯಕ್ಕೂ ಒಳ್ಳೆಯದು. ಇದು ರಕ್ತದ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಮತ್ತು ರಕ್ತದೊತ್ತಡ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳಲು ಸಹಾಯಕವಾಗಿದೆ.

ರಾಗಿ
ರಾಗಿಯಲ್ಲಿ ವಿಶೇವಾಗಿ ಕಬ್ಬಿಣ, ಮೆಗ್ನೀಶಿಯಂ, ಪೊಟ್ಯಾಶಿಯಂ ಮತ್ತು ಫೈಬರ್​ನಂತಹ ಖನಿಜಾಂಶಗಳು ಉತ್ತಮ ಅರೋಗ್ಯಕ್ಕೆ ಸಹಾಯವಾಗುತ್ತದೆ. ರಾಗಿಯ ಸೂಪ್, ಗಂಜಿ ಆಥವಾ ರೊಟ್ಟಿ ತಯಾರಿಸಿ ಸವಿಯುವ ಮೂಲಕ ನೀವು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದಾಗಿದೆ.

ಹಾಲು
ಪ್ರತಿನಿತ್ಯ ಹಾಲು ಕುಡಿಯುವ ಅಭ್ಯಾಸ ಆರೋಗ್ಯಕ್ಕೆ ಒಳ್ಳೆಯದು. ಇದು ನಿಮ್ಮ ಆರೋಗ್ಯವನ್ನು ಸುಧಾರಿಸಲು ನೆರವಾಗುತ್ತದೆ. ಹಸುವಿನ ಹಾಲು ಜತೆಗೆ, ಬಾದಾಮಿ ಹಾಲು, ತೆಂಗಿನ ಹಾಲು, ಓಟ್ಸ್ ಹಾಲು ಹೀಗೆ ನಾನಾ ವಿಧದ ಪದಾರ್ಥಗಳನ್ನು ಸವಿಯುವ ಅಭ್ಯಾಸ ರೂಢಿಯಲ್ಲಿಟ್ಟುಕೊಳ್ಳಿ.

ಹೂಕೋಸು
ಹೂಕೋಸು ನಿಮ್ಮ ಆಹಾರ ಪದ್ಧತಿಯಲ್ಲಿ ಸೇರಿರಲಿ. ಇದು ಹಲವಾರು ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಕ್ಯಾನ್ಸರ್ ವಿರುದ್ಧ ಹೋರಾಡಲು ಸಹಾಯಕ ಜತೆಗೆ ಉತ್ತಮ ಪ್ರಮಾಣದ ಪೌಷ್ಟಿಕಾಂಶವನ್ನು ನೀಡುತ್ತದೆ. ವಿಟಮಿನ್ ಸಿ ಮತ್ತು ಕೆ ಅತ್ಯುತ್ತಮ ಮೂಲವಾಗಿದೆ ಜತೆಗೆ ಫೈಬರ್, ಪೋಲೇಟ್ ಮತ್ತು ವಿಟಮಿನ್ ಬಿ6 ನ ಉತ್ತಮ ಮೂಲವಾಗಿದೆ.

ಇದನ್ನೂ ಓದಿ:

Health Tips: ಮೂಳೆ ಮತ್ತು ಕೀಲು ನೋವಿನ ಸಮಸ್ಯೆ ಇದೆಯೇ? ಈ ಆಹಾರ ಪದ್ಧತಿಯನ್ನು ಅನುಸರಿಸಿ

Health Tips: ನಿಮ್ಮ ದೇಹದಲ್ಲಿ ಕ್ಯಾಲ್ಸಿಯಂ ಕೊರತೆ ನೀಗಿಸಲು ರಾಗಿಯಿಂದ ತಯಾರಿಸಿದ ಆಹಾರ ಪದಾರ್ಥಗಳು ಸಹಾಯಕ